2023 ಹ್ಯುಂಡೈ ವೆನ್ಯು ಪಡೆಯುತ್ತಿದೆ ಕ್ರೆಟಾದ ಡೀಸೆಲ್ ಎಂಜಿನ್ ಟ್ಯೂನ್ ಮತ್ತು ರೂ 25,000 ತನಕದ ಬೆಲೆ ಹೆಚ್ಚಳ
ಈ ವೆನ್ಯೂ ಅಪ್‌ಗ್ರೇಡ್ ಮಾಡಲಾದ ಡೀಸೆಲ್ ಯೂನಿಟ್‌ನೊಂದಿಗೆ ಪಡೆಯುತ್ತಿದೆ ಸಣ್ಣ ಫೀಚರ್ ಪುನರ್‌ವ್ಯವಸ್ಥೆ
-
ಡೀಸೆಲ್ ಯೂನಿಟ್ ಈಗ 116PS ಹಾಗೂ 250Nm ಅನ್ನು ಹೊರತರುತ್ತಿದೆ.
-
ಸೈಡ್ ಏರ್‌ಬ್ಯಾಗ್‌ಗಳು ಈಗ ಮಿಡ್-ಸ್ಪೆಕ್ S (O) ಟ್ರಿಮ್‌ನಿಂದ ಲಭ್ಯವಿದೆ.
-
ಡೀಸೆಲ್ SX ವೇರಿಯೆಂಟ್ ರಿಕ್ಲೈನಿಂಗ್ ಒರಗುವ ಸೀಟ್‌ಗಳನ್ನು ಹೊಂದಿರುವುದಿಲ್ಲ.
-
ಹೊಸ ಬೆಲೆಗಳು ರೂ 7.68 ಲಕ್ಷದಿಂದ ರೂ 13.11 ಲಕ್ಷ (ಎಕ್ಸ್-ಶೋರೂಂ) ತನಕ
ಸಬ್-ಫೋರ್-ಮೀಟರ್ SUV ವಿಭಾಗದಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ವೆನ್ಯೂ, ಕಳೆದ ವರ್ಷ ಜೂನ್‌ನಲ್ಲಿ ನವೀಕರಣಗೊಂಡಿದ್ದು, ಹ್ಯುಂಡೈ SUV ಗೆ ಕೆಲವು MY23 ಎಂಜಿನ್ ಅಪ್‌ಗ್ರೇಡ್ ಸೇರಿದಂತೆ ಬೆಲೆ ಹೆಚ್ಚಳದೊಂದಿಗೆ ಸಣ್ಣ ಫೀಚರ್ ಪುನರ್‌ವ್ಯವಸ್ಥೆಯನ್ನು ಮಾಡಿದೆ. ಈ ನವೀಕೃತ ವೆನ್ಯೂ ನಮಗೆ ಏನು ನೀಡುತ್ತದೆ ಎಂಬುದನ್ನು ನೋಡೋಣ
ನವೀಕೃತ ಎಂಜಿನ್
ಈ ವೆನ್ಯೂನ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಕ್ರೆಟಾದಲ್ಲಿರುವ ಎಂಜಿನ್‌ನಂತೆ ಕಾರ್ಯಕ್ಷಮತೆಯನ್ನು ನೀಡಲು ನವೀಕರಿಸಲಾಗಿದೆ. ಆದರೆ ಕ್ರೆಟಾ ತನ್ನ ಡೀಸೆಲ್ ಯೂನಿಟ್‌ಗಳೊಂದಿಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯುತ್ತದೆ ಮತ್ತು ವ್ಯೆನ್ಯೂ ಕೇವಲ ಸಿಕ್ಸ್-ಸ್ಪೀಡ್ ಮ್ಯಾನುವಲ್‌ನೊಂದಿಗೆ ಮಾತ್ರ ಬರುತ್ತದೆ.
ಹ್ಯುಂಡೈ ವೆನ್ಯೂ |
ಹಳೆಯ ನಿರ್ದಿಷ್ಟತೆಗಳು |
ಹೊಸ ನಿರ್ದಿಷ್ಟತೆಗಳು |
ಎಂಜಿನ್ |
1.5-ಲೀಟರ್ ಡೀಸೆಲ್ ಎಂಜಿನ್ |
1.5- ಲೀಟರ್ ಡೀಸೆಲ್ ಎಂಜಿನ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT |
6-speed MT |
ಪವರ್ |
100PS |
116PS |
ಟಾರ್ಕ್ |
240Nm |
250Nm |
ಈ ಡೀಸೆಲ್ ಎಂಜಿನ್‌ನ ಔಟ್‌ಪುಟ್ ಈಗ 16PS ಮತ್ತು 10Nm ನಷ್ಟು ಹೆಚ್ಚಾಗಿದೆ. ಈ ವೆನ್ಯೂ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: ಒಂದು ಫೈವ್ ಸ್ಪೀಡ್ ಮ್ಯಾನುವಲ್ ಜೊತೆಗೆ 83PS ಮತ್ತು 114Nm ಔಟ್‌ಪುಟ್ ಹೊಂದಿರುವ 1.2-ಲೀಟರ್ ಯೂನಿಟ್ ಮತ್ತು ಇನ್ನೊಂದು 1.0-ಲೀಟರ್ ಟರ್ಬೋ 120PS ಮತ್ತು 172Nm ಅನ್ನು ಸಿಕ್ಸ್-ಸ್ಪೀಡ್ iMT ಅಥವಾ ಸೆವೆನ್ –ಸ್ಪೀಡ್ DCT ಜೊತೆಗೆ ಸಂಯೋಜಿಸಲಾಗಿದೆ.
ಫೀಚರ್ ಬದಲಾವಣೆಗಳು
ಒಂದು ಪ್ರಮುಖ ಬದಲಾವಣೆಯೆಂದರೆ, ಮೊದಲು ಕೇವಲ ಟಾಪ್-ಸ್ಪೆಕ್ SX (O) ಟ್ರಿಮ್ ಅನ್ನು ಮಾತ್ರ ನೀಡುತ್ತಿದ್ದ ಹ್ಯುಂಡೈ ಈಗ ಮಿಡ್-ಸ್ಪೆಕ್ S (O) ಟ್ರಿಮ್‌ನಿಂದ ಸೈಡ್ ಏರ್‌ಬ್ಯಾಗ್‌ಗಳನ್ನು ನೀಡುತ್ತಿದೆ. ಸೈಡ್ ಏರ್‌ಬ್ಯಾಗ್‌ಗಳು ಈಗ ವೆನ್ಯೂ ಎನ್ ಲೈನ್‌ನ N6 ವೇರಿಯೆಂಟ್‌ನಲ್ಲೂ ಲಭ್ಯವಿದೆ
ಇದನ್ನೂ ಓದಿ: ಹ್ಯುಂಡೈ i20 ಕಳೆದುಕೊಳ್ಳುತ್ತಿದೆ iMT ಆಯ್ಕೆ ಹಾಗೂ ಟರ್ಬೋ ವೇರಿಯೆಂಟ್‌ಗಳನ್ನು ಬೆಲೆಬಾಳುವಂತೆ ಮಾಡುತ್ತಿದೆ
ಅಲ್ಲದೇ, ಡೀಸೆಲ್ ಎಂಜಿನ್‌ನ SX ವೆರಿಯೆಂಟ್‌ನಲ್ಲಿನ ರಿಯರ್ ಸೀಟ್ ರಿಕೈನರ್ ಮತ್ತು ಆರ್ಮ್‌ರೆಸ್ಟ್ ಹಾಗೂ ಕಪ್ ಹೋಲ್ಡರ್ ಅನ್ನು ಈಗ ಟಾಪ್-ಸ್ಪೆಕ್ ಡೀಸೆಲ್ SX (O)ಗೆ ಮಾತ್ರ ಮೀಸಲಿಡಲಾಗಿದೆ. ಇವುಗಳಲ್ಲದೆ, ವೆನ್ಯೂ ಫೀಚರ್ ಲಿಸ್ಟ್‌ನಲ್ಲಿ ಬೇರೆ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ.
ಹೊಸ ಬೆಲೆಗಳು
ಈ ವೆನ್ಯೂ ಈ ವರ್ಷದ ಮೊದಲ ಬೆಲೆ ಹೆಚ್ಚಳವನ್ನು ಪಡೆದಿದೆ. ಇದು ಈಗ ರೂ 7.68 ಲಕ್ಷದಿಂದ ಪ್ರಾರಂಭವಾಗಿ ರೂ 13.11 ಲಕ್ಷ (ಎಕ್ಸ್-ಶೋರೂಂ) ತನಕ ಹೋಗುತ್ತದೆ. ಈ ವೇರಿಯೆಂಟ್-ವಾರು ಬೆಲೆಗಳನ್ನು ಕೆಳಗೆ ನೀಡಲಾಗಿದೆ:
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯಾತ್ಯಾಸ |
E |
ರೂ 7.62 ಲಕ್ಷ |
ರೂ 7.68 ಲಕ್ಷ |
ರೂ 6,000 |
S |
ರೂ 8.79 ಲಕ್ಷ |
ರೂ 8.90 ಲಕ್ಷ |
ರೂ 11,000 |
S (O) |
ರೂ 9.58 ಲಕ್ಷ |
ರೂ 9.73 ಲಕ್ಷ |
ರೂ 14,000 |
S (O) ಟರ್ಬೋ iMT |
ರೂ 10.15 ಲಕ್ಷ |
ರೂ 10.40 ಲಕ್ಷ |
ರೂ 25,000 |
S+ ಡೀಸೆಲ್ |
ರೂ 10.15 ಲಕ್ಷ |
ರೂ 10.15 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
SX |
ರೂ 10.77 ಲಕ್ಷ |
ರೂ 10.89 ಲಕ್ಷ |
ರೂ 12,000 |
SX DT |
ರೂ 10.92 ಲಕ್ಷ |
ರೂ 11.04 ಲಕ್ಷ |
ರೂ 12,000 |
S (O) ಟರ್ಬೋ DCT |
ರೂ 11.11 ಲಕ್ಷ |
ರೂ 11.36 ಲಕ್ಷ |
ರೂ 25,000 |
SX ಡೀಸೆಲ್ |
ರೂ 11.62 ಲಕ್ಷ |
ರೂ 11.62 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
SX ಡೀಸೆಲ್ DT |
ರೂ 11.77 ಲಕ್ಷ |
ರೂ 11.77 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
SX (O) ಟರ್ಬೋ iMT |
ರೂ 12.06 ಲಕ್ಷ |
ರೂ 12.31 ಲಕ್ಷ |
ರೂ 25,000 |
SX (O) ಟರ್ಬೋ iMT DT |
ರೂ 12.21 ಲಕ್ಷ |
ರೂ 12.46 ಲಕ್ಷ |
ರೂ 25,000 |
SX (O) ಡೀಸೆಲ್ |
ರೂ 12.51 ಲಕ್ಷ |
ರೂ 12.51 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
SX (O) ಡೀಸೆಲ್ DT |
ರೂ 12.66 ಲಕ್ಷ |
ರೂ 12.66 ಲಕ್ಷ |
ಯಾವುದೇ ಬದಲಾವಣೆ ಇಲ್ಲ |
SX (O) ಟರ್ಬೋ DCT |
ರೂ 12.71 ಲಕ್ಷ |
ರೂ 12.96 ಲಕ್ಷ |
ರೂ 25,000 |
SX (O) ಟರ್ಬೋ DCT DT |
ರೂ 12.86 ಲಕ್ಷ |
ರೂ 13.11 ಲಕ್ಷ |
ರೂ 25,000 |
1.2-ಲೀಟರ್ ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಗಳನ್ನು ರೂ 14,300 ತನಕ ಹೆಚ್ಚಿಸಲಾಗಿದ್ದು, 1.0-ಲೀಟರ್ ಟರ್ಬೋ –ಪೆಟ್ರೋಲ್ ವೇರಿಯೆಂಟ್‌ಗಳು ರೂ 25,000 ದಷ್ಟು ಏಕರೂಪದ ಬೆಲೆ ಹೆಚ್ಚಳವನ್ನು ಕಂಡಿವೆ ಮತ್ತು ಡೀಸೆಲ್ ವೇರಿಯೆಂಟ್‌ಗಳಲ್ಲಿ ಯಾವುದೇ ಬೆಲೆ ಹೆಚ್ಚಳಗಳಿರುವುದಿಲ್ಲ.
ಪ್ರತಿಸ್ಪರ್ಧಿಗಳು
ನವೀಕೃತ ವೆನ್ಯೂ ಇತರ ಸಬ್-ಫೋರ್-ಮೀಟರ್ ಎಸ್‌ಯುವಿಗಳಾದ ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ XUV300, ಮಾರುತಿ ಬ್ರೆಝಾ, ರೆನಾಲ್ಟ್ ಕಿಗರ್ ಮತ್ತು ನಿಸಾನ್ ಮ್ಯಾಗ್ನೈಟ್‌ಗಳಿಗೆ ಇನ್ನೂ ಪ್ರತಿಸ್ಪರ್ಧಿಯಾಗಿಯೇ ಮುಂದುವರಿದಿದೆ.
ಇನ್ನಷ್ಟು ಓದಿ: ವೆನ್ಯೂ ಆನ್‌ರೋಡ್ ಬೆಲೆ
Write your Comment on Hyundai ವೆನ್ಯೂ
Wait approx ?JAB TAK AAP CAR DELIVER NAA KAR DETE HO??