Login or Register ಅತ್ಯುತ್ತಮ CarDekho experience ಗೆ
Login

ಬುಕಿಂಗ್‌ ಪ್ರಕ್ರಿಯೆ ಆರಂಭಿಸಿದ ಮಾರುತಿ ಇನ್ವಿಕ್ಟೊ

published on ಜೂನ್ 20, 2023 02:33 pm by tarun for ಮಾರುತಿ ಇನ್ವಿಕ್ಟೋ

ಇನ್ವಿಕ್ಟೊ ಮಾರುತಿ ಕಂಪೆನಿಯ ಅತ್ಯಂತ ದುಬಾರಿ ಕಾರಾಗಿದ್ದು, ಇದರ ಬೆಲೆ ಸುಮಾರು ರೂ. 19 ಲಕ್ಷಗಳಾಗಿವೆ (ಎಕ್ಸ್-ಶೋರೂಮ್)

  • ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಈಗ ರೂ.25000 ಕ್ಕೆ ಬುಕಿಂಗ್‌ಗಳು ತೆರೆದಿವೆ.

  • ಇದು ಇನೋವಾ ಹೈಕ್ರಾಸ್‌ನ ರೀಬ್ಯಾಡ್ಜ್‌ನ ಆವೃತ್ತಿಯಾಗಿದ್ದು, ಸ್ವಲ್ಪ ವಿಭಿನ್ನವಾದ ಎಕ್ಸ್‌ಟೀರಿಯರ್ ವಿನ್ಯಾಸವನ್ನು ಪಡೆದಿದೆ.

  • 10-ಇಂಚಿನ ಟಚ್‌ಸ್ಕ್ರೀನ್ ಯೂನಿಟ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಡ್ಯುಯಲ್-ಝೋನ್ ಎಸಿ (ಮುಂಭಾಗ ಮತ್ತು ಹಿಂಭಾಗ). 260-ಡಿಗ್ರಿ ಕ್ಯಾಮರಾ ಮತ್ತು ADAS ಅನ್ನು ಪಡೆಯುತ್ತದೆ.

  • ಈ ಇನ್ವಿಕ್ಟೊ ಸ್ಟ್ರಾಂಗ್ ಹೈಬ್ರಿಡ್ ಆಯ್ಕೆಯೊಂದಿಗೆ ಹೈಕ್ರಾಸ್‌ನ 2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.

  • ಇದರ ಬೆಲೆಗಳು ಸುಮಾರು ರೂ.19 ಲಕ್ಷದಿಂದ ಆರಂಭವಾಗಬಹುದು.

ನೀವು ಈಗ ಜುಲೈ 5 ರಂದು ಇದರ ಬಿಡುಗಡೆಗೂ ಮುಂಚಿತವಾಗಿ ಈ ಮಾರುತಿ ಇನ್ವಿಕ್ಟೊ ಎಂಪಿವಿಯನ್ನು ನೀವು ರೂ. 25000 ಕ್ಕೆ ಬುಕ್ ಮಾಡಬಹುದು. ಇದು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟವಾಗಲಿದೆ ಮತ್ತು ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಮಾರುತಿಯ ವಾಹನವಾಗಿದೆ.

( ಉಲ್ಲೇಖಕ್ಕಾಗಿ ಟೊಯೊಟಾ ಇನೋವಾ ಹೈಕ್ರಾಸ್ ಚಿತ್ರವನ್ನು ಬಳಸಲಾಗಿದೆ)

ಕಾರುಗಳು ಮತ್ತು ತಂತ್ರಜ್ಞಾನಗಳನ್ನು ವಿನಿಮಯ ಮಾಡಿಕೊಳ್ಳಲು ಟೊಯೊಟಾ-ಸುಝುಕಿ ಜಾಗತಿಕ ಪಾಲುದಾರಿಕೆಯನ್ನು ಹೊಂದಿದ್ದು, ಇನ್ವಿಕ್ಟೊ ಮೂಲತಃ ಟೊಯೊಟಾ ಇನೋವಾ ಹೈಕ್ರಾಸ್‌ನ ರೀಬ್ಯಾಡ್ಜ್ ಮಾಡಿದ ಆವೃತ್ತಿಯಾಗಿದೆ. ಗ್ರ್ಯಾಂಡ್ ವಿಟಾರಾ/ಹೈರೈಡರ್ ಮತ್ತು ಗ್ಲಾಂಝಾ/ಬಲೆನೊದಂತೆಯೇ, ಈ ಇನ್ವಿಕ್ಟೊ ಹೈಕ್ರಾಸ್‌ಗಿಂತ ಸ್ವಲ್ಪ ವಿಭಿನ್ನವಾದ ಎಕ್ಸ್‌ಟೀರಿಯರ್ ವಿನ್ಯಾಸವನ್ನು ಹೊಂದಿರುತ್ತದೆ.

ಸಂಬಂಧಿತ: ಸಿಡಿ ನುಡಿ: ಮಾರುತಿ ಎಂಪಿವಿ ಮೇಲೆ ಹೆಚ್ಚುವರಿ ರೂ. 30000 ಪಾವತಿಸಲು ತಯಾರಾಗಿ

ಇನೊವಾ ಹೈಕ್ರಾಸ್ ಆಧಾರಿತ ಇನ್ವಿಕ್ಟೊ, ಅಲಂಕಾರಿಕ ಮತ್ತು ಪ್ರೀಮಿಯಂ ಇಂಟೀರಿಯರ್ ಅನ್ನು ಪಡೆಯುತ್ತದೆ. ಫೀಚರ್‌ಗಳ ವಿಷಯದಲ್ಲಿ, ಇದು ವಿಹಂಗಮ ಸನ್‌ರೂಫ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಡ್ಯುಯಲ್-ಝೋನ್ ಎಸಿ, ಮತ್ತು 10-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೇನ್‌ಮೆಂಟ್ ಅನ್ನು ಪಡೆಯುತ್ತದೆ. ಸುರಕ್ಷತೆಯ ವಿಷಯಕ್ಕೆ ಬಂದರೆ, ಇದು 360-ಡಿಗ್ರಿ ಕ್ಯಾಮರಾ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಮತ್ತು ರಾಡಾರ್-ಆಧಾರಿತ ADAS ತಂತ್ರಜ್ಞಾನವನ್ನು ಪಡೆಯುತ್ತದೆ.

ಹೈಬ್ರಿಡೈಸೇಷನ್ ಆಯ್ಕೆಯೊಂದಿಗೆ 2-ಲೀಟರ್ ಪೆಟ್ರೋಲ್ ಎಂಜಿನ್ ಆಗಿರುವ ಹೈಕ್ರಾಸ್‌ನ ಪವರ್‌ಟ್ರೇನ್ ಅನ್ನು ಈ ಇನ್ವಿಕ್ಟೊ ಪಡೆಯುತ್ತದೆ. ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ 186PS ವರೆಗೆ ಬಿಡುಗಡೆ ಮಾಡುತ್ತದೆ ಮತ್ತು 23.24kmpl ವರೆಗಿನ ದಕ್ಷತೆಯನ್ನು ಕ್ಲೈಮ್ ಮಾಡುತ್ತದೆ. ಇದೇ ರೀತಿಯ ಅಂಕಿಅಂಶಗಳು ಮತ್ತು ದಕ್ಷತೆಯನ್ನು ನಾವು ಇನ್ವಿಕ್ಟೊದಲ್ಲಿ ಸಹ ನೋಡಬಹುದು.

ಹೋಲಿಕೆ: ಕಿಯಾ ಕ್ಯಾರೆನ್ಸ್ ಲಕ್ಸುರಿ ಪ್ಲಸ್ ವರ್ಸಸ್ ಟೊಯೊಟಾ ಇನೋವಾ GX

ಈ ಇನೊವಾ ಹೈಕ್ರಾಸ್‌ನ ಬೆಲೆಯು ರೂ 18.55 ಲಕ್ಷದಿಂದ ರೂ 29.99 ಲಕ್ಷದವರೆಗೆ (ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ. ಮಾರುತಿ ಇನ್ವಿಕ್ಟೊದ ಬೆಲೆಯು ಇದಕ್ಕಿಂತ ಸ್ವಲ್ಪ ಹೆಚ್ಚು ಅಂದರೆ ರೂ. 19 ಲಕ್ಷವಿರಬಹುದೆಂದು ನಾವು ನಿರೀಕ್ಷಿಸುತ್ತೇವೆ. ಇದು ಯಾವುದೇ ನೇರ ಪೈಪೋಟಿಯನ್ನು ಹೊಂದಿರದಿದ್ದರೂ, ಇನ್ವಿಕ್ಟೊ ಅನ್ನು ಕಿಯಾ ಕ್ಯಾರೆನ್ಸ್‌ಗೆ ಹೆಚ್ಚು ಪ್ರೀಮಿಯಂ ಪರ್ಯಾಯವಾಗಿ ನಿಲ್ಲಿಸಬಹುದು.

t
ಅವರಿಂದ ಪ್ರಕಟಿಸಲಾಗಿದೆ

tarun

  • 12 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಇನ್ವಿಕ್ಟೊ

Read Full News

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ