2023ರ ಟಾಟಾ ನೆಕ್ಸಾನ್ ಕ್ರಿಯೇಟಿವ್ Vs ಟಾಟಾ ನೆಕ್ಸಾನ್ ಕ್ರಿಯೇಟಿವ್ ಪ್ಲಸ್: ಆವೃತ್ತಿಗಳ ನಡುವೆ ಹೋಲಿಕೆ

published on ಸೆಪ್ಟೆಂಬರ್ 29, 2023 06:14 pm by ansh for ಟಾಟಾ ನೆಕ್ಸ್ಂನ್‌

 • 44 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ನೆಕ್ಸಾನ್ ಕ್ರಿಯೇಟಿವ್ ಎಂಬುದು ಟಾಟಾ ಎಸ್​ಯುವಿಗಳಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರುವ  ಪ್ರವೇಶ ಮಟ್ಟದ ವೇರಿಯೆಂಟ್ ಆಗಿದೆ.

2023 Tata Nexon

 • ಟಾಟಾ ನೆಕ್ಸಾನ್ ಅನ್ನು ನಾಲ್ಕು ವಿಶಾಲವಾದ ಆವೃತ್ತಿಗಳಲ್ಲಿ ಹೊಂದಬಹುದು: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್ಲೆಸ್. 
 • 120PS ಉತ್ಪಾದಿಸುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 115PS ಉತ್ಪಾದಿಸುವ 1.5-ಲೀಟರ್ ಡೀಸೆಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. 
 • ಇದು ಎರಡೂ ಎಂಜಿನ್‌ಗಳೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರುವ ಪ್ರವೇಶ ಮಟ್ಟದ ಆವೃತ್ತಿಯಾಗಿದೆ. 
 • 10.25-ಇಂಚಿನ ಟಚ್‌ಸ್ಕ್ರೀನ್, ಆಟೋಮ್ಯಾಟಿಕ್ ಹವಾಮಾನ ನಿಯಂತ್ರಣ, 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
 • ನೆಕ್ಸಾನ್ ನ ಕ್ರಿಯೇಟಿವ್ ವೇರಿಯೆಂಟ್ ಪರಿಚಯಾತ್ಮಕವಾಗಿ 11 ಲಕ್ಷ ರೂ.ನಿಂದ 14.30 ಲಕ್ಷ ರೂ.ವರೆಗೆ ಎಕ್ಸ್ ಶೋರೂಂ ಬೆಲೆ ಹೊಂದಿದೆ. 

ಇತ್ತೀಚೆಗೆ ಬಿಡುಗಡೆಯಾದ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಹೊಸ ವಿನ್ಯಾಸ ಮತ್ತು ಹಲವಾರು ವೈಶಿಷ್ಟ್ಯಗಳ ಅಪ್ಡೇಟ್ ಗಳನ್ನು ಒಳಗೊಂಡಿದೆ. ಇದು 4 ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ. ಇದನ್ನು ಟಾಟಾ, ಪರ್ಸೋನಾಸ್ ಎಂದು ಕರೆಯುತ್ತದೆ ಮತ್ತು ಪ್ರತಿಯೊಂದೂ ಹೆಚ್ಚಿನ ಉಪ-ವೇರಿಯಂಟ್‌ಗಳೊಂದಿಗೆ ಲಭ್ಯವಿದೆ. ಮಿಡ್ ವೇರಿಯೆಂಟ್ ಆಗಿರುವ ಕ್ರಿಯೇಟಿವ್ ಆವೃತ್ತಿಯು ನೆಕ್ಸನ್  ಎಸ್​ಯುವಿಯೊಂದಿಗೆ ನೀಡಲಾಗುವ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳ ಸಂಪೂರ್ಣ ಆಯ್ಕೆಯನ್ನು ಪಡೆಯುತ್ತದೆ. ಇದನ್ನು ಇನ್ನೂ ಮೂರು ವೇರಿಯೆಂಟ್ ಗಳಾಗಿ ವಿಂಗಡಿಸಲಾಗಿದೆ: ಕ್ರಿಯೇಟಿವ್, ಕ್ರಿಯೇಟಿವ್+ ಮತ್ತು ಕ್ರಿಯೇಟಿವ್+ ಎಸ್. ಪ್ರತಿಯೊಂದು ವೇರಿಯೆಂಟ್ ಗಳು ತಮ್ಮ ವೈಶಿಷ್ಟ್ಯಗಳಿಂದ ಭಿನ್ನವಾಗಿವೆ. ಇಲ್ಲಿ, ನಾವು ಎಲ್ಲಾ ಮೂರು ನೆಕ್ಸಾನ್ ಕ್ರಿಯೇಟಿವ್  ಆವೃತ್ತಿಗಳನ್ನು ಹೋಲಿಕೆ ಮಾಡಿದ್ದೇವೆ, ಪ್ರತಿಯೊಂದೂ ಏನನ್ನು ಕೊಡುಗೆಯಾಗಿ ನೀಡುತ್ತದೆ ಎಂಬುದನ್ನು ನೋಡಬಹುದು. 

ಹೊರಭಾಗ..

2023 Tata Nexon Sequential LED DRLs

ವೇರಿಯಂಟ್ 

ಕ್ರಿಯೇಟಿವ್ 

ಕ್ರಿಯೇಟಿವ್ + (ಕ್ರಿಯೇಟಿವ್ ನ ಮೇಲೆ)

ಕ್ರಿಯೇಟಿವ್ + ಎಸ್ (ಕ್ರಿಯೇಟಿವ್ +ನ ಮೇಲೆ)

ಮುಖ್ಯಾಂಶಗಳು

 • ಬೈ- ಫಂಕ್ಸನಲ್‌ ಎಲ್ಇಡಿ ಹೆಡ್‌ಲ್ಯಾಂಪ್‌ಗಳು

 • ಅನುಕ್ರಮ ಎಲ್ಇಡಿ ಡಿಆರ್ಎಲ್

 • ದೇಹದ ಬಣ್ಣದ ಬಂಪರ್‌ಗಳು

 •  ಬಾಡಿ ಬಣ್ಣದ ಬಾಗಿಲು ಹ್ಯಾಂಡಲ್‌ಗಳು

 • ರೂಫ್ ರೈಲ್ಸ್

 • ಕನೆಕ್ಟೆಡ್ ಟೈಲ್ಸ್ ಲ್ಯಾಂಪ್ಸ್

 • 16-ಇಂಚಿನ ಅಲಾಯ್‌ ವೀಲ್‌ಗಳು

 • ಯಾವುದೂ ಇಲ್ಲ

 • ಎಲೆಕ್ಟ್ರಿಕ್ ಸನ್‌ರೂಫ್ (ವಾಯ್ಸ್ ಅಸ್ಸಿಸ್ಟಡ್) 

ಒಟ್ಟಾರೆ ಲುಕ್‌ಗೆ ಬಂದಾಗ, ಎಲ್ಲಾ ಮೂರು ವೆರಿಯೆಂಟ್‌ಗಳು ಬಹುತೇಕ ಒಂದೇ ರೀತಿ ಕಾಣುತ್ತವೆ. ಮುಂಭಾಗ, ಸೈಡ್‌ ಮತ್ತು ಹಿಂಭಾಗದ ಪ್ರೊಫೈಲ್‌ಗಳು ಒಂದೇ ವಿನ್ಯಾಸದ ಅಂಶಗಳನ್ನು ಹೊಂದಿವೆ, ಆದರೆ ನೆಕ್ಸಾನ್ ಕ್ರಿಯೇಟಿವ್ + S ಆವೃತ್ತಿಯಲ್ಲಿ ಇತರ ಎರಡು ವೇರಿಯೆಂಟ್ ಗಳಲ್ಲಿ ಇಲ್ಲದ ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಹೊಂದಿದೆ. ಹಾಗಾಗಿ ಈ ವೇರಿಯೆಂಟ್ ನ ಹೆಸರಿನಲ್ಲಿ "S" ಅನ್ನು ಸೇರಿಸಲಾಗಿದೆ. 

ಇಂಟೀರಿಯರ್

2023 Tata Nexon Steering Wheel

ವೇರಿಯಂಟ್ 

ಕ್ರಿಯೇಟಿವ್ 

ಕ್ರಿಯೇಟಿವ್ + (ಕ್ರಿಯೇಟಿವ್ ನ ಮೇಲೆ)

ಕ್ರಿಯೇಟಿವ್ + ಎಸ್ (ಕ್ರಿಯೇಟಿವ್ +ನ ಮೇಲೆ)

ಮುಖ್ಯಾಂಶಗಳು

 • ಡುಯಲ್-ಟೋನ್ ಕ್ಯಾಬಿನ್ 

 • ಪ್ರಕಾಶಿತ ಟಾಟಾ ಲೋಗೋದೊಂದಿಗೆ 2-ಸ್ಪೋಕ್ ಸ್ಟೀರಿಂಗ್ ವೀಲ್

 • ಡೋರ್ ಹ್ಯಾಂಡಲ್‌ಗಳಲ್ಲಿ ಕ್ರೋಮ್ ಅಳವಡಿಕೆ 

 • ಫ್ಯಾಬ್ರಿಕ್ ಆಪ್‌ಹೊಲ್ಸ್‌ಟೆರಿ   

 • ಲೆದರ್ ನ ಗೇರ್ ನಾಬ್

 • ವೇರಿಯಂಟ್- ಆಧಾರಿತ ಡ್ಯಾಶ್‌ಬೋರ್ಡ್ ಒಳಸೇರಿಸುವಿಕೆ 

 • ಹಿಂದಿನ ಪಾರ್ಸೆಲ್ ಟ್ರೇ

 • ಯಾವುದು ಇಲ್ಲ

ಹೊರಭಾಗದಂತೆಯೇ, ಮೂರು ವೇರಿಯೆಂಟ್ ಗಳ ಒಳಭಾಗವೂ ಒಂದೇ ಆಗಿರುತ್ತದೆ. ನೀವು ಎಲ್ಲಾ ಮೂರು ಟಾಟಾ ನೆಕ್ಸಾನ್ ಕ್ರಿಯೇಟಿವ್ ವೇರಿಯೆಂಟ್ ಗಳಲ್ಲಿ ಡ್ಯುಯಲ್-ಟೋನ್ ಕ್ಯಾಬಿನ್, ಫ್ಯಾಬ್ರಿಕ್ ಸೀಟ್ ಮತ್ತು ಲೆದರ್ ನ ಸ್ಪರ್ಶವನ್ನು ಪಡೆಯುತ್ತೀರಿ. ಆದರೆ ಕ್ರಿಯೇಟಿವ್+ ನಿಂದ ಮೇಲಿನ ಆವೃತ್ತಿಗಳಲ್ಲಿ ನೀವು ಹಿಂಭಾಗದ ಪಾರ್ಸೆಲ್ ಟ್ರೇ ಅನ್ನು ಸಹ ಪಡೆಯುತ್ತೀರಿ. ನೀವು ಅದನ್ನು ವೇರಿಯಂಟ್-ಎಕ್ಸ್‌ಕ್ಲೂಸಿವ್ ಓಷನ್ ಬ್ಲೂ ಬಾಹ್ಯ ಬಣ್ಣದಲ್ಲಿ ಪಡೆದರೆ, ನೀವು ಹೊಂದಿಸಲು ಡ್ಯಾಶ್‌ಬೋರ್ಡ್ ಇನ್ಸರ್ಟ್‌ಗಳನ್ನು ಪಡೆಯುತ್ತೀರಿ.

ವೈಶಿಷ್ಟ್ಯಗಳು

2023 Tata Nexon 10.25-inch Touchscreen Infotainment System

ವೇರಿಯಂಟ್ 

ಕ್ರಿಯೇಟಿವ್ 

ಕ್ರಿಯೇಟಿವ್ + (ಕ್ರಿಯೇಟಿವ್ ನ ಮೇಲೆ)

ಕ್ರಿಯೇಟಿವ್ + ಎಸ್ (ಕ್ರಿಯೇಟಿವ್ +ನ ಮೇಲೆ)

ಮುಖ್ಯಾಂಶಗಳು

 • 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

 • ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ

 • 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ

 •  6-ಸ್ಪೀಕರ್ ನ ಸೌಂಡ್ ಸಿಸ್ಟಮ್

 •  ಟಚ್ ನಲ್ಲಿ ಕಂಟ್ರೋಲ್ ಮಾಡುವ ಆಟೋ ಎಸಿ

 • ಎತ್ತರ-ಹೊಂದಾಣಿಸಬಹುದಾದ ಡ್ರೈವರ್ ಸೀಟು

 •  ತಂಪಾಗುವ  ಗ್ಲೌಬಾಕ್ಸ್

 • ಎಲೆಕ್ಟ್ರಿಕಲ್ ಸಹಾಯದಿಂದ ಫೋಲ್ಡ್ ಆಗುವ ಒಆರ್ವಿಎಂಗಳು  

 • ಹಿಂಬದಿಯಲ್ಲಿ ಎಸಿ ವೆಂಟ್ ಗಳು

 • ಪುಶ್ ಬಟನ್ ಸ್ಟಾರ್ಟ್-ಸ್ಟಾಪ್

 • ಪೆಡಲ್ ಶಿಫ್ಟರ್ ಗಳು (ಆಟೋಮ್ಯಾಟಿಕ್ ವೇರಿಯಂಟ್ ಗಳು)

 • 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ 

 • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ

 • ಸ್ವಯಂ ಮಡಿಸುವ ORVM ಗಳು

 • ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು

 • ಕ್ರೂಸ್ ಕಂಟ್ರೋಲ್

 • ಮಳೆ ಸಂವೇದಿ ವೈಪರ್‌ಗಳು

 •  

 • ಎತ್ತರ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಬೆಲ್ಟ್

ಇಲ್ಲಿ, ಮೂರು ಆವೃತ್ತಿಗಳ ನಡುವಿನ ವ್ಯತ್ಯಾಸವು ಹೆಚ್ಚು ಮಹತ್ವದ್ದಾಗಿದೆ. ನೆಕ್ಸಾನ್ ಕ್ರಿಯೇಟಿವ್+  ಮತ್ತು ಕ್ರಿಯೇಟಿವ್ + S ಆವೃತ್ತಿಗಳಲ್ಲಿ, ನೀವು ವೈರ್‌ಲೆಸ್ ಕನೆಕ್ಟಿವಿಟಿ ಮತ್ತು ಹೆಚ್ಚಿನ ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯಗಳೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತೀರಿ. ಆದಾಗಿಯೂ, ಕ್ರಿಯೇಟಿವ್+ ಆವೃತ್ತಿಗಿಂತ ಕ್ರಿಯೇಟಿವ್+  ಎಸ್ ಆವೃತ್ತಿಯಲ್ಲಿ ಒಂದೇ ಒಂದು ಹೆಚ್ಚಿನ ವೈಶಿಷ್ಟ್ಯವನ್ನು ನೀವು ಪಡೆಯುತ್ತೀರಿ.

ಸುರಕ್ಷತೆ

2023 Tata Nexon Airbag

ವೇರಿಯಂಟ್ 

ಕ್ರಿಯೇಟಿವ್ 

ಕ್ರಿಯೇಟಿವ್ + (ಕ್ರಿಯೇಟಿವ್ ನ ಮೇಲೆ)

ಕ್ರಿಯೇಟಿವ್ + ಎಸ್ (ಕ್ರಿಯೇಟಿವ್ +ನ ಮೇಲೆ)

ಮುಖ್ಯಾಂಶಗಳು

 • 6 ಏರ್‌ಬ್ಯಾಗ್‌ಗಳು

 • EBD ಜೊತೆಗೆ ABS

 • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

 •  ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

 • ಬೆಟ್ಟದ ಹಿಡಿತ ಸಹಾಯ

 • ಟ್ರಾಕ್ಷನ್ ಕಂಟ್ರೋಲ್

 • ಆಂಟಿ-ಗ್ಲೇರ್ IRVM

 • ಹಿಂದಿನ ಪಾರ್ಕಿಂಗ್ ಕ್ಯಾಮೆರಾ

 • ಟಾಪ್ ಮೌಂಟೆಡ್ ಹಿಂಭಾಗದ ವೈಪರ್ ಮತ್ತು ವಾಷರ್

 • ಸ್ವಯಂ ಮಬ್ಬಾಗಿಸುವ ಐಆರ್‌ವಿಎಮ್‌

 • ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು

 • 360 ಡಿಗ್ರಿ ಕ್ಯಾಮೆರಾ

 • ಬ್ಲೈಂಡ್ ವ್ಯೂ ಮಾನಿಟರ್

 •  

 • ಯಾವುದು ಇಲ್ಲ

ಎಲ್ಲಾ ವೇರಿಯೆಂಟ್‌ಗಳು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುತ್ತವೆ, ಆದರೆ ಕ್ರಿಯೇಟಿವ್ + ನಿಂದ ಮೇಲಿನ ಆವೃತ್ತಿಗಳಲ್ಲಿ ನೀವು 360-ಡಿಗ್ರಿ ಕ್ಯಾಮೆರಾದ ಪ್ರಯೋಜನವನ್ನು ಸಹ ಪಡೆಯಬಹುದು.

ಬೆಲೆ

2023 Tata Nexon

ವೇರಿಯಂಟ್ 

Cಕ್ರಿಯೇಟಿವ್ 

Cಕ್ರಿಯೇಟಿವ್+

Cಕ್ರಿಯೇಟಿವ್ + ಎಸ್‌

ಪೆಟ್ರೋಲ್ ಮ್ಯಾನುಯಲ್‌

11 ಲಕ್ಷ ರೂ.

11.70 ಲಕ್ಷ ರೂ.

12.20 ಲಕ್ಷ ರೂ. 

ಪೆಟ್ರೋಲ್ ಆಟೋಮ್ಯಾಟಿಕ್

11.70 ಲಕ್ಷ ರೂ.

12.40 ಲಕ್ಷ ರೂ.

12.90 ಲಕ್ಷ ರೂ. 

ಪೆಟ್ರೋಲ್ ಡಿಸಿಟಿ

12.20 ಲಕ್ಷ ರೂ.

12.90 ಲಕ್ಷ ರೂ.

13.40 ಲಕ್ಷ ರೂ. 

ಡೀಸೆಲ್ ಎಂಟಿ

12.40 ಲಕ್ಷ ರೂ.

13.10 ಲಕ್ಷ ರೂ.

13.60 ಲಕ್ಷ ರೂ. 

Dಡೀಸೆಲ್ ಆಟೋಮ್ಯಾಟಿಕ್

    13 ಲಕ್ಷ ರೂ.

  13.80 ಲಕ್ಷ ರೂ. 

  14.30 ಲಕ್ಷ ರೂ. 

* ಎಲ್ಲಾ ಬೆಲೆಗಳು ದೆಹಲಿಯಲ್ಲಿನ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು

ಟಾಟಾ ನೆಕ್ಸಾನ್ ಕ್ರಿಯೇಟಿವ್  ಆವೃತ್ತಿಯ ಎಕ್ಸ್ ಶೋ ರೂಂ ಬೆಲೆಯು 11 ಲಕ್ಷ ರೂ.ನಿಂದ ಪ್ರಾರಂಭವಾಗಿ  14.30 ಲಕ್ಷ ರೂ.ವರೆಗೆ ಇದೆ. ಸಾಮಾನ್ಯ ಕ್ರಿಯೇಟಿವ್ ಆವೃತ್ತಿಯು ತುಂಬಾ ಸುಸಜ್ಜಿತವಾಗಿದೆ, ಆದರೆ ದೊಡ್ಡ ಟಚ್‌ಸ್ಕ್ರೀನ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಹೊಸ ಟಾಟಾ ನೆಕ್ಸಾನ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ನೀವು ಬಯಸಿದರೆ, ನೀವು ರೂ 80,000 ವರೆಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇದಲ್ಲದೆ, ಸನ್‌ರೂಫ್ ನಿಮಗೆ ಆದ್ಯತೆಯಾಗಿದ್ದರೆ, ನೀವು ನೆಕ್ಸಾನ್ ಕ್ರಿಯೇಟಿವ್+ ಆವೃತ್ತಿಯನ್ನು ಖರೀದಿಸಲು 50,000 ರೂಪಾಯಿ ವರೆಗೆ ಹೆಚ್ಚು ಪಾವತಿಸಬೇಕಾಗುತ್ತದೆ.

 ಇದನ್ನೂ ಓದಿ: 2023 ಟಾಟಾ ನೆಕ್ಸಾನ್ Vs ಹೋಂಡಾ ಎಲಿವೇಟ್: ವಿಶೇಷಣಗಳ ಹೋಲಿಕೆ

ಈ ಮೂರರ ನಡುವೆ, ನೆಕ್ಸಾನ್ ನ ಸಾಮಾನ್ಯ ಕ್ರಿಯೇಟಿವ್ ವೇರಿಯೆಂಟ್ ಗಿಂತ ಕ್ರಿಯೇಟಿವ್+ ಹೆಚ್ಚು ಪ್ರೀಮಿಯಂ  ಆಗಿದೆ ಮತ್ತು ನಾವು ಮಾಡುವ ಶಿಫಾರಸು ಕೂಡ  ಕ್ರಿಯೇಟಿವ್+ ಆಗಿದೆ. 

2023 ರ ಟಾಟಾ ನೆಕ್ಸಾನ್ ನ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆ 8.10 ಲಕ್ಷ ರೂ. ನಿಂದ 15.50 ಲಕ್ಷ ರೂ.ವರೆಗೆ ಇದೆ. ಇದು ಮಾರುಕಟ್ಟೆಯಲ್ಲಿ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ ಮತ್ತು ಮಹೀಂದ್ರಾ XUV300 ಗೆ ಪ್ರತಿಸ್ಪರ್ಧಿಯಾಗಿದೆ.

 ಇನ್ನಷ್ಟು ಓದಿ: ಟಾಟಾ ನೆಕ್ಸಾನ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ನೆಕ್ಸ್ಂನ್‌

Read Full News
Used Cars Big Savings Banner

found ಎ car ನೀವು want ಗೆ buy?

Save upto 40% on Used Cars
 • quality ಬಳಕೆ ಮಾಡಿದ ಕಾರುಗಳು
 • affordable prices
 • trusted sellers
view used ನೆಕ್ಸ್ಂನ್‌ in ನವ ದೆಹಲಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

 • ಟ್ರೆಂಡಿಂಗ್ ಸುದ್ದಿ
 • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience