ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳೊಂದಿಗೆ ಕಂಡುಬಂದ 2024 ಟಾಟಾ ನೆಕ್ಸಾನ್
ಟಾಟಾ ನೆಕ್ಸಾನ್ ಗಾಗಿ tarun ಮೂಲಕ ಜುಲೈ 14, 2023 10:44 pm ರಂದು ಮಾರ್ಪಡಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
2024 ಟಾಟಾ ನೆಕ್ಸಾನ್ ಪ್ರಸ್ತುತ ಲಭ್ಯವಿರುವ ಮಾಡೆಲ್‌ಗಿಂತ ಹಲವಾರು ಹೆಚ್ಚುವರಿ ಫೀಚರ್‌ಗಳನ್ನು ಪಡೆಯುತ್ತದೆ
-
ನೆಕ್ಸಾನ್ ನವೀಕರಣವು ಡೈನಾಮಿಕ್ ಅಥವಾ ಸೀಕ್ವೆನ್ಷಿಯಲ್ ಟರ್ನ್ ಇಂಡಿಕೇಟರ್‌ಗಳನ್ನು ಪಡೆಯುತ್ತದೆ, ಮತ್ತು ಈ ಫೀಚರ್‌ಗಳು ಅದರ ಟಾಪ್ ಲೈನ್ ವೇರಿಯಂಟ್‌ಗಳಲ್ಲಿ ಲಭ್ಯವಾಗಬಹುದು.
-
ಈ ಹಿಂದೆ, ಪರೀಕ್ಷೆಯ ಸಮಯದಲ್ಲಿ ನೋಡಿದ ಮಾಡೆಲ್‌ನಲ್ಲಿದ್ದ ಎಲ್ಇಡಿ ಲೈಟ್ ಬಾರ್‌ನ ಒಂದು ವಿಷುಯಲ್ ಬಾನೆಟ್‌ನಲ್ಲಿ ಗಮನಿಸಲಾಗಿದೆ.
-
ಕ್ಯಾಬಿನ್ ಹೊಸ ಸ್ಟೀರಿಂಗ್ ವೀಲ್ ಮತ್ತು ದೊಡ್ಡ ಡಿಸ್‌ಪ್ಲೇಗಳೊಂದಿಗೆ ಕೆಲವು ಬದಲಾವಣೆಗಳಿಗೆ ಒಳಗಾಗಿದೆ.
-
ಇದರಲ್ಲಿ, ಟಾಟಾದ ಹೊಸ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ನೀಡಬಹುದೆಂಬ ನಿರೀಕ್ಷೆಯಿದ್ದರೂ, ಹಿಂದಿನ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಸಹ ಉಳಿಸಿಕೊಳ್ಳಲಾಗುತ್ತದೆ.
ನಾವು ನವೀಕೃತ ಟಾಟಾ ನೆಕ್ಸಾನ್‌ನ ಹೊಸ ಮತ್ತು ವಿಶೇಷವಾದ ಸ್ಪೈ ಶಾಟ್‌ಗಳನ್ನು ಹೊಂದಿದ್ದೇವೆ, ಇದು ಹೊಸ ಮತ್ತು ಕೂಲ್ ಫೀಚರ್‌ಗಳ ಬಗ್ಗೆ ಮಾಹಿತಿಯನ್ನು ಹೈಲೈಟ್ ಮಾಡುತ್ತದೆ. ಅಪ್‌ಡೇಟ್ ಮಾಡಲಾದ ಎಸ್‌ಯುವಿಯ ಆವೃತ್ತಿಯು ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿರುತ್ತದೆ, ಇದು ಸಾಮಾನ್ಯವಾಗಿ ಐಷಾರಾಮಿ ಬ್ರಾಂಡ್‌ನ ಕೆಲವು ಪ್ರೀಮಿಯಂ ಕಾರುಗಳಲ್ಲಿ ಕಂಡುಬರುತ್ತದೆ. ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಈ ಫೀಚರ್ ಅನ್ನು ನೀಡುತ್ತಿರುವ ಮೊದಲ ಕಂಪನಿ ಟಾಟಾ ಆಗಲಿದೆ.
ಇತರ ಪ್ರಮುಖ ವಿನ್ಯಾಸ ಅಪ್‌ಗ್ರೇಡ್‌ಗಳಲ್ಲಿ ಮರುವಿನ್ಯಾಸಗೊಳಿಸಲಾದ ರಿಯರ್ ಬಂಪರ್‌ಗಳು, ಹೊಸ ಬೂಟ್ ಆಕಾರ, ಹೊಸ ಟೈಲ್ ಲೈಟ್ ವಿನ್ಯಾಸ ಮತ್ತು ತಾಜಾ ಅಲಾಯ್ ವ್ಹೀಲ್‌ಗಳು ಸೇರಿವೆ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿತ್ರಗಳನ್ನು ಗಮನಿಸಿದರೆ ಹೊಸ ನೆಕ್ಸಾನ್ ಕಾರಿನ ವಿನ್ಯಾಸದಲ್ಲಿ ಹಲವು ಬದಲಾವಣೆಗಳಾಗಲಿದ್ದು, ಹೊಸ ಹಾಗೂ ಫ್ರೆಶ್ ಲುಕ್ ನೀಡಲಿದೆ ಎನ್ನಬಹುದು.
ಇದನ್ನೂ ನೋಡಿ: ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆಯಾದ ನವೀಕೃತ ಟಾಟಾ ನೆಕ್ಸಾನ್ EV, ಬಹಿರಂಗಗೊಂದ ಕೆಲವು ಪ್ರಮುಖ ವಿವರಗಳು
ನೆಕ್ಸಾನ್‌ನ ಇಂಟೀರಿಯರ್ ಅನ್ನು ಹಲವಾರು ಪ್ರೀಮಿಯಂ ಅಂಶಗಳೊಂದಿಗೆ ನವೀಕರಿಸಲಾಗುತ್ತದೆ. ಇದು ಹೊಸ ಫ್ಲಾಟ್ ಬಾಟಮ್ ಸ್ಟೀರಿಂಗ್ ಅನ್ನು ಪಡೆಯಲಿದ್ದು, ಅದರ ಮಧ್ಯದಲ್ಲಿ ಬ್ಲ್ಯಾಕ್‌ಲಿಟ್ ಸೆಕ್ಷನ್ ಅನ್ನು ನೀಡಲಾಗಿದೆ, ಅದರ ಮೇಲೆ ಟಾಟಾ ಲೋಗೋವನ್ನು ಪ್ರದರ್ಶಿಸಲಾಗುತ್ತದೆ. ಎಸ್‌ಯುವಿಯ ಸಾಮಾನ್ಯ ವೇರಿಯಂಟ್‌ಗಳು ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ನೆಕ್ಸಾನ್ EV ಮ್ಯಾಕ್ಸ್ ಡಾರ್ಕ್‌ನ ಹೊಸ 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ.
2024 ನೆಕ್ಸಾನ್ ಮೊದಲಿನಂತೆಯೇ 115PS 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದೆ. ಇದಲ್ಲದೆ, ಹೊಸ 1.2-ಲೀಟರ್ TGDI ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಸಹ ಇದರಲ್ಲಿ ನೀಡಬಹುದು. ಈ ಎಂಜಿನ್ ಅನ್ನು ಆಟೋ ಎಕ್ಸ್‌ಪೋ 2023 ರಲ್ಲಿ ಅನಾವರಣಗೊಳಿಸಲಾಯಿತು ಮತ್ತು ಮತ್ತು ಇದರ ಪವರ್ ಔಟ್‌ಪುಟ್ 125PS/225Nm ಆಗಿದೆ. ಪ್ರಸ್ತುತ ಟರ್ಬೊ-ಪೆಟ್ರೋಲ್ ಎಂಜಿನ್‌ನ AMT ಆಯ್ಕೆಯನ್ನು ಟಾಟಾದ ಹೊಸದಕ್ಕೆ ಜೋಡಿಸಲಾದ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್) ಮೂಲಕ ಬದಲಾಯಿಸಬಹುದು.
ಇದನ್ನೂ ಓದಿ: ಭಾರೀ ಮರೆಮಾಚುವಿಕೆಯೊಂದಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದ ಟಾಟಾ ಕರ್ವ್
ಟಾಟಾ ನೆಕ್ಸಾನ್ ಬೆಲೆ ಪ್ರಸ್ತುತ ಆವೃತ್ತಿಯ ಪ್ರೀಮಿಯಂ ಮಾಡೆಲ್‌ಗಿಂತ ಹೆಚ್ಚಿರಬಹುದು. ಪ್ರಸ್ತುತ ಇದರ ಬೆಲೆ ರೂ. 7.80 ಲಕ್ಷದಿಂದ ರೂ. 14.50 ಲಕ್ಷ (ಎಕ್ಸ್ ಶೋರೂಂ) ಇದೆ. ಇದು ಕಿಯಾ ಸೊನೆಟ್, ಮಹೀಂದ್ರಾ XUV300, ರೆನಾಲ್ಟ್ ಕೈಗರ್, ಮಾರುತಿ ಸುಜುಕಿ ಬ್ರೆಝಾ, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಹುಂಡೈ ವೆನ್ಯೂ ಮುಂತಾದವುಗಳೊಂದಿಗೆ ಸ್ಪರ್ಧಿಸುತ್ತದೆ.
ಇನ್ನಷ್ಟು ಓದಿ: ಟಾಟಾ ನೆಕ್ಸಾನ್ AMT