• English
  • Login / Register

1 ಲಕ್ಷ ಕಾರುಗಳ ಮಾರಾಟದ ಮೈಲುಗಲ್ಲಿಗೆ ಹತ್ತಿರವಾಗುತ್ತಿರುವ 2024ರ Hyundai Creta

ಹುಂಡೈ ಕ್ರೆಟಾ ಗಾಗಿ ansh ಮೂಲಕ ಜುಲೈ 04, 2024 09:28 pm ರಂದು ಪ್ರಕಟಿಸಲಾಗಿದೆ

  • 53 Views
  • ಕಾಮೆಂಟ್‌ ಅನ್ನು ಬರೆಯಿರಿ

ಆಪ್‌ಡೇಟ್‌ ಮಾಡಲಾದ ಎಸ್‌ಯುವಿಯನ್ನು 2024ರ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು ಹೊಸ ವಿನ್ಯಾಸ, ನವೀಕರಿಸಿದ ಕ್ಯಾಬಿನ್ ಮತ್ತು ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬಂದಿತ್ತು

2024 Hyundai Creta Sales Since Launch

ಫೇಸ್‌ಲಿಫ್ಟೆಡ್ ಹ್ಯುಂಡೈ ಕ್ರೆಟಾವನ್ನು 2024ರ ಜನವರಿಯಲ್ಲಿ ಮತ್ತೆ ಬಿಡುಗಡೆ ಮಾಡಲಾಗಿತ್ತು ಮತ್ತು ಅದು ಬಿಡುಗಡೆಯಾದಗಿನಿಂದ ಇಲ್ಲಿಯವರೆಗೆ ಇದು 90,000 ಕಾರುಗಳ ಮಾರಾಟದ ಮಾರ್ಕ್ ಅನ್ನು ದಾಟಿದೆ. 6 ತಿಂಗಳೊಳಗೆ ಈ ಕಾಂಪ್ಯಾಕ್ಟ್ ಎಸ್‌ಯುವಿಯು 91,348 ಕಾರುಗಳನ್ನು ಡೆಲಿವೆರಿ ನೀಡಿದೆ, ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರಿ-ಫೇಸ್‌ಲಿಫ್ಟ್ ಮೊಡೆಲ್‌ಗಿಂತ 11 ಪ್ರತಿಶತ ಹೆಚ್ಚಾಗಿದೆ. ಫೇಸ್‌ಲಿಫ್ಟೆಡ್ ಹ್ಯುಂಡೈ ಕ್ರೆಟಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಪವರ್‌ಟ್ರೇನ್‌ ಆಯ್ಕೆಗಳು

ಎಂಜಿನ್‌

1.5 ಲೀಟರ್‌ ಪೆಟ್ರೋಲ್‌

1.5-ಲೀಟರ್‌ ಡೀಸೆಲ್‌

1.5-ಲೀಟರ್‌ ಟರ್ಬೋ ಪೆಟ್ರೋಲ್‌

ಪವರ್‌

115 ಪಿಎಸ್‌

116 ಪಿಎಸ್‌

160 ಪಿಎಸ್‌

ಟಾರ್ಕ್‌

144 ಎನ್‌ಎಮ್‌

250 ಎನ್‌ಎಮ್‌

253 ಎನ್‌ಎಮ್‌

ಗೇರ್‌ಬಾಕ್ಸ್‌

6 ಮ್ಯಾನುಯಲ್‌, ಸಿವಿಟಿ

6 ಮ್ಯಾನುಯಲ್‌, 6 ಆಟೋಮ್ಯಟಿಕ್‌

7ಡಿಸಿಟಿ

1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಪ್ರಿ-ಫೇಸ್‌ಲಿಫ್ಟ್ ಮಾಡೆಲ್‌ನಿಂದ ಉಳಿಸಿಕೊಳ್ಳಲಾಗಿದೆ, ಇದು ಮೊದಲಿನಂತೆಯೇ ಔಟ್‌ಪುಟ್ ಅಂಕಿಅಂಶಗಳನ್ನು ಹೊಂದಿದೆ ಮತ್ತು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ಗಳೊಂದಿಗೆ ಲಭ್ಯವಿದೆ.

2024 Hyundai Creta Diesel Engine

ಹಾಗೆಯೇ ಇದರೊಂದಿಗೆ, ಕಾರು ತಯಾರಕರು ಇದಕ್ಕೆ ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಸೇರಿಸಿದ್ದಾರೆ, ಇದು ಅದರ ಕ್ಲಾಸ್‌ನಲ್ಲಿ ಹೆಚ್ಚಿನ ಪವರ್‌ ಮತ್ತು ಟಾರ್ಕ್ ಉತ್ಪಾದನೆಯನ್ನು ಹೊಂದಿದೆ. ಈ ಸೆಗ್ಮೆಂಟ್‌ನಲ್ಲಿ ಈ ಎಂಜಿನ್ ಅತ್ಯಂತ ಶಕ್ತಿಶಾಲಿಯಾಗಿದೆ ಮತ್ತು 7-ಸ್ಪೀಡ್‌ ಡಿಸಿಟಿ (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌) ನೊಂದಿಗೆ ಮಾತ್ರ ನೀಡಲಾಗುತ್ತದೆ.

ಫೀಚರ್‌ಗಳು ಮತ್ತು ಸುರಕ್ಷತೆ

2024 Hyundai Creta Cabin

ಹ್ಯುಂಡೈ ಹೊಸ ಕ್ರೆಟಾವನ್ನು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ,, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಪ್ಯಾನರೋಮಿಕ್‌ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳೊಂದಿಗೆ ಸಜ್ಜುಗೊಳಿಸಿದೆ.

ಇದನ್ನೂ ಸಹ ಓದಿ: ಜಾಗತಿಕವಾಗಿ Hyundai Inster ನ ಅನಾವರಣ, ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ

ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್‌ ಕಂಟ್ರೋಲ್‌ ಮತ್ತು ಆಟೊನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌ ನಂತಹ ಲೆವೆಲ್ 2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು) ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 Hyundai Creta

ಹ್ಯುಂಡೈ ತನ್ನ ಕ್ರೆಟಾದ ಬೆಲೆಯು 11 ಲಕ್ಷ ರೂ.ನಿಂದ  20.15 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ನಿಗದಿಪಡಿಸಿದೆ ಮತ್ತು ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್‌, ವೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್‌ಗೆ ಪ್ರತಿಸ್ಪರ್ಧಿಯಾಗಿದೆ. ನೀವು ಸ್ಪೋರ್ಟಿಯರ್ ಆಗಿ ಕಾಣುವ ಕ್ರೆಟಾವನ್ನು ಬಯಸಿದರೆ, ನೀವು ಹುಂಡೈ ಕ್ರೆಟಾ ಎನ್ ಲೈನ್ ಅನ್ನು ಆಯ್ಕೆ ಮಾಡಬಹುದು.

ಆಟೋಮೋಟಿವ್ ಪ್ರಪಂಚದ ಕುರಿತು ತ್ವರಿತ ಆಪ್‌ಡೇಟ್‌ಗಳನ್ನು ಬಯಸುವಿರಾ? ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

ಇದರ ಬಗ್ಗೆ ಇನ್ನಷ್ಟು ಓದಿ: ಕ್ರೆಟಾ ಆನ್ ರೋಡ್ ಬೆಲೆ

was this article helpful ?

Write your Comment on Hyundai ಕ್ರೆಟಾ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience