Login or Register ಅತ್ಯುತ್ತಮ CarDekho experience ಗೆ
Login

eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಸಿಟ್ರೊಯೆನ್

ಸಿಟ್ರೊಯೆನ್ ಇಸಿ3 ಗಾಗಿ shreyash ಮೂಲಕ ಫೆಬ್ರವಾರಿ 17, 2023 03:07 pm ರಂದು ಮಾರ್ಪಡಿಸಲಾಗಿದೆ

ಈ eC3ಯ ಬೇಸ್-ಸ್ಪೆಕ್ ಲೈವ್ ಟ್ರಿಮ್ ಟ್ಯಾಕ್ಸಿ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ.

  • ಸಿಟ್ರೊಯೆನ್ eC3 ಯು 29.2kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, 320ಕಿಮೀ ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ.
  • ಇದರ ಎಲೆಕ್ಟ್ರಿಕ್ ಮೋಟಾರ್ ಅನ್ನು 57PS ಮತ್ತು 143Nm ನಲ್ಲಿ ರೇಟ್ ಮಾಡಲಾಗಿದೆ.
  • ನಿರ್ದಿಷ್ಟವಾಗಿ ಟ್ಯಾಕ್ಸಿ ಮಾರುಕಟ್ಟೆಯನ್ನು ಗುರಿಯಾಗಿಸಿರುವ eC3 ಯು ಅದೇ ರೀತಿಯ ವಿಶೇಷ ನಿರೂಪಣೆಗಳನ್ನು ಹೊಂದಿದ್ದು, ಗರಿಷ್ಠ ವೇಗವು 80kmph ಗೆ ಸೀಮಿತವಾಗಿರುತ್ತದೆ.
  • ಇದು ಲೈವ್ ಮತ್ತು ಫೀಲ್ ಎಂಬ ಎರಡು ವೇರಿಯೆಂಟ್‌ಗಳನ್ನು ಹೊಂದಿದೆ.
  • ಈ eC3 ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸಿಟ್ರೊಯೆನ್ ಇತ್ತೀಚೆಗೆ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಪ್ರಾರಂಭಿಸಿತು ಮತ್ತು ಬೆಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿವರಗಳನ್ನು ಬಹಿರಂಗಪಡಿಸಿತು. ಮುಂದಿನ ವಾರದ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರೊಂದಿಗೆ ಬುಕಿಂಗ್‌ಗಳು ತೆರೆಯುತ್ತವೆ. ಇತ್ತೀಚಿನ RTO ದಾಖಲೆಯು eC3ಯನ್ನು ಟ್ಯಾಕ್ಸಿ ಗ್ರಾಹಕರಿಗೆ ಮಾರಾಟ ಮಾಡಲಾಗುವುದು ಎಂದು ಸೂಚಿಸಿದೆ.

ಈ ದಾಖಲೆಯ ಪ್ರಕಾರ, ಈ ಟ್ಯಾಕ್ಸಿ ಮಾರುಕಟ್ಟೆಯ ಯೂನಿಟ್‌ಗಳಿಗೆ ವೇಗವನ್ನು 80kmph ಸೀಮಿತಗೊಳಿಸಲಾಗಿದೆ, ಆದಾಗ್ಯೂ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 107kmph ಗರಿಷ್ಠ ವೇಗವನ್ನು ಹೊಂದಿದೆ. ಟಾಟಾ ಟೈಗರ್ ಎಕ್ಸ್-ಪ್ರೆಸ್ ಟಿ ಇವಿಯು ಮತ್ತೊಂದು ಟ್ಯಾಕ್ಸಿ ಮಾರುಕಟ್ಟೆ ಆಧಾರಿತ ಇವಿ ಆಗಿದ್ದು, ಇದು ಎಲೆಕ್ಟ್ರಾನಿಕ್ ಆಗಿ 80kmph ಗರಿಷ್ಠ ವೇಗದ ಮಿತಿಯನ್ನು ಹೊಂದಿರುವ ವಿಭಾಗಕ್ಕೆ ಸೇರಲ್ಪಡುತ್ತದೆ. ಈ eC3 ಯ ಬೇಸ್-ಟ್ರಿಮ್ ಕೂಡಾ ಟ್ಯಾಕ್ಸಿ ಗ್ರಾಹಕರಿಗೆ ಲಭ್ಯವಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಇದನ್ನೂ ನೋಡಿ: ತನ್ನ ಇಂಟೀರಿಯರ್ ಅನ್ನು ಪ್ರದರ್ಶಿಸಿರುವ 3-ರೋ ಸಿಟ್ರೊಯೆನ್ C3 ಕ್ಯಾಮರಾ ಕಣ್ಣಲ್ಲಿ ಕಂಡಿದ್ದು ಹೀಗೆ

ಇದರ ವಿಶೇಷತೆ ಏನೇನಿದೆ?

ಎರಡು ಟ್ರಿಮ್‌ಗಳಲ್ಲಿ ಲಭ್ಯವಿರುವ ಈ eC3 ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಸಂಪರ್ಕಿತ ಕಾರ್ ಟೆಕ್ನಾಲಜಿ, ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಕೀರಹಿತ ಎಂಟ್ರಿ, ಮತ್ತು ಎತ್ತರವನ್ನು ಹೊಂದಿಸಿಕೊಳ್ಳಬಲ್ಲ ಡ್ರೈವರ್ ಸೀಟ್‌ಗಳನ್ನು ಹೊಂದಿದೆ. ಈ ರೀತಿಯಾದ ಅಧಿಕ ಫೀಚರ್‌ಗಳು eC3 ಮೂಲ ವೆರಿಯೆಂಟ್‌ನಲ್ಲಿ ಕಾಣಸಿಗುವುದಿಲ್ಲ ಹಾಗೂ ಅವುಗಳನ್ನು ಟ್ಯಾಕ್ಸಿ ಮಾಲೀಕರಿಗೆ ನೀಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ದೆಹಲಿ-ಡೌಸಾ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ; ದೆಹಲಿ-ಜೈಪುರ ರಸ್ತೆ ಪ್ರಯಾಣ ಸಮಯ ಗಣನೀಯವಾಗಿ ಕಡಿತಗೊಳ್ಳಲಿದೆ

ಪವರ್‌ಟ್ರೇನ್ ವಿವರಗಳು

ಎಲೆಕ್ಟ್ರಿಕ್ ಮೋಟಾರ್‌ನಿಂದ ಪವರ್ ಹೊಂದುವ ಹಾಗೂ 57PS ಮತ್ತು 143Nm ಉತ್ಪಾದಿಸುವ 29.2kWh ಬ್ಯಾಟರಿ ಪ್ಯಾಕ್ ಅನ್ನು ಈ ಸಿಟ್ರೊಯೆನ್ eC3 ಹೊಂದಿದೆ. ಇದು 6.8 ಸೆಕೆಂಡುಗಳಲ್ಲಿ 0 ರಿಂದ 60 kmph ವೇಗವನ್ನು ನೀಡುತ್ತದೆ ಮತ್ತು 320km (MIDC ರೇಟ್) ಚಾಲನಾ ರೇಂಜ್ ಅನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಬಹು ಚಾರ್ಜಿಂಗ್ ಆಯ್ಕೆಯನ್ನು ಹೊಂದಿದ್ದು ಎರಡು ಪ್ರಮುಖವಾದವುಗಳೆಂದರೆ - 15A ಪ್ಲಗ್ ಪಾಯಿಂಟ್ ಮತ್ತು DC ವೇಗದ ಚಾರ್ಜರ್. ಆಯಾ ಚಾರ್ಜಿಂಗ್ ಸಮಯವನ್ನು ಕೆಳಗೆ ನಮೂದಿಸಲಾಗಿದೆ.

15A ಪ್ಲಗ್ ಪಾಯಿಂಟ್ (10 ರಿಂದ 100% ವರೆಗೆ)

10 ಗಂಟೆ ಮತ್ತು 30 ನಿಮಿಷಗಳು

DC ವೇಗದ ಚಾರ್ಜರ್ (10 ರಿಂದ 80% ವರೆಗೆ)

57 ನಿಮಿಷಗಳು

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆಗಳು

ಸಿಟ್ರೊಯೆನ್ eC3 ಫೆಬ್ರವರಿ ಅಂತ್ಯದ ವೇಳೆಗೆ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ ಮತ್ತು ಇದರ ಬೆಲೆ ರೂ. 11 ಲಕ್ಷ (ಮೇಲ್ಪಟ್ಟು). ಈ eC3 ಗೆ ಪ್ರಮುಖ ಪ್ರತಿಸ್ಪರ್ಧಿಗಳೆಂದರೆ ಟಾಟಾ ಟಿಯಾಗೋ ಇವಿ ಮತ್ತು ಟಾಟಾ ಟೈಗರ್ ಇವಿ.

ಟಾಟಾ ಟೈಗರ್ ಇವಿ ಎಕ್ಸ್-ಪ್ರೆಸ್-ಟಿ ಯೊಂದಿಗೆ ಸ್ಪರ್ಧಿಸುತ್ತಾ, ಸಾಮಾನ್ಯ ಆವೃತ್ತಿಯ ಜೊತೆಗೆ ಈ eC3 ಯ ಟ್ಯಾಕ್ಸಿ ಮಾರುಕಟ್ಟೆ ಆವೃತ್ತಿಯು ಸಹ ಮಾರಾಟವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.

Share via

Write your Comment on Citroen ಇಸಿ3

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ