ಟಾಟಾ ಪಂಚ್ EV Vs ಸಿಟ್ರೋನ್ eC3: ಸ್ಪೆಸಿಫಿಕೇಷನ್ ಗಳ ಹೋಲಿಕೆ
ಟಾಟಾ ಪಂಚ್ ಇವಿ ಗಾಗಿ shreyash ಮೂಲಕ ಫೆಬ್ರವಾರಿ 01, 2024 11:35 am ರಂದು ಪ್ರಕಟಿಸಲಾಗಿದೆ
- 22 Views
- ಕಾಮೆಂಟ್ ಅನ್ನು ಬರೆಯಿರಿ
ಪಂಚ್ EV ಸಿಟ್ರೋನ್ eC3 ಗಿಂತ ಹೆಚ್ಚು ಟೆಕ್-ಲೋಡ್ ಆಗಿದೆ ಮತ್ತು ಅದರ ಜೊತೆಗೆ ಲಾಂಗ್-ರೇಂಜ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಕೂಡ ಪಡೆಯುತ್ತದೆ
ಟಾಟಾ ಪಂಚ್ EVಯು ಟಾಟಾದ ಈಗಾಗಲೇ ಪ್ರಬಲವಾಗಿರುವ ಆಲ್-ಎಲೆಕ್ಟ್ರಿಕ್ ಲೈನ್‌ಅಪ್‌ಗೆ ಇತ್ತೀಚಿನ ಸೇರ್ಪಡೆಯಾಗಿದೆ. ಈ ಮೈಕ್ರೊ SUV, ಅದರ ಆಲ್-ಎಲೆಕ್ಟ್ರಿಕ್ ಅವತಾರದಲ್ಲಿ, ಹೊಸ ಫೀಚರ್ ಗಳನ್ನು ಸಹ ಪಡೆದುಕೊಂಡಿದೆ. ಸೈಜ್ ಮತ್ತು ಬೆಲೆಯನ್ನು ಹೋಲಿಸಿದರೆ ಪಂಚ್ EV ಗೆ ಹತ್ತಿರದ ಪ್ರತಿಸ್ಪರ್ಧಿ ಎಂದರೆ ಸಿಟ್ರೋನ್ eC3. ಸ್ಪೆಕ್ಸ್‌ನಲ್ಲಿ eC3 ವಿರುದ್ಧ ಪಂಚ್ EV ಹೇಗೆ ಸ್ಪರ್ಧಿಸುತ್ತದೆ ಎಂಬುದನ್ನು ಈಗ ನೋಡೋಣ.
ಡೈಮೆನ್ಷನ್ಸ್
ಡೈಮೆನ್ಷನ್ಸ್ |
ಟಾಟಾ ಪಂಚ್ EV |
ಸಿಟ್ರೋನ್ eC3 |
ಉದ್ದ |
3857 ಮಿ.ಮೀ |
3981 ಮಿ.ಮೀ |
ಅಗಲ |
1742 ಮಿ.ಮೀ |
1733 ಮಿ.ಮೀ |
ಎತ್ತರ |
1633 ಮಿ.ಮೀ |
1604 ಮಿ.ಮೀ ವರೆಗೆ |
ವೀಲ್ ಬೇಸ್ |
2445 ಮಿ.ಮೀ |
2540 ಮಿ.ಮೀ |
ಬೂಟ್ ಸ್ಪೇಸ್ |
366 ಲೀಟರ್ (+14 ಲೀಟರ್ ಫ್ರಂಕ್ ಸ್ಟೋರೇಜ್) |
315 ಲೀಟರ್ |
-
ಸಿಟ್ರೋನ್ eC3 ಟಾಟಾ ಪಂಚ್ EV ಗಿಂತ ಉದ್ದವಾಗಿದೆ, ಆದರೆ ಪಂಚ್ EV ಸಿಟ್ರೋನ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ಗಿಂತ ಅಗಲ ಮತ್ತು ಎತ್ತರವಾಗಿದೆ.
-
ಹಾಗೆಯೇ, ಸಿಟ್ರೋನ್ eC3 ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ, ಏಕೆಂದರೆ ಇದರ ಉದ್ದ ಪಂಚ್ EV ಗಿಂತ ಜಾಸ್ತಿಯಾಗಿದೆ.
-
ಬೂಟ್ ಸ್ಪೇಸ್ ನೋಡಿದಾಗ, ಟಾಟಾ ಪಂಚ್ EV ಹಿಂಭಾಗದಲ್ಲಿ ಹೆಚ್ಚಿನ ಲಗೇಜ್ ಜಾಗವನ್ನು ಒದಗಿಸುವುದರ ಜೊತೆಗೆ ಮುಂಭಾಗದಲ್ಲಿ ಬಾನೆಟ್ ಅಡಿಯಲ್ಲಿ ಹೆಚ್ಚುವರಿ 14 ಲೀಟರ್ ಸ್ಟೋರೇಜ್ ನೊಂದಿಗೆ ಬರುತ್ತದೆ.
ಇದನ್ನು ಕೂಡ ಓದಿ: ಟಾಟಾ ಪಂಚ್ EV ವರ್ಸಸ್ ಸಿಟ್ರೋನ್ eC3 ವರ್ಸಸ್ ಟಾಟಾ ಟಿಯಾಗೊ EV ವರ್ಸಸ್ MG ಕಾಮೆಟ್ EV: ಬೆಲೆ ಹೋಲಿಕೆ
ಎಲೆಕ್ಟ್ರಿಕ್ ಪವರ್‌ಟ್ರೇನ್
ಸ್ಪೆಸಿಫಿಕೇಷನ್ಸ್ |
ಟಾಟಾ ಪಂಚ್ EV |
ಸಿಟ್ರೋನ್ eC3 |
|
ಸ್ಟ್ಯಾಂಡರ್ಡ್ |
ಲಾಂಗ್ ರೇಂಜ್ |
||
ಬ್ಯಾಟರಿ ಪ್ಯಾಕ್ |
25 kWh |
35 kWh |
29.2 kWh |
ಪವರ್ |
82 PS |
122 PS |
57 PS |
ಟಾರ್ಕ್ |
114 Nm |
190 Nm |
143 Nm |
ಕ್ಲೇಮ್ ಮಾಡಲಾಗಿರುವ ರೇಂಜ್ |
315 ಕಿ.ಮೀ |
421 ಕಿ.ಮೀ |
320 ಕಿ.ಮೀ |
-
ಪಂಚ್ EV ಮತ್ತು eC3, ಎರಡನ್ನೂ 50 kW DC ಫಾಸ್ಟ್ ಚಾರ್ಜರ್ ಬಳಸಿ ಚಾರ್ಜ್ ಮಾಡಿದಾಗ ಸಮಾನವಾದ ಚಾರ್ಜಿಂಗ್ ಸಮಯವನ್ನು ಹೊಂದಿದೆ.
-
ಪಂಚ್ EV ಗ್ರಾಹಕರು ಚಾರ್ಜಿಂಗ್ ಸಮಯವನ್ನು ಕಡಿಮೆ ಮಾಡಲು 50,000 ಹೆಚ್ಚುವರಿ ಹಣವನ್ನು ಪಾವತಿಸುವ ಮೂಲಕ 7.2kW AC ಫಾಸ್ಟ್ ಚಾರ್ಜರ್ ಅನ್ನು ಪಡೆಯಬಹುದು.
-
ಮತ್ತೊಂದೆಡೆ eC3, 3.3 kW AC ಚಾರ್ಜರ್‌ನ ಆಯ್ಕೆಯನ್ನು ಮಾತ್ರ ಪಡೆಯುತ್ತದೆ, ಇದು ಬ್ಯಾಟರಿಯನ್ನು 10 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಲು 10 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಚಾರ್ಜಿಂಗ್
ಚಾರ್ಜರ್ |
ಟಾಟಾ ಪಂಚ್ EV |
ಸಿಟ್ರೋನ್ eC3 |
|
ಸ್ಟ್ಯಾಂಡರ್ಡ್ |
ಲಾಂಗ್ ರೇಂಜ್ |
||
DC ಫಾಸ್ಟ್ ಚಾರ್ಜರ್ (10-80%) |
56 ನಿಮಿಷಗಳು |
56 ನಿಮಿಷಗಳು |
57 ನಿಮಿಷಗಳು |
7.2 kW AC ಚಾರ್ಜರ್ (10-100 %) |
3.5 ಗಂಟೆಗಳು |
5 ಗಂಟೆಗಳು |
ಅನ್ವಯವಾಗುವುದಿಲ್ಲ |
15 A / 3.3 kW ಚಾರ್ಜರ್ (10-100 %) |
9.4 ಗಂಟೆಗಳು |
13.5 ಗಂಟೆಗಳು |
10.5 ಗಂಟೆಗಳು |
-
ಪಂಚ್ EV ಮತ್ತು eC3, ಎರಡನ್ನೂ 50 kW DC ಫಾಸ್ಟ್ ಚಾರ್ಜರ್ ಅನ್ನು ಬಳಸಿ ಚಾರ್ಜ್ ಮಾಡಿದಾಗ ಸಮಾನ ಚಾರ್ಜಿಂಗ್ ಸಮಯವನ್ನು ಹೊಂದಿದೆ.
-
ಚಾರ್ಜಿಂಗ್ ಸಮಯವನ್ನು ಕಡಿಮೆ ಮಾಡಲು ಗ್ರಾಹಕರು ಹೆಚ್ಚುವರಿಯಾಗಿ 50,000 ರೂಪಾಯಿಗಳನ್ನು ಪಾವತಿಸಿ 7.2kW AC ಫಾಸ್ಟ್ ಚಾರ್ಜರ್ ಅನ್ನು ಪಡೆಯಬಹುದು.
-
ಮತ್ತೊಂದೆಡೆ eC3 ಕೇವಲ 3.3 kW AC ಚಾರ್ಜರ್‌ನ ಆಯ್ಕೆಯನ್ನು ಪಡೆಯುತ್ತದೆ, ಇದು ಬ್ಯಾಟರಿಯನ್ನು 10 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಲು 10 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಇದನ್ನು ಕೂಡ ಓದಿ: 2025 ರ ಅಂತ್ಯದ ವೇಳೆಗೆ ಲಾಂಚ್ ಆಗಲಿರುವ ಎಲ್ಲಾ ಟಾಟಾ EV ಗಳ ವಿವರಗಳು ಇಲ್ಲಿವೆ
ಪ್ರಮುಖ ಫೀಚರ್ ಗಳು
ಟಾಟಾ ಪಂಚ್ EV |
ಸಿಟ್ರೋನ್ eC3 |
|
|
-
ಟಾಟಾ ಪಂಚ್ EV ಸಿಟ್ರೋನ್ eC3 ಗಿಂತ ಹೆಚ್ಚಿನ ಅನುಕೂಲ ಮತ್ತು ಸೌಕರ್ಯಗಳನ್ನು ನೀಡುತ್ತದೆ ಮತ್ತು ಕೆಲವು ವಿಷಯದಲ್ಲಿ ಅದರ ಮೇಲಿನ ಸೆಗ್ಮೆಂಟ್ ನಲ್ಲಿರುವ ಕಾರುಗಳಿಗಿಂತ ಹೆಚ್ಚು ಫೀಚರ್ ಗಳನ್ನು ನೀಡುತ್ತದೆ
-
ಅದರ ಸೈಜ್ ನಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಸೌಕರ್ಯಗಳನ್ನು ನೀಡುವ ಏಕೈಕ ಎಲೆಕ್ಟ್ರಿಕ್ ಮೈಕ್ರೋ-SUVಯಾಗಿ ಪಂಚ್ EV ಎದ್ದು ಕಾಣುತ್ತದೆ.
-
ಪಂಚ್ EV ಯ ಬೇಸ್-ಸ್ಪೆಕ್ ವೇರಿಯಂಟ್ ಬೆಲೆಯು 10.99 ಲಕ್ಷ (ಎಕ್ಸ್-ಶೋರೂಂ) ಆಗಿದ್ದು, ಇದು eC3 ನ ಬೇಸ್-ಸ್ಪೆಕ್ ವೇರಿಯಂಟ್‌ಗಿಂತ ರೂ. 62,000 ಕಡಿಮೆ ಬೆಲೆಯನ್ನು ಹೊಂದಿದೆ ಆದರೆ ಇದು LED ಹೆಡ್‌ಲೈಟ್‌ಗಳು, ಕೂಲ್ಡ್ ಗ್ಲೋವ್‌ಬಾಕ್ಸ್, ಆಟೋಮ್ಯಾಟಿಕ್ AC, ಏರ್ ಪ್ಯೂರಿಫೈಯರ್ ಮತ್ತು ಮಲ್ಟಿ-ಮೋಡ್ ರೀಜನರೇಟಿವ್ ಬ್ರೇಕಿಂಗ್ ಇವೆಲ್ಲ ಫೀಚರ್ ಗಳನ್ನು ಒಳಗೊಂಡಿದೆ. ಕುತೂಹಲಕಾರಿ ವಿಷಯವೆಂದರೆ, ಈ ಫೀಚರ್ ಗಳನ್ನು ಸಿಟ್ರೋನ್ eC3 ತನ್ನ ರೂ 13 ಲಕ್ಷ ಬೆಲೆಯ ಟಾಪ್-ಸ್ಪೆಕ್ ವೇರಿಯಂಟ್ ನಲ್ಲಿ ಕೂಡ ನೀಡುತ್ತಿಲ್ಲ.
-
ಟಾಟಾದ ಮೈಕ್ರೋ ಎಲೆಕ್ಟ್ರಿಕ್ SUV 6 ಏರ್‌ಬ್ಯಾಗ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನಂತಹ ಹೆಚ್ಚಿನ ಸುರಕ್ಷತಾ ಫೀಚರ್ ಗಳನ್ನು ಕೂಡ ನೀಡುತ್ತದೆ.
-
ಸಿಟ್ರೋನ್ ನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ನಲ್ಲಿ ಆಟೋಮ್ಯಾಟಿಕ್ AC ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ಕೆಲವು ಪ್ರಮುಖ ಫೀಚರ್ ಗಳು ಲಭ್ಯವಿಲ್ಲ, ಈ ಫೀಚರ್ ಗಳು ಈಗ eC3 ಗಿಂತ ಕಡಿಮೆ ಬೆಲೆಯ ಕಾರುಗಳಲ್ಲಿ ಕೂಡ ಲಭ್ಯವಿದೆ.
ಬೆಲೆ
ಟಾಟಾ ಪಂಚ್ EV |
ಸಿಟ್ರೋನ್ eC3 |
ರೂ 10.99 ಲಕ್ಷದಿಂದ ರೂ 15.49 ಲಕ್ಷ (ಪರಿಚಯಾತ್ಮಕ) |
ರೂ 11.61 ಲಕ್ಷದಿಂದ ರೂ 13 ಲಕ್ಷ |
ತೀರ್ಪು
ಟಾಟಾ ಪಂಚ್ EV ಅದರ ಸಮಗ್ರ ಫೀಚರ್ ಗಳ ಪಟ್ಟಿ ಮತ್ತು ಲಾಂಗ್ ರೇಂಜ್ ಆಯ್ಕೆಗಳಿಂದಾಗಿ ಸಿಟ್ರೊಯೆನ್ eC3 ಗಿಂತ ಹೆಚ್ಚಿನ ಮೌಲ್ಯದ ಆಯ್ಕೆಯಾಗಿ ಹೊರಹೊಮ್ಮುತ್ತದೆ. ಸಿಟ್ರೋನ್ ತನ್ನ eC3 ನ ಟಾಪ್-ಸ್ಪೆಕ್ ಟ್ರಿಮ್ ನಲ್ಲಿ ಕೂಡ ಕೆಲವು ಗಮನಾರ್ಹ ಫೀಚರ್ ಗಳನ್ನು ನೀಡಿಲ್ಲ, ಮತ್ತು ಇದು ಯಾವುದೇ ಲಾಂಗ್-ರೇಂಜ್ ಬ್ಯಾಟರಿ ಆಯ್ಕೆಯನ್ನು ಹೊಂದಿಲ್ಲ. ಹಾಗಾದರೆ, ನೀವು ಇವೆರಡರಲ್ಲಿ ಯಾವ ಎಲೆಕ್ಟ್ರಿಕ್ ಮಾಡೆಲ್ ಅನ್ನು ಖರೀದಿಸಲು ಬಯಸುತ್ತೀರಿ ಮತ್ತು ಏಕೆ? ಕೆಳಗೆ ಕಾಮೆಂಟ್ ಮಾಡಿ ನಮಗೆ ತಿಳಿಸಿ.
ಇನ್ನಷ್ಟು ಓದಿ: ಪಂಚ್ ಇವಿ ಆಟೋಮ್ಯಾಟಿಕ್