Login or Register ಅತ್ಯುತ್ತಮ CarDekho experience ಗೆ
Login

ದಕ್ಷಿಣ ಆಫ್ರಿಕಾದಲ್ಲಿ ಮೇಡ್-ಇನ್-ಇಂಡಿಯಾ C3 ಬಿಡುಗಡೆಗೊಳಿಸಿದಸಿಟ್ರಾನ್

published on ಜೂನ್ 02, 2023 02:00 pm by ansh for ಸಿಟ್ರೊನ್ ಸಿ3

ಇದನ್ನು ಕೇವಲ ಒಂದು ಪವರ್‌ಟ್ರೇನ್‌ನೊಂದಿಗೆ ಒಂದು ವೇರಿಯೆಂಟ್‌ನಲ್ಲಿ ನೀಡಲಾಗುತ್ತಿದೆ

  • ಮಿಡ್-ಸ್ಪೆಕ್ ಫೀಲ್ ವೇರಿಯೆಂಟ್‌ನಲ್ಲಿ 82PS, 1.2-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಇಂಜಿನ್‌ನೊಂದಿಗೆ ಮಾತ್ರ ನೀಡಲಾಗಿದೆ.
  • ಇದು 10-ಇಂಚು ಟಚ್‌ಸ್ಕ್ರೀನ್ ಇನ್ಫೊಟೇನ್‌ಮೆಂಟ್ ಡಿಸ್‌ಪ್ಲೇ, ಎತ್ತರ ಹೊಂದಿಸಬಲ್ಲ ಡ್ರೈವರ್ ಸೀಟ್, ಮ್ಯಾನುವಲ್ AC ಮತ್ತು ಡ್ಯುಯಲ್-ಫ್ರಂಟ್ ಏರ್‌ಬ್ಯಾಗ್‌ಗಳನ್ನು ಫೀಚರ್‌ಗಳ ಪಟ್ಟಿಯಲ್ಲಿ ಪಡೆದಿದೆ.
  • ತನ್ನ ಉತ್ತಮ ಸುಸಜ್ಜಿತ ಜಾಗತಿಕ ಪುನರಾವರ್ತನೆಯಾದ ಮೂಲ C3 ಹ್ಯಾಚ್‌ಬ್ಯಾಕ್‌ ಜೊತೆಗೆ ಮಾರಾಟಗೊಳ್ಳುತ್ತಿದೆ.
  • ZAR 2,29,900 (INR 9.61 ಲಕ್ಷಕ್ಕೆ) ಎಕ್ಸ್-ಶೋರೂಂ ಬೆಲೆ ನಿಗದಿಪಡಿಸಲಾಗಿದೆ

ಈ ಮೇಡ್ ಇನ್ ಇಂಡಿಯಾ ಸಿಟ್ರಾನ್ C3 ಅನ್ನು ಇತರೆ ಬಲ ಬದಿ ಡ್ರೈವ್ ಮಾರುಕಟ್ಟೆಗಳಿಗೂ ರಫ್ತು ಮಾಡಲಾಗುತ್ತಿದೆ. ಹೊಸ C3 ಅನ್ನು ಬಿಡುಗಡೆ ಮಾಡಿದ ಅಂತಹ ಒಂದು ಮಾರುಕಟ್ಟೆಯೆಂದರೆ ಅದು ದಕ್ಷಿಣ ಆಫ್ರಿಕಾ, ಅದೂ ಕೂಡಾ ಏಕ ವೇರಿಯೆಂಟ್‌ನಲ್ಲಿ ಮಾತ್ರ. ಈ ಕಾರು ತಯಾರಕರು ಹಳೆಯದರೊಂದಿಗೆ ಹೊಸ C3 ಅನ್ನೂ ಮಾರಾಟ ಮಾಡುತ್ತಿದ್ದು, ಅದು ಇನ್ನೂ ದೊಡ್ಡದಿದೆ ಮತ್ತು ಹೆಚ್ಚು ಫೀಚರ್‌ಗಳನ್ನು ಹೊಂದಿದ್ದು, ಹೊಸದನ್ನು ಮತ್ತಷ್ಟು ಕೈಗೆಟುಕುವ ಆಯ್ಕೆಯನ್ನಾಗಿ ಮಾಡಿದೆ.

ಬೆಲೆ

C3 ಫೀಲ್ (ZAR)

C3 ಫೀಲ್ (INRಗೆ ಪರಿವರ್ತಿಸಲಾಗಿದೆ)

C3 ಫೀಲ್ (ಭಾರತದಲ್ಲಿ ಬೆಲೆ)

ZAR 2,29,900

INR 9.61 ಲಕ್ಷ

INR 7.08 ಲಕ್ಷ

ಸಿಟ್ರಾನ್ ಹ್ಯಾಚ್‌ಬ್ಯಾಕ್ ದಕ್ಷಿಣ ಆಫ್ರಿಕದಲ್ಲಿ, ಭಾರತಕ್ಕಿಂತ ರೂ 2.53 ಲಕ್ಷದಷ್ಟು ದುಬಾರಿಯಾಗಿದೆ. ದಕ್ಷಿಣ ಆಫ್ರಿಕಾ ಸರ್ಕಾರವು ನಿಗದಿಪಡಿಸಿದ ಅಮದು ಸುಂಕ ಇದಕ್ಕೆ ಕಾರಣವಾಗಿರಬಹುದು.

ಇದನ್ನೂ ಓದಿ: ಸಿಟ್ರಾನ್ C3 ಈಗ ನೇಪಾಳದಲ್ಲೂ ಲಭ್ಯ

ಪವರ್‌ಟ್ರೇನ್

ದಕ್ಷಿಣ ಆಫ್ರಿಕಾದ ಮಾರುಕಟ್ಟೆಯಲ್ಲಿ ಸಿಟ್ರಾನ್ ಈ C3 ಅನ್ನು 82PS ಮತ್ತು 115Nm ಉತ್ಪಾದಿಸುವ 1.2-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಇಂಜಿನ್ ಅನ್ನು ಕೇವಲ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡುತ್ತದೆ. ಭಾರತದ C3 ಕೂಡಾ 110PS ಮತ್ತು 190Nm ಉತ್ಪಾದಿಸುವ 6-ಸ್ಪೀಡ್ ಮ್ಯಾನುವಲ್‌ನ 1.2-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್‌ನೊಂದಿಗೆ ಬರುತ್ತದೆ.

ಫೀಚರ್‌ಗಳು ಮತ್ತು ಸುರಕ್ಷತೆ

ಭಾರತದ C3 ಫೀಲ್ ವೇರಿಯೆಂಟ್‌ಗೆ ಹೋಲಿಸಿದರೆ, ದಕ್ಷಿಣ ಆಫ್ರಿಕಾದ ಮಾಡೆಲ್ ಯಾವುದೇ ಫೀಚರ್‌ಗಳನ್ನು ಹೊಂದಿರುವುದಿಲ್ಲ. ಈ ಹ್ಯಾಚ್‌ಬ್ಯಾಕ್ 10-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಮತ್ತು ವೈರ್‌ಲೆಸ್‌ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಹ್ಯಾಲೋಜೆನ್ ಹೆಡ್‌ಲೈಟ್‌ಗಳು ಮತ್ತು DRLಗಳು, ಮ್ಯಾನುವಲ್ ಏರ್ ಕಂಡೀಷನಿಂಗ್ ಮತ್ತು ಸ್ಟೀರಿಂಗ್ ಮೌಂಟಡ್ ಕಂಟ್ರೋಲ್‌ಗಳನ್ನು ನೀಡುತ್ತದೆ.

ಇದನ್ನೂ ಓದಿ: ಸಿಟ್ರಾನ್ ತರುತ್ತಿದೆ ಭಾರತಕ್ಕೆ ಕ್ರಾಸ್ಓವರ್ ಸೆಡಾನ್

ಸುರಕ್ಷತೆಯ ವಿಚಾರಕ್ಕೆ ಬಂದಾಗ, ಇದು ಮುಂಭಾಗದ ಎರಡು ಏರ್‌ಬ್ಯಾಗ್‌ಗಳು, ABS ಜೊತೆಗೆ EBD ಮತ್ತು ಮುಂಭಾಗದ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳು ಮುಂತಾದ ಮೂಲ ಸಾಧನಗಳೊಂದಿಗೆ ಬರುತ್ತದೆ. ಆದಾಗ್ಯೂ, ಭಾರತದ ಫೀಲ್ ಟ್ರಿಮ್ ತನ್ನ ಟರ್ಬೋ-ಪೆಟ್ರೋಲ್ ವೇರಿಯೆಂಟ್‌ನಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESC) ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನಂತಹ ಹೆಚ್ಚುವರಿ ಫೀಚರ್‌ಗಳನ್ನು ಪಡೆದಿದೆ.

ಭಾರತದ-ಸ್ಪೆಕ್ ಸಿಟ್ರಾನ್ C3ಗೆ ರೂ 6.16 ಲಕ್ಷ ಮತ್ತು ರೂ 8.92 ಲಕ್ಷದ (ಎಕ್ಸ್-ಶೋರೂಂ) ನಡುವೆ ಬೆಲೆ ನಿಗದಿಪಡಿಸಲಾಗಿದ್ದು ಮಾರುತಿ ವ್ಯಾಗನ್ ಆರ್, ಮಾರುತಿ ಸೆಲೆರಿಯೊ, ಟಾಟಾ ಟಿಯಾಗೋ ಮತ್ತು ಮುಂಬರುವ ಹ್ಯುಂಡೈ ಎಕ್ಸ್‌ಟರ್‌ಗೆ ಪೈಪೋಟಿ ನೀಡುತ್ತದೆ.

ಇನ್ನಷ್ಟು ಓದಿ : C3 ಯ ಆನ್‌ ರೋಡ್ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 39 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಸಿಟ್ರೊನ್ ಸಿ3

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ