• English
  • Login / Register

2023 ರಲ್ಲಿ ಯಾವುದೇ ಹೊಸ ಮಾಡೆಲ್‌ಗಳಿಲ್ಲವೆಂದು ದೃಢೀಕರಿಸಿದ ಮಹೀಂದ್ರಾ; 2024 ರಲ್ಲಿವೆ ಅತಿ ದೊಡ್ಡ ಬಿಡುಗಡೆ!

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ tarun ಮೂಲಕ ಜೂನ್ 01, 2023 02:00 pm ರಂದು ಪ್ರಕಟಿಸಲಾಗಿದೆ

  • 33 Views
  • ಕಾಮೆಂಟ್‌ ಅನ್ನು ಬರೆಯಿರಿ

XUV300 ನಂತೆಯೇ ನಾವು ಈ ವರ್ಷ ಕೆಲವು ಸಣ್ಣ ಬದಲಾವಣೆಗಳು ಮತ್ತು ನವೀಕರಣಗಳನ್ನು ನೋಡಬಹುದು.

Mahindra Thar 5-Door

ಹಣಕಾಸು ವರ್ಷ 2023 ರ ಫಲಿತಾಂಶ ಪ್ರಕಟಣೆಯ ವೇಳೆ ನಡೆದ ಪ್ರಶ್ನೋತ್ತರ ಸೆಶನ್‌ನಲ್ಲಿ, ಮಹೀಂದ್ರಾ ಮತ್ತು ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕರಾದ (ಆಟೋ ಮತ್ತು ಫಾರ್ಮ್ ಸೆಕ್ಟರ್‌ಗಳು) ರಾಜೇಶ್ ಜೆಜುರಿಕರ್, CY 2023 ರಲ್ಲಿ ನಾವು ಯಾವುದೇ ಹೊಸ ಮಾಡೆಲ್‌ನ ಬಿಡುಗಡೆಯನ್ನು ಯೋಜಿಸಿಲ್ಲ ಎಂಬುದನ್ನು ದೃಢೀಕರಿಸಿದರು ಮಾತ್ರವಲ್ಲದೇ ನಾವು ನಿರೀಕ್ಷಿಸುತ್ತಿರುವ ದೊಡ್ಡ ಬಿಡುಗಡೆಯು 2024 ರಲ್ಲಿ ಬರಲಿವೆ ಎಂಬುದನ್ನು ತಿಳಿಸಿದರು. 

ಕೆಲವು ಮಾಡೆಲ್‌ಗಳಿಗೆ ಗ್ರಾಹಕರು ತೀರಾ ದೀರ್ಘವಾದ ಕಾಯುವಿಕೆಯ ಅವಧಿಯನ್ನು ಎದುರಿಸುತ್ತಿರುವುದೂ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಸ್ಕಾರ್ಪಿಯೊ ಎನ್ ಇನ್ನೂ ಆರು ತಿಂಗಳಿಗಿಂತ ಹೆಚ್ಚು ಕಾಯುವಿಕೆಯ ಅವಧಿಯನ್ನು ಹೊಂದಿದೆ ಮತ್ತು ಒಂದು ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳು ಬಾಕಿ ಉಳಿದಿವೆ, ಆದರೆ ಥಾರ್ ರಿಯರ್-ವ್ಹೀಲ್ ಡ್ರೈವ್‌ಗಾಗಿ ಖರೀದಿದಾರರು ಕೆಲವು ನಗರಗಳಲ್ಲಿ ಒಂದು ವರ್ಷದವರೆಗೆ ಕಾದಿದ್ದಾರೆ. ಆದ್ದರಿಂದ ಈ ಕಾಯುವಿಕೆಯ ಸಮಸ್ಯೆಯು ಉಲ್ಬಣಗೊಳ್ಳುವುದನ್ನು ತಪ್ಪಿಸಲು, 2023 ರಲ್ಲಿ ಯಾವುದೇ ಹೊಸ ಮಾಡೆಲ್‌ ಅನ್ನು ಬಿಡುಗಡೆ ಮಾಡದಿರಲು ಮಹೀಂದ್ರಾ ನಿರ್ಧರಿಸಿದೆ.

Nine New Mahindra SUVs Including A 5-Door Thar Are Coming In The Next 5 Years

 ಮಹೀಂದ್ರಾ  5-ಡೋರ್ ಥಾರ್‌ನ ಬಿಡುಗಡೆಯೊಂದಿಗೆ 2024 ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದು 5 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ 3-ಡೋರ್ ಥಾರ್‌ಗಿಂತ ಹೆಚ್ಚು ಪ್ರಾಯೋಗಿಕ ಕೊಡುಗೆಯಾಗಿದೆ. ಅದರ ಆಂತರಿಕ ಕಾರ್ಯಗಳಲ್ಲಿ ಅದೇ ಟರ್ಬೋ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಇರುತ್ತದೆಯಾದರೂ ಬಹುಶಃ ಉನ್ನತ ಸ್ಥಿತಿಯಲ್ಲಿರುಬಹುದು. ರಿಯರ್-ವ್ಹೀಲ್ ಮತ್ತು ಫೋರ್-ವ್ಹೀಲ್ ಡ್ರೈವ್‌ಟ್ರೇನ್‌ಗಳ ಜೊತೆಗೆ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯಬಹುದು.

ಇದನ್ನೂ ಓದಿ: ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್ ಪೆಟ್ರೋಲ್ – ಇಂಧನ ದಕ್ಷತೆ ಅಂಕಿಅಂಶ ಹೋಲಿಕೆ 

ಮುಂದಿನ ಕೆಲವು ವರ್ಷಗಳಲ್ಲಿ ಮಹೀಂದ್ರಾ ಹಲವಾರು ಪ್ರಮುಖ ಬಿಡುಗಡೆಗಳನ್ನು ನಿಗದಿಪಡಿಸಿದೆ. 5-ಡೋರ್ ಥಾರ್ ನಂತರ ಈ ಕಾರು ತಯಾರಕರು XUV300 ಮತ್ತು ಬೊಲೆರೊದ ಹೊಸ ಪೀಳಿಗೆಯನ್ನು ಪರಿಚಯಿಸಲು ಯೋಜಿಸುತ್ತಿದ್ದಾರೆ. ಈ ಎಸ್‌ಯುವಿ ತಯಾರಕರು ಕ್ರೆಟಾಗೆ ಪ್ರತಿಸ್ಪರ್ಧಿಯನ್ನು ಬಿಡುಗಡೆಗೊಳಿಸುವ ಕುರಿತು ಕಾರ್ಯನಿರ್ವಹಿಸುತ್ತಿರುವುದರಿಂದ ಇದು XUV500 ಮಾನಿಕರ್ ಅನ್ನು ಮರಳಿ ಪಡೆಯಬಹುದು. ಕೊನೆಯಲ್ಲಿ, ಗ್ಲಾಸ್ಟರ್ ಪ್ರತಿಸ್ಪರ್ಧಿಯನ್ನು ಸಹ ಇದು ಸಿದ್ಧಪಡಿಸುತ್ತಿದ್ದು, ಇದು ಮಹೀಂದ್ರಾದ ಪ್ರಮುಖ ಬಿಡುಗಡೆಗಳಲ್ಲಿ ಒಂದಾಗಿರಬಹುದು. 

Mahindra EV concepts

ಈ ಕಂಪನಿಯು 2026 ರ ವೇಳೆಗೆ ವಿವಿಧ ಬ್ಯಾಟರಿ ಚಾಲಿತ ವಾಹನಗಳನ್ನು ಸಹ ಯೋಜಿಸಿದೆ. ಅದರ  XUV700, W620 (ಪ್ರಮುಖ ಮಹೀಂದ್ರಾ), ಮತ್ತು W201 (ಹೊಸ-ಪೀಳಿಗೆಯ XUV500) ನಂತಹ ಎಲ್ಲಾ ಹೊಸ ಮೊನೊಕಾಕ್ ಮಾದರಿಗಳು ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಪಡೆಯುತ್ತವೆ, ಇದಲ್ಲದೇ, ‘ಬಾರ್ನ್ ಇವಿ’ ಹೆಸರಿನಲ್ಲಿ ಹಲವಾರು ವಿಶೇಷ ಇವಿ ಮಾಡೆಲ್‌ಗಳನ್ನು 2026 ರ ವೇಳೆಗೆ ಪರಿಚಯಿಸುವ ಯೋಜನೆಯನ್ನು ಹೊಂದಿದೆ. ಮುಂಬರುವ ಈ ಹಲವು ಇವಿಗಳನ್ನು ಈಗಾಗಲೇ BE05 (ಕ್ರೆಟಾ-ಗಾತ್ರದ ಎಸ್‌ಯುವಿ), BE07 (ಹ್ಯಾರಿಯರ್ ಇವಿ-ಪ್ರತಿಸ್ಪರ್ಧಿ), ಮತ್ತು ಪೂರ್ಣ-ಗಾತ್ರದ BE09 ರೂಪದಲ್ಲಿ ಪೂರ್ವವೀಕ್ಷಣೆ ಮಾಡಲಾಗಿದೆ. 

 

was this article helpful ?

Write your Comment on Mahindra ಥಾರ್‌ ROXX

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience