Login or Register ಅತ್ಯುತ್ತಮ CarDekho experience ಗೆ
Login

2024 Maruti Swiftನ ಅತ್ಯಂತ ಇಂಧನ ದಕ್ಷ ಎಂಜಿನ್ ಕುರಿತ ಮಾಹಿತಿ ಇಲ್ಲಿದೆ

published on ಮೇ 13, 2024 12:25 pm by ansh for ಮಾರುತಿ ಸ್ವಿಫ್ಟ್

ಈ ಸ್ವಿಫ್ಟ್‌ ಕಾರು ಈಗಲೂ 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಅನ್ನು ಹೊಂದಿದ್ದು, ನಾಲ್ಕರ ಬದಲಿಗೆ ಮೂರು ಸಿಲಿಂಡರ್‌ ಗಳನ್ನಷ್ಟೇ ಹೊಂದಿದ್ದು, ಇದರಿಂದ ಯಾಕೆ ಪ್ರಯೋಜನವಾಗಿದೆ ಎಂಬುದರ ಹಿಂದಿನ ಕಾರಣಗಳು ಇಲ್ಲಿವೆ

2024 ಮಾರುತಿ ಸ್ವಿಫ್ಟ್‌ ಕಾರನ್ನು ರೂ. 6.49 ಲಕ್ಷದಿಂದ ರೂ. 9.50 ಲಕ್ಷದ ತನಕದ (ಪರಿಚಯಾತ್ಮಕ, ಎಕ್ಸ್‌ - ಶೋರೂಂ) ಬೆಲೆ ಶ್ರೇಣಿಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು ಹೊಸ ವಿನ್ಯಾಸ, ಪರಿಷ್ಕೃತ ಕ್ಯಾಬಿನ್‌ ಮತ್ತು ಒಂದಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ ಹೊರಬರುತ್ತಿದೆ. ಆದರೆ ಇದರ ಹೊಸ ಪೆಟ್ರೋಲ್‌ ಎಂಜಿನ್‌, ಈ ಹ್ಯಾಚ್‌ ಬ್ಯಾಕ್‌ ವಾಹನಕ್ಕೆ ಮಾಡಿರುವ ಅತ್ಯಂತ ದೊಡ್ಡ ಬದಲಾವಣೆಯಾಗಿದೆ. ಸ್ವಿಫ್ಟ್‌ ಕಾರಿನ ಪವರ್‌ ಟ್ರೇನ್‌ ಗೆ ಮಾಡಿರುವ ಬದಲಾವಣೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು.

ಅಧಿಕ ಇಂಧನ ದಕ್ಷತೆ

ಯುಕೆ - ಸ್ಪೆಕ್ 2024 ಸ್ವಿಫ್ಟ್‌ ನ ಚಿತ್ರವನ್ನು ಉಲ್ಲೇಖಕ್ಕಾಗಿ ಬಳಸಲಾಗಿದೆ

ಇಂಧನ ದಕ್ಷತೆ

ವೇರಿಯಂಟ್‌

ಹಳೆಯ ಮಾರುತಿ ಸ್ವಿಫ್ಟ್‌

ಹೊಸ ಮಾರುತಿ ಸ್ವಿಫ್ಟ್‌

% ಹೆಚ್ಚಳ

ಮ್ಯಾನುವಲ್‌

22.38 kmpl

24.8 kmpl

10.8%

AMT

22.56 kmpl

25.75 kmpl

14.1%

ಮಾರುತಿ ಸುಝುಕಿಯ ಕಾರುಗಳು ಯಾವಾಗಲೂ ಇಂಧನ ದಕ್ಷತೆಗೆ ವಿಶೇಷ ಒತ್ತನ್ನು ನೀಡುತ್ತಿದ್ದು, ಹೊಸ Z ಸರಣಿಯು ಎಂಜಿನ್‌ ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ವಿನ್ಯಾಸದ ವಿಚಾರದಲ್ಲಿ ಇದು ಈ ಹಿಂದಿನ ಮಾದರಿಗಿಂತಲೂ ಹೆಚ್ಚು ದಕ್ಷತೆಯನ್ನು ಸಾಧಿಸಿದೆ. 5 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗಿನ ವೇರಿಯಂಟ್‌ ಗಳು ಈಗ ಸರಿಸುಮಾರು 11 ಶೇಕಡಾದಷ್ಟು ಹೆಚ್ಚಿನ ದಕ್ಷತೆಯನ್ನು ಪಡೆದಿದ್ದು, 24.8 kmpl ನಷ್ಟು ಇಂಧನ ದಕ್ಷತೆಯನ್ನು ನೀಡುವುದಾಗಿ ಹೇಳಲಾಗಿದೆ. ಆದರೆ 5-ಸ್ಪೀಡ್ AMT‌ ವೇರಿಯಂಟ್‌ ಗಳಲ್ಲಿ ಅತ್ಯಂತ ಹೆಚ್ಚಿನ ಮುನ್ನಡೆಯನ್ನು ಕಾಣಲಾಗಿದ್ದು, 14 ಶೇಕಡಾದಷ್ಟು ಸುಧಾರಣೆಯೊಂದಿಗೆ ಇದು 25.75 kmpl ನಷ್ಟು ಇಂಧನ ದಕ್ಷತೆಯನ್ನು ನೀಡಲಿದೆ. AMT ತಂತ್ರಜ್ಞಾನವು ವಿಶೇಷವಾಗಿ ಭಾರತೀಯ ಮಾರುಕಟ್ಟೆಗೆ ಸೀಮಿತವಾಗಿದ್ದು, UK ಮತ್ತು ಜಪಾನಿನಲ್ಲಿ ಹೆಚ್ಚು ಪರಿಷ್ಕೃತ CVT ಅಟೋಮ್ಯಾಟಿಕ್‌ ಅನ್ನು ಹೊಸ ಸ್ವಿಫ್ಟ್‌ ಗೆ ಅಳವಡಿಸಲಾಗಿದೆ.

ಇದನ್ನು ಸಹ ಓದಿರಿ: ಹೊಸ ಮಾರುತಿ ಸ್ವಿಫ್ಟ್‌ ವೇರಿಯಂಟ್‌ ವಾರು ಬಣ್ಣದ ಆಯ್ಕೆಗಳ ವಿವರ

ಉಲ್ಲೇಖಕ್ಕಾಗಿ, ನಾವು ಈ ಇಂಧನ ದಕ್ಷತೆ ಅಂಕಿ ಅಂಶಗಳನ್ನು ತೆಗೆದುಕೊಂಡರೆ, ಹಾಗೂ ಪೆಟ್ರೋಲ್‌ ಬೆಲೆಯನ್ನು ಪ್ರತಿ ಲೀಟರ್‌ ಗೆ ರೂ. 105 ಎಂದು ಪರಿಗಣಿಸಿದರೆ, ಪ್ರತಿ 1000 km ಚಾಲನೆ ಮಾಡಿದಾಗ ಮ್ಯಾನುವಲ್‌ ವೇರಿಯಂಟ್‌ ಗಳಲ್ಲಿ ಇದು ಸುಮಾರು ರೂ. 440 ಅನ್ನು ಉಳಿಸಿದರೆ, AMT ವೇರಿಯಂಟ್‌ ಗಳಲ್ಲಿ ರೂ. 600 ಅನ್ನು ಉಳಿತಾಯ ಮಾಡಬಹುದು. ದೀರ್ಘಕಾಲೀನ ಅವಧಿಯಲ್ಲಿ ಇದು ಸಾಕಷ್ಟು ಉಳಿತಾಯವನ್ನು ಮಾಡಲಿದೆ.

ಹೆಚ್ಚು ಪರಿಸರ ಸ್ನೇಹಿ

ಯುಕೆ - ಸ್ಪೆಕ್ 2024 ಸ್ವಿಫ್ಟ್‌ ನ ಚಿತ್ರವನ್ನು ಉಲ್ಲೇಖಕ್ಕಾಗಿ ಬಳಸಲಾಗಿದೆ

ಇದು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ ಮಾತ್ರವಲ್ಲದೆ ಈ ಎಂಜಿನ್‌ ಮೂಲಕ ಹೆಚ್ಚು ಪರಿಸರ ಸ್ನೇಹಿ ವಾಹನವಾಗಿಯೂ ಮೂಡಿಬಂದಿದೆ. ಈ ಕಾರು ತಯಾರಕ ಸಂಸ್ಥೆಯ ಪ್ರಕಾರ 1.2-ಲೀಟರ್ Z ಸರಣಿಯ ಎಂಜಿನ್‌, ಹಳೆಯ ಯೂನಿಟ್‌ ಗಿಂತ 12 ಶೇಕಡಾದಷ್ಟು ಕಡಿಮೆ CO ಅನ್ನು ಹೊರಸೂಸುತ್ತದೆ. ಇದು ನಿಮ್ಮ ಚಾಲನೆಯ ಮೇಲೆ ಯಾವುದೇ ಪರಿಣಾಮವನ್ನು ಬೀರದೆ ಇರಬಹುದು. ಆದರೆ ಕಡಿಮೆ ಇಂಧನ ಹೆಜ್ಜೆ ಗುರುತಿನ ಮೂಲಕ ಪರಿಸರಕ್ಕೆ ಸಹಕಾರಿಯಾಗಿದೆ.

ನಗರದ ಚಾಲನೆಗೆ ಒಳ್ಳೆಯದು

ಯುಕೆ - ಸ್ಪೆಕ್ 2024 ಸ್ವಿಫ್ಟ್‌ ನ ಚಿತ್ರವನ್ನು ಉಲ್ಲೇಖಕ್ಕಾಗಿ ಬಳಸಲಾಗಿದೆ

ಕೊನೆಯದಾಗಿ, ಈ ಹೊಸ ಎಂಜಿನ್‌ ಉತ್ತಮ ಲೋ ಎಂಡ್‌ ಟಾರ್ಕ್‌ ಒದಗಿಸಲಿದ್ದು, 3.5 ಶೇಕಡಾದಷ್ಟು ಸುಧಾರಣೆಯನ್ನು ಕಂಡಿದೆ. ಆದರೆ ಹಳೆಯ ಸ್ವಿಫ್ಟ್‌ ಗೆ ಹೋಲಿಸಿದರೆ ಹೊಸ ಎಂಜಿನ್‌ ಕಡಿಮೆ ಪವರ್‌ ಅನ್ನು ಹೊಂದಿದ್ದು, 90 PS ಬದಲಿಗೆ 82 PS ಅನ್ನು ಉಂಟು ಮಾಡುತ್ತದೆ. ಮಾರುತಿ ಸುಝುಕಿ ಸಂಸ್ಥೆಯು ಹೆಚ್ಚಿನ ಖರೀದಿದಾರಿಗೆ ಏನು ಅಗತ್ಯವಿದೆಯೋ ಅದಕ್ಕೆ ಪ್ರಾಶಸ್ತ್ಯವನ್ನು ನೀಡಿದೆ. ಏಕೆಂದರೆ ಹೆಚ್ಚಿನವರು ನಗರದ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುತ್ತಾರೆ.

ಇದನ್ನು ಸಹ ಓದಿರಿ: ಹೊಸ ಮಾರುತಿ ಸ್ವಿಫ್ಟ್‌ 2024 ರೇಸಿಂಗ್‌ ರೋಡ್‌ ಸ್ಟಾರ್‌ ಆಕ್ಸೆಸರಿ ಪ್ಯಾಕ್‌ ಕುರಿತು 7 ಚಿತ್ರಗಳಲ್ಲಿ ವಿವರಣೆ

ಸುಧಾರಿತ ಲೋ ಎಂಡ್‌ ಟಾರ್ಕ್‌ ಎಂದರೆ, ನೀವು ಕಡಿಮೆ ವೇಗದಲ್ಲಿ ನಗರದೊಳಗೆ ವಾಹನ ಚಲಾಯಿಸುವಾಗ ಟ್ರಾಫಿಕ್‌ ನಲ್ಲಿ ಸಾಗಲು ಬೇಕಾಗುವ ಪವರ್‌ ಅನ್ನು ವಾಹನವು ಪಡೆಯುತ್ತದೆ ಹಾಗೂ ಕ್ಷಿಪ್ರವಾಗಿ ಓವರ್‌ ಟೇಕ್‌ ಮಾಡಲು ಬೇಕಾಗುವ ವೇಗಕ್ಕಾಗಿ ಸಾಕಷ್ಟು ಪವರ್‌ ಅನ್ನು ಸಹ ಗಳಿಸಿಕೊಳ್ಳುತ್ತದೆ. ಹೀಗಾಗಿ ನಗರದೊಳಗೆ ಕಡಿಮೆ ವೇಗದಲ್ಲಿ ವಾಹನವನ್ನು ಓಡಿಸುವವವರು ಮಂಕುತನ ಮತ್ತು ಪವರ್‌ ಕೊರತೆಯನ್ನು ಅನುಭವಿಸುವುದಿಲ್ಲ. ಆದರೆ ಇದು ಇನ್ನಷ್ಟೇ ಪರೀಕ್ಷೆಗೆ ಒಳಪಡಬೇಕಾಗಿದ್ದು, ನಾವು ಈ ವಾಹನವನ್ನು ಚಲಾಯಿಸಿದ ನಂತರವಷ್ಟೇ ಈ ಕುರಿತು ವಿವರವಾದ ಪ್ರತಿಕ್ರಿಯೆಯನ್ನು ನೀಡಬಹುದಾಗಿದೆ.

2024 ಸುಝುಕಿ ಸ್ವಿಫ್ಟ್‌ ಕಾರು ಸಣ್ಣದಾದರೂ ಅತ್ಯಂತ ಪರಿಣಾಮಕಾರಿ ಬದಲಾಗಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಬಿಡುಗಡೆ ವರದಿಯ ಮೂಲಕ ಇದನ್ನು ನೀವು ತಿಳಿದುಕೊಳ್ಳಬಹುದು. ಅಲ್ಲದೆ ಈ ಹ್ಯಾಚ್‌ ಬ್ಯಾಕ್‌ ಅನ್ನು ಖರೀದಿಸಲು ನಿಮಗೆ ಇಚ್ಛೆ ಇದ್ದು, ಯಾವ ವೇರಿಯಂಟ್‌ ಅನ್ನು ಆರಿಸಬೇಕು ಎನ್ನುವ ಕುರಿತು ಗೊಂದಲಗಳಿದ್ದಲ್ಲಿ, ಯಾವ ವೇರಿಯಂಟ್‌ ಏನೆಲ್ಲ ಕೊಡುಗೆಗಳನ್ನು ಹೊಂದಿದೆ ಎಂಬ ಕುರಿತು ನಾವು ಸವಿವರವಾದ ಮಾಹಿತಿಯನ್ನು ನೀಡಿದ್ದು, ನಿಮಗೆ ಸರಿಹೊಂದುವ ವೇರಿಯಂಟ್‌ ಅನ್ನು ನೀವು ಆಯ್ದುಕೊಳ್ಳಬಹುದು.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಸ್ವಿಫ್ಟ್‌ AMT

a
ಅವರಿಂದ ಪ್ರಕಟಿಸಲಾಗಿದೆ

ansh

  • 23 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಸ್ವಿಫ್ಟ್

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ