ಬೇಸ್-ಸ್ಪೆಕ್ ಟಾಟಾ ಪಂಚ್ EV ಮೀಡಿಯಂ ರೇಂಜ್ Vs ಮಿಡ್-ಸ್ಪೆಕ್ ಟಾಟಾ ಟಿಯಾಗೊ EV ಲಾಂಗ್ ರೇಂಜ್: ಯಾವುದು ಉತ್ತಮವಾಗಿದೆ?

published on ಜನವರಿ 25, 2024 06:33 pm by shreyash for ಟಾಟಾ ಪಂಚ್‌ ಇವಿ

  • 96 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಪಂಚ್ EVಯ ಮೀಡಿಯಂ ರೇಂಜ್ ಮತ್ತು ಟಾಟಾ ಟಿಯಾಗೊ EV ಯ ಲಾಂಗ್ ರೇಂಜ್ ವೇರಿಯಂಟ್, ಇವರಡೂ ಕೂಡ 315 ಕಿಮೀವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.

Tata Punch EV Smart vs Tata Tiago EV XZ+

ಟಾಟಾ ಪಂಚ್ EVಯು ಇತ್ತೀಚೆಗೆ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯನ್ನು ರೂ 10.99 ಲಕ್ಷದ ಆರಂಭಿಕ ಬೆಲೆಯೊಂದಿಗೆ ಪ್ರವೇಶಿಸಿತು (ಪರಿಚಯಾತ್ಮಕ, ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ). ಈ ಬೆಲೆ ರೇಂಜ್ ನಲ್ಲಿ, ಟಾಟಾದ ಆಲ್-ಎಲೆಕ್ಟ್ರಿಕ್ ಟಿಯಾಗೋ EV ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಸೇರಿದಂತೆ ಇನ್ನೂ ಕೆಲವು ಎಲೆಕ್ಟ್ರಿಕ್ ವೆಹಿಕಲ್ (EV) ಆಯ್ಕೆಗಳಿವೆ. ಹಾಗೆ ನೋಡಿದರೆ, ಟಿಯಾಗೋ EVಯ ಮೀಡಿಯಂ-ಸ್ಪೆಕ್ XZ+ ಲಾಂಗ್-ರೇಂಜ್ ವೇರಿಯಂಟ್ ಬೆಲೆಯು ಪಂಚ್ EVಯ ಬೇಸ್-ಸ್ಪೆಕ್ ವೇರಿಯಂಟ್ ಬೆಲೆಗೆ ಹತ್ತಿರದಲ್ಲಿದೆ:

 ನೀವು ಈ ಎರಡು EVಗಳ ನಡುವೆ ಆಯ್ಕೆ ಮಾಡಲು ಬಯಸಿದರೆ, ಮೀಡಿಯಂ-ಸ್ಪೆಕ್ ಟಿಯಾಗೋ EV XZ+ ಲಾಂಗ್-ರೇಂಜ್ ವೇರಿಯಂಟ್ ಮತ್ತು ಬೇಸ್-ಸ್ಪೆಕ್ ಮೀಡಿಯಂ-ರೇಂಜ್ ಪಂಚ್ EV ಸ್ಮಾರ್ಟ್ ವೇರಿಯಂಟ್ ನ ವಿವರವಾದ ಹೋಲಿಕೆ ಇಲ್ಲಿದೆ.

 ಡೈಮೆನ್ಷನ್ ಗಳು

 

ಟಾಟಾ ಪಂಚ್ EV

ಟಾಟಾ ಟಿಯಾಗೊ EV

 ಉದ್ದ 

 3857 ಮಿ.ಮೀ

 3769 ಮಿ.ಮೀ

 ಅಗಲ

 1742 ಮಿ.ಮೀ

 1677 ಮಿ.ಮೀ

 ಎತ್ತರ

 1633 ಮಿ.ಮೀ

 1536 ಮಿ.ಮೀ

 ವೀಲ್ ಬೇಸ್

 2445 ಮಿ.ಮೀ

 2400 ಮಿ.ಮೀ

 ಗ್ರೌಂಡ್ ಕ್ಲಿಯರೆನ್ಸ್

 190 ಮಿ.ಮೀ

 165 ಮಿ.ಮೀ

 ಬೂಟ್ ಸ್ಪೇಸ್

 366 ಲೀಟರ್ (+14 ಲೀಟರ್ ಫ್ರಂಕ್ ಸ್ಟೋರೇಜ್)

 240 ಲೀಟರ್

Tata Punch EV Smart

 ಟಾಟಾ ಪಂಚ್ EV ಎಲ್ಲಾ ರೀತಿಯಲ್ಲಿ ಟಾಟಾ ಟಿಯಾಗೊ EVಗಿಂತ ದೊಡ್ಡದಾಗಿದೆ ಮತ್ತು ಹೆಚ್ಚಿನ ಕ್ಯಾಬಿನ್ ಜಾಗವನ್ನು ಕೂಡ ನೀಡುತ್ತದೆ. ಲಗೇಜ್ ಮತ್ತು ಸ್ಟೋರೇಜ್ ಆಯ್ಕೆಗಳಿಗೆ ಬಂದಾಗ, ಪಂಚ್ EV ಹೆಚ್ಚುವರಿ ಫ್ರಂಕ್ ಸ್ಟೋರೇಜ್ ಅನ್ನು ಕೂಡ ನೀಡುತ್ತದೆ (ಟಾಟಾ EV ಯಲ್ಲಿ ಇದು ಮೊಟ್ಟ ಮೊದಲು).

 ಇದನ್ನು ಕೂಡ ಓದಿ: ಟಾಟಾ ಪಂಚ್ EV ಲಾಂಗ್ ರೇಂಜ್ ವರ್ಸಸ್ ಟಾಟಾ ನೆಕ್ಸಾನ್ EV ಮಿಡ್ ರೇಂಜ್: ನೀವು ಯಾವ ಎಲೆಕ್ಟ್ರಿಕ್ SUV ಖರೀದಿಸಬೇಕು?

 ಪವರ್‌ಟ್ರೇನ್ ಗಳು

 ಸ್ಪೆಸಿಫಿಕೇಷನ್ ಗಳು

 ಟಾಟಾ ಪಂಚ್ EV ಸ್ಮಾರ್ಟ್ ಮಿಡ್ ರೇಂಜ್

ಟಾಟಾ ಟಿಯಾಗೊ EV XZ+ ಲಾಂಗ್ ರೇಂಜ್

 ಬ್ಯಾಟರಿ ಪ್ಯಾಕ್

25 kWh

24 kWh

 ಪವರ್

82 PS

75 PS

 ಟಾರ್ಕ್

114 Nm

114 Nm

 ಕ್ಲೇಮ್ ಮಾಡಲಾದ ರೇಂಜ್ (MIDC)

 315 ಕಿ.ಮೀ

 315 ಕಿ.ಮೀ

 ಈ ಎರಡೂ EVಗಳು ಒಂದೇ ಸೈಜ್ ನ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತವೆ ಮತ್ತು 315 ಕಿಮೀಗಳ ಕ್ಲೈಮ್ ಮಾಡಿರುವ ರೇಂಜ್ ಅನ್ನು ನೀಡುತ್ತವೆ. ಆದರೆ, ಪಂಚ್ EV ಹೆಚ್ಚುವರಿ 7 PS ಪವರ್ ನೊಂದಿಗೆ ಸ್ವಲ್ಪ ಹೆಚ್ಚಿನ ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ.  ಇದರ ಜೊತೆಗೆ, ಎರಡೂ ಮಾಡೆಲ್ 114 Nm ಗಳ ಟಾರ್ಕ್ ಉತ್ಪಾದನೆ ಮಾಡುತ್ತದೆ.

 ಚಾರ್ಜಿಂಗ್

 ಚಾರ್ಜರ್

 ಚಾರ್ಜಿಂಗ್ ಸಮಯ

 ಟಾಟಾ ಪಂಚ್ EV MR

 ಟಾಟಾ ಟಿಯಾಗೊ EV LR

 50 kW DC ಫಾಸ್ಟ್ ಚಾರ್ಜರ್ (10-80 ಶೇಕಡಾ)

 56 ನಿಮಿಷಗಳು

 58 ನಿಮಿಷಗಳು

 7.2 kW AC (10-100 ಶೇಕಡಾ)

 ಅನ್ವಯವಾಗುವುದಿಲ್ಲ

 3.6 ಗಂಟೆಗಳು

 3.3kW AC/ 15A ಪೋರ್ಟಬಲ್ ಚಾರ್ಜರ್ (10-100 ಶೇಕಡಾ)

 9.4 ಗಂಟೆಗಳು

 8.7 ಗಂಟೆಗಳು

Tata Tiago EV

 ಬೇಸ್-ಸ್ಪೆಕ್ ಸ್ಮಾರ್ಟ್ ವೇರಿಯಂಟ್ ನಲ್ಲಿ, ಟಾಟಾ ಪಂಚ್ EV ಸ್ಟ್ಯಾಂಡರ್ಡ್ ಆಗಿರುವ 3.3 kW AC ಚಾರ್ಜರ್‌ನೊಂದಿಗೆ ಬರುತ್ತದೆ, ಆದರೆ ಟಿಯಾಗೋ EV ಗೆ ಹೋಲಿಸಿದರೆ ಚಾರ್ಜ್ ಮಾಡಲು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಿಡ್-ಸ್ಪೆಕ್ ಟಿಯಾಗೋ EV ಹೆಚ್ಚುವರಿ ರೂ 50,000 ಪಾವತಿಯೊಂದಿಗೆ 7.2 kW ಚಾರ್ಜರ್ ಆಯ್ಕೆಯೊಂದಿಗೆ ಬರುತ್ತದೆ. ಪಂಚ್ EV ಯ ಚಿಕ್ಕ ಬ್ಯಾಟರಿಯೊಂದಿಗೆ ಈ ಆಯ್ಕೆಯನ್ನು ನೀಡಲಾಗುವುದಿಲ್ಲ.

 ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್‌ಗಳ ಪರಿಚಯಾತ್ಮಕ ಬೆಲೆಗಳು ಫೆಬ್ರವರಿಯಲ್ಲಿ ಬೆಲೆ ಏರಿಕೆಯೊಂದಿಗೆ ಕೊನೆಗೊಳ್ಳಲಿವೆ

 

ಫೀಚರ್ ಗಳು

ಫೀಚರ್ ಗಳು 

ಟಾಟಾ ಪಂಚ್ EV ಸ್ಮಾರ್ಟ್ ಮಿಡ್ ರೇಂಜ್

 ಟಾಟಾ ಟಿಯಾಗೊ EV XZ+ ಲಾಂಗ್ ರೇಂಜ್

 ಹೊರಭಾಗ

  •  LED DRL ಗಳೊಂದಿಗೆ LED ಹೆಡ್ ಲೈಟ್ ಗಳು

  • 15-ಇಂಚಿನ ಸ್ಟೀಲ್ ವೀಲ್ಸ್  

  •  LED DRL ಗಳೊಂದಿಗೆ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲೈಟ್ ಗಳು

  • ಫಾಗ್ ಲ್ಯಾಂಪ್ ಗಳು

  • ಸ್ಟೈಲ್ ಕವರ್‌ಗಳೊಂದಿಗೆ 14-ಇಂಚಿನ ಸ್ಟೀಲ್ ವೀಲ್ಸ್

ಒಳಭಾಗ

  • ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ

  • ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಕೂಲ್ ಆಗಿರುವ ಗ್ಲೋವ್ ಬಾಕ್ಸ್

  • ಇಲ್ಯೂಮಿನೇಟ್ ಆಗುವ ಸ್ಟೀರಿಂಗ್ ವೀಲ್

  •  ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ

  • ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಕೂಲ್ ಆಗಿರುವ ಗ್ಲೋವ್ ಬಾಕ್ಸ್

 ಸೌಕರ್ಯ ಮತ್ತು ಅನುಕೂಲತೆ

  •  ಟಚ್ ಕಂಟ್ರೋಲ್ ಗಳೊಂದಿಗೆ ಆಟೋಮ್ಯಾಟಿಕ್ AC

  • ಏರ್ ಪ್ಯೂರಿಫೈಯರ್

  • ಫ್ರಂಟ್ ಪವರ್ ವಿಂಡೋಗಳು

  • ಮಲ್ಟಿಮೋಡ್ ರೀಜನರೇಟಿವ್ ಬ್ರೇಕಿಂಗ್

  • ಡ್ರೈವ್ ಮೋಡ್‌ಗಳು (ಸಿಟಿ ಮತ್ತು ಸ್ಪೋರ್ಟ್)

  •  ಆಟೋಮ್ಯಾಟಿಕ್ ಎಸಿ

  • ಎಲ್ಲಾ ನಾಲ್ಕು ಪವರ್ ವಿಂಡೋಗಳು

  • ಮಲ್ಟಿಮೋಡ್ ರೀಜನರೇಟಿವ್ ಬ್ರೇಕಿಂಗ್

  • ಡ್ರೈವ್ ಮೋಡ್‌ಗಳು (ಸಿಟಿ ಮತ್ತು ಸ್ಪೋರ್ಟ್)

  • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಗಳು

  • ಕ್ರೂಸ್ ಕಂಟ್ರೋಲ್ 

  • ಆಟೋ ಹೆಡ್‌ಲೈಟ್‌ಗಳು

  • ರೈನ್ ಸೆನ್ಸಿಂಗ್ ವೈಪರ್‌ಗಳು

  • ಎಲೆಕ್ಟ್ರಿಕಲ್ ಆಗಿ ಅಡ್ಜಸ್ಟ್ ಮಾಡಬಹುದಾದ ಆಟೋ-ಫೋಲ್ಡ್ ORVMS

ಇನ್ಫೋಟೈನ್ಮೆಂಟ್

  •  ಸೆಮಿ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  •  7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್

  • ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ

  • ಸೆಮಿ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • 8-ಸ್ಪೀಕರ್ ಸೌಂಡ್ ಸಿಸ್ಟಮ್

 ಸುರಕ್ಷತೆ

  •  6 ಏರ್‌ಬ್ಯಾಗ್‌ಗಳು

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

  • ಹಿಲ್ ಹೋಲ್ಡ್ ಅಸಿಸ್ಟ್

  • EBD ಜೊತೆಗೆ ABS

  • ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್

  • ISOFIX

  • ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು

  •  ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು

  • EBD ಜೊತೆಗೆ ABS

  • ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್

  • ಸೆನ್ಸಾರ್ ಗಳೊಂದಿಗೆ ರಿಯರ್ ಪಾರ್ಕಿಂಗ್ ಕ್ಯಾಮೆರಾ

  • ರಿಯರ್ ವೈಪರ್ ಮತ್ತು ವಾಷರ್

Tata Punch EV Smart

 ಈ ಬೆಲೆಯಲ್ಲಿ ಸಿಗುವ ಫೀಚರ್ ಗಳ ಪಟ್ಟಿಯನ್ನು ನೋಡಿದಾಗ, ಟಾಟಾ ಟಿಯಾಗೊ EVಯು ಪಂಚ್ EV ಗಿಂತ ಹೆಚ್ಚು ವ್ಯಾಪಕವಾದ ಇಂಟಿಸ್ಟ್ರುಮೆಂಟ್ ಶ್ರೇಣಿಯನ್ನು ಹೊಂದಿದೆ. ಇದರಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಹೆಡ್‌ಲೈಟ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿವೆ. ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಅದರ ಉನ್ನತ ಮಟ್ಟದ ಸುರಕ್ಷತಾ ಕಿಟ್, ಇವೆಲ್ಲವೂ ಪಂಚ್ EV ಅನ್ನು ಟಿಯಾಗೋ EV ಯಿಂದ ಪ್ರತ್ಯೇಕವಾಗಿ ಇರಿಸುತ್ತದೆ.

 ಪಂಚ್ EV ಯ ಸ್ಮಾರ್ಟ್ ವೇರಿಯಂಟ್, ಹೊರಭಾಗದಲ್ಲಿ LED ಹೆಡ್‌ಲೈಟ್‌ಗಳನ್ನು ಮತ್ತು ಒಳಭಾಗದಲ್ಲಿ ಏರ್ ಪ್ಯೂರಿಫೈಯರ್ ಅನ್ನು ಕೂಡ ಹೊಂದಿದೆ, ಇವೆರಡೂ ಟಿಯಾಗೋ EV ಯಲ್ಲಿ ಲಭ್ಯವಿಲ್ಲ.

 ಬೆಲೆಗಳು

 ಟಾಟಾ ಪಂಚ್ EV ಸ್ಮಾರ್ಟ್ ಮಿಡ್ ರೇಂಜ್

 ಟಾಟಾ ಟಿಯಾಗೊ EV XZ+ ಲಾಂಗ್ ರೇಂಜ್

 ರೂ 10.99 ಲಕ್ಷ (ಪರಿಚಯಾತ್ಮಕ ಬೆಲೆ)

 ರೂ. 11.04 ಲಕ್ಷ

 ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ

 ಮಿಡ್-ಸ್ಪೆಕ್ ಟಾಟಾ ಟಿಯಾಗೊ EV XZ+ ಲಾಂಗ್-ರೇಂಜ್ ವೇರಿಯಂಟ್ ಗೆ ಹೋಲಿಸಿದರೆ ಬೇಸ್-ಸ್ಪೆಕ್ ಟಾಟಾ ಪಂಚ್ EV ಸ್ಮಾರ್ಟ್ ವೇರಿಯಂಟ್ ಹೆಚ್ಚಿನ ಜಾಗ, ಪರ್ಫಾರ್ಮೆನ್ಸ್ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ. ಆದರೆ, ಕೇವಲ ರೂ. 5,000 ಗಳ ಪ್ರೀಮಿಯಂ ಮೊತ್ತಕ್ಕೆ, ಟಿಯಾಗೋ EV ಹೆಚ್ಚು ಫೀಚರ್ ಗಳನ್ನು ನೀಡುವುದರಿಂದ ಇದು ಹೆಚ್ಚು ಪ್ರಾಯೋಗಿಕವಾದ ಆಯ್ಕೆಯಾಗಿದೆ. ಹಾಗಾದರೆ, ಈ ಎರಡರಲ್ಲಿ ನೀವು ಯಾವ EVಯನ್ನು ಆಯ್ಕೆ ಮಾಡುತ್ತೀರಿ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅನಿಸಿಕೆಯನ್ನು ತಿಳಿಸಿ.

 ಇನ್ನಷ್ಟು ಓದಿ: ಪಂಚ್ EV ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಪಂಚ್‌ EV

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience