ಇಲ್ಲಿಯವರೆಗೆ ಟಾಟಾ ನೆಕ್ಸಾನ್ EVಯ 50 ಸಾವಿರ ಕಾರು ಮಾರಾಟ
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ 2022-2023 ಗಾಗಿ rohit ಮೂಲಕ ಜೂನ್ 28, 2023 02:33 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ನೆಕ್ಸಾನ್ EV ನಾಮಫಲಕವನ್ನು 2020ರ ಪ್ರಾರಂಭದಲ್ಲಿ ಪರಿಚಯಿಸಲಾಗಿತ್ತು ಮತ್ತು ಅಂದಿನಿಂದ ಇದು ಭಾರತದಲ್ಲಿ ಸಮೂಹ-ಮಾರುಕಟ್ಟೆ EV ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ
-
ನವೀಕೃತ ನೆಕ್ಸಾನ್ ಆಧಾರದಲ್ಲಿ ಈ ನೆಕ್ಸಾನ್ EV ಅನ್ನು ಜನವರಿ 2020ರಲ್ಲಿ ಬಿಡುಗಡೆ ಮಾಡಲಾಗಿದ್ದು, 2022ರಲ್ಲಿ ಮ್ಯಾಕ್ಸ್ ಮತ್ತು ಪ್ರೈಮ್ ಆವೃತ್ತಿಗಳನ್ನು ಪರಿಚಯಿಸಲಾಯಿತು.
-
ಇದು ಭಾರತದಲ್ಲಿ ಅತ್ಯುತ್ತಮವಾಗಿ-ಮಾರಾಟವಾಗುವ ಟಾಪ್ ಮೂರು ಕಾರುಗಳಲ್ಲಿ ಒಂದು.
-
ಈ ನೆಕ್ಸಾನ್ EV ಪ್ರೈಮ್‌ಗೆ ಟಾಟಾ, ಕ್ಲೈಮ್ ಮಾಡಲಾದ 312km ರೇಂಜ್‌ಗೆ ಸೂಕ್ತವಾಗಿರುವ 30.2kWh ಬ್ಯಾಟರಿ ಪ್ಯಾಕ್ ಅನ್ನು ನೀಡುತ್ತದೆ.
-
ಈ ನೆಕ್ಸಾನ್ EV ಮ್ಯಾಕ್ಸ್ 40.5kWh ಬ್ಯಾಟರಿ ಅನ್ನು ಪಡೆದಿದ್ದು, 453km ARAI-ರೇಟ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
-
ಟಚ್ ಸ್ಕ್ರೀನ್ ಮತ್ತು ಆಟೋ ACಯಂಥ ಕೆಲವು ಫೀಚರ್‌ಗಳನ್ನು ನೆಕ್ಸಾನ್ EV ಪ್ರೈಮ್ ಮತ್ತು ಮ್ಯಾಕ್ಸ್ ಎರಡರಲ್ಲಿಯೂ ಕಾಣಬಹುದು.
-
ಅವುಗಳ ಬೆಲೆ ರೂ 14.49 ಲಕ್ಷದಿಂದ ರೂ 19.54 ಲಕ್ಷ (ಎಕ್ಸ್-ಶೋರೂಂ ದೆಹಲಿ) ಶ್ರೇಣಿಯಲ್ಲಿ ಇದೆ.
50,000 ಯೂನಿಟ್‌ಗಳು. ಟಾಟಾ ನೆಕ್ಸಾನ್ EV ಪ್ರೈಮ್ ಮತ್ತು ಮ್ಯಾಕ್ಸ್ ಹೇಗೆ ಪ್ರಸಿದ್ಧಿ ಪಡೆದವು ಎಂಬುದನ್ನೂ ಈ ಸಂಖ್ಯೆಗಳೇ ಹೇಳುತ್ತವೆ. ನಮ್ಮ ಮಾರುಕಟ್ಟೆಯು ನಿಧಾನವಾಗಿ ಇಲೆಕ್ಟ್ರಿಕ್ ಕಾರುಗಳನ್ನು ಅಂಗೀಕರಿಸುತ್ತಿರುವ ಈ ಸಂದರ್ಭದಲ್ಲಿ ಇದು ಹೊಸ ಖರೀದಿದಾರರು ಮತ್ತು ಭಾರತೀಯ ವಾಹನೋದ್ಯಮ ಎರಡಕ್ಕೂ ಒಂದು ಪ್ರೇರಣೆಯಾಗಿದೆ. ನೆಕ್ಸಾನ್‌ನ ಒಟ್ಟಾರೆ ಮಾರಾಟದಲ್ಲಿ, ಸುಮಾರಾಗಿ ಹೊಸ ನೆಕ್ಸಾನ್ EV ಪ್ರೈಮ್ ಮತ್ತು ನೆಕ್ಸಾನ್ EV ಮ್ಯಾಕ್ಸ್ ವೇರಿಯೆಂಟ್‌ಗಳು ಸುಮಾರು 15 ಪ್ರತಿಶತದಷ್ಟಿವೆ ಎಂದು ಟಾಟಾ ಹೇಳುತ್ತದೆ.
#NexonEV50kCommunity ಒಟ್ಟಾಗಿ ಇಲೆಕ್ಟ್ರಿಕ್ ಕನಸುಗಳು ಮತ್ತು ಬದಲಾವಣೆಯ ಉತ್ಸಾಹದಲ್ಲಿ ಹೊಸ ಹಾದಿಯಲ್ಲಿ ಮುನ್ನಡೆಯುತ್ತಿದೆ. ಪರಿಸರ ಸ್ನೇಹಿ, ಸ್ವಚ್ಛ ಮತ್ತು ಇನ್ನಷ್ಟು ಉಲ್ಲಾಸಕರ ಭವಿಷ್ಯದೆಡೆಗೆ ಸಾಗಲು ನಮ್ಮೊಂದಿಗೆ ಸೇರಿಕೊಳ್ಳಿ. ಅಭಿನಂದನೆಗಳು, 50,000 ಮತ್ತು ಇನ್ನೂ ಮುಂದಕ್ಕೆ ಸಾಗಲಿ!
#50kCommunity #TATAMotors #TATA #NexonEV pic.twitter.com/KHZIKB8J9F
— ಟಾಟಾ ಪ್ಯಾಸೆಂಜರ್ ಇಲೆಕ್ಟ್ರಿಕ್ ಮೊಬಿಲಿಟಿ ಲಿಮಿಟಡ್ (@Tatamotorsev) ಜೂನ್ 27, 2023
ಇಲ್ಲಿದೆ ಟಾಟಾದ ಇಲ್ಲಿಯ ತನಕದ ಅತ್ಯಂತ ಕೈಗೆಟುಕುವ ಬೆಲೆಯ ಇಲೆಕ್ಟ್ರಿಕ್ ಕಾರುಗಳ ಸಂಕ್ಷಿಪ್ತ ನೋಟ:
ಹೇಗೆ ಪ್ರಾರಂಭವಾಯಿತು?
2020ರ ಪ್ರಾರಂಭದಲ್ಲಿ, ಟಾಟಾ ನವೀಕೃತ ನೆಕ್ಸಾನ್ ಅನ್ನು ಹೊರತಂದಿತು, ಇದು ನೆಕ್ಸಾನ್ EV ಅನ್ನೂ ಹುಟ್ಟುಹಾಕಿತು. ಇದು ನಮ್ಮ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಮೊದಲನೇ ಲಾಂಗ್-ರೇಂಜ್ ಸಮೂಹ ಮಾರುಕಟ್ಟೆ ಇಲೆಕ್ಟ್ರಿಕ್ ಕಾರುಗಳಲ್ಲಿ ಆಗಿದೆ. ಅಲ್ಲದೇ ಇದು ಸಬ್‌ಸ್ಕ್ರಿಪ್ಷನ್ ಆಧಾರದ ಮೇಲೆ ನೀಡಲಾದ ಭಾರತದಲ್ಲಿನ ಮೊದಲನೇ ಇಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ ಮತ್ತು ಆರು ತಿಂಗಳ ಅವಧಿಯಲ್ಲಿ ಇದು 1,000 ಯೂನಿಟ್ ಉತ್ಪಾದನೆಯ ಮೈಲಿಗಲ್ಲನ್ನು ದಾಟಿದೆ.
ನವೀಕರಣಗಳು
ಮೇ 2022 ರಲ್ಲಿ, ಟಾಟಾ ದೊಡ್ಡದಾದ ಬ್ಯಾಟರಿ ಪ್ಯಾಕ್ ಮತ್ತು ಹೆಚ್ಚು ಫೀಚರ್‌ಗಳನ್ನೂ ಹೊಂದಿದ “ಮ್ಯಾಕ್ಸ್” ಸಫಿಕ್ಸ್ ಲಾಂಗ್ ರೇಂಜ್ ಆವೃತ್ತಿಯನ್ನು ಪರಿಚಯಿಸುವ ಮೂಲಕ ನೆಕ್ಸಾನ್ EV ಅನ್ನು ಮತ್ತಷ್ಟು ವಿಸ್ತರಿಸಿತು. ಇದು ಸ್ಟಾಂಡರ್ಡ್ ನೆಕ್ಸಾನ್ EVಗೆ “ಪ್ರೈಮ್” ಪ್ರತ್ಯಯವನ್ನು ಪಡೆಯಲು ಕಾರಣವಾಯಿತು ಮತ್ತು ಇಲೆಕ್ಟ್ರಿಕ್ SUVಯ ಆರಂಭಿಕ ಹಂತದ ಆವೃತ್ತಿಯಾಗಿದೆ.
ಈ ನವೀಕರಣಗಳೊಂದಿಗೆ, ನೆಕ್ಸಾನ್ EV ದುಬಾರಿಯೂ ಆಯಿತು ಮತ್ತು EV ಖರೀದಿಗಳನ್ನು ಪ್ರೋತ್ಸಾಹಿಸಲು ಎಲ್ಲಾ ರಾಜ್ಯಗಳು ಇನ್ನೂ ರಿಯಾಯಿತಿಗಳನ್ನು ನೀಡುತ್ತಿರಲಿಲ್ಲ. ಆದಾಗ್ಯೂ ಟಾಟಾದ ಈ ಆರಂಭಿಕ ಹಂತದ ಇಲೆಕ್ಟ್ರಿಕ್ SUV ಜನಪ್ರಿಯ ಆಯ್ಕೆಯಾಗಿ ಉಳಿಯಿತು ಮತ್ತು ಇದರ ಝಿಪ್‌ಟ್ರಾನ್ ತಂತ್ರಜ್ಞಾನವು ಇದರ ಹೆಸರಿಗೆ ಅನೇಕ ದಾಖಲೆಗಳನ್ನು ಮಾಡುವ ಮೂಲಕ ಭಾರತದ ಮಾರುಕಟ್ಟೆಗೆ ಸಾಬೀತಾದ ತಂತ್ರಜ್ಞಾನವಾಗಿದೆ.
ಇದನ್ನೂ ಓದಿ: ಟಾಟಾ EV ಖರೀದಿದಾರರಲ್ಲಿ ಸುಮಾರು ಕಾಲುಭಾಗದಷ್ಟು ಜನರು ಹೊಸ ಕಾರು ಮಾಲೀಕರು
ತಂತ್ರಜ್ಞಾನಗಳು
ತಾಂತ್ರಿಕ ಸ್ಪೆಸಿಫಿಕೇಶನ್‌ಗಳಲ್ಲಿ ನೆಕ್ಸಾನ್ EV ಪ್ರೈಮ್ ಮತ್ತು ಮ್ಯಾಕ್ಸ್ ಕೆಲವು ವ್ಯತ್ಯಾಸಗಳನ್ನು ಹೊಂದಿವೆ:
ಸ್ಪೆಸಿಫಿಕೇಶನ್ |
ನೆಕ್ಸಾನ್ EV ಪ್ರೈಮ್ |
ನೆಕ್ಸಾನ್ EV ಮ್ಯಾಕ್ಸ್ |
ಬ್ಯಾಟರಿ ಪ್ಯಾಕ್ |
30.2kWh |
40.5kWh |
ಇಲೆಕ್ಟ್ರಿಕ್ ಮೋಟರ್ |
ಒಂದು |
ಒಂದು |
ಪವರ್ |
129PS |
143PS |
ಟಾರ್ಕ್ |
245Nm |
250Nm |
ARAI-ಕ್ಲೈಮ್ ಮಾಡಲಾದ ರೇಂಜ್ |
312km |
453km |
ಈ ನೆಕ್ಸಾನ್ EVಯ ಎರಡೂ ಆವೃತ್ತಿಗಳು 50kW ತನಕ ಸ್ಪೀಡ್ ಅಪ್ ಮಾಡುವ DC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಅವುಗಳ ಬ್ಯಾಟರಿಯನ್ನು 0-80 ಪ್ರತಿಶತಕ್ಕೆ ಮರುಪೂರಣಗೊಳಿಸಲು ಒಂದು ಗೆಂಟೆ ಸಮಯವನ್ನು ತೆಗೆದುಕೊಳ್ಳುತ್ತದೆ.
ಫೀಚರ್‌ಗಳ ತ್ವರಿತ ನೋಟ
ಟಾಟಾ ನೆಕ್ಸಾನ್ EV ಯ ಎರಡೂ ಪುನರಾವರ್ತನೆಗಳು ಸಾಮಾನ್ಯ ಫೀಚರ್‌ಗಳಾದ ಟಚ್‌ಸ್ಕ್ರೀನ್ ಸಿಸ್ಟಮ್ (ಪ್ರೈಮ್‌ಲ್ಲಿ 7-ಇಂಚು ಯೂನಿಟ್ ಮತ್ತು ಮ್ಯಾಕ್ಸ್‌ನಲ್ಲಿ 10.25-ಇಂಚು), ಸಿಂಗಲ್ ಪೇನ್ ಸನ್‌ರೂಫ್, ಸಂಪರ್ಕಿತ ಕಾರ್ ಟೆಕ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿವೆ. ಅವುಗಳ ಸುರಕ್ಷತಾ ಕಿಟ್‌ಗಳು ಎರಡು ಮುಂಭಾಗದ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳು ಮತ್ತು ಕಾರ್ನರಿಂಗ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಒಳಗೊಂಡಿವೆ.
ಇದನ್ನೂ ನೋಡಿ: ನವೀಕೃತ ಟಾಟಾ ನೆಕ್ಸಾನ್ EV ಪ್ರಮುಖ ವಿವರಗಳೊಂದಿಗೆ ಮೊದಲ ಬಾರಿಗೆ ಕ್ಯಾಮರಾದಲ್ಲಿ ಸೆರೆಯಾಗಿದೆ
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ನೆಕ್ಸಾನ್ EV ಪ್ರೈಮ್ ಬೆಲೆಯನ್ನು ಟಾಟಾ ರೂ 14.49 ಲಕ್ಷ ಮತ್ತು ರೂ 17.19 ಲಕ್ಷದ ನಡುವೆ ನಿಗದಿಪಡಿಸಿದೆ, ಹಾಗೆಯೇ EV ಮ್ಯಾಕ್ಸ್ ಬೆಲೆ ರೂ 16.49 ರಿಂದ ರೂ 19.54 ತನಕ (ಎಕ್ಸ್-ಶೋರೂಂ ದೆಹಲಿ) ತನಕ ಇದೆ. ಟಾಟಾ ನೆಕ್ಸಾನ್ EV ಶ್ರೇಣಿಯು ಮಹೀಂದ್ರಾ XUV400 EVಗೆ ಪೈಪೋಟಿ ನೀಡುತ್ತದೆ. ಈ ಅವಳಿಗಳು MG ಕಾಮೆಟ್ EV ಗಿಂತ ದುಬಾರಿಯಾಗಿದ್ದು MG ZS EV ಮತ್ತು ಹ್ಯುಂಡೈ ಕೋನ ಇಲೆಕ್ಟ್ರಿಕ್‌ಗೆ ಹೋಲಿಸಿದರೆ ಕೈಗೆಟುಕುವ ಪರ್ಯಾಯವಾಗಿದೆ.
ಇನ್ನಷ್ಟು ಓದಿ : ನೆಕ್ಸಾನ್ EV ಮ್ಯಾಕ್ಸ್ ಆಟೋಮ್ಯಾಟಿಕ್