Login or Register ಅತ್ಯುತ್ತಮ CarDekho experience ಗೆ
Login

ಹೆಚ್ಚು ಗುರುತಿಸುವಂತೆ ಮಾಡಲು ಥಾರ್ ಆರ್ಡಬ್ಲ್ಯೂಡಿಯಲ್ಲಿ ಸಣ್ಣ ಬದಲಾವಣೆ ಮಾಡಲಿರುವ ಮಹೀಂದ್ರಾ

ಜೂನ್ 01, 2023 02:00 pm ರಂದು rohit ಮೂಲಕ ಪ್ರಕಟಿಸಲಾಗಿದೆ
21 Views

4WD ವೇರಿಯೆಂಟ್‌ಗಳಲ್ಲಿ ಥಾರ್ RWD ಪಡೆಯಲಿದೆ 4X4 ಬ್ಯಾಡ್ಜ್‌ಗೆ ಸಂಬಂಧಿಸಿದ “RWD” ಮಾನಿಕರ್

  • ಈ ಥಾರ್ RWD ಅನ್ನು ಜನವರಿ 2023ರಂದು ಬಿಡುಗಡೆಗೊಳಿಸಲಾಯಿತು.
  • ಇದನ್ನು ಮೂರು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ: AX (O) ಡೀಸೆಲ್ MT, LX ಡೀಸೆಲ್ MT ಹಾಗೂ LX ಪೆಟ್ರೋಲ್ AT..
  • ಈತನಕ, ಹಿಂಭಾಗದ ಬದಿಗಳಲ್ಲಿ 4x4 ಬ್ಯಾಡ್ಜಿಂಗ್‌ನ ಅನುಪಸ್ಥಿತಿಯಿಂದ ಮಾತ್ರ ಗುರುತಿಸಲಾಗಿದೆ.
  • ಮಹೀಂದ್ರಾ ಈ SUV ಅನ್ನು ಮೂರು ಇಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ: ಎರಡು ಡೀಸೆಲ್ ಮತ್ತು ಟರ್ಬಾ ಪೆಟ್ರೋಲ್.
  • ಥಾರ್ RWDನ ಬೆಲೆಗಳು ರೂ 10.54 ಲಕ್ಷದಿಂದ ರೂ 13.49 ಲಕ್ಷದ (ಎಕ್ಸ್-ಶೋರೂಂ ದೆಹಲಿ) ತನಕ ಇದೆ.

ಮಹೀಂದ್ರಾ ಥಾರ್ 2020ರಲ್ಲಿ ಮಾರಾಟಕ್ಕೆ ಬಂದ ನಂತರದಿಂದ ಆಫ್-ರೋಡ್ ಪ್ರಿಯರ ಜನಪ್ರಿಯ ಆಯ್ಕೆಯಾಗಿದೆ. . 4WD SUV ನ ಬೆಲೆ ಹೆಚ್ಚು ದುಬಾರಿಯಾಗುತ್ತಿದ್ದಂತೆ, ಈ ಕಾರುತಯಾರಕರು, 2023ರ ಆರಂಭದಲ್ಲಿ ಹೆಚ್ಚು ಕೈಗೆಟುಕುವ ರಿಯರ್-ವ್ಹೀಲ್-ಡ್ರೈವ್ (RWD) ಅನ್ನು ಪರಿಚಿಯಿಸಿದರು. ಈಗ, ಈ ಥಾರ್‌ ಹೊಸ ರೂಪ ನಮ್ಮ ಗಮನಕ್ಕೆ ಬಂದಿದ್ದು ಇದು SUVಯ RWD ವೇರಿಯೆಂಟ್‌ಗಳಿಗೆ ಸಾಕಷ್ಟು ಆಸಕ್ತಿದಾಯಕ ಬ್ರ್ಯಾಂಡಿಗ್ ಅನ್ನು ತೋರಿಸುತ್ತದೆ.

ಹೊಸ ಮಾನಿಕರ್

4WD ವೇರಿಯೆಂಟ್‌ಗಳು ಗುರುತಿಸುವಿಕೆಗಾಗಿ ತಮ್ಮದೇ ಆದ 4X4 ಬ್ಯಾಡ್ಜ್ ಅನ್ನು ರಿಯರ್ ಫೆಂಡರ್‌ಗಳಲ್ಲಿ ಪಡೆದಿವೆ, ಮತ್ತು RWD ಆವೃತ್ತಿಯಲ್ಲಿ ಈ ಬ್ಯಾಡ್ಜ್‌ನ ಅನುಪಸ್ಥಿತಿಯಿದೆ. ಆದಾಗ್ಯೂ, ಈಗ ನಾವು ಥಾರ್‌ನ RWD ಆವೃತ್ತಿಯು ಹೊಸ “RWD” ಮಾನಿಕರ್ ಅನ್ನು ಪಡೆಯಲಿದೆ ಮತ್ತು ಇದು ತನ್ನ ಪರಿಚಯವನ್ನು ಶೀಘ್ರದಲ್ಲೇ ಸೂಚಿಸುತ್ತದೆ. ಇದು ಹೆಚ್ಚಾಗಿ ಬಿಳಿ ಅಕ್ಷರದಲ್ಲಿದ್ದು, ಕೊನೆಯ ಅಕ್ಷರದಲ್ಲಿ ಕೆಂಪು ರಾಚಿದಂತೆ ಇರುತ್ತದೆ.

ಈ ಹೊಸ ಬ್ಯಾಡ್ಜ್‌ನ ಹೊರತಾಗಿ, ಈ ಥಾರ್ RWDನಲ್ಲಿ ಯಾವುದೇ ಗೋಚರ ಬದಲಾವಣೆ ಇರುವಂತೆ ಕಾಣುವುದಿಲ್ಲ.

ಇದನ್ನೂ ಓದಿ: ಮಹೀಂದ್ರಾ ದೃಢಪಡಿಸಿದೆ 2023ಕ್ಕೆ ಯಾವುದೇ ಹೊಸ ಮಾಡೆಲ್‌ಗಳಿಲ್ಲ; 2024 ರಲ್ಲಿ ಬರುತ್ತಿದೆ ದೊಡ್ಡ ಬಿಡುಗಡೆಗಳು!

ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ

ಮಹೀಂದ್ರಾ ಈ ಥಾರ್ RWDಗೆ 2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ (152PS/ತನಕ320Nm) ಮತ್ತು 118PS, 1.5-ಲೀಟರ್ – ಡೀಸೆಲ್ ಇಂಜಿನ್ ಅನ್ನು ನೀಡುತ್ತಿದೆ. ಅಲ್ಲದೇ 2.2-ಲೀಟರ್ ಡೀಸೆಲ್ ಇಂಜಿನ್ (130PS/300Nm) ಕೂಡಾ ಆಫರ್‌ನಲ್ಲಿ ಇದ್ದು, ಇದು 4WD ಆವೃತ್ತಿಯ ಡೀಸೆಲ್ ಇಂಜಿನ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

ಇದನ್ನೂ ನೋಡಿ: ಎಕ್ಸ್‌ಕ್ಲೂಸಿವ್: 5-ಡೋರ್ ಮಹೀಂದ್ರಾ ಥಾರ್ ಪಡೆಯಲಿದೆ ಸನ್‌ರೂಫ್ ಮತ್ತು ಮೆಟಲ್ ಹಾರ್ಡ್ ಟಾಪ್

ವೇರಿಯೆಂಟ್‌ಗಳು ಮತ್ತು ಬೆಲೆಗಳು

ಮಹೀಂದ್ರಾ ಈ ಥಾರ್ RWD ಅನ್ನು ಮೂರು ವೇರಿಯೆಂಟ್‌ಗಳಲ್ಲಿ ನೀಡುತ್ತದೆ- AX (O) ಡೀಸೆಲ್ MT, LX ಡೀಸೆಲ್ MT ಹಾಗೂ LX ಪೆಟ್ರೋಲ್ AT –ಇದರ ಬೆಲೆಯನ್ನು ರೂ10.54 ಲಕ್ಷ ಮತ್ತು 13.49 ಲಕ್ಷದ (ಎಕ್ಸ್-ಶೋರೂಂ, ದೆಹಲಿ) ನಡುವೆ ನಿಗದಿಪಡಿಸಲಾಗಿದೆ. ಈ ಥಾರ್ ಫೋರ್ಸ್ ಗುರ್ಖಾ ಮತ್ತು ಮುಂಬರುವ ಮಾರುತಿ ಜಿಮ್ನಿಗೆ ಪೈಪೋಟಿ ನೀಡುತ್ತದೆ.

ಇನ್ನಷ್ಟು ಓದಿ : ಮಹೀಂದ್ರಾ ಥಾರ್ ಡೀಸೆಲ್

Share via

Write your Comment on Mahindra ಥಾರ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.46.89 - 48.69 ಲಕ್ಷ*
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.17.49 - 22.24 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ