ಈಗ ಪಂಜಾಬ್ ಪೊಲೀಸ್ ಪಡೆಯ ಭಾಗವಾದ ಕಸ್ಟಮೈಸ್ ಮಾಡಿದ 71 Kia Carens ಎಮ್‌ಪಿವಿಗಳು
ಈ ಪೊಲೀಸ್ ಗಾಗಿ ನಿರ್ಮಿಸಲಾದ ಕಿಯಾ ಕ್ಯಾರೆನ್ಸ್ MPV ಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿವೆ.
ಇದು ಹೇಗೆ ಕಾಣುತ್ತದೆ
ಕ್ಯಾರೆನ್ಸ್‌ನ ಈ ಉದ್ದೇಶ-ನಿರ್ಮಿತ ವರ್ಷನ್ ನಲ್ಲಿ ಕಿಯಾ ಬಾಡಿವರ್ಕ್‌ಗೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ, ಆದರೆ ಇದು ಬಾಗಿಲುಗಳು, ಬಾನೆಟ್ ಮತ್ತು ಬಂಪರ್‌ಗಳ ಮೇಲೆ ನಿರ್ದಿಷ್ಟ ಪಂಜಾಬ್ ಪೋಲೀಸ್ ಸ್ಟಿಕ್ಕರ್‌ಗಳು ಮತ್ತು 'ಡಯಲ್ 112' ತುರ್ತು ಪ್ರತಿಕ್ರಿಯೆ ಡಿಕಾಲ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಪೊಲೀಸ್ ವಾಹನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹೆಚ್ಚಿನ ತೀವ್ರತೆಯ ಸ್ಟ್ರೋಬ್ ಲೈಟ್ ಗಳನ್ನು ರೂಫ್ ಮೇಲೆ ಅಳವಡಿಸಲಾಗಿದೆ. ದೂರ ಸಂವಹನಗಳಿಗಾಗಿ ಉಪಯೋಗಿಸುವ ಪೋಲಿಸ್ ರೇಡಿಯೊ ವ್ಯವಸ್ಥೆಗೆ ನಾವು ದೊಡ್ಡ ಆಂಟೆನಾವನ್ನು ಕೂಡ ನೋಡಬಹುದು.
ಕಿಯಾ ಕ್ಯಾರೆನ್ಸ್‌ನ ಈ ಪೋಲೀಸ್ ವರ್ಷನ್ 15-ಇಂಚಿನ ಅಲೊಯ್ ವೀಲ್ಸ್ ನೊಂದಿಗೆ ಬರುತ್ತದೆ, ಇದು ಬೇಸ್-ಸ್ಪೆಕ್ ಪ್ರೀಮಿಯಂ ವೇರಿಯಂಟ್ ಅನ್ನು ಆಧರಿಸಿದೆ.
ಇದನ್ನು ಕೂಡ ಓದಿ: ಹೊಸ ಕಾರನ್ನು ಖರೀದಿಸಲು ನೋಡುತ್ತೀದ್ದೀರಾ? ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಿದರೆ ಸಿಗುವ ಎಲ್ಲಾ ಪ್ರಯೋಜನಗಳನ್ನು ನೋಡಿ
ವಾಹನದಲ್ಲಿ ಮಾಡಲಾದ ಬದಲಾವಣೆಗಳು
ಪಂಜಾಬ್ ಪೊಲೀಸರಿಗೆ ನೀಡಲಾಗಿರುವ ಮಾರ್ಪಡಿಸಿದ ಕಿಯಾ ಕ್ಯಾರೆನ್ಸ್ 7-ಸೀಟರ್ ಕಾನ್ಫಿಗರೇಶನ್‌ನಲ್ಲಿ ಬರುತ್ತದೆ. ಇದು ಸೆಮಿ-ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯನ್ನು ಹೊಂದಿದೆ ಮತ್ತು ಇಲ್ಲಿ ದೊಡ್ಡ ಬದಲಾವಣೆಯೆಂದರೆ ಸೆಂಟರ್ ಕನ್ಸೋಲ್‌ಗೆ ಅಳವಡಿಸಲಾಗಿರುವ ಪಬ್ಲಿಕ್ ಅಡ್ರೆಸ್ ಸಿಸ್ಟಮ್. ಇದು ಎರಡನೇ-ಸಾಲಿನ ಸೀಟ್ ನಲ್ಲಿ 60:40 ಸ್ಪ್ಲಿಟ್ ಫೋಲ್ಡಿಂಗ್ ಹೊಂದಿದೆ, ಆದರೆ ಮೂರನೇ ಸಾಲನ್ನು MPVಯ ಸಾಮಾನ್ಯ ವರ್ಷನ್ ನಂತೆಯೇ 50:50 ಅನುಪಾತಕ್ಕೆ ಸ್ಪ್ಲಿಟ್ ಫೋಲ್ಡ್ ಮಾಡಬಹುದಾಗಿದೆ. ಕ್ಯಾರೆನ್ಸ್‌ನ ಈ ಪೋಲೀಸ್ ವರ್ಷನ್ ಎರಡನೇ ಮತ್ತು ಮೂರನೇ-ಸಾಲಿಗೆ ರೂಫ್ ಮೌಂಟೆಡ್ AC ವೆಂಟ್‌ಗಳನ್ನು ಮತ್ತು ಹೆಚ್ಚುವರಿ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಪವರ್ ವಿಂಡೋಗಳನ್ನು ಪಡೆಯುತ್ತದೆ. ಇದರ ಜೊತೆಗೆ, ಎಲ್ಲಾ ಮೂರು ಸೀಟಿನ ಸಾಲುಗಳು ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು, 12V ಪವರ್ ಸಾಕೆಟ್ ಮತ್ತು 5 USB ಟೈಪ್-C ಪೋರ್ಟ್‌ಗಳೊಂದಿಗೆ ಬರುತ್ತವೆ.
ಕ್ಯಾರೆನ್ಸ್‌ನ ಕಸ್ಟಮೈಸ್ ಮಾಡಿದ ವರ್ಷನ್ ಹೆಚ್ಚುವರಿಯಾಗಿ ಅಳವಡಿಸಲಾದ ಉಪಕರಣಗಳನ್ನು ಓಡಿಸಲು ದೊಡ್ಡ 60 Ah ಬ್ಯಾಟರಿಯೊಂದಿಗೆ ಬರುತ್ತದೆ. ಕಿಯಾ ಇದನ್ನು ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಐಡಲ್ ಎಂಜಿನ್ ಸ್ಟಾರ್ಟ್/ಸ್ಟಾಪ್‌ನಂತಹ ಫೀಚರ್ ಗಳೊಂದಿಗೆ ಸಜ್ಜುಗೊಳಿಸಿದೆ, ಹಾಗೆಯೇ ಅದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಗ್ಲೋಬಲ್ NCAPಯಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ
ಕ್ಯಾರೆನ್ಸ್ ಪವರ್‌ಟ್ರೇನ್ ವಿವರಗಳು
ಕಿಯಾ ಕ್ಯಾರೆನ್ಸ್‌ನ ಈ ಪೊಲೀಸ್ ವರ್ಷನ್ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 115 PS ಮತ್ತು 144 Nm ಅನ್ನು ಉತ್ಪಾದನೆ ಮಾಡುತ್ತದೆ. ಇದನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಗೆ ಜೋಡಿಸಲಾಗಿದೆ.
ಖಾಸಗಿ ಖರೀದಿದಾರರಿಗೆ, ಕಿಯಾ ಕ್ಯಾರೆನ್ಸ್ ಎರಡು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ: 1.5-ಲೀಟರ್ ಟರ್ಬೊ-ಪೆಟ್ರೋಲ್ (160 PS / 253 Nm) 6-ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದೆ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್) ಅಥವಾ 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್), ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (116 PS / 250 Nm) ಅನ್ನು 6-ಸ್ಪೀಡ್ iMT ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಜೋಡಿಸಲಾಗಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕ್ಯಾರೆನ್ಸ್‌ನ ಉದ್ದೇಶ ನಿರ್ಮಿತ ವರ್ಷನ್ ಬೆಲೆ ಶ್ರೇಣಿಯನ್ನು ಕಿಯಾ ಬಹಿರಂಗಪಡಿಸಿಲ್ಲ, ಆದರೆ ಕಿಯಾ MPVಯ ಸಾಮಾನ್ಯ ವರ್ಷನ್ ಬೆಲೆಯು ರೂ 10.45 ಲಕ್ಷದಿಂದ ರೂ 19.45 ಲಕ್ಷದವರೆಗೆ (ಎಕ್ಸ್ ಶೋರೂಂ ದೆಹಲಿ) ಇದೆ. ಕ್ಯಾರೆನ್ಸ್ ಅನ್ನು ಮಾರುತಿ ಎರ್ಟಿಗಾ/ಟೊಯೋಟಾ ರೂಮಿಯಾನ್‌ಗೆ ಪ್ರೀಮಿಯಂ ಪರ್ಯಾಯ ಆಯ್ಕೆಯಾಗಿ ಪರಿಗಣಿಸಬಹುದು ಅಥವಾ ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಟೊಯೊಟಾ ಇನ್ನೋವಾ ಹೈಕ್ರಾಸ್/ಮಾರುತಿ ಇನ್ವಿಕ್ಟೊಗೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿ ಕೂಡ ಪರಿಗಣಿಸಬಹುದು.
ಇನ್ನಷ್ಟು ಓದಿ: ಕಿಯಾ ಕ್ಯಾರೆನ್ಸ್ ಆಟೋಮ್ಯಾಟಿಕ್