ಏಪ್ರಿಲ್ 27 ರಂದು ಭಾರತದಲ್ಲಿ ತನ್ನ ನಾಲ್ಕನೇ ಮಾಡೆಲ್ ಅನಾವರಣಗೊಳಿಸಲಿರುವ ಸಿಟ್ರಾನ್

published on ಮಾರ್ಚ್‌ 30, 2023 06:33 pm by tarun for ಸಿಟ್ರೊನ್ ಸಿ3 ಏರ್‌ಕ್ರಾಸ್‌

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಹಿಂದಿನ ರಹಸ್ಯ ಫೋಟೋಗಳ ಪ್ರಕಾರ ಇದು ಮೂರು ಸಾಲಿನ ಕಾಂಪ್ಯಾಕ್ಟ್ SUV ಆಗಿರಬಹುದು.

Citroen SUV

  • ಮುಂಬರುವ ಸಿಟ್ರಾನ್ SUV ಅನ್ನು ‘C3 ಏರ್‌ಕ್ರಾಸ್’ ಎಂದು ಕರೆಯಬಹುದು.
  • ಇದರ ಸ್ಟೈಲಿಂಗ್ C3 ಹ್ಯಾಚ್‌ಬ್ಯಾಕ್‌ನಿಂದ ಪ್ರೇರಿತವಾದಂತಿದ್ದರೂ ತುಸು ದೃಢವಾಗಿರುವಂತೆ ತೋರುತ್ತದೆ. 
  • ಇದು 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಟೋಮ್ಯಾಟಿಕ್ AC, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಗರಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಪೀಚರ್‌ಗಳ ಪಟ್ಟಿಯಲ್ಲಿ ಹೊಂದಿದೆ.
  •  ಇದು C3ಯ 110PS 1.2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ನೊಂದಿಗೆ ಹೊಂದಿರಬಹುದು.
  •  ಇದರ ಬೆಲೆ ಸುಮಾರು ರೂ 9 ಲಕ್ಷದಷ್ಟು (ಎಕ್ಸ್-ಶೋರೂಂ) ಇರಬಹುದು  ಎಂದು ನಿರೀಕ್ಷಿಸಲಾಗಿದೆ.

ಸಿಟ್ರಾನ್ ಭಾರತದಲ್ಲಿ ಏಪ್ರಿಲ್ 27ರಂದು ಹೊಸ SUVಯನ್ನು ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ ಎಂದು ಪ್ರಕಟಿಸಿದೆ. ಇದು ಭಾರತದಲ್ಲಿ ಹಲವಾರು ಬಾರಿ ರಹಸ್ಯ ಪರೀಕ್ಷೆಗೆ ಒಳಗಾದ ಮರೆಮಾಚಿದ ಅದೇ ಪ್ರಾಯೋಗದ ಕಾರು ಆಗಿದೆ. ಇದು ಮೂರು ಸಾಲಿನ ಸೀಟಿಂಗ್ ಕಾನ್ಫಿಗರೇಶನ್ ಅನ್ನು ಹೊಂದಿರಬಹುದೆಂದು ನಾವು ನಿರೀಕ್ಷಿಸುತ್ತೇವೆ ಮತ್ತು ಇದು “C3 ಏರ್‌ಕ್ರಾಸ್” ಎಂಬ ಹೆಸರನ್ನು ಪಡೆದಿರಬಹುದು.

Citroen SUV

ರಹಸ್ಯ ಚಿತ್ರಗಳ ಪ್ರಕಾರ, ಈ ಹೊಸ ಸಿಟ್ರಾನ್ SUVಯ ಸ್ಟೈಲಿಂಗ್ C3 ಹ್ಯಾಚ್‌ಬ್ಯಾಕ್‌ನಿಂದ ಪ್ರೇರಿತವಾಗಿರಬಹುದು ಎಂದು ಅಂದಾಜಿಸಲಾಗಿದೆ. ಬಂಪರ್‌ಗಳು, ಗ್ರಿಲ್ ಮತ್ತು ಅಲಾಯ್ ವ್ಹೀಲ್‌ನಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಹಿಗ್ಗಿಸಲಾದ ಗಾತ್ರ ಮತ್ತು ರಹಸ್ಯ ಚಿತ್ರಗಳನ್ನು ಆಧರಿಸಿ, ಹೊಸ ಬೂಟ್ ಆಕಾರದಿಂದಾಗಿ ರಿಯರ್ ಪ್ರೊಫೈಲ್ ವಿಭಿನ್ನವಾಗಿ ಕಾಣುತ್ತದೆ.

ಇದನ್ನೂ ಓದಿ: ಸಿಟ್ರಾನ್ eC3 ವರ್ಸಸ್ ಪ್ರತಿಸ್ಪರ್ಧಿಗಳು: ಬೆಲೆಯ ಚರ್ಚೆ

 ಸಿಟ್ರಾನ್ SUV ಯ ಕ್ಯಾಬಿನ್ C3 ಯಂತೆ ವಿನ್ಯಾಸಗೊಳಿಸಿದ್ದು ಫಂಕೀ ಕಲರ್‌ಗಳು ಮತ್ತು ಚಳಕದ ನೋಟ ಹೊಂದಿರುವ ನಿರೀಕ್ಷೆ ಇದೆ. ಫೀಚರ್‌ಗಳ ಬಗ್ಗೆ ಹೇಳುವಾಗ, ಇದು 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಡಿಜಿಟಲ್ ಸ್ಪೀಡೋಮೀಟರ್ ಮತ್ತು C3ಯಲ್ಲಿ ಇಲ್ಲದ ಫೀಚರ್‌ಗಳಾದ ಆಟೋಮ್ಯಾಟಿಕ್ AC, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಗರಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.

Citroen SUV

ಈ SUV, C3ಯಿಂದ 110PS 1.2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಪಡೆದಿರಬಹುದು ಆದರೆ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಮೋಟರ್ ಅನ್ನು ಹೊಂದಿಲ್ಲದಿರಬಹುದು. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳೆರಡನ್ನೂ ಹೊಂದಿರಬಹುದು. ಇಲೆಕ್ಟ್ರಿಕ್ C3 ಆಫರ್‌ನಲ್ಲಿರುವುದರಿಂದ, ಹೊಸ SUV ಕೂಡಾ ವಿದ್ಯುತ್‌ಚಾಲಿತ ಆವೃತ್ತಿಯನ್ನು ಹೊಂದಿರಬಹುದು. ನೀವು ಇದರ ಮೂರು ಸಾಲಿನ ಆವೃತ್ತಿಯನ್ನು ಬಯಸುತ್ತೀರಾ? ಕೆಳಗಿನ ಕಮೆಂಟ್‌ಗಳಲ್ಲಿ ನಾವು ಇದರ ಬಗ್ಗೆ ತಿಳಿದುಕೊಳ್ಳೋಣ.

ಹೊಸ ಸಿಟ್ರಾನ್‌ SUVಯ ಬೆಲೆ ಸುಮಾರು ರೂ 9 ಲಕ್ಷಗಳಷ್ಟು (ಎಕ್ಸ್-ಶೋರೂಂ) ಇರಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ. C3ಯ ಮೇಲಿನ ಮಾಡೆಲ್ ಆಗಿ, ಇದು ಈಗಾಗಲೇ ನೆಲೆನಿಂತ ಕಾಂಪ್ಯಾಕ್ಟ್ SUVಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವಾಗನ್ ಟೈಗನ್ ಮತ್ತು ಇತರವುಗಳಿಗೆ ಪರ್ಯಾಯವಾಗಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಸಿಟ್ರೊನ್ ಸಿ3 Aircross

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience