• English
  • Login / Register

2024ರಲ್ಲಿ ನಿಮ್ಮ ಕೈಗೆ ಬರಲಿರುವ ರೂ. 20 ಲಕ್ಷಕ್ಕಿಂತ ಕೆಳಗಿನ ಎಲ್ಲಾ SUV ಗಳ ಪಟ್ಟಿ

ಡಿಸೆಂಬರ್ 13, 2023 05:25 pm ರಂದು anonymous ಮೂಲಕ ಪ್ರಕಟಿಸಲಾಗಿದೆ

  • 98 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಳೆದ ಕೆಲವು ವರ್ಷಗಳಲ್ಲಿ ಕಾರು ತಯಾರಕ ಸಂಸ್ಥೆಗಳು ಅನೇಕ SUV ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು 2024 ಸಹ ಇದಕ್ಕಿಂತ ಭಿನ್ನವಾಗಿರದು

All The Sub-Rs 20 Lakh SUVs Coming Your Way In 2024

ಹೊಸ ಕಾರನ್ನು ಖರೀದಿಸುವ ವಿಚಾರ ಬಂದಾಗ ಭಾರತದ ಗ್ರಾಹಕರು SUV ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಗ್ರಾಹಕರು SUV ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾರಣ ಕಾರು ತಯಾರಕರು ವಿವಿಧ SUV ವಿಭಾಗದಲ್ಲಿ ಹೊಸ ಹೊಸ ಮಾದರಿಗಳನ್ನು ಹೊರತರುತ್ತಿದ್ದಾರೆ.  2024ರಲ್ಲಿ ಬಿಡುಗಡೆಯಾಗಲಿರುವ ರೂ. 20 ಲಕ್ಷಕ್ಕಿಂತ ಕಡಿಮೆ ಬೆಲೆಯ SUV ಗಳ ಪಟ್ಟಿ ಇಲ್ಲಿದೆ.

ಟೊಯೊಟಾ ಟೈಸರ್

Maruti Fronx side

ಟೊಯೊಟಾ ಸಂಸ್ಥೆಯು ಭಾರತದಲ್ಲಿ ಟೈಸರ್‌ ಅನ್ನು ಹೊರತರಲಿದೆ ಎಂಬುದಾಗಿ ಕಳೆದ ತಿಂಗಳಿನಲ್ಲಷ್ಟೇ ನಾವು ವರದಿ ಮಾಡಿದ್ದೆವು. ಈ ಸಬ್-4m SUV ಯು ಮಾರುತಿ ಸುಜುಕಿ ಫ್ರಾಂಕ್ಸ್ ಕ್ರಾಸ್‌ ಓವರ್ SUV‌ ಯನ್ನು ಆಧರಿಸಿದೆ. ಇತರ ಸಹಭಾಗಿ ಉತ್ಪನ್ನಗಳಂತೆಯೇ ವಿನ್ಯಾಸದಲ್ಲಿ ಬದಲಾವಣೆಗಳು ಮತ್ತು ಟೊಯೊಟಾ ಬ್ಯಾಜುಗಳನ್ನು ನಾವು ಇದರಲ್ಲಿ ನಿರೀಕ್ಷಿಸಬಹುದು. ಮೂಲ ವಾಹನಕ್ಕೆ ಹೋಲಿಸಿದರೆ ಟೊಯೊಟಾವು ಇದರಲ್ಲಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸದು ಅಥವಾ ಪವರ್‌ ಟ್ರೇನ್‌ ಆಯ್ಕೆಗಳಲ್ಲಿ ಪರಿಷ್ಕರಣೆಯನ್ನು ಮಾಡದು.

ನಿರೀಕ್ಷಿತ ಬೆಲೆ: ರೂ 8 ಲಕ್ಷ

ನಿರೀಕ್ಷಿತ ಬಿಡುಗಡೆ: ಮಾರ್ಚ್‌ 2024

 

ಹ್ಯುಂಡೈ ಕ್ರೆಟಾ ಫೇಸ್‌ ಲಿಫ್ಟ್ 

Hyundai Creta facelift

ಹ್ಯುಂಡೈ ಕ್ರೆಟಾ ಫೇಸ್‌ ಲಿಫ್ಟ್ ವಾಹನವು ಈ ಕಾರು ತಯಾರಕ ಸಂಸ್ಥೆಯ ಪಾಲಿಗೆ 2024ರ ಪ್ರಮುಖ ಬಿಡುಗಡೆ ಎನಿಸಲಿದೆ. ಹ್ಯುಂಡೈ ಸಂಸ್ಥೆಯು ಈ ವಾಹನದಲ್ಲಿ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂಗಳು (ADAS) ಮತ್ತು 360 ಡಿಗ್ರಿ ಕ್ಯಾಮರಾ ಮಾತ್ರವಲ್ಲದೆ  ಒಳಗಡೆ ಮತ್ತು ಹೊರಗಡೆಯಲ್ಲಿ ಶೈಲಿಯಲ್ಲಿಯೂ ಒಂದಷ್ಟು ಬದಲಾವಣೆಗಳನ್ನು ಮಾಡಲಿದೆ. ಈ SUV ಯು ಕಿಯಾ ಸೆಲ್ಟೋಸ್‌ ನಿಂದ 160 PS 1.5 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಅನ್ನು ಪಡೆಯಲಿದ್ದು, ನಿವೃತ್ತಿ ಪಡೆಯಲಿರುವ‌ ಮಾದರಿಯಲ್ಲಿರುವ 1.5 ಲೀಟರ್ N.A. ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಗಳನ್ನು ಉಳಿಸಿಕೊಳ್ಳಲಿದೆ.

 ನಿರೀಕ್ಷಿತ ಬೆಲೆ: ರೂ 10.50 ಲಕ್ಷ

 ನಿರೀಕ್ಷಿತ ಬಿಡುಗಡೆ: ಜನವರಿ 16

ಇದನ್ನು ಸಹ ನೋಡಿರಿ: 2024ರಲ್ಲಿ ಭಾರತಕ್ಕೆ ಬರಲಿರುವ ಎಲ್ಲಾ EV ಗಳ ವಿವರ ಇಲ್ಲಿದೆ

 

ಹ್ಯುಂಡೈ ಅಲ್ಕಜಾರ್ ಫೇಸ್‌ ಲಿಫ್ಟ್

Facelifted Hyundai Alcazar Spied For The First Time

 ಅಲ್ಕಜಾರ್‌  ವಾಹನವು ಕ್ರೆಟಾದ 3 ಸಾಲುಗಳ ಆವೃತ್ತಿಯಾಗಿದೆ. ಹೀಗಾಗಿ ಈ SUV ಹೊಸ ಕ್ರೆಟಾ ಫೇಸ್‌ ಲಿಫ್ಟ್‌ ವಾಹನವು ಪಡೆದಿರುವ ವೈಶಿಷ್ಟ್ಯಗಳನ್ನೆ ಪಡೆಯಲಿದ್ದು ಇದರಲ್ಲಿ ADAS ಸಹ ಸೇರಿದೆ. ಯಾಂತ್ರಿಕವಾಗಿ ಯಾವುದೇ ಬದಲಾವಣೆ ಇರದು. ಅಲ್ಲದೆ ಅದೇ ಪವರ್‌ ಟ್ರೇನ್‌ ಆಯ್ಕೆಗಳನ್ನು ಉಳಿಸಿಕೊಳ್ಳಲಿದೆ.

 ನಿರೀಕ್ಷಿತ ಬೆಲೆ: ರೂ 17 ಲಕ್ಷ

 ನಿರೀಕ್ಷಿತ ಬಿಡುಗಡೆ: ಇನ್ನಷ್ಟೇ ದೃಢೀಕರಿಸಬೇಕು

 

ಟಾಟಾ ಪಂಚ್ ಫೇಸ್‌ ಲಿಫ್ಟ್‌ / EV

Tata Punch EV spied

 ಟಾಟಾ ಪಂಚ್ ವಾಹನವು ಈ ಕಾರು ತಯಾರಕ ಸಂಸ್ಥೆಯ SUV ಗಳ ಪಟ್ಟಿಯಲ್ಲಿ ನೆಕ್ಸನ್‌ ನ ನಂತರದ ಸ್ಥಾನವನ್ನು ಪಡೆದಿದ್ದು 2021ರಿಂದ ಮಾರುಕಟ್ಟೆಯಲ್ಲಿ ಲಭಿಸುತ್ತಿದೆ. ಟಾಟಾ ಸಂಸ್ಥೆಯು ಈ ಮೈಕ್ರೋ SUV ಯ CNG ವೇರಿಯಂಟ್‌ ಗಳನ್ನು ಬಿಡುಗಡೆ ಮಾಡಿದ್ದು ಸದ್ಯದಲ್ಲೇ ಸಂಪೂರ್ಣ ಎಲೆಕ್ಟ್ರಿಕ್‌ ಆವೃತ್ತಿಯನ್ನು  ಸಹ ಹೊರತರಲಿದೆ. ಅಲ್ಲದೆ 2024ರಲ್ಲಿ ಈ ಮೈಕ್ರೋ SUV ಯಲ್ಲಿ ಸ್ವಲ್ಪ ಬದಲಾವಣೆ ಉಂಟಾಗಲಿದ್ದು ಒಳಗಡೆಗೆ ಕೆಲವೊಂದು ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತದೆ. ಆದರೆ ಈ ಕಾರು ಯಾವುದೇ ಯಾಂತ್ರಿಕ ಬದಲಾವಣೆಗಳಿಗೆ ಒಳಗಾಗುವುದಿಲ್ಲ. 

 ನಿರೀಕ್ಷಿತ ಬೆಲೆ: ಇನ್ನಷ್ಟೇ ಘೋಷಿಸಬೇಕು, ರೂ 12 ಲಕ್ಷ (ಪಂಚ್ EV)

 ನಿರೀಕ್ಷಿತ ಬಿಡುಗಡೆ: ಇನ್ನಷ್ಟೇ ಘೋಷಿಸಬೇಕು, ಜನವರಿ 2024 ಲಕ್ಷ (ಪಂಚ್ EV)

 

 

ಟಾಟಾ ಕರ್ವ್

Tata Curvv spied with ADAS

 ಈ ಹಿಂದೆ ಟಾಟಾ ಸಂಸ್ಥೆಯು ಕರ್ವ್‌ ಪರಿಕಲ್ಪನೆಯನ್ನು ಪ್ರದರ್ಶಿಸಿದಾಗ, ಇದು ಇಂಟರ್ನಲ್‌ ಕಂಬಷನ್‌ ಎಂಜಿನ್‌ (ICE) ಜೊತೆಗೂ ದೊರೆಯಲಿದೆ ಎಂದು ಹೇಳಲಾಗಿತ್ತು. ಈಗ ಟಾಟಾ ಸಂಸ್ಥೆಯು 2024ರ ಆರಂಭದಲ್ಲಿ EV ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ ಕರ್ವ್‌ ICE ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಿದೆ. ಈ ವಿಭಾಗದಲ್ಲಿ ಇದರ ಕೂಪೆಯಂತಹ ಶೈಲಿಯ ಕಾರಣ ಇದು ಇತರ ವಾಹನಗಳಿಗಿಂತ ಭಿನ್ನವಾಗಿ ಕಾಣಲಿದೆ. ಇದು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರಾಂಡ್‌ ವಿಟಾರ ಕಾರುಗಳ ಸ್ಪರ್ಧಿಸಲಿದ್ದು ADAS ತಂತ್ರಜ್ಞಾನ ಹಾಗೂ ಒಳಗಡೆಯಲ್ಲಿ ಡಿಜಿಟಲ್‌ ಡಿಸ್ಪ್ಲೇಗಳನ್ನು ಹೊಂದಿರಲಿದೆ. 

ನಿರೀಕ್ಷಿತ ಬೆಲೆ: ರೂ 10.50 ಲಕ್ಷ

ನಿರೀಕ್ಷಿತ ಬಿಡುಗಡೆ: 2024ರ ಮಧ್ಯ ಭಾಗ

ಟಾಟಾ ನೆಕ್ಸನ್ ಡಾರ್ಕ್

Tata Nexon 2023

 ನೆಕ್ಸನ್ ಕಾರು 2023ರ ಉತ್ತರಾರ್ಧದಲ್ಲಿ ಸಮಗ್ರ ಪರಿಷ್ಕರಣೆಗೆ ಒಳಗಾದಾಗ ಡಾರ್ಕ್‌ ಎಡಿಷನ್‌ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಟಾಟಾ ಸಂಸ್ಥೆಯು 2024ರಲ್ಲಿ ನೆಕ್ಸನ್‌ ಡಾರ್ಕ್‌ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇತರ ಡಾರ್ಕ್‌ ಎಡಿಷನ್‌ ಗಳಂತೆಯೇ, ನೆಕ್ಸನ್‌ ಕಾರು ಸಹ ಎಲ್ಲಾ ಕಡೆ ಡಾರ್ಕ್‌ ಬ್ಯಾಜ್‌ ಗಳ ಜೊತೆಗೆ ಅಲೋಯ್‌ ಗಳು ಮತ್ತು ಗ್ರಿಲ್‌ ಅನ್ನು ಒಳಗೊಂಡಂತೆ ಸಂಪೂರ್ಣವಾಗಿ ಕಪ್ಪು ಬಣ್ಣದ ಅಲಂಕಾರವನ್ನು ಪಡೆಯಲಿದೆ. ಎಂಜಿನ್‌ ಆಯ್ಕೆಗಳಲ್ಲಿ ಯಾವುದೇ ಬದಲಾವಣೆ ಇರದು.

 ನಿರೀಕ್ಷಿತ ಬೆಲೆ: ರೂ 11.30 ಲಕ್ಷ

 ನಿರೀಕ್ಷಿತ ಬಿಡುಗಡೆ: ಇನ್ನಷ್ಟೇ ಘೋಷಿಸಬೇಕು

 

ಮಹೀಂದ್ರಾ ಥಾರ್‌ 5 ಡೋರ್ 

Mahindra Thar 5-door Spied

 5 ಬಾಗಿಲುಗಳ ಮಹೀಂದ್ರಾ ಥಾರ್‌ ವಾಹನವು 2024ರ ಅತ್ಯಂತ ನಿರೀಕ್ಷೆಯ SUVಗಳಲ್ಲಿ ಒಂದಾಗಿದೆ. 3 ಬಾಗಿಲುಗಳ ಮಾದರಿಯಂತೆಯೇ ಈ ದೊಡ್ಡ ಗಾತ್ರದ ಥಾರ್‌ ಸಹ ಮ್ಯಾನುವಲ್‌ ಅಥವಾ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಗಳ ಜೊತೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳೊಂದಿಗೆ ಬರಲಿದೆ.  ಈ ವಾಹನವು ದೊಡ್ಡ ಗಾತ್ರದ ಇನ್ಫೊಟೈನ್‌ ಮೆಂಟ್‌ ಡಿಸ್ಪ್ಲೇ ಮತ್ತು ಸನ್‌ ರೂಫ್‌ ಅನ್ನು ಪಡೆಯಲಿದೆ.  ಮಹೀಂದ್ರಾ ಸಂಸ್ಥೆಯು ಈ SUV ಯನ್ನು 4 ವೀಲ್‌ ಡ್ರೈವ್‌ ಮತ್ತು ರಿಯರ್‌ ವೀಲ್‌ ಡ್ರೈವ್‌ ಆಯ್ಕೆಗಳೆರಡಲ್ಲೂ ಹೊರತರಲಿದೆ.

 ನಿರೀಕ್ಷಿತ ಬೆಲೆ: ರೂ 15 ಲಕ್ಷ

ನಿರೀಕ್ಷಿತ ಬಿಡುಗಡೆ: ಮಾರ್ಚ್‌ 2024

 

 

ಮಹೀಂದ್ರಾ XUV300 ಫೇಸ್‌ ಲಿಫ್ಟ್

ಮಹೀಂದ್ರಾ XUV300 ವಾಹನವು ಪರಿಷ್ಕರಣೆಗೆ ಒಳಗಾಗಲಿದೆ. ಈ ಸಬ್-4m SUV ಯು ಸಾಕಷ್ಟು ಸಮಯದಿಂದ ಮಾರುಕಟ್ಟೆಯಲ್ಲಿದ್ದು ಮಹೀಂದ್ರಾದ ಪಟ್ಟಿಯಲ್ಲಿರುವ ಹಳೆಯ ಮಾದರಿಗಳಲ್ಲಿ ಇದೂ ಸಹ ಒಂದು. ಮಹೀಂದ್ರಾ ಸಂಸ್ಥೆಯು ಇದರ ಹಿಂಭಾಗದ ಮತ್ತು ಮುಂಭಾಗದ ನೋಟವನ್ನು ಬದಲಾಯಿಸಲಿದ್ದು, ಹೊಸ ಕ್ಯಾಬಿನ್‌ ವಿನ್ಯಾಸವನ್ನು ಪರಿಚಯಿಸಲಿದೆ ಮಾತ್ರವಲ್ಲದೆ ADAS ತಂತ್ರಜ್ಞಾನವನ್ನು ಅಳವಡಿಸುವ ಸಾಧ್ಯತೆಯೂ ಇದೆ. ಹುಡ್‌ ಅಡಿಯಲ್ಲಿ ಯಾವುದೇ ಬದಲಾವಣೆ ಉಂಟಾಗದು.

ನಿರೀಕ್ಷಿತ ಬೆಲೆ: ರೂ 9 ಲಕ್ಷ

ನಿರೀಕ್ಷಿತ ಬಿಡುಗಡೆ: ಮಾರ್ಚ್‌ 2024

 

ಮಹೀಂದ್ರಾ XUV400 ಫೇಸ್‌ ಲಿಫ್ಟ್

Mahindra XUV400

ನಾವು ಮಹೀಂದ್ರಾ XUV400 ಅನ್ನು ಅದರ ಪರೀಕ್ಷಾರ್ಥ ಓಡಾಟದ ವೇಳೆ ಅನೇಕ ಬಾರಿ ಗಮನಿಸಿದ್ದೇವೆ. ಈ ವಾಹನವು 2024ರಲ್ಲೇ ಬಿಡುಗಡೆಯಾಗುವ ಸುಳಿವನ್ನು ಇದು ನೀಡುತ್ತಿದೆ. XUV300 ಕಾರಿನಂತೆಯೇ, ಸಂಪೂರ್ಣ ಎಲೆಕ್ಟ್ರಿಕ್ XUV400‌ ವಾಹನನವು ಸಹ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಬದಲಾವಣೆಗೆ ಒಳಪಡಲಿದೆ. ಆದರೆ ಈ SUV ಯು ಎಲೆಕ್ಟ್ರಿಕ್‌ ಪವರ್‌ ಟ್ರೇನ್‌ ನಲ್ಲಿ ಯಾವುದೇ ಪ್ರಮುಖ ಬದಲಾವಣೆಗೆ ಒಳಗಾಗದು. ಆದರೆ ಮಹೀಂದ್ರಾ ಸಂಸ್ಥೆಯು ಅದೇ ಬ್ಯಾಟರಿ ಪ್ಯಾಕ್‌ ನಲ್ಲಿ ಹೆಚ್ಚಿನ ಕಿ.ಮೀ ಶ್ರೇಣಿಯನ್ನು ಒದಗಿಸಲಿದೆ.  

 ನಿರೀಕ್ಷಿತ ಬೆಲೆ: ರೂ 16 ಲಕ್ಷ

 ನಿರೀಕ್ಷಿತ ಬಿಡುಗಡೆ: 2024ರ ದ್ವಿತೀಯಾರ್ಧ

 

ಕಿಯಾ ಸೋನೆಟ್‌ ಫೇಸ್‌‌ ಲಿಫ್ಟ್

2024 Kia Sonet

 ಕಿಯಾ ಸಂಸ್ಥೆಯು ಹೊಸ ವರ್ಷವನ್ನು ಸೋನೆಟ್‌ ಫೇಸ್‌ ಲಿಫ್ಟ್ ಕಾರಿನ ಬಿಡುಗಡೆಯ ಮೂಲಕ ಪ್ರಾರಂಭಿಸಲಿದೆ. ಕೊರಿಯಾದ ಈ ಕಾರು ತಯಾರಕ ಸಂಸ್ಥೆಯು ಪರಿಷ್ಕೃತ ಸಬ್-4m SUV‌ ಯ ಅನೇಕ ಟೀಸರ್‌ ಗಳನ್ನು ಬಿಡುಗಡೆ ಮಾಡಿದ್ದು, ADAS ಸೇರಿದಂತೆ ಹೊರಾಂಗಣ ಹಾಗೂ ಒಳಾಂಗಣದಲ್ಲಿ ಹೊಸ ವೈಶಿಷ್ಟ್ಯಗಳನ್ನು ಪಡೆಯಲಿದೆ. 2024 ಸೋನೆಟ್‌ ನಲ್ಲಿ ಕಿಯಾ ಸಂಸ್ಥೆಯು ಒಂದು ಸಣ್ಣ ಬದಲಾವಣೆಯೊಂದಿಗೆ ಈಗಿರುವ ಎಂಜಿನ್‌ ಮತ್ತು ಟ್ರಾನ್ಸ್‌ ಮಿಶನ್‌ ಆಯ್ಕೆಗಳನ್ನು ಮುಂದುವರಿಸಲಿದೆ. 

ನಿರೀಕ್ಷಿತ ಬೆಲೆ: ರೂ 8 ಲಕ್ಷ

ನಿರೀಕ್ಷಿತ ಬಿಡುಗಡೆ: ಜನವರಿ 2024

ಇದನ್ನು ಸಹ ನೋಡಿರಿ: ಭಾರತದಲ್ಲಿ ಕಿಯಾದಲ್ಲಿ 2023ರಲ್ಲಿ ಕಾಣಿಸಿಕೊಂಡು ಎಲ್ಲಾ ಹೊಸ ವೈಶಿಷ್ಟ್ಯಗಳು

 

 

2024 ಸ್ಕೋಡಾ ಕುಶಾಕ್

Skoda Kushaq

 ಸ್ಕೋಡಾ ಸಂಸ್ಥೆಯು ಕುಶಾಕ್‌ ಅನ್ನು 2021ರಲ್ಲಿ ಬಿಡುಗಡೆ ಮಾಡಿದೆ. ಅಂದಿನಿಂದ ಚೆಕ್‌ ದೇಶದ ಈ ಕಾರು ತಯಾರಕ ಸಂಸ್ಥೆಯು ನಿರಂತರವಾಗಿ ಹೊಸ ವೇರಿಯಂಟ್‌ ಗಳು ಮತ್ತು ಆವೃತ್ತಿಗಳನ್ನು ಹೊರತರುತ್ತಿದೆ. ಆದರೆ ಸ್ಪರ್ಧಿಗಳು ನೀಡುತ್ತಿರುವ ಸ್ಪರ್ಧೆಯನ್ನು ಎದುರಿಸುವುದಕ್ಕಾಗಿ ಸ್ಕೋಡಾ ಸಂಸ್ಥೆಯು ಸಹ ಕುಶಾಕ್‌ ನ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು ಶೈಲಿಯಲ್ಲಿ ಬದಲಾವಣೆ ಮಾತ್ರವಲ್ಲದೆ ಹೊಸ ವಿಶೇಷತೆಗಳನ್ನು ಸಹ (ಬಹುಶಃ ADAS) ಪರಿಚಯಿಸಲಿದೆ. ಈ SUV ಯು 1 ಲೀಟರ್‌ ಅಥವಾ 1.5 ಲೀಟರಿನ TSI ಪೆಟ್ರೋಲ್‌ ಎಂಜಿನ್‌ ಗಳನ್ನು ಮುಂದುವರಿಸಲಿದೆ. 

 ನಿರೀಕ್ಷಿತ ಬೆಲೆ: ಇನ್ನಷ್ಟೇ ದೃಢೀಕರಿಸಬೇಕು

 ನಿರೀಕ್ಷಿತ ಬಿಡುಗಡೆ: ಇನ್ನಷ್ಟೇ ಘೋಷಿಸಬೇಕು

 

 

2024 ಫೋಕ್ಸ್‌ ವ್ಯಾಗನ್‌ ಟೈಗುನ್

Volkswagen Taigun Trail Edition

 ಸ್ಕೋಡ್‌ ಬ್ಯಾಜ್‌ ನ ದಾಯಾದಿಯಂತೆಯೇ (ಕುಶಾಕ್),‌ ಟೈಗುನ್ ಸಹ 2024ರಲ್ಲಿ ಪರಿಷ್ಕರಣೆಗೆ ಒಳಗಾಗಲಿದೆ. ಇದು ಬಿಡುಗಡೆಗೊಂಡು 3 ವರ್ಷಗಳು ಕಳೆದಿದ್ದು ಸ್ಪರ್ಧಿಗಳು ಈಗ ಅನೇಕ ಹೊಸ ಸೌಲಭ್ಯಗಳು ಮತ್ತು ತಂತ್ರಜ್ಞಾನವನ್ನು ನೀಡುತ್ತಿದ್ದಾರೆ. ಆದರೆ ಟೈಗುನ್‌ ಕಾರಿನ ಹೊಸ ಆವೃತ್ತಿಯಲ್ಲಿ ADAS ಮಾತ್ರವೇ ಹೆಚ್ಚುವರಿಯಾಗಿ ಕಾಣಿಸಿಕೊಳ್ಳಲಿದೆ. ಇದಲ್ಲದೆ ಹೊರಾಂಗಣದಲ್ಲಿ ಸ್ವಲ್ಪ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಇದು ಹಳೆಯ 1 ಲೀಟರ್‌ ಮತ್ತು 1.5 ಲೀಟರ್‌ ಟರ್ಬೊ ಪೆಟ್ರೋಲ್‌ ಪವರ್‌ ಟ್ರೇನ್‌ ಗಳನ್ನೇ ಮುಂದುವರಿಸಲಿದೆ.

 ನಿರೀಕ್ಷಿತ ಬೆಲೆ: ಇನ್ನಷ್ಟೇ ದೃಢೀಕರಿಸಬೇಕು

 ನಿರೀಕ್ಷಿತ ಬಿಡುಗಡೆ: ಇನ್ನಷ್ಟೇ ಘೋಷಿಸಬೇಕು

 

 

ಹೊಸ ರೆನೋ ಡಸ್ಟರ್

New Renault Duster

 ರೆನೋ ಸಂಸ್ಥೆಯು ಒಂದು ದಶಕಕ್ಕೂ ಹಿಂದೆ ಭಾರತಕ್ಕೆ ಕಾಲಿಟ್ಟಾಗ ರೆನೋ ಡಸ್ಟರ್ ಅನ್ನು ಇಲ್ಲಿಯ ಮಾರುಕಟ್ಟೆಗಾಗಿ ಬಿಡುಗಡೆ ಮಾಡಿತ್ತು. ಆದರೆ ಈ ಫ್ರೆಂಚ್‌ ಕಾರು ತಯಾರಕ ಸಂಸ್ಥೆಯು ಭಾರತದಲ್ಲಿ ಎರಡನೇ ತಲೆಮಾರಿನ ಮಾದರಿಯನ್ನು ಇಲ್ಲಿ ಇನ್ನೂ ಬಿಡುಗಡೆ ಮಾಡಿಲ್ಲ. ಇದೀಗ ಮೂರನೇ ತಲೆಮಾರಿನ ಡಸ್ಟರ್‌ ಕಾರು 2024ರಲ್ಲಿ ಮಾರುಕಟ್ಟೆಗೆ ಇಳಿಯುವುದರೊಂದಿಗೆ ಇದು ಭಾರತದಲ್ಲಿ ಈ ಕಾರು ತಯಾರಕ ಸಂಸ್ಥೆಯ ಅಗ್ರಗಣ್ಯ ವಾಹನ ಎನಿಸಲಿದೆ. ಇದು ಫ್ರಂಟ್‌ ವೀಲ್‌ ಡ್ರೈವ್ (FWD) ಮತ್ತು ಆಲ್‌ ವೀಲ್‌ ಡ್ರೈವ್ (AWD)‌ ಆಯ್ಕೆಗಳ ಜೊತೆಗೆ 1.2 ಲೀಟರ್‌ ಟರ್ಬೊ ಪೆಟ್ರೋಲ್‌ ಮೋಟರ್‌ ಜೊತೆಗೆ ಬರಲಿದೆ.

 ನಿರೀಕ್ಷಿತ ಬೆಲೆ: ರೂ 10 ಲಕ್ಷ

 ನಿರೀಕ್ಷಿತ ಬಿಡುಗಡೆ: 2024ರ ದ್ವಿತೀಯಾರ್ಧ

 

ನಿಸಾನ್‌ ಮ್ಯಾಗ್ನೈಟ್ ಫೇಸ್‌ ಲಿಫ್ಟ್

Nissan Magnite AMT

 ಮ್ಯಾಗ್ನೈಟ್ ಕಾರು 2020ರ ಡಿಸೆಂಬರ್‌ ತಿಂಗಳಿನಿಂದ ಭಾರತದಲ್ಲಿ ಮಾರಾಟಗೊಳ್ಳುತ್ತಿದೆ. ಈಗ ಈ ಸಬ್‌ ಕಾಂಪ್ಯಾಕ್ಟ್‌ SUV ಯು ಅಗತ್ಯ ಪರಿಷ್ಕರಣೆಗೆ ಒಳಗಾಗಲಿದ್ದು ಮಿಡ್‌ ಲೈಫ್‌ ರೀಫ್ರೆಶ್‌ ಜೊತೆಗೆ ಬರಲಿದೆ. ಹೊರಾಂಗಣದ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆಗಳು ಮಾತ್ರವಲ್ಲದೆ ಒಳಾಂಗಣದಲ್ಲಿಯೂ ಕೆಲವೊಂದು ಹೊಸ ವೈಶಿಷ್ಟ್ಯಗಳು ಕಾಣಿಸಿಕೊಳ್ಳಲಿವೆ. ಆದರೆ ಹುಡ್‌ ಅಡಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳು ಕಾಣಿಸಿಕೊಳ್ಳುವುದಿಲ್ಲ.

ನಿರೀಕ್ಷಿತ ಬೆಲೆ: ರೂ 6.50 ಲಕ್ಷ

ನಿರೀಕ್ಷಿತ ಬಿಡುಗಡೆ: ಇನ್ನಷ್ಟೇ ಘೋಷಿಸಬೇಕು

 ಈ SUV ಗಳಲ್ಲಿ ಯಾವುದರ ಕುರಿತು ನಿಮಗೆ ಹೆಚ್ಚಿನ ಆಸಕ್ತಿ ಇದೆ? ಅಲ್ಲದೆ ಬೇರೆ ಯಾವ SUVಗಳು ಮತ್ತು ಕಾರುಗಳಿಗಾಗಿ ನೀವು ಕಾಯುತ್ತಿದ್ದೀರಿ? ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿರಿ.

ಅವರಿಂದ ಪ್ರಕಟಿಸಲಾಗಿದೆ
Anonymous
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience