• English
  • Login / Register

5 ಡೋರ್ Mahindra Thar Roxx ಬಿಡುಗಡೆ, ಬೆಲೆಗಳು 12.99 ಲಕ್ಷ ರೂ.ನಿಂದ ಪ್ರಾರಂಭ

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ dipan ಮೂಲಕ ಆಗಸ್ಟ್‌ 14, 2024 11:32 pm ರಂದು ಮಾರ್ಪಡಿಸಲಾಗಿದೆ

  • 138 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಹೀಂದ್ರಾ ಥಾರ್ ರೋಕ್ಸ್ 3-ಡೋರ್ ಮೊಡೆಲ್‌ನ ಉದ್ದವಾದ ಆವೃತ್ತಿಯಾಗಿದ್ದು, ಇದು ಹೆಚ್ಚಿನ ತಂತ್ರಜ್ಞಾನ ಮತ್ತು ಸ್ಥಳಾವಕಾಶವನ್ನು ನೀಡುತ್ತದೆ

Mahindra Thar Roxx unveiled before its official launch tomorrow

  • ಇದು 6-ಸ್ಲ್ಯಾಟ್ ಗ್ರಿಲ್,ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳು ಮತ್ತು C- ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಪಡೆಯುತ್ತದೆ.

  • ಇಂಟಿರೀಯರ್‌ ಡ್ಯುಯಲ್-ಟೋನ್ ಕಪ್ಪು ಮತ್ತು ಬಿಳಿ ಮತ್ತು 2 ನೇ ಸಾಲಿನಲ್ಲಿ ಬೆಂಚ್ ಸೀಟ್ ಸೆಟಪ್ ಅನ್ನು ಹೊಂದಿದ್ದು, ಎಲ್ಲಾ ಪ್ರಯಾಣಿಕರಿಗೆ ಸರಿಹೊಂದಿಸಬಹುದಾದ ಹೆಡ್‌ರೆಸ್ಟ್‌ಗಳನ್ನು ಹೊಂದಿದೆ.

  • ಇದರ ಫೀಚರ್‌ಗಳ ಪಟ್ಟಿಯು 10.25-ಇಂಚಿನ ಎರಡು ಡಿಸ್‌ಪ್ಲೇಗಳು, ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟುಗಳು ಮತ್ತು ಆಟೋಮ್ಯಾಟಿಕ್‌ ಎಸಿಯನ್ನು ಒಳಗೊಂಡಿದೆ. 

  • ಸುರಕ್ಷತಾ ಪ್ಯಾಕೇಜ್‌ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ, ಟಿಪಿಎಮ್‌ಎಸ್‌ ಮತ್ತು ADAS ಎಂದು ಒಳಗೊಂಡಿದೆ.

  • ಥಾರ್ 3-ಡೋರ್‌ನಂತೆಯೇ ಅದೇ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ, ಆದರೆ ಆಫರ್‌ನಲ್ಲಿ ಹೆಚ್ಚಿನ ಪರ್ಫಾರ್ಮೆನ್ಸ್‌ ಅನ್ನು ಹೊಂದಿದೆ.

  • ಇದರ ಬೆಲೆಗಳು 12.99 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ.

ಮಹೀಂದ್ರಾ ಥಾರ್ ರೋಕ್ಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 12.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ವೇರಿಯಂಟ್‌ವಾರು ಬೆಲೆಯನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. . ಅದರ 5-ಡೋರ್‌ನ ಅವತಾರದಲ್ಲಿ, ಥಾರ್ ರೋಕ್ಸ್ ಅಸ್ತಿತ್ವದಲ್ಲಿರುವ 3-ಬಾಗಿಲಿನ ಥಾರ್‌ನಲ್ಲಿ ಕಂಡುಬರುವ ಎಲ್ಲಾ ಆಫ್-ರೋಡ್ ತಂತ್ರಜ್ಞಾನವನ್ನು ಹೊಂದಿದೆ. ಥಾರ್ ರೋಕ್ಸ್ ಒದಗಿಸುವ ಎಲ್ಲವನ್ನೂ ವಿವರವಾಗಿ ಗಮನಿಸೋಣ:

ಎಕ್ಸ್‌ಟಿರೀಯರ್‌

Thar Roxx front 

ಹಲವಾರು ಟೀಸರ್‌ಗಳು ಈಗಾಗಲೇ ಥಾರ್ ರೋಕ್ಸ್‌ನ ಒಂದು ನೋಟವನ್ನು ನೀಡಿವೆ. ಈ ಉದ್ದನೆಯ ಥಾರ್ ಸಾಂಪ್ರದಾಯಿಕ ಬಾಕ್ಸ್ ಥಾರ್ ಬಾಡಿ ಆಕೃತಿಯಲ್ಲಿಯೇ ಬರುತ್ತದೆ. ಎಸ್‌ಯುವಿಯು ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಮತ್ತು ಹೊಸ ಬಾಡಿ ಕಲರ್‌ನ 6-ಸ್ಲ್ಯಾಟ್ ಗ್ರಿಲ್ ಅನ್ನು ಒಳಗೊಂಡಿದೆ. ಮುಂಭಾಗದ ಬಂಪರ್ ಕೆಲವು ಸಿಲ್ವರ್‌ ಅಂಶಗಳನ್ನು ಹೊಂದಿದೆ.

Mahindra Thar Roxx gets 19-inch alloy wheels

ಬದಿಗಳಲ್ಲಿ, ಸಿ-ಪಿಲ್ಲರ್‌ನಲ್ಲಿ ಇರಿಸಲಾದ ಡೋರ್ ಹ್ಯಾಂಡಲ್‌ನೊಂದಿಗೆ ಹಿಂಭಾಗದ ಬಾಗಿಲುಗಳ ವಿಶೇಷತೆಯನ್ನು ನೀವು ಗಮನಿಸಬಹುದು. ಹೆಚ್ಚುವರಿಯಾಗಿ, ಥಾರ್ ರೋಕ್ಸ್ ಅನ್ನು ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳೊಂದಿಗೆ ನೀಡಲಾಗುತ್ತಿದೆ. ಇದು ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿರುವ ಲೋಹದ ರೂಫ್‌ ಅನ್ನು ಸಹ ಹೊಂದಿದೆ. ಕಾರು ತಯಾರಕರು ಲೋವರ್‌-ವೇರಿಯೆಂಟ್‌ಗಳಿಗೆ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಸಹ ಒದಗಿಸುತ್ತಾರೆ. 

Mahindra Thar Roxx gets C-shaped element in tail lights

ಟೈಲ್‌ಲೈಟ್‌ಗಳು ಸಿ-ಆಕಾರದ ಮೋಟಿಫ್ ಅನ್ನು ಹೊಂದಿವೆ ಮತ್ತು ಈ ಎಸ್‌ಯುವಿಯು ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಅನ್ನು ಹೊಂದಿದೆ.

ಇಂಟಿರೀಯರ್‌

Thar Roxx rear seats

5-ಬಾಗಿಲಿನ ಥಾರ್ ಕಪ್ಪು ಮತ್ತು ಬಿಳಿ ಥೀಮ್ ಅನ್ನು ಪಡೆಯುತ್ತದೆ, ಅಲ್ಲಿ ಸೀಟುಗಳನ್ನು ಬಿಳಿ ಲೆಥೆರೆಟ್ ಕವರ್‌ನಲ್ಲಿ ನೀಡಲಾಗಿದೆ ಮತ್ತು ಡ್ಯಾಶ್‌ಬೋರ್ಡ್ ಅನ್ನು ಕಪ್ಪು ಲೆಥೆರೆಟ್ ಪ್ಯಾಡಿಂಗ್‌ನಲ್ಲಿ ಸುತ್ತಿ, ವ್ಯತಿರಿಕ್ತ ತಾಮ್ರದ ಸ್ಟಿಚ್ಚಿಂಗ್‌ ಹಾಕಲಾಗುತ್ತದೆ. ಮುಂಭಾಗದ ಪ್ರಯಾಣಿಕರು ಸ್ವತಂತ್ರ ಸೆಂಟರ್ ಆರ್ಮ್‌ರೆಸ್ಟ್‌ಗಳನ್ನು ಸಹ ಪಡೆಯುತ್ತಾರೆ. ಇದರ ಹೈಲೈಟ್‌ ಎಂದರೆ, ಎರಡನೇ ಸಾಲು, ಇದು ಬದಿಗಳಲ್ಲಿ ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಫೋಲ್ಡ್‌ಔಟ್‌ ಸೆಂಟರ್ ಆರ್ಮ್‌ರೆಸ್ಟ್, ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ ಸರಿಹೊಂದಿಸಬಹುದಾದ ಹೆಡ್‌ರೆಸ್ಟ್‌ಗಳನ್ನು ಒಳಗೊಂಡಿದೆ.

5 Door Mahindra Thar Roxx Launched, Prices Start At Rs 12.99 Lakh

ಫೀಚರ್‌ಗಳು ಮತ್ತು ಸುರಕ್ಷತೆ

Mahindra Thar Roxx gets a dual-display setup

ಈ ಥಾರ್ 5-ಡೋರ್‌ನ ಫೀಚರ್‌ಗಳ ಪಟ್ಟಿಯು ಈಗ ಆಫರ್‌ನಲ್ಲಿ ಸಾಕಷ್ಟು ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳನ್ನು ಹೊಂದಿದೆ. ಇದು ಎರಡು 10.25-ಇಂಚಿನ ಡಿಸ್ಪ್ಲೇಗಳನ್ನು (ಒಂದು ಡಿಜಿಟಲ್ ಡ್ರೈವರ್‌ ಡಿಸ್‌ಪ್ಲೇಗಾಗಿ ಮತ್ತು ಇನ್ನೊಂದು ಟಚ್‌ಸ್ಕ್ರೀನ್‌ಗಾಗಿ), ಪನರೋಮಿಕ್‌ ಸನ್‌ರೂಫ್‌ ಮತ್ತು ಹಿಂಭಾಗದ AC ವೆಂಟ್ಸ್‌ಗಳೊಂದಿಗೆ ಆಟೋಮ್ಯಾಟಿಕ್‌ ಎಸಿಯನ್ನು ಪಡೆಯುತ್ತದೆ. ಇದರಲ್ಲಿರುವ ಇತರ ಫೀಚರ್‌ಗಳೆಂದರೆ    ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್‌ನೊಂದಿಗೆ ಕೀಲೆಸ್ ಎಂಟ್ರಿ ಆಗಿದೆ.

ಸುರಕ್ಷತೆಯನ್ನು ಗಮನಿಸುವಾಗ, ಇದು ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ), 360-ಡಿಗ್ರಿ ಕ್ಯಾಮೆರಾ ಸೆಟಪ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನಂತಹ ಸೂಟ್‌ನೊಂದಿಗೆ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಪಡೆಯುತ್ತದೆ. 

ಪವರ್‌ಟ್ರೈನ್

ಮಹೀಂದ್ರಾ ಥಾರ್ ರೋಕ್ಸ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ, ಇವುಗಳ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌ ಆಯ್ಕೆಗಳು

ಪೆಟ್ರೋಲ್‌ ಎಂಜಿನ್‌

ಡೀಸೆಲ್‌ ಎಂಜಿನ್‌

ಪವರ್‌

162 ಪಿಎಸ್‌

152 ಪಿಎಸ್‌

ಟಾರ್ಕ್‌

330 ಎನ್‌ಎಮ್‌

330 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ ಆಟೋಮ್ಯಾಟಿಕ್

6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ ಆಟೋಮ್ಯಾಟಿಕ್

ಡ್ರೈವ್‌ಟ್ರೈನ್‌

4WD, RWD 

4WD, RWD

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಮಹೀಂದ್ರಾ ಥಾರ್ ರೋಕ್ಸ್‌ನ  ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 12.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.  ಇದು ಫೋರ್ಸ್ ಗೂರ್ಖಾ 5-ಡೋರ್‌ಗೆ ಪ್ರತಿಸ್ಪರ್ಧಿಯಾಗಿದೆ ಮತ್ತು ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾಗಿದೆ.

ಹೆಚ್ಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಮಿಸ್‌ ಮಾಡದೇ ಫಾಲೋ ಮಾಡಿ

ಇನ್ನಷ್ಟು ಓದಿ : ಮಹೀಂದ್ರಾ ಥಾರ್ ಆಟೋಮ್ಯಾಟಿಕ್‌ 

was this article helpful ?

Write your Comment on Mahindra ಥಾರ್‌ ROXX

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience