• English
  • Login / Register

2023 ರ ಹ್ಯುಂಡೈ ವರ್ನಾ ಮತ್ತು ಅದರ ಪ್ರತಿಸ್ಪರ್ಧಿಗಳು: ಬೆಲೆ ಎಷ್ಟಿದೆ?

ಹುಂಡೈ ವೆರ್ನಾ ಗಾಗಿ rohit ಮೂಲಕ ಮಾರ್ಚ್‌ 23, 2023 07:34 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ವರ್ನಾ ಆರಂಭಿಕ ಹಂತದಲ್ಲಿ ಪ್ರತಿಸ್ಪರ್ಧಿಗಳಿಗಿಂತ ಅಗ್ಗವಾಗಿದೆ ಆದರೆ ಆಟೋಮ್ಯಾಟಿಕ್ ವೇರಿಯೆಂಟ್‌ಗೆ ಆರಂಭಿಕ ಬೆಲೆ ಅಧಿಕವಾಗಿದೆ.

2023 Hyundai Verna vs rivals: price comparison

ಈ ಆರನೇ-ಪೀಳಿಗೆಯ ಹ್ಯುಂಡೈ ವರ್ನಾ ರೂ. 10.90 ಲಕ್ಷದ (ಪ್ರಾಸ್ತಾವಿಕ ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಆರಂಭಿಕ ಬೆಲೆಯೊಂದಿಗೆ ಮಾರಾಟವನ್ನು ಕಂಡಿದೆ. ಇದು ಹ್ಯುಂಡೈನ ಇತ್ತೀಚಿನ ವಿನ್ಯಾಸವನ್ನು ಆಧರಿಸಿದ್ದು ಹೊಸ ಫೀಚರ್‌ಗಳನ್ನು ಮತ್ತು ಟರ್ಬೋ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಸೆಡಾನ್‌ಗಳು ಎಲ್ಲಾ ಹೊಸ ಮಾಡೆಲ್‌ಗಳೊಂದಿಗೆ ಇತ್ತೀಚಿನ ನವ ಚೈತನ್ಯವನ್ನು ಕಂಡಿವೆ, ವರ್ನಾ ಹ್ಯುಂಡೈ ಅನ್ನು ಹೊಸ ಫಾರ್ಮ್‌ಗೆ ತರಲು ಯೋಜಿಸುತ್ತಿದ್ದು ಇದು ಬ್ರ್ಯಾಂಡ್‌ನ ಪ್ರತಿಕ್ರಿಯೆಯಾಗಿದೆ. ಇದು ಇತ್ತೀಚಿನ ನವೀಕೃತ ಹೋಂಡಾ ಸಿಟಿ, ಫೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ ಮತ್ತು ಮಾರುತಿ ಸಿಯಾಜ್‌ಗೆ ಪ್ರತಿಸ್ಪರ್ಧಿಯಾಗಿದೆ. ಹಾಗಾದರೆ ಈ ಸೆಡಾನ್‌ಗಳ ಬೆಲೆ ಹೇಗಿದೆ ಎಂಬುದನ್ನು ಈ ಕೆಳಗಿನ ಹೋಲಿಕೆಯಲ್ಲಿ ತಿಳಿದುಕೊಳ್ಳೋಣ:

ಪೆಟ್ರೋಲ್-ಮ್ಯಾನ್ಯುವಲ್

ಹ್ಯುಂಡೈ ವರ್ನಾ

ಹೋಂಡಾ ಸಿಟಿ

ಫೋಕ್ಸ್‌ವ್ಯಾಗನ್ ವರ್ಟಸ್

ಸ್ಕೋಡಾ ಸ್ಲಾವಿಯಾ

ಮಾರುತಿ ಸಿಯಾಜ್

-

-

-

-

ಝೆಟಾ MT – ರೂ. 10.19 ಲಕ್ಷ

1.5 EX MT – ರೂ. 10.90 ಲಕ್ಷ

-

-

-

ಆಲ್ಫಾ MT – ರೂ. 10.99 ಲಕ್ಷ

-

SV MT - ರೂ 11.49 ಲಕ್ಷ

ಕಂಫರ್ಟ್ ಲೈನ್ MT - Rs 11.32 ಲಕ್ಷ

ಆ್ಯಕ್ಟಿವ್ MT - ರೂ 11.29 ಲಕ್ಷ

-

1.5 S MT - ರೂ 11.96 ಲಕ್ಷ

V MT - ರೂ 12.37 ಲಕ್ಷ

-

-

-

1.5 SX MT - ರೂ 12.99 ಲಕ್ಷ

VX MT - ರೂ 13.49 ಲಕ್ಷ

ಹೈಲೈನ್ MT - ರೂ 13.18 ಲಕ್ಷ

ಆ್ಯಂಬಿಷನ್ MT - ರೂ 12.99 ಲಕ್ಷ

-

-

-

-

ಸ್ಟೈಲ್ NSR MT – ರೂ. 14.20 ಲಕ್ಷ

-

1.5 SX (O) MT - ರೂ 14.66 ಲಕ್ಷ

ZX MT - ರೂ 14.72 ಲಕ್ಷ

ಟಾಪ್‌ಲೈನ್ MT – ರೂ. 14.70 ಲಕ್ಷ

ಸ್ಟೈಲ್ MT – ರೂ. 14.70 ಲಕ್ಷ

-

1.5 ಟರ್ಬೋ SX MT - ರೂ 14.84 ಲಕ್ಷ

-

-

-

-

1.5 ಟರ್ಬೋ SX (O) MT – ರೂ. 15.99 ಲಕ್ಷ

-

-

-

-

-

-

-

ಸ್ಟೈಲ್ 1.5 MT - ರೂ 17 ಲಕ್ಷ

-

2023 Honda City

  • ಈ ಹೊಸ ವರ್ನಾದ ಆರಂಭಿಕ ವೇರಿಯೆಂಟ್ ಸಿಟಿ, ವರ್ಟಸ್ ಮತ್ತು ಸ್ಲಾವಾಗಳ ಪ್ರವೇಶ ವೇರಿಯೆಂಟ್‌ಗಿಂತ ರೂ. 60,000 ಗಳಷ್ಟು ಕಡಿಮೆ ಬೆಲೆಯನ್ನು ಹೊಂದಿದೆ.
  • ಅತ್ಯಂತ ಕೈಗೆಟಕುವ ಸೆಡಾನ್ ಮಾರುತಿ ಸೆಡಾನ್ ಆಗಿದ್ದು ಟಾಪ್ ವೇರಿಯೆಂಟ್ ವರ್ನಾ EX ಹತ್ತಿರದಲ್ಲಿದೆ ಮತ್ತು ಇತರದ್ದಕ್ಕಿಂತ ಇನ್ನೂ ಕಡಿಮೆಯಾಗಿದೆ.
  •  ಹ್ಯುಂಡೈ ವರ್ನಾದ ಹೈಯರ್-ಸ್ಪೆಕ್ಡ್‌ನ SX MT ವೇರಿಯೆಂಟ್‌ ಅನ್ನು ಸ್ಲಾವಿಯಾದ ಆ್ಯಂಬಿಷನ್ MT ಗೆ ಸಮನಾಗಿ ಬೆಲೆ ನಿಗದಿಪಡಿಸಿದೆ.
  •  ವರ್ನಾ ಮತ್ತು ಸಿಟಿ ಎರಡೂ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಹ್ಯುಂಡೈ ಟರ್ಬೋ ಚಾರ್ಜ್ಡ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯುತ್ತದೆ, ಆದರೆ ಹೋಂಡಾ ಟರ್ಬೋ ಚಾರ್ಜ್ಡ್ ಆಯ್ಕೆಯನ್ನು ಹೊಂದಿಲ್ಲ.

Volkswagen Virtus

  •  ವರ್ಟಸ್ ಮತ್ತು ಸ್ಲಾವಿಯಾವನ್ನು ಟರ್ಬೋ-ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ: a 1-ಲೀಟರ್ ಯೂನಿಟ್ ಮತ್ತು 1.5-ಲೀಟರ್ ಯೂನಿಟ್.
  •  ಈ ಹೊಸ ವರ್ನಾ ಈಗ ತನ್ನ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಟಾರ್ಕ್ವಿಸ್ಟ್ ಸೆಡಾನ್ ಆಗಿ ಮಾರ್ಪಟ್ಟಿದೆ, ಅದರ ಟರ್ಬೋ ಘಟಕವು 160PS ಮತ್ತು 253Nm ಅನ್ನು ಉತ್ಪಾದಿಸುತ್ತದೆ, ಆರು-ಸ್ಪೀಡ್ ಮ್ಯಾನ್ಯುವಲ್ ಅಥವಾ ಏಳು-ಸ್ವೀಡ್ ಡಿಸಿಟಿ ಅನ್ನು ಇದಕ್ಕೆ ಜೊತೆಯಾಗಿ ನೀಡಲಾಗಿದೆ. ಇದು ಹಳೆಯ ವರ್ನಾದಿಂದ 1.5-ಲೀಟರ್ ನೈಸರ್ಗಿಕವಾಗಿ ಆಸ್ಪಿರೇಟೆಡ್ ಎಂಜಿನ್ (115PS/144Nm) ಅನ್ನು ಪಡೆಯುತ್ತದೆ, ಆರು-ಸ್ಪೀಡ್ ಮ್ಯಾನ್ಯುವಲ್ ಅಥವಾ ಸಿವಿಟಿ ಅನ್ನು ಜೊತೆಯಾಗಿ ನೀಡಲಾಗಿದೆ.
  •  ಈ ಎಲ್ಲಾ ಆರಂಭಿಕ ಬೆಲೆಗಳಲ್ಲಿ, ಈ ವರ್ನಾದ ಕಾರ್ಯಕ್ಷಮತೆ-ಆಧಾರಿತ ವೇರಿಯೆಂಟ್ ಹೆಚ್ಚು ಕೈಗೆಟಕುವ ಬೆಲೆಯನ್ನು ಹೊಂದಿದ್ದು, ರೂ 2 ಲಕ್ಷಗಳಷ್ಟು ಕಡಿಮೆ ಬೆಲೆಯನ್ನು ಹೊಂದಿದೆ. ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಅದರ ಅತ್ಯಂತ ಶಕ್ತಿಶಾಲಿ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ನೀಡುವ ಏಕೈಕ ಸೆಡಾನ್ ಸ್ಕೋಡಾ ಸ್ಲಾವಿಯಾ ಆಗಿದ್ದು ಇದು ಉತ್ತಮ ರೀತಿಯಲ್ಲಿ ಸಜ್ಜುಗೊಂಡ ವರ್ನಾದ ಟರ್ಬೋ SX(O) ಗಿಂತ ಒಂದು ಲಕ್ಷ ಅಧಿಕ ಬೆಲೆಬಾಳುತ್ತದೆ.
  •  ಫೋಕ್ಸ್‌ವ್ಯಾಗನ್-ಸ್ಕೋಡಾ ಮಾಡೆಲ್‌ಗಳು, ಕಡಿಮೆ ಒತ್ತಡದ ಪರಿಸ್ಥಿತಿಗಳಲ್ಲಿ ಎರಡು ಸಿಲಿಂಡರ್‌ಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಇಂಧನ ದಕ್ಷತೆಯನ್ನು ಹೆಚ್ಚಿಸುವ ಸಕ್ರಿಯ ಸಿಲಿಂಡರ್ ನಿಷ್ಕ್ರಿಯಗೊಳಿಸುವಿಕೆಯ ತಂತ್ರಜ್ಞಾನದೊಂದಿಗೆ ಬರುತ್ತದೆ.

 ಇದನ್ನೂ ಓದಿ: ರಾಷ್ಟ್ರವ್ಯಾಪಿ ಎರಡು ವಾರಗಳ ಬೇಸಿಗೆ ಪೂರ್ವ ಶಿಬಿರವನ್ನು ಪ್ರಕಟಿಸಿದ ಹ್ಯುಂಡೈ ಇಂಡಿಯಾ

ಪೆಟ್ರೋಲ್-ಆಟೋಮ್ಯಾಟಿಕ್

ಹ್ಯುಂಡೈ ವರ್ನಾ

ಹೋಂಡಾ ಸಿಟಿ

ಫೋಕ್ಸ್‌ವ್ಯಾಗನ್ 

ವರ್ಟಸ್

ಸ್ಕೋಡಾ ಸ್ಲಾವಿಯಾ

ಮಾರುತಿ ಸಿಯಾಜ್

-

-

-

-

ಆಲ್ಫಾ AT – ರೂ. 12.19 ಲಕ್ಷ

-

V AT – ರೂ. 13.62 ಲಕ್ಷ

-

-

-

1.5 SX CVT - ರೂ 14.24 ಲಕ್ಷ

VX AT - ರೂ 14.74 ಲಕ್ಷ

ಹೈಲೈನ್ AT - ರೂ 14.48 ಲಕ್ಷ

ಆ್ಯಂಬಿಷನ್ AT - Rs 14.29 ಲಕ್ಷ

-

1.5 ಟರ್ಬೋ SX DCT - ರೂ 16.08 ಲಕ್ಷ

ZX AT - ರೂ 15.97 ಲಕ್ಷ

ಟಾಪ್‌ಲೈನ್ AT - ರೂ 16 ಲಕ್ಷ

ಸ್ಟೈಲ್ AT - ರೂ 15.90 ಲಕ್ಷ

-

1.5 SX (O) CVT - ರೂ 16.20 ಲಕ್ಷ

-

-

-

-

1.5 ಟರ್ಬೋ SX (O) DCT - ರೂ 17.38 ಲಕ್ಷ

-

-

-

-

-

V ಹೈಬ್ರಿಡ್ - ರೂ 18.89 ಲಕ್ಷ

GT ಪ್ಲಸ್ DCT - ರೂ 18.42 ಲಕ್ಷ

ಸ್ಟೈಲ್ 1.5 AT - ರೂ 18.40 ಲಕ್ಷ

-

-

ZX ಹೈಬ್ರಿಡ್ - ರೂ 20.39 ಲಕ್ಷ

-

-

-

Maruti Ciaz

  • ಇದರ ಮ್ಯಾನ್ಯುವಲ್ ವೇರಿಯೆಂಟ್‌ಗಳಂತೆಯೇ, ಸಿಯಾಜ್ ಆಟೋಮ್ಯಾಟಿಕ್  ಗೇರ್‌ಬಾಕ್ಸ್‌ನೊಂದಿಗೆ (ಇದು ನಾಲ್ಕು-ಸ್ಪೀಡ್ ಟಾರ್ಕ್ ಪರಿವರ್ತಕ ಯೂನಿಟ್ ಆಗಿದ್ದರೂ), ರೂ. 11 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿರುವ ಅತ್ಯಂತ ಒಳ್ಳೆಯ ಕಾಂಪ್ಯಾಕ್ಟ್ ಸೆಡಾನ್ ಆಗಿ ಮುಂದುವರಿಯುತ್ತದೆ. ಇದರ ಟಾಪ್-ಸ್ಪೆಕ್ ಪೆಟ್ರೋಲ್-ಆಟೋ, ಅದರ ಪ್ರತಿಸ್ಪರ್ಧಿಗಳ ಮುಂಬರುವ ಅತ್ಯಂತ ಕೈಗೆಟಕುವ ಆರಂಭಿಕ-ಹಂತದ ಪೆಟ್ರೋಲ್ ಆಟೋ ಆಯ್ಕೆಗಿಂತ ಸುಮಾರು ರೂ.1.4 ಲಕ್ಷಗಳಷ್ಟು ಅಗ್ಗವಾಗಿದೆ.
  •  ಹ್ಯುಂಡೈ ವರ್ನಾದ ಹೆಚ್ಚಿನ ಸ್ಪೆಕ್ಡ್ ಆಗಿರುವ SX ಮತ್ತು SX(O) ವೇರಿಯೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ನೀಡುತ್ತಿದೆ. ರೂ. 14.24 ಲಕ್ಷ, ಹೊಸ ವರ್ನಾ ಆಟೋಮ್ಯಾಟಿಕ್ ವೇರಿಯೆಂಟ್‌ಗಾಗಿ ಅತ್ಯದಿಕ ಆರಂಭಿಕ ಹಂತದ ಬೆಲೆಯನ್ನು ಹೊಂದಿದೆ.
  •  ಹ್ಯುಂಡೈ ಮತ್ತು ಹೋಂಡಾ ತಮ್ಮ ನೈಸರ್ಗಿಕ ಆಸ್ಪಿರೇಟೆಡ್ ಎಂಜಿನ್‌ಗಳೊಂದಿಗೆ ಸಿವಿಟಿ ಆಯ್ಕೆಯನ್ನು ನೀಡುತ್ತದೆ, ವರ್ಟಸ್, ಸ್ಲಾವಿಯಾ ಮತ್ತು ಸಿಯಾಜ್ ಟಾರ್ಕ್ ಪರಿವರ್ತಕ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪಡೆಯುವ ಏಕೈಕ ಮಾಡೆಲ್‌ಗಳಾಗಿವೆ.

Skoda Slavia

  • ಹ್ಯುಂಡೈ ಮತ್ತು ಸ್ಕೋಡಾ-ವಿಡಬ್ಲ್ಯೂ ಸಹ ತಮ್ಮ ದೊಡ್ಡ ಟರ್ಬೋ ಘಟಕಗಳನ್ನು ಏಳು-ಸ್ಪೀಡ್ ಡಿಸಿಟಿಯೊಂದಿಗೆ ನೀಡುತ್ತವೆ.
  •  ಪೆಟ್ರೋಲ್-ಡಿಸಿಟಿಯಲ್ಲಿ ಹೆಚ್ಚು ಶಕ್ತಿಶಾಲಿ ಮತ್ತು ಫೀಚರ್-ಭರಿತ ವರ್ನಾವು ವರ್ಟಸ್ ಮತ್ತು ಸ್ಲಾವಿಯಾಗಳ ಅದೇ ರೀತಿಯ ಸ್ಪೋರ್ಟಿ ವೇರಿಯೆಂಟ್‌ಗೆ ಒಂದು ಲಕ್ಷದಷ್ಟು ಕಡಿಮೆ ಬೆಲೆಯನ್ನು ನಿಗದಿಪಡಿಸಿವೆ.
  •  ಇಲ್ಲಿನ ಎಲ್ಲಾ ಕಾರು ತಯಾರಕರಲ್ಲಿ, ಹೋಂಡಾ ಮಾತ್ರ ತನ್ನ ಸೆಡಾನ್‌ನೊಂದಿಗೆ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ನೀಡುತ್ತಿದ್ದು, ಇದು ARAI-ಕ್ಲೈಮ್ ಮಾಡಲ್ಪಟ್ಟ 27.13kmpl ಮೈಲೇಜ್ ಅನ್ನು ನೀಡುತ್ತದೆ.
  •  ಹೊಸ ವರ್ನಾವನ್ನು ಹೊರತುಪಡಿಸಿದರೆ, ಹೆಚ್ಚಿನ ಸುರಕ್ಷತೆಗಾಗಿ ADAS ಅನ್ನು ಹೊಂದಿದ ಮತ್ತೊಂದು ಏಕೈಕ ಮಾದರಿಯೆಂದರೆ ಅದು ಸಿಟಿ ಆಗಿದೆ.

 ಎಲ್ಲಾ ಬೆಲೆಗಳು, ಎಕ್ಸ್-ಶೋರೂಮ್ ದೆಹಲಿ

ಇನ್ನಷ್ಟು ಇಲ್ಲಿ ಓದಿ : ಹ್ಯುಂಡೈ ವರ್ನಾ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ವೆರ್ನಾ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience