Citroen eC3: ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಗಳಲ್ಲಿ ಶೂನ್ಯ ಸ್ಟಾರ್ ಸಂಪಾದನೆ
ಸಿಟ್ ರೊಯೆನ್ ಇಸಿ3 ಗಾಗಿ rohit ಮೂಲಕ ಮಾರ್ಚ್ 22, 2024 08:33 pm ರಂದು ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಅದರ ಬಾಡಿಶೆಲ್ ಅನ್ನು 'ಸ್ಟೇಬಲ್' ಎಂದು ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಲೋಡಿಂಗ್‌ಗಳನ್ನು ತಡೆದುಕೊಳ್ಳುವ ಸಮರ್ಥವನ್ನು ಹೊಂದಿದ್ದರೂ ಕೂಡ, ಇದು ಸುರಕ್ಷತಾ ಫೀಚರ್ ಗಳನ್ನು ಹೊಂದಿರದ ಕಾರಣ ಮತ್ತು ಅಸಮರ್ಪಕ ರಕ್ಷಣೆಯ ಕಾರಣ ಕಳಪೆ ಸ್ಕೋರ್ ಪಡೆದಿದೆ.
-
ಸಿಟ್ರೋನ್ eC3 ವಯಸ್ಕರ ಸುರಕ್ಷತೆಯಲ್ಲಿ 0 ಸ್ಟಾರ್ ಮತ್ತು ಮಕ್ಕಳ ರಕ್ಷಣೆಯಲ್ಲಿ 1 ಸ್ಟಾರ್ ಅನ್ನು ಪಡೆದಿದೆ.
-
ವಯಸ್ಕರ ರಕ್ಷಣೆಯಲ್ಲಿ ಇದು 34 ಅಂಕಗಳಲ್ಲಿ 20.86 ಅಂಕಗಳನ್ನು ಗಳಿಸಿದೆ.
-
ಸಿಟ್ರೋನ್ EV ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 10.55 ಅನ್ನು ಪಡೆದುಕೊಂಡಿದೆ.
-
ಸುರಕ್ಷತಾ ಫೀಚರ್ ಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು ಮಾತ್ರ ಸೇರಿವೆ.
-
ಬೆಲೆಯು ರೂ. 11.61 ಲಕ್ಷದಿಂದ ರೂ 13.35 ಲಕ್ಷದವರೆಗೆ (ಎಕ್ಸ್ ಶೋರೂಂ ದೆಹಲಿ) ಇದೆ.
ಗ್ಲೋಬಲ್ NCAP ನಡೆಸಿದ ಇತ್ತೀಚಿನ ಸುತ್ತಿನ ಕ್ರ್ಯಾಶ್ ಟೆಸ್ಟ್ ಗಳಲ್ಲಿ, ಸಿಟ್ರೋನ್ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ವಯಸ್ಕ ಪ್ಯಾಸೆಂಜರ್ ರಕ್ಷಣೆಗಾಗಿ ಶೂನ್ಯ-ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಗಾಗಿ ಒಂದು ಸ್ಟಾರ್ ಅನ್ನು ಪಡೆದುಕೊಂಡಿದೆ. eC3 ಗಾಗಿ ಈ ಸುರಕ್ಷತಾ ಟೆಸ್ಟ್ #SaferCarsForIndia ಅಭಿಯಾನದ ಕೊನೆಯ ಟೆಸ್ಟ್ ಗಳಲ್ಲಿ ಒಂದಾಗಿದೆ, ಏಕೆಂದರೆ ಭಾರತಕ್ಕಾಗಿ ಡಿಸೈನ್ ಮಾಡಲಾದ ಎಲ್ಲಾ ಮಾಡೆಲ್ ಗಳು ಶೀಘ್ರದಲ್ಲೇ ಭಾರತ್ NCAP ನಿಂದ ಕ್ರ್ಯಾಶ್ ಟೆಸ್ಟ್ ಗಳಿಗೆ ಒಳಗಾಗಲಿವೆ.
ವಯಸ್ಕ ಪ್ಯಾಸೆಂಜರ್ ರಕ್ಷಣೆ (34 ಅಂಕಗಳಲ್ಲಿ 20.86)
ಮುಂಭಾಗದ ಇಂಪ್ಯಾಕ್ಟ್ (64 kmph)
ಸಿಟ್ರೋನ್ eC3 ಡ್ರೈವರ್ ಮತ್ತು ಪ್ರಯಾಣಿಕರ ತಲೆ ಮತ್ತು ಕುತ್ತಿಗೆಗೆ 'ಗುಡ್' ರಕ್ಷಣೆಯನ್ನು ನೀಡಿತು. ಆದರೆ, ಡ್ರೈವರ್ ಎದೆಯ ರಕ್ಷಣೆಗೆ 'ವೀಕ್', ಪ್ರಯಾಣಿಕರ ಎದೆಯ ರಕ್ಷಣೆಗೆ 'ಪೂರ್' ಎಂದು ರೇಟ್ ಮಾಡಲಾಗಿದೆ. ಡ್ರೈವರ್ ನ ಮೊಣಕಾಲುಗಳಿಗೆ ನೀಡಲಾದ ರಕ್ಷಣೆಯನ್ನು 'ಮಾರ್ಜಿನಲ್' ಎಂದು ಕರೆಯಲಾಗಿದೆ, ಆದರೆ ಪ್ರಯಾಣಿಕರ ಮೊಣಕಾಲುಗಳಿಗೆ 'ಗುಡ್' ರಕ್ಷಣೆಯನ್ನು ತೋರಿಸಲಾಗಿದೆ.
ಡ್ರೈವರ್ ನ ಟಿಬಿಯಾಸ್ 'ಮಾರ್ಜಿನಲ್ ಮತ್ತು ಗುಡ್' ರಕ್ಷಣೆಯನ್ನು ತೋರಿಸಿದರೆ, ಪ್ರಯಾಣಿಕರ ಟಿಬಿಯಾಸ್ 'ಗುಡ್' ರಕ್ಷಣೆಯನ್ನು ತೋರಿಸಿದೆ. ಅದರ ಫುಟ್‌ವೆಲ್ ಜಾಗವನ್ನು 'ಆನ್ ಸ್ಟೇಬಲ್' ಎಂದು ಪರಿಗಣಿಸಲಾಗಿದೆ. ಅದರ ಬಾಡಿಶೆಲ್ ಅನ್ನು 'ಸ್ಟೇಬಲ್' ಎಂದು ರೇಟ್ ಮಾಡಲಾಗಿದೆ ಮತ್ತು ಇದು ಹೆಚ್ಚಿನ ಲೋಡಿಂಗ್ ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಲಾಗಿದೆ.
ಸೈಡ್ ಇಂಪ್ಯಾಕ್ಟ್ (50 kmph)
ಸೈಡ್ ಇಂಪ್ಯಾಕ್ಟ್ ಟೆಸ್ಟ್ ನಲ್ಲಿ, ತಲೆಯ ರಕ್ಷಣೆಯನ್ನು 'ಮಾರ್ಜಿನಲ್' ಎಂದು ಪರಿಗಣಿಸಲಾಗಿದೆ, ಆದರೆ ಎದೆಗೆ ಅದು 'ಅಡಿಕ್ವೆಟ್' ಎಂದು ಹೇಳಲಾಗಿದೆ. eC3 ವಯಸ್ಕರಿಗೆ ಹೊಟ್ಟೆ ಮತ್ತು ಸೊಂಟದ ಭಾಗಕ್ಕೆ 'ಗುಡ್' ರಕ್ಷಣೆಯನ್ನು ನೀಡಿದೆ.
ಇದನ್ನು ಕೂಡ ಓದಿ: ಸಿಟ್ರೋನ್ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ವರ್ಷದ ಅಂತ್ಯದ ವೇಳೆಗೆ ಭಾರತದಾದ್ಯಂತ 200 ಸ್ಥಳಗಳಿಗೆ ಹೆಚ್ಚಿಸಲು ಪ್ಲಾನ್ ಮಾಡಿದೆ.
ಸೈಡ್ ಪೋಲ್ ಇಂಪ್ಯಾಕ್ಟ್
ಸಿಟ್ರೋನ್ ತನ್ನ eC3 ನಲ್ಲಿ ಸೈಡ್ ಏರ್‌ಬ್ಯಾಗ್‌ಗಳನ್ನು ನೀಡದ ಕಾರಣ ಯಾವುದೇ ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್ ಅನ್ನು ನಡೆಸಲಾಗಿಲ್ಲ. ಫ್ರೆಂಚ್ ಕಾರು ತಯಾರಕ ಕಂಪನಿಯು ತನ್ನ ಭಾರತೀಯ ಶ್ರೇಣಿಯಲ್ಲಿನ ಎಲ್ಲಾ ಮಾಡೆಲ್ ಗಳು ಜುಲೈ 2024 ರಿಂದ ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳೊಂದಿಗೆ ಬರುತ್ತವೆ ಎಂದು ಘೋಷಿಸಿದೆ.
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)
ಸಿಟ್ರೋನ್ EVಯು ESC ಅನ್ನು ಸ್ಟ್ಯಾಂಡರ್ಡ್ ಫೀಚರ್ ಆಗಿ ನೀಡುತ್ತಿಲ್ಲ. ಇದು GNCAP ಮಾನದಂಡಗಳ ಪ್ರಕಾರ ಈಗ ಮೂಲಭೂತ ಅವಶ್ಯಕತೆಯಾಗಿದೆ. ಅಲ್ಲದೆ, ಸೀಟ್‌ಬೆಲ್ಟ್ ರಿಸ್ಟ್ರೈನ್ಟ್ ಸಿಸ್ಟಮ್ ಕೂಡ ಟೆಸ್ಟ್ ಏಜೆನ್ಸಿಯ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ಗೆ 0-ಸ್ಟಾರ್ ರೇಟಿಂಗ್ ಅನ್ನು ನೀಡಲಾಯಿತು.
ಮಕ್ಕಳ ರಕ್ಷಣೆ (49 ಅಂಕಗಳಲ್ಲಿ 10.55)
ಮುಂಭಾಗದ ಇಂಪ್ಯಾಕ್ಟ್ (64 kmph)
3 ವರ್ಷ ವಯಸ್ಸಿನ ಮಗುವಿನ ಸೀಟ್ ಅನ್ನು ಮುಂದಕ್ಕೆ ಮುಖ ಮಾಡಿ ಇರಿಸಲಾಗಿತ್ತು ಮತ್ತು ಮುಂಭಾಗದ ಇಂಪ್ಯಾಕ್ಟ್ ಸಮಯದಲ್ಲಿ ತಲೆಗೆ ಹೊಡೆತ ಬೀಳುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, 1.5 ವರ್ಷ ವಯಸ್ಸಿನ ಡಮ್ಮಿಯ ಚೈಲ್ಡ್ ಸೀಟ್ ಅನ್ನು ಹಿಂಭಾಗಕ್ಕೆ ಮುಖಮಾಡಲಾಗಿತ್ತು ಮತ್ತು ಅದು ತಲೆಗೆ ಸಂಪೂರ್ಣ ರಕ್ಷಣೆಯನ್ನು ನೀಡಿತು.
ಸೈಡ್ ಇಂಪ್ಯಾಕ್ಟ್ (50 kmph)
ಸೈಡ್ ಇಂಪ್ಯಾಕ್ಟ್ ಟೆಸ್ಟ್ ನಲ್ಲಿ, ಇದು ಸಂಪೂರ್ಣ ರಕ್ಷಣೆಯನ್ನು ಒದಗಿಸಿತು ಆದರೆ ಅಪಘಾತದ ವೇಳೆ ತಲೆಗೆ ಗಾಯಗಳಾಗಿವೆ.
eC3 ಎಲ್ಲಾ ಸೀಟ್ ಪಾಯಿಂಟ್ ಗಳಲ್ಲಿ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಅಥವಾ ಎರಡು ISOFIX ಮೌಂಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುವುದಿಲ್ಲ. ಆ ಜಾಗದಲ್ಲಿ ಹಿಂಬದಿಯ ಮಕ್ಕಳ ಸೀಟ್ ಅನ್ನು ಸ್ಥಾಪಿಸಲು ಪ್ರಯಾಣಿಕರ ಏರ್‌ಬ್ಯಾಗ್ ಅನ್ನು ಆಫ್ ಮಾಡುವ ಆಯ್ಕೆಯನ್ನು ಸಿಟ್ರೋನ್ ಸೇರಿಸಿಲ್ಲ.
ಇದನ್ನು ಕೂಡ ಓದಿ: ಟಾಟಾ ಟಿಯಾಗೋ EV ಈ 2 ಹೊಸ ಫೀಚರ್ ಗಳೊಂದಿಗೆ ಹೆಚ್ಚು ಅನುಕೂಲತೆಯನ್ನು ಪಡೆದಿದೆ
ಸಿಟ್ರೋನ್ eC3 ಸುರಕ್ಷತಾ ಕಿಟ್
ಸಿಟ್ರೋನ್ ತನ್ನ eC3 ಅನ್ನು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಮುಂಭಾಗದ ಸೀಟ್‌ಬೆಲ್ಟ್ ರಿಮೈಂಡರ್‌ಗಳಂತಹ ಕೆಲವು ಮೂಲಭೂತ ಸುರಕ್ಷತಾ ಫೀಚರ್ ಗಳೊಂದಿಗೆ ಸಜ್ಜುಗೊಳಿಸಿದೆ.
ಸಿಟ್ರೋನ್ eC3 ಅನ್ನು ಮೂರು ವೇರಿಯಂಟ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ: ಲೈವ್, ಫೀಲ್ ಮತ್ತು ಶೈನ್. ಇದರ ಬೆಲೆಯು ರೂ 11.61 ಲಕ್ಷದಿಂದ ರೂ 13.35 ಲಕ್ಷದವರೆಗೆ (ಎಕ್ಸ್ ಶೋ ರೂಂ ದೆಹಲಿ) ಇದೆ. ಇದು MG ಕಾಮೆಟ್ EV ಮತ್ತು ಟಾಟಾ ಟಿಯಾಗೊ EV ಗೆ ಪ್ರತಿಸ್ಪರ್ಧಿಯಾಗಿದೆ.
ಇನ್ನಷ್ಟು ಓದಿ: eC3 ಆಟೋಮ್ಯಾಟಿಕ್