Login or Register ಅತ್ಯುತ್ತಮ CarDekho experience ಗೆ
Login

ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟದ ವೇಳೆ ಕಾಣಿಸಿಕೊಂಡ 2024 Mahindra XUV400

ಡಿಸೆಂಬರ್ 04, 2023 12:11 pm ರಂದು rohit ಮೂಲಕ ಪ್ರಕಟಿಸಲಾಗಿದೆ
23 Views

ಪರಿಷ್ಕೃತ ಮಹೀಂದ್ರಾ XUV300 ವಾಹನದಲ್ಲಿರುವ ವಿನ್ಯಾಸವನ್ನೇ ಇದು ಸಹ ಹೊಂದಿದ್ದು, ಸ್ಪ್ಲಿಟ್‌ ಹೆಡ್‌ ಲೈಟ್‌ ಗಳು ಮತ್ತು ಕೋರೆಹಲ್ಲಿನ ಆಕಾರದ ಹೊಸ LED DRL ಗಳನ್ನು ಇದರಲ್ಲಿ ಕಾಣಬಹುದು.

  • ಮಹೀಂದ್ರಾ ಸಂಸ್ಥೆಯು XUV400 ಅನ್ನು ಮೊದಲ ಎಲೆಕ್ಟ್ರಿಕ್‌ SUV ಯಾಗಿ 2023ರ ಆರಂಭದಲ್ಲಿ ಪರಿಚಯಿಸಿತ್ತು.
  • ಪರಿಷ್ಕೃತ ಮಾದರಿಯು ಹೊಸ ಅಲೋಯ್‌ ವೀಲ್‌ ಗಳು ಮತ್ತು ಸಂಪರ್ಕಿತ LED ಟೇಲ್‌ ಲೈಟ್‌ ಗಳನ್ನು ಹೊಂದಿರಲಿದೆ.
  • ಹೊಸ ಡ್ಯಾಶ್‌ ಬೋರ್ಡ್‌ ವಿನ್ಯಾಸ ಮತ್ತು ದೊಡ್ಡದಾದ ಡಿಸ್ಪೇಗಳನ್ನು ಕ್ಯಾಬಿನ್‌ ನಲ್ಲಿ ಕಾಣಬಹುದು.
  • ಅದೇ ಬ್ಯಾಟರಿ ಪ್ಯಾಕ್‌ ಅನ್ನು ಮುಂದುವರಿಸಿದರೂ ಕಿ.ಮೀ ಶ್ರೇಣಿಯಲ್ಲಿ ಸುಧಾರಣೆ ಕಂಡು ಬರಲಿದೆ.
  • ಇದನ್ನು 2024ರ ದ್ವಿತೀಯಾರ್ಧದದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಮಹೀಂದ್ರಾ XUV400 ವಾಹನವನ್ನು 2023ರ ಆರಂಭದಲ್ಲಿ ಈ ಸಂಸ್ಥೆಯ ಮೊದಲ ದೀರ್ಘ ಶ್ರೇಣಿಯ ಎಲೆಕ್ಟ್ರಿಕ್‌ SUV ಯಾಗಿ ಬಿಡುಗಡೆ ಮಾಡಲಾಗಿತ್ತು. ಇದರ ಇಂಟರ್ನಲ್‌ ಕಂಬಶನ್ (ICE) ಆವೃತ್ತಿಯಾಗಿರುವ ಮಹೀಂದ್ರಾ XUV300 ವಾಹನವು 2024ರಲ್ಲಿ ಮಾರ್ಪಾಡಿಗೆ ಒಳಗಾಗಲಿದ್ದು, ಮಹೀಂದ್ರಾ ಸಂಸ್ಥೆಯು ತನ್ನ EV ಕಾರಿಗೂ ಬದಲಾವಣೆ ತರಲು ಯೋಜಿಸಿದ್ದು ಇದರ ಪರೀಕ್ಷಾರ್ಥ ವಾಹನವು ಮೊದಲ ಬಾರಿಗೆ ಕಾಣಿಸಿಕೊಂಡಿದೆ.

ಇದರಲ್ಲಿ ಏನೆಲ್ಲ ಭಿನ್ನತೆ ಇದೆ?

ಈ ಮಾದರಿಯಲ್ಲಿ ನೀವು ಪರಿಷ್ಕೃತ ಫೇಶಿಯಾವನ್ನು ಗಮನಿಸಬಹುದಾಗಿದ್ದು, ಮಹೀಂದ್ರಾದ EV ಮಾದರಿಗಳಲ್ಲಿ ಕಾಣಿಸಿಕೊಳ್ಳುವ ತಾಮ್ರದ ಅಂಶಗಳನ್ನು ಇದು ಉಳಿಸಿಕೊಂಡಿದೆ. ಇದೀಗ ಅದೇ ಸ್ಪ್ಲಿಟ್‌ ಗ್ರಿಲ್‌ ಸೆಟಪ್‌, ಕೋರೆಹಲ್ಲಿನ ಆಕಾರದ LED DRL, ಮತ್ತು ಸ್ಪ್ಲಿಟ್‌ ಹೆಡ್‌ ಲೈಟ್‌ ಗಳನ್ನು ಹೊಂದಿದ್ದು ಇದನ್ನು ಪರಿಷ್ಕೃತ XUV300 ನ ಪರೀಕ್ಷಾರ್ಥ ವಾಹನದಲ್ಲಿಯೂ ಗಮನಿಸಲಾಗಿದೆ. ಈ ವಿನ್ಯಾಸವನ್ನು ಮಹೀಂದ್ರಾದ Evಗಳ ಬಾರ್ನ್‌ ಎಲೆಕ್ಟ್ರಿಕ್‌ (BE) ಶ್ರೇಣಿಯಲ್ಲಿ ಕಾಣಬಹುದು.

ಪರೀಕ್ಷಾರ್ಥ ವಾಹನವನ್ನು ಸಾಕಷ್ಟು ಮರೆಮಾಚಲಾಗಿದ್ದು, ಪ್ರೊಫೈಲ್‌ ನಲ್ಲಿ ಹೊಸ ಅಲೋಯ್‌ ವೀಲ್‌ ಗಳನ್ನು ಕಾಣಬಹುದಾಗಿದೆ. 2024 XUV400 ಕಾರಿನ ಹಿಂಭಾಗದ ಸ್ಪೈ ಶಾಟ್‌ ಗಳು ಲಭಿಸಿಲ್ಲ. ಆದರೆ ಸಂಪರ್ಕಿತ LED ಟೇಲ್‌ ಲೈಟ್‌ ಗಳು ಸೇರಿದಂತೆ XUV300 ನಲ್ಲಿ ಇರುವ ಬದಲಾವಣೆಗಳನ್ನು ಇದು ಸಹ ಹೊಂದಿರಲಿದೆ.

ಕ್ಯಾಬಿನ್‌ ಮತ್ತು ವೈಶಿಷ್ಟ್ಯಗಳಲ್ಲಿ ಮಾರ್ಪಾಡು

ಪರಿಷ್ಕೃತ XUV400 ವಾಹನದ ಒಳಾಂಗಣದ ಯಾವುದೇ ಚಿತ್ರಗಳು ಲಭಿಸದೆ ಇದ್ದರೂ ಮಹೀಂದ್ರಾ ಸಂಸ್ಥೆಯು ಕ್ಯಾಬಿನ್‌ ನ ಡ್ಯಾಶ್‌ ಬೋರ್ಡಿಗೆ ಹೊಸ ವಿನ್ಯಾಸವನ್ನು ತರಲಿದೆ. ಜತೆಗೆ ಹೊಸ ಸೀಟ್‌ ಅಫೋಲ್ಸ್ಟರಿ ಮತ್ತು ದೊಡ್ಡದಾದ ಡಿಸ್ಪ್ಲೇಯನ್ನು ಪಡೆಯಲಿದೆ. ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಳು ಮತ್ತು ವೈರ್‌ ಲೆಸ್‌ ಫೋನ್‌ ಚಾರ್ಜಿಂಗ್‌ ಸೇರಿದಂತೆ 2024 ಮಹೀಂದ್ರಾ XUV300 ಯಲ್ಲಿ ಮಾಡಲಾದ ಬದಲಾವಣೆಗಳನ್ನೇ ಈ ಪರಿಷ್ಕೃತ XUV400 ನಲ್ಲಿಯೂ ಕಾಣಬಹುದಾಗಿದೆ. ಈಗ ಇರುವ ಸಿಂಗಲ್‌ ಪೇನ್‌ ಸನ್‌ ರೂಫ್‌, ಅಟೋ AC, ಸಂಪರ್ಕಿತ ಕಾರ್‌ ತಂತ್ರಜ್ಞಾನ ಇತ್ಯಾದಿಗಳನ್ನು ಉಳಿಸಿಕೊಳ್ಳಲಾಗಿದೆ.

ಮಹೀಂದ್ರಾ ಸಂಸ್ಥೆಯು ಪರಿಷ್ಕೃತ SUV ಯಲ್ಲಿ ಆರು ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್ (ESC), 360‌ ಡಿಗ್ರಿ ಕ್ಯಾಮರಾ, ಮತ್ತು ಬಹುಶಃ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಇತ್ಯಾದಿ ಸುರಕ್ಷತಾ ಸೌಲಭ್ಯಗಳನ್ನು ಹೊಂದಿರಲಿದೆ.

ಇದನ್ನು ಸಹ ನೋಡಿರಿ: ಎಂ.ಎಸ್‌ ಧೋನಿಯ ಗ್ಯಾರೇಜ್‌ ಶೋಭಿಸಿದ ಮರ್ಸಿಡಿಸ್-AMG G 63 SUV

ಬ್ಯಾಟರಿ ಮತ್ತು ಶ್ರೇಣಿ ಹೇಗಿರಲಿದೆ?

ಹೊಸ ಮಹೀಂದ್ರಾ XUV400 ವಾಹನವು ಪ್ರಸ್ತುತ ಮಾದರಿಯಲ್ಲಿರುವ ಬ್ಯಾಟರಿ ಪ್ಯಾಕ್‌ ಆಯ್ಕೆಗಳನ್ನೇ ಹೊಂದಿರಲಿದ್ದರೂ (34.5 kWh ಮತ್ತು 39.4 kWh), ಕಿ.ಮೀ ಶ್ರೇಣಿಯಲ್ಲಿ ಸ್ವಲ್ಪ ಸುಧಾರಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ XUV400 ಕಾರು ಕ್ರಮವಾಗಿ 375 km ಮತ್ತು 456 km ಶ್ರೇಣಿಯನ್ನು ಹೊಂದಿದೆ. ಎರಡೂ ಬ್ಯಾಟರಿ ಪ್ಯಾಕ್‌ ಆಯ್ಕೆಗಳು 150 PS/310 Nm ಎಲೆಕ್ಟ್ರಿಕ್‌ ಮೋಟರ್‌ ಅನ್ನು ಹೊಂದಿವೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧೆ

ಪರಿಷ್ಕೃತ ಮಹೀಂದ್ರಾ XUV400 ಕಾರು, ಪರಿಷ್ಕೃತ XUV300 ವಾಹನವು ಬಿಡುಗಡೆಯಾದ ನಂತರ 2024ರ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಇದಕ್ಕೆ ಪ್ರಸ್ತುತ ಮಾದರಿಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು (ರೂ. 15.99 ಲಕ್ಷದಿಂದ 19.39 ಲಕ್ಷದ ತನಕ, ಎಕ್ಸ್‌ - ಶೋರೂಂ, ದೆಹಲಿ) ನಿಗದಿಪಡಿಸುವ ಸಾಧ್ಯತೆ ಇದೆ. ಇದು ಟಾಟಾ ನೆಕ್ಸನ್‌ EV ಜೊತೆಗೆ ಸ್ಪರ್ಧಿಸಲಿದ್ದು, ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ ಮತ್ತು MG ZS EV ಗೆ ಅಗ್ಗದ ಬದಲಿ ಆಯ್ಕೆ ಎನಿಸಲಿದೆ.

ಚಿತ್ರದ ಮೂಲ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: XUV400 EV ಅಟೋಮ್ಯಾಟಿಕ್

Share via

Write your Comment on Mahindra ಎಕ್ಸ್‌ಯುವಿ 400 ಇವಿ

ಇನ್ನಷ್ಟು ಅನ್ವೇಷಿಸಿ on ಮಹೀಂದ್ರ ಎಕ್ಸ್‌ಯುವಿ 400 ಇವಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ