ಭಾರತದ ಮತ್ತು ಆಸ್ಟ್ರೇಲಿಯಾದ 5-door Maruti Suzuki Jimny ನಡುವೆ ಇರುವ 5 ಪ್ರಮುಖ ವ್ಯತ್ಯಾಸಗಳೇನು?
ಡಿಸೆಂಬರ್ 13, 2023 05:06 pm ರಂದು rohit ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಈ ಆಫ್ ರೋಡರ್ ಅನ್ನು ಭಾರತದಿಂದಲೇ ರಫ್ತು ಮಾಡಿದರೂ, ಅದರ ಸುರಕ್ಷತಾ ವಿಭಾಗವು ಇಲ್ಲಿಗಿಂತಲೂ ಹೆಚ್ಚು ಅನುಕೂಲತೆಯನ್ನು ಪಡೆದಿದೆ
ಅನೇಕ ವರ್ಷಗಳ ನಂತರ, ಭಾರತವು ಅಂತಿಮವಾಗಿ 2023ರ ಆರಂಭದಲ್ಲಿ 5 ಬಾಗಿಲುಗಳ ಜಿಮ್ನಿಯನ್ನು ಪಡೆದಿದೆ. ಅಲ್ಲದೆ ಅಕ್ಟೋಬರ್ 2023ರಿಂದ 5 ಬಾಗಿಲುಗಳ ಮಾರುತಿ ಜಿಮ್ನಿ ವಾಹನವನ್ನು ವಿವಿಧ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿದ್ದು ಇದನ್ನು ಇತ್ತೀಚೆಗೆ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ ಓಡಾಡುವ ಜಿಮ್ನಿಯು ಭಾರತದಲ್ಲಿರುವ ಆಫ್ ರೋಡರ್ ವಾಹನದಂತೆ 5 ಬಾಗಿಲುಗಳ ಮಾದರಿಯೇ ಆಗಿರುವುದರಿಂದ, ಎರಡೂ ವಾಹನಗಳು ಒಂದೇ ರೀತಿ ಇರಬಹುದು ಎಂದು ನೀವು ಭಾವಿಸುತ್ತೀರಿ ತಾನೆ? ಇದಕ್ಕೆ ಹೌದು ಮತ್ತು ಇಲ್ಲ ಎನ್ನುವ ಎರಡೂ ಉತ್ತರಗಳಿವೆ. ಈ ಎರಡು ಮಾದರಿಗಳ ನಡುವಿನ ಐದು ಪ್ರಮುಖ ವ್ಯತ್ಯಾಸಗಳು ಇಲ್ಲಿವೆ:
ಹೆಸರು
ಭಾರತದಲ್ಲಿರುವ ಮಾದರಿಗೆ ಮಾರುತಿ ಸುಜುಕಿ ಜಿಮ್ನಿ ಎಂದು ಹೆಸರಿಸಿದರೆ, ಈ ಕಾರು ತಯಾರಕ ಸಂಸ್ಥೆಯು ಇದೇ ಮಾದರಿಯನ್ನು ಅಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಸುಜುಕಿ ಜಿಮ್ನಿ XL ಎಂದು ಹೆಸರಿಸಿದೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಈಗಾಗಲೇ 3 ಬಾಗಿಲುಗಳ ಮಾದರಿಯನ್ನು ʻಜಿಮ್ನಿʼ ಹೆಸರಿನಲ್ಲಿಯೇ ಬಿಡುಗಡೆ ಮಾಡಲಾಗಿದೆ. ಸುಜುಕಿ ಸಂಸ್ಥೆಯು ಅತ್ಯಂತ ಆರಂಭಿಕ ಹಂತದ ʻಜಿಮ್ನಿ ಲೈಟ್ʼ ಎಂಬ ಆವೃತ್ತಿಯನ್ನು ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು ಇದು 3 ಬಾಗಿಲುಗಳ SUV ಯ ಅತ್ಯಂತ ಮಾಮೂಲಿ ವೇರಿಯಂಟ್ ಆಗಿದೆ.
ADAS
ಭಾರತದಲ್ಲಿರುವ ಜಿಮ್ನಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಜಿಮ್ನಿ (XL) ಯಲ್ಲಿರುವ ವಿಶೇಷತೆ ಎಂದರೆ ಅದು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ನ ಲಭ್ಯತೆ. ಅಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಇತ್ಯಾದಿ ಸೌಲಭ್ಯಗಳನ್ನು ಇದರ ADAS ಸೂಟ್ ಹೊಂದಿದ್ದು, ಹೈ ಬೀಮ್ ಅಸಿಸ್ಟ್ ಅನ್ನು ಮಾತ್ರವೇ ಇದು ಹೊಂದಿಲ್ಲ. ಜಿಮ್ನಿ XLನ ADAS ತಂತ್ರಜ್ಞಾನವು ಫ್ರಂಟ್ ವಿಂಡ್ ಶೀಲ್ಡ್ ಮೌಂಟೆಡ್ ಕ್ಯಾಮರಾವನ್ನು ಆಧರಿಸಿ ಕೆಲಸ ಮಾಡುತ್ತದೆ. ಈ ಮಾದರಿಯು ಭಾರತದಿಂದಲೇ ರಫ್ತಾದರೂ ಸಹ ಈ ವೈಶಿಷ್ಟ್ಯವು ಇಲ್ಲಿನ ಮಾದರಿಯಲ್ಲಿ ದೊರೆಯುವುದಿಲ್ಲ.
ಬಣ್ಣಗಳ ಆಯ್ಕೆಗಳು
ಭಾರತದ ಮತ್ತು ಆಸ್ಟ್ರೇಲಿಯಾದ ಜಿಮ್ನಿಗಳು ಸಿಂಗಲ್ ಟೋನ್ ಮತ್ತು ಡ್ಯುವಲ್ ಟೋನ್ ಆಯ್ಕೆಗಳಲ್ಲಿ ದೊರೆತರೂ, ಛಾಯೆಗಳಲ್ಲಿ ಒಂದಷ್ಟು ಬದಲಾವಣೆ ಇದೆ. ಅವುಗಳ ಬಣ್ಣವನ್ನು ಇನ್ನಷ್ಟು ವಿವರವಾಗಿ ನೋಡೋಣ:
ಭಾರತದಲ್ಲಿ ಓಡಾಡುವ ಜಿಮ್ನಿ |
ಆಸ್ಟ್ರೇಲಿಯಾದಲ್ಲಿ ಓಡಾಡುವ ಜಿಮ್ನಿ XL |
|
|
ಇದನ್ನು ಸಹ ಓದಿರಿ: 2024ರಲ್ಲಿ ನಿಮ್ಮ ಕೈಗೆ ಬರಲಿರುವ ರೂ. 20 ಲಕ್ಷಕ್ಕಿಂತ ಕೆಳಗಿನ ಎಲ್ಲಾ SUV ಗಳು
ಪವರ್ ಟ್ರೇನ್ ಔಟ್ಪುಟ್ ನಲ್ಲಿ ವ್ಯತ್ಯಾಸ
ವಿವರಗಳು |
ಭಾರತದಲ್ಲಿ ಓಡಾಡುವ ಜಿಮ್ನಿ |
ಆಸ್ಟ್ರೇಲಿಯಾದಲ್ಲಿ ಓಡಾಡುವ ಜಿಮ್ನಿ XL |
ಎಂಜಿನ್ |
1.5-ಲೀಟರ್ N.A. ಪೆಟ್ರೋಲ್ |
|
ಪವರ್ |
105 PS |
102 PS |
ಟಾರ್ಕ್ |
134 Nm |
130 Nm |
ಟ್ರಾನ್ಸ್ ಮಿಶನ್ |
5-ಸ್ಪೀಡ್ MT, 4-ಸ್ಪೀಡ್ AT |
|
ಡ್ರೈವ್ ಟ್ರೇನ್ |
4x4 |
ಈ ಕಾರು ತಯಾರಕ ಸಂಸ್ಥೆಯು ಎರಡೂ ಮಾದರಿಗಳಲ್ಲಿ 1.5 ಲೀಟರ್ ನ್ಯಾಚುರಲಿ ಅಸ್ಪಿರೇಟೆಡ ಪೆಟ್ರೋಲ್ ಎಂಜಿನ್ ಅನ್ನೇ ಅಳವಡಿಸಿದ್ದರೂ ಸಹ, ಇವುಗಳ ಔಟ್ಪುಟ್ ನಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಆದರೆ ರಸ್ತೆಯಲ್ಲಿ ನೀವು ಅದನ್ನು ಅಷ್ಟೊಂದು ಸುಲಭವಾಗಿ ಗುರುತಿಸುವುದು ಕಷ್ಟಕರ. ಇದರ ಮಾಹಿತಿ ಇಲ್ಲಿದೆ:
ಆಸ್ಟ್ರೇಲಿಯಾದ ಜಿಮ್ನಿಯು ಭಾರತೀಯ ಆಫ್ ರೋಡರ್ ಗಿಂತ 3 PS ಮತ್ತು 4 Nm ನಷ್ಟು ಕಡಿಮೆ ಶಕ್ತಿಯನ್ನುಂಟು ಮಾಡುತ್ತದೆ. ಆದರೆ ಇವೆರಡೂ ಮಾದರಿಗಳು ಸಹ ಎರಡು ಟ್ರಾನ್ಸ್ ಮಿಶನ್ ಆಯ್ಕೆಗಳು ಮತ್ತು ಆಫ್ ರೋಡಿಂಗ್ ಗೆ ಅಗತ್ಯವಾದ 4 ವೀಲ್ ಡ್ರೈವ್ ಟ್ರೇನ್ (4WD) ಅನ್ನು ಪಡೆಯಲಿವೆ.
ಜಿಮ್ನಿ XL ಗೆ ಬೇಸ್ ವೇರಿಯಂಟ್ ಇಲ್ಲ
ಭಾರತದ ಮಾದರಿಯು ಜೀಟಾ (ಆರಂಭಿಕ ಹಂತ) ಮತ್ತು ಆಲ್ಫಾ (ಟಾಪ್-ಸ್ಪೆಕ್) ಎಂಬ ಎರಡು ವೇರಿಯಂಟ್ ಗಳಲ್ಲಿ ದೊರೆತರೆ, ಆಸ್ಟ್ರೇಲಿಯಾದ ಜಿಮ್ನಿ XL ಅನ್ನು ಸಿಂಗಲ್ ಟ್ರಿಮ್ ನಲ್ಲಿ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಆಸ್ಟ್ರೇಲಿಯಾದ ಗ್ರಾಹಕರು ಈ ಆಫ್ ರೋಡರ್ ನಲ್ಲಿ 9 ಇಂಚಿನ ಟಚ್ ಸ್ಕ್ರೀನ್ ಮತ್ತು ADAS ತಂತ್ರಜ್ಞಾನ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಆನಂದಿಸಬಹುದು.
ಬೆಲೆಗಳು
ಮಾರುತಿಯು 5 ಬಾಗಿಲುಗಳ ಜಿಮ್ನಿಯ ಬೆಲೆಯನ್ನು ಭಾರತದಲ್ಲಿ ರೂ. 12.74 ಲಕ್ಷಕ್ಕೆ ನಿಗದಿಪಡಿಸಿದರೆ ಹೊಸ ಥಂಡರ್ ಆವೃತ್ತಿಯ (ಸೀಮಿತ ಅವಧಿಗೆ) ಆರಂಭಿಕ ಬೆಲೆಯನ್ನು ರೂ. 2 ಲಕ್ಷದಷ್ಟು ಇಳಿಸಿದೆ. ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಮಾದರಿಗಳು ಇದರ ನೇರ ಸ್ಪರ್ಧಿಗಳಾಗಿವೆ.
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಜಿಮ್ನಿ ಆನ್ ರೋಡ್ ಬೆಲೆ