• English
  • Login / Register

Tata Nexon, Harrier ಮತ್ತು Safari ಫೇಸ್‌ಲಿಫ್ಟ್‌ಗಳ ಪರಿಚಯಾತ್ಮಕ ಬೆಲೆಗಳು ಫೆಬ್ರವರಿಯಲ್ಲಿ ಬೆಲೆ ಏರಿಕೆಯೊಂದಿಗೆ ಅಂತ್ಯ

ಟಾಟಾ ನೆಕ್ಸಾನ್‌ ಗಾಗಿ rohit ಮೂಲಕ ಜನವರಿ 24, 2024 07:37 pm ರಂದು ಪ್ರಕಟಿಸಲಾಗಿದೆ

  • 75 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತೀಯ ಬ್ರಾಂಡ್ ಆಗಿರುವ ಟಾಟಾದ EV ಶ್ರೇಣಿಗಳು ಕೂಡ ಬೆಲೆ ಏರಿಕೆಗೆ ಒಳಗಾಗಲಿವೆ

Tata to hike prices of its entire lineup from February 2024

  • ವಿವಿಧ ಮಾಡೆಲ್ ಗಳು ಮತ್ತು ವೇರಿಯಂಟ್ ಗಳೊಂದಿಗೆ ಬೆಲೆ ಏರಿಕೆಗಳು ಬದಲಾಗುತ್ತವೆ.
  • ಟಾಟಾದ ಸಂಪೂರ್ಣ ಶ್ರೇಣಿಯಾದ್ಯಂತ ಬೆಲೆಗಳನ್ನು ಶೇಕಡಾ 0.7 ರಷ್ಟು (ಸರಾಸರಿ) ಹೆಚ್ಚಿಸಲಾಗುವುದು.
  • ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಇದಕ್ಕೆ ಕಾರಣ ಎಂದು ಹೇಳಲಾಗಿದೆ.
  • ಟಾಟಾದ ಪ್ರಸ್ತುತ ಶ್ರೇಣಿಯು ಒಟ್ಟು 12 ಮಾಡೆಲ್ ಗಳನ್ನು ಒಳಗೊಂಡಿದೆ, ಇದರಲ್ಲಿ ನಾಲ್ಕು EV ಗಳು ಸೇರಿವೆ.

 ಭಾರತದ ಆಟೋಮೊಬೈಲ್ ಇಂಡಸ್ಟ್ರಿಯ ಹೆಚ್ಚಿನ ಕಾರು ತಯಾರಕರು ಈಗಾಗಲೇ 2024 ರಲ್ಲಿ ತಮ್ಮ ಕಾರುಗಳ ಬೆಲೆ ಏರಿಕೆಯನ್ನು ಮಾಡಿದ್ದಾರೆ, ಟಾಟಾ ಮೋಟಾರ್ಸ್ ಈಗ ಫೆಬ್ರವರಿ 2024 ರಿಂದ ತನ್ನ ಸಂಪೂರ್ಣ ಶ್ರೇಣಿಯ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದರರ್ಥ, ಲಾಂಚ್ ಆದ ಸಮಯದಿಂದ ಸುಮಾರು ಮೂರರಿಂದ ನಾಲ್ಕು ತಿಂಗಳವರೆಗೆ ಕೊಡುಗೆಯಲ್ಲಿದ್ದ ಫೇಸ್‌ಲಿಫ್ಟ್ ಆಗಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಗಳ ಪರಿಚಯಾತ್ಮಕ ಬೆಲೆಗಳು ಈಗ ಕೊನೆಗೊಳ್ಳಲಿವೆ.

 ಬೆಲೆ ಏರಿಕೆಗೆ ಕಾರಣ

 ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಈ ಬೆಲೆ ಏರಿಕೆಯ ಹಿಂದಿನ ಕಾರಣ ಎಂದು ಟಾಟಾ ಹೇಳಿದೆ. ಇದು EV ಗಳನ್ನು ಒಳಗೊಂಡಂತೆ ಅದರ ಇತರ ಶ್ರೇಣಿಯಾದ್ಯಂತ 0.7 ಪ್ರತಿಶತದಷ್ಟು (ಸರಾಸರಿ) ಬೆಲೆಗಳನ್ನು ಹೆಚ್ಚಿಸಲಿದೆ.

 ಮಾಡೆಲ್

 ಬೆಲೆ ಶ್ರೇಣಿ

 ಟಿಯಾಗೋ

 ರೂ. 5.60 ಲಕ್ಷದಿಂದ ರೂ. 8.20 ಲಕ್ಷದವರೆಗೆ

 ಟಿಯಾಗೋ NRG

 ರೂ. 6.70 ಲಕ್ಷದಿಂದ ರೂ. 8.10 ಲಕ್ಷದವರೆಗೆ

 ಪಂಚ್

 ರೂ. 6 ಲಕ್ಷದಿಂದ ರೂ. 10.10 ಲಕ್ಷದವರೆಗೆ

 ಟಿಗೋರ್

 ರೂ. 6.30 ಲಕ್ಷದಿಂದ ರೂ. 8.95 ಲಕ್ಷದವರೆಗೆ

 ಆಲ್ಟ್ರೋಜ್

 ರೂ. 6.60 ಲಕ್ಷದಿಂದ ರೂ. 10.74 ಲಕ್ಷದವರೆಗೆ

 ನೆಕ್ಸಾನ್

 ರೂ. 8.10 ಲಕ್ಷದಿಂದ ರೂ. 15.50 ಲಕ್ಷದವರೆಗೆ

 ಹ್ಯಾರಿಯರ್

 ರೂ. 15.49 ಲಕ್ಷದಿಂದ ರೂ. 26.44 ಲಕ್ಷದವರೆಗೆ

 ಸಫಾರಿ

 ರೂ. 16.19 ಲಕ್ಷದಿಂದ ರೂ. 27.34 ಲಕ್ಷದವರೆಗೆ

 Tata.ev ಲೈನ್ಅಪ್

 

 ಟಿಯಾಗೋ EV

 ರೂ. 8.69 ಲಕ್ಷದಿಂದ ರೂ. 12.04 ಲಕ್ಷದವರೆಗೆ

 ಟಿಗೋರ್ EV

 ರೂ. 12.49 ಲಕ್ಷದಿಂದ ರೂ. 13.75 ಲಕ್ಷದವರೆಗೆ

 ಪಂಚ್ EV

 ರೂ. 11 ಲಕ್ಷದಿಂದ ರೂ. 15.49 ಲಕ್ಷದವರೆಗೆ

 ನೆಕ್ಸಾನ್ EV

 ರೂ. 14.74 ಲಕ್ಷದಿಂದ ರೂ. 19.94 ಲಕ್ಷದವರೆಗೆ

​​

Tata Tiago
Tata Safari

 ಟಾಟಾದ ಪ್ರಸ್ತುತ ಲೈನ್ಅಪ್ ಒಟ್ಟು 12 ಮಾದರಿಗಳನ್ನು ಒಳಗೊಂಡಿದೆ, ಇದರಲ್ಲಿ ನಾಲ್ಕು EVಗಳು ಕೂಡ ಸೇರಿವೆ. ಟಾಟಾದ ಅತ್ಯಂತ ಕೈಗೆಟುಕುವ ಬೆಲೆಯ ಮಾಡೆಲ್ ಟಿಯಾಗೊ (ರೂ. 5.60 ಲಕ್ಷದಿಂದ ಆರಂಭವಾಗುತ್ತದೆ) ಆಗಿದ್ದು, ಹಾಗೆಯೇ ಸಫಾರಿಯು ಅತ್ಯಂತ ದುಬಾರಿ ಬೆಲೆಯ (ಟಾಪ್ ಎಂಡ್ ಗೆ ರೂ. 27.34 ಲಕ್ಷ) ಕಾರಾಗಿದೆ.

 ಇನ್ನಷ್ಟು ಓದಿ: ಟಾಟಾ ಪಂಚ್ EV ವರ್ಸಸ್ ಟಾಟಾ ಟಿಯಾಗೊ EV ವರ್ಸಸ್ ಟಾಟಾ ಟಿಗೊರ್ EV ವರ್ಸಸ್ ಟಾಟಾ ನೆಕ್ಸಾನ್ EV: ಸ್ಪೆಸಿಫಿಕೇಷನ್ ಹೋಲಿಕೆ

 ಟಾಟಾದ ಮುಂದಿನ ಯೋಜನೆಗಳು

Tata Harrier EV

 ಟಾಟಾ 2024 ರಲ್ಲಿ ಏಳು ಹೊಸ ಕಾರುಗಳನ್ನು ಲಾಂಚ್ ಮಾಡಲಿದ್ದು, ಇದು ಇತ್ತೀಚಿನ ಪಂಚ್ EV ಯ ಲಾಂಚ್ ನ ಮೂಲಕ ಈಗಾಗಲೇ ಶುರುವಾಗಿದೆ. ಟಾಟಾ ಇತ್ತೀಚೆಗೆ ಹ್ಯಾರಿಯರ್ EV ಡಿಸೈನ್ ಅನ್ನು ಟ್ರೇಡ್‌ಮಾರ್ಕ್ ಮಾಡಿದೆ. ಇದು 2024 ರ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

 ಇನ್ನಷ್ಟು ಓದಿ: ಟಾಟಾ ನೆಕ್ಸಾನ್ AMT

was this article helpful ?

Write your Comment on Tata ನೆಕ್ಸಾನ್‌

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ ಇ vitara
    ಮಾರುತಿ ಇ vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience