2020 ಮಹಿಂದ್ರಾ ಥಾರ್ ರೇರ್ ಡಿಸ್ಕ್ ಬ್ರೇಕ್ ಗಳನ್ನು ಫೀಚರ್ ಮಾಡುವ ಸಾಧ್ಯತೆ ಇದೆ.
ಮಹೀಂದ್ರ ಥಾರ್ ಗಾಗಿ dhruv ಮೂಲಕ ನವೆಂಬರ್ 28, 2019 01:43 pm ರಂದು ಪ್ರಕಟಿಸಲಾಗಿದೆ
- 19 Views
- ಕಾಮೆಂಟ್ ಅನ್ನು ಬರೆಯಿರಿ
ಮಹಿಂದ್ರಾ ಅವರ ಹೊಸ ಥಟ್ ಒಂದು ಪ್ರೀಮಿಯಂ ಮಾಡೆಲ್ ಆಗಿದ್ದು ಆಫ್ ರೋಡ್ ಬಳಕೆಗೆ ಉಪಯುಕ್ತಕಾರಿಯಾಗಿದ್ದು ಹೊಸ ಫೀಚರ್ ಗಳಾದ ರೇರ್ ಡಿಸ್ಕ್ ಬ್ರೇಕ್ ಗಳು, ಪೆಟ್ರೋಲ್ ಎಂಜಿನ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಲಿದೆ.
- ಬೇಹುಗಾರಿಕೆ ಚಿತ್ರಗಳು ತೋರುವಂತೆ ಥಟ್ ನಲ್ಲಿ ರೇರ್ ಡಿಸ್ಕ್ ಬ್ರೇಕ್ ಕೊಡಲಾಗುತ್ತದೆ
- ಪೆಟ್ರೋಲ್ ಎಂಜಿನ್ 2020 ಥಾರ್ ಗೆ ಅಳವಡಿಸುವ ಯೋಜನೆ ಸಹ ಇದೆ.
- ಅದನ್ನು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ ಸಹ ಕೊಡಲಾಗುತ್ತದೆ.
- ಇತ್ತೀಚಿನ ಮೇಹುಗಾರಿಕೆ ಚಿತ್ರಗಳು ತೋರುವಂತೆ ಅಲಾಯ್ ವೀಲ್ ಸಹ ಲಭ್ಯವಿರುತ್ತದೆ
- ಥಾರ್ ಅನ್ನು ಆಟೋ ಎಕ್ಸ್ಪೋ 2020 ವೇಳೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.
- ಅದರ ಬೆಲೆ ಪಟ್ಟಿ ಈಗಿರುವ ಮಾಡೆಲ್ ಗಿಂತಲೂ ಹೆಚ್ಚು ಪ್ರೀಮಿಯಂ ಬೆಲೆಯಲ್ಲಿ ಲಭ್ಯವಿರುತ್ತದೆ.
ಇತ್ತೀಚಿನ 2020 ಮಹಾಹಿಂದ್ರ ಥಾರ್ ಬೇಹುಗಾರಿಕೆ ಚಿತ್ರಗಳು ತೋರುವಂತೆ ಕಠಿಣವಾದ ಆಫ್ -ರೋಡ್ ಬಳಕೆಗೆ ಅನುಕೂಲವಾಗಿದ್ದು ರೇರ್ ಡಿಸ್ಕ್ ಬ್ರೇಕ್ ಹೊಂದಲಿದೆ. ನಾವು ಈ ಹಿಂದೆ ನೋಡಿದ ಬೇಹುಗಾರಿಕೆ ಚಿತ್ರಗಳಲ್ಲೂ ಸಹ ಡಿಸ್ಕ್ ಬ್ರೇಕ್ ತರಹ ಕಾಣುತ್ತಿತ್ತು. ಬಹಳಷ್ಟು ಚಿತ್ರಗಳಲ್ಲಿ ಅದು ಕಂಡುಬರುತ್ತಿರುವುದರಿಂದ ಅದು ತಯಾರಿಕೆಯಲ್ಲಿ ಇರಬಹುದು ಎಂದು ಹೇಳಲಾಗಿದೆ.
ನೀವು ಮಹಿಂದ್ರಾ ಅವರ ಇತ್ತೀಚಿನ ನಿಲುವು ನೋಡಿದಾಗ ನೀವು ಹೊಸ 2020 ಥಟ್ ಅನ್ನು ರೇರ್ ಡಿಸ್ಕ್ ಬ್ರೇಕ್ ಗಳೊಡನೆ ಕೊಡಲಾಗಬಹುದು ಎಂದು ಹೇಳಬಹುದು. ಏಕೆಂದರೆ XUV300 ಮುಂಬರುವ ಥಾರ್ ನ ಮಾಡೆಲ್ ನ ನಂತರದ ಸ್ಥಾನ ಪಡೆಯುತ್ತದೆ ಬೆಲೆ ಪಟ್ಟಿ ವಿಚಾರದಲ್ಲಿ. ಅದು ಡಿಸ್ಕ್ ಬ್ರೇಕ್ ಗಳನ್ನು ಹಿಂಬದಿಯಲ್ಲಿ ಹೊಂದಲಿದೆ ಎಲ್ಲ ವೇರಿಯೆಂಟ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿ.
ಆದರೆ, ರೇರ್ ಡಿಸ್ಕ್ ಬ್ರೇಕ್ ಕೇವಲ ಆಶ್ಚರ್ಯಕರವಾಗಿಲ್ಲ ಮುಂಬರುವ 2020 ಥಾರ್ ನಲ್ಲಿ ದೊರೆಯುವಂತಹವುದು. ನಮಗೆ ಲಭ್ಯವಿರುವ ನಿಖರವಾದ ಮಾಹಿತಿಯಂತೆ ಅದನ್ನು ಪೆಟ್ರೋಲ್ ಎಂಜಿನ್ ಅವತರಣಿಕೆಯಲ್ಲೂ ಸಹ ಕೊಡಲಾಗುವುದು. ಮತ್ತು ಅದರಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸಹ ಕೊಡಲಾಗಬಹುದು ನೀವು ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ಓದಬಹುದು. ಥಾರ್ ನಲ್ಲಿ ಸ್ಕಾರ್ಪಿಯೊ ಮತ್ತು XUV500 ಗಳಲ್ಲಿರುವ ಡೀಸೆಲ್ ಎಂಜಿನ್ ಕೊಡಲಾಗಬಹುದು. ನಮ್ಮ ಈ ಹಿಂದಿನ ನಿರೀಕ್ಷೆಯಂತೆ ಮಹಿಂದ್ರಾ ಅವರು ಥಾರ್ ಅನ್ನು ಆಟೋ ಎಕ್ಸ್ಪೋ 2020 ನಲ್ಲಿ ಬಿಡುಗಡೆ ಗೊಳಿಸಿವ ಸಾಧ್ಯತೆ ಇತ್ತು, ಎಕ್ಸ್ಪೋ ವನ್ನು ಫೆಬ್ರವರಿ ಯಲ್ಲಿ ಮಾಡಲಾಗಬಹುದು. ಮತ್ತು ಆ ನಿಗಧಿತ ಅವಧಿ ಸರಿ ಎಂದು ಇತ್ತೀಚಿನ ಬೇಹುಗಾರಿಕೆ ಚಿತ್ರಗಳು ತೋರಿಸುತ್ತಿವೆ ಥಾರ್ ತಯಾರಿಕೆಗೆ ಸಿದ್ಧವಾಗಿದೆ ಎಂದು.
ಮಹಿಂದ್ರಾ ಭಾರತದಲ್ಲಿ 2020 ಥಾರ್ ಬಿಡುಗಡೆ ಮಾಡಿದಾಗ , ಅದು ಹೊರ ಹೋಗುತ್ತಿರುವ ಮಾಡೆಲ್ ಗಿಂತ ಹೆಚ್ಚು ಬೆಲೆ ಪಟ್ಟಿ ಹೊಂದಿರುತ್ತದೆ. ಹೊಸ ಫೀಚರ್ ಗಳ ಸೇರ್ಪಡಿಕೆ , ಪ್ರೀಮಿಯಂ ಕ್ಯಾಬಿನ್ ಮತ್ತು ಹೆಚ್ಚುವರಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ರೂ 1 ಲಕ್ಷ ವರೆಗೆ ಬೆಲೆ ಪಟ್ಟಿ ಹೆಚ್ಚುವಿಕೆ ಕಾಣಬಹುದು. ಹೋಲಿಕೆಗಾಗಿ , ಥರ್ ಸದ್ಯದಲ್ಲಿ ಹೊಂದಿರುವ ಬೆಲೆ ಪಟ್ಟಿ ರೂ 9.99 ಲಕ್ಷ (ಎಕ್ಸ್ ಶೋ ರೂಮ್ ಹೊಸ ದೆಹಲಿ)