2020 ಹುಂಡೈ ಕ್ರೆಟಾ ವನ್ನು ಭಾರತದಲ್ಲಿ ಪರೀಕ್ಷಿಸುತ್ತಿರುವುದನ್ನು ಮತ್ತೆ ನೋಡಲಾಗಿದೆ.
ಹುಂಡೈ ಕ್ರೆಟಾ 2020-2024 ಗಾಗಿ sonny ಮೂಲಕ ಅಕ್ಟೋಬರ್ 31, 2019 11:36 am ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ನೂತನ ಪೀಳಿಗೆಯ ಕಾಂಪ್ಯಾಕ್ಟ್ SUV ಮಾರ್ಚ್ 2020 ವೇಳೆಗೆ ಮಾರಾಟಕ್ಕೆ ಬರಲಿದೆ.
- ಮರೆಮಾಚುವಿಕೆಗಳಿಂದ ಕೂಡಿದ ಪರೀಕ್ಷಿಸಲ್ಪಡುತ್ತಿರುವ ಮಾಡೆಲ್ ಹೊಸ ಇಂಡಿಯಾ ಸ್ಪೆಕ್ ಕ್ರೆಟಾ ವನ್ನು ನೋಡಲಾಗಿದೆ; 2020 ಯಲ್ಲಿ ಅನಾವರಣಗೊಳ್ಳುವ ಸಾಧ್ಯತೆ ಇದೆ.
- ಚಿತ್ರಗಳು ತೋರುವಂತೆ ಹೊಸ ಮುಂಬದಿ, ಹೆಡ್ ಲ್ಯಾಂಪ್ ಗಳು ಮತ್ತು ಟೈಲ್ ಲ್ಯಾಂಪ್ ಗಳು ಸಹ ಸೇರಿವೆ.
- ಹೊಸ ಕ್ರೆಟಾ ದಲ್ಲಿ MG ಹೆಕ್ಟರ್ ತರಹ ಲಂಬಾಕಾರದ ಟಚ್ ಸ್ಕ್ರೀನ್ ಲೇಔಟ್ ಇರಲಿದೆ
- ಹೊಸ ಕ್ರೆಟಾ ದಲ್ಲಿ ಕಿಯಾ ಸೆಲ್ಟೋಸ್ ನಲ್ಲಿರುವ ಪವರ್ ಟ್ರೈನ್ ಆಯ್ಕೆ ದೊರೆಯಲಿದೆ
- ಇದರ ಬೆಲೆ ಪಟ್ಟಿ ರೂ 10 ಲಕ್ಷ ಒಳಗೆ ಇರಲಿದೆ ಬೇಸ್ ವೇರಿಯೆಂಟ್ ಗಾಗಿ.
ಮುಂದಿನ ಪೀಳಿಗೆಯ ಹುಂಡೈ ಕ್ರೆಟಾ ಭಾರತದಲ್ಲಿ 2020 ಪ್ರಾರಂಭದಲ್ಲಿ ಬರಲಿದೆ. ಇದನ್ನು ಈಗಾಗಲೇ ಚೀನಾ ದಲ್ಲಿ ಅನಾವರಣಗೊಳಿಸಲಾಗಿದೆ ಮತ್ತು ಮರೆಮಾಚುವಿಕೆಗಳಿಂದ ಕುಡಿದ ಪರೀಕ್ಷೆ ಮಾಡೆಲ್ ಅನ್ನು ಭಾರತದಲ್ಲಿ ಮತ್ತೊಮ್ಮೆ ಕಾಣಲಾಗಿದೆ. ಬಹಳಷ್ಟು ಯೂನಿಟ್ ಗಳನ್ನು ಕಾಣಲಾಯಿತು ಕಿಯಾ ಸೆಲ್ಟೋಸ್ ಸಹ ಸೇರಿತ್ತು.
ಮರೆಮಾಚುವಿಕೆಗಳು ಇದ್ದರು ಸಹ 2020 ಕ್ರೆಟಾ ನೋಡಲು ಎರೆಡನೆ ಪೀಳಿಗೆಯ ಚೀನಾ ದಲ್ಲಿ ಮಾರಾಟವಾಗುತ್ತಿರುವ ix25 ತರಹ ಇದೆ. ಮರೆಮಾಚುವಿಕಗಳ ಒಳಗಡೆ ನಾವು ಹೊಸ ಹೆಡ್ ಲ್ಯಾಂಪ್ ಗಳನ್ನು ಫ್ರಂಟ್ ಬಂಪರ್ ಮೇಲೆ ಅಳವಡಿಸಿರುವುದನ್ನು ಕಾಣಬಹುದು ಮತ್ತು ಸಣ್ಣ LED DRL ಗಳನ್ನು ಬಾನೆಟ್ ಲೈನ್ ನಲ್ಲಿ ಕಾಣಬಹುದು. ರೇರ್ ಎಂಡ್ ಡಿಸೈನ್ ಮತ್ತು ಟೈಲ್ ಲ್ಯಾಂಪ್ ನೋಡಲು ix25 ತರಹ ಇದೆ ಕೂಡ. ಆದರೆ, ಅಲಾಯ್ ವೀಲ್ ಪರೀಕ್ಷೆ ಯೂನಿಟ್ ಮೇಲೆ ಕಾಣಲಾಗಿರುವಂತಹುದು ix25 ಗಿಂತಲೂ ಭಿನ್ನವಾದ ಡಿಸೈನ್ ಹೊಂದಿದೆ.
ಸ್ಪೈ ಚಿತ್ರಗಳು ಮುಂದಿನ ಪೀಳಿಗೆಯ ಕ್ರೆಟಾ ಆಂತರಿಕಗಳನ್ನು ಸಹ ತೋರಿಸುತ್ತದೆ. ವಿವರಗಳು ಕಾಣದಿದ್ದರೂ ಸಹ ಪರೀಕ್ಷಿಸಲ್ಪಡುತ್ತಿರುವ ಮಾಡೆಲ್ ನಲ್ಲಿ ಮುಂದುವರೆದೇ ಕನ್ಸೋಲ್ ಕೊಡಲಾಗಿದೆ. ಇಂಡಿಯಾ ಸ್ಪೆಕ್ ಮಾಡೆಲ್ ನಲ್ಲಿ ಬಹುಶಃ ಅದೇ 10.4-ಇಂಚು ಲಂಬಾಕಾರದ ಟಚ್ ಸ್ಕ್ರೀನ್ ಕೊಡಲಾಗಬಹುದು ಚೀನಾ ಸ್ಪೆಕ್ ix25 ನಂತೆ.
ಇದರಲ್ಲಿ ಕಿಯಾ ಸೆಲ್ಟೋಸ್ ನಲ್ಲಿರುವ ಎಂಜಿನ್ ಕೊಡಲಾಗಬಹುದು BS6 1.5- ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮತ್ತು 1.4-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಸಹ 6-ಸ್ಪೀಡ್ ಮಾನ್ಯುಯಲ್ ಒಂದಿಗೆ ಬರುತ್ತದೆ ಆಟೋಮ್ಯಾಟಿಕ್ ಆಯ್ಕೆಗಳು ಬಿನ್ನವಾಗಿರಬಹುದು, ಸೆಲ್ಟೋಸ್ ನಲ್ಲಿರುವಂತೆ.
ಹೊಸ ಪೀಳಿಗೆಯ ಕ್ರೆಟಾ 2020 ಆಟೋ ಎಕ್ಸ್ಪೋ ದಲ್ಲಿ ಬಿಡುಗಡೆಯಾಗಲಿದೆ. ಅದರ ಬೆಲೆ ಪಟ್ಟಿ ಈಗಿರುವ ಪೀಳಿಗೆಯ ಮಾಡೆಲ್ ತರಹ ಇರುತ್ತದೆ. ಹಾಗಾಗಿ, ಬೆಲೆ ಪಟ್ಟಿ ಆರಂಭ ರೂ 10 ಲಕ್ಷ ಇರುತ್ತದೆ, ಮತ್ತು ಅದು ರೂ 17 ಲಕ್ಷ ವರೆಗೂ ಮುಂದುವರೆಯಬಹುದು ಟಾಪ್ ಸ್ಪೆಕ್ ವೇರಿಯೆಂಟ್ ಗಾಗಿ. ಅದರ ಪ್ರತಿಸ್ಪರ್ಧೆ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ S-ಕ್ರಾಸ್, ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಟರ್ ಮತ್ತು ಡಸ್ಟರ್ ಗಳೊಂದಿಗೆ ಇರುತ್ತದೆ.
0 out of 0 found this helpful