2024ರ ಹೊಸ Maruti Swiftನ ರೇಸಿಂಗ್ ರೋಡ್ ಸ್ಟಾರ್ ಆಕ್ಸೆಸರಿ ಪ್ಯಾಕ್ ಕುರಿತು 7 ಚಿತ್ರಗಳಲ್ಲಿ ವಿವರಣೆ
ಮಾರುತಿ ಸ್ವಿಫ್ಟ್ ಗಾಗಿ rohit ಮೂಲಕ ಮೇ 10, 2024 08:09 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಸ್ವಿಫ್ಟ್ ವಾಹನವು ಎರಡು ಆಕ್ಸೆಸರಿ ಪ್ಯಾಕ್ ಗಳನ್ನು ಪಡೆದಿದ್ದು, ಅದರಲ್ಲಿ ಒಂದನ್ನು, ಒಳಗಡೆ ಮತ್ತು ಹೊರಗಡೆಯಲ್ಲಿ ಸ್ವಲ್ಪ ಬದಲಾವಣೆಯನ್ನು ಕಂಡಿರುವ ರೇಸಿಂಗ್ ರೋಡ್ ಸ್ಟಾರ್ ಎಂದು ಕರೆಯಲಾಗುತ್ತದೆ.
ಮಾರುತಿ ಸುಝುಕಿ ಸ್ವಿಫ್ಟ್ ಕಾರಿನ ನಾಲ್ಕನೇ ತಲೆಮಾರಿನ ಅವತಾರವನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಇದು ಐದು ವಿಸ್ತೃತ ವೇರಿಯಂಟ್ ಗಳಲ್ಲಿ ಲಭ್ಯ: LXi, VXi, VXi (O), ZXi, ಮತ್ತು ZXi+. ಹೊಸ ಸ್ವಿಫ್ಟ್ ಜೊತೆಗೆ ಮಾರುತಿ ಸಂಸ್ಥೆಯು ಹೊಸ ತಲೆಮಾರಿನ ಹ್ಯಾಚ್ ಬ್ಕಾಕ್ ಗೆ ತನ್ನ ಆಕ್ಸೆಸರಿ ಆವೃತ್ತಿಗಳನ್ನು ಪ್ರದರ್ಶಿಸಿದೆ. ಇದರಲ್ಲಿ ಒಂದು ರೇಸಿಂಗ್ ರೋಡ್ ಸ್ಟಾರ್ ಪ್ಯಾಕ್ ಆಗಿದ್ದು, ಈ ಕೆಳಗಿನ ಚಿತ್ರಗಳಲ್ಲಿ ಇದನ್ನು ನೀವು ಕಾಣಬಹುದು:
ಮುಂಭಾಗ
ಪ್ರದರ್ಶಿಸಲಾದ ಸ್ವಿಫ್ಟ್ ರೇಸಿಂಗ್ ರೋಡ್ ಸ್ಟಾರ್ ಅನ್ನು ಹ್ಯಾಚ್ ಬ್ಯಾಕ್ ನ ಮ್ಯಾಗ್ಮಾ ಗ್ರೇ ಬಣ್ಣದಲ್ಲಿ ಸಿದ್ಧಪಡಿಸಲಾಗಿದ್ದು, ʻಸ್ವಿಫ್ಟ್ʼ ಬ್ರಾಂಡಿಂಗ್ ನ ಬೋನೆಟ್ ಡೀಕಲ್ ಅನ್ನು ಹೊಂದಿತ್ತು. ಇದರ ಫೇಶಿಯಾವು ಪಿಯಾನೋ ಬ್ಲ್ಯಾಕ್ ಫಿನಿಶ್ ಅನ್ನು ಹೊಂದಿರುವ ಅಂಡಾಕಾರದ ಅದೇ ಗ್ರಿಲ್ ಅನ್ನು ಹೊಂದಿದ್ದು, ಹೆಡ್ ಲೈಟ್ ಕ್ಲಸ್ಟರ್ ಗಳಿಗೆ ಸ್ಮೋಕ್ಡ್ ಇಫೆಕ್ಟ್ ಅನ್ನು ಅನ್ವಯಿಸಿದೆ. ಕೆಳಭಾಗದಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲಾದ ಪಿಯಾನೋ ಬ್ಲ್ಯಾಕ್ ಸ್ಪ್ಲಿಟ್ಟರ್ ಮತ್ತು ಬಂಪರ್ ನಲ್ಲಿ ಕೆಂಪು ಬಣ್ಣದ ಆಕ್ಸೆಂಟ್ ಹೈಲೈಟ್ ಅನ್ನು ನೀವು ಗಮನಿಸಬಹುದು.
ಇದನ್ನು ಸಹ ನೋಡಿರಿ: ಹೊಸ ಮಾರುತಿ ಸ್ವಿಫ್ಟ್ ವೇರಿಯಂಟ್ ವಾರು ಬಣ್ಣದ ಆಯ್ಕೆಗಳ ವಿವರ
ಪಕ್ಕದ ಭಾಗ
ಪಕ್ಕದ ಭಾಗದಲ್ಲಿ ಮಾಡಲಾಗಿರುವ ಬದಲಾವಣೆಗಳಲ್ಲಿ ಹೊರಗಡೆಯ ರಿಯರ್ ವ್ಯೂ ಮಿರರ್ (ಒ.ಅರ್.ವಿ.ಎಂ) ಹೌಸಿಂಗ್ ಗಳಲ್ಲಿ ಹೊಸ ಡೀಕಲ್, ಮತ್ತು ವೀಲ್ ಆರ್ಚ್ ಗಳ ಸುತ್ತಲೂ ಡೋರ್ ಸಿಲ್ ಗಾರ್ಡ್ ಗಳ ಉದ್ದಕ್ಕೂ ಕೆಂಪು ಬಣ್ಣದ ಪಿನ್ ಸ್ಟ್ರೈಪಿಂಗ್ ಗಳು ಒಳಗೊಂಡಿದ್ದು, ಇವೆರಡೂ ಸಹ ಪಿಯಾನೋ ಬ್ಲ್ಯಾಕ್ ಫಿನಿಶ್ ಅನ್ನು ಹೊಂದಿವೆ.
ಆದರೆ ಇದು ಸಾಮಾನ್ಯ ಮಾದರಿಯಲ್ಲಿ ಇರುವಂತೆಯೇ 15 ಇಂಚಿನ ಡ್ಯುವಲ್ ಟೋನ್ ಅಲೋಯ್ ವೀಲ್ ಗಳನ್ನೇ ಹೊಂದಿದೆ.
ಹಿಂದುಗಡೆ
ಸ್ವಿಫ್ಟ್ ರೇಸಿಂಗ್ ರೋಡ್ ಸ್ಟಾರ್ ಹಿಂದಿನಿಂದ ಪ್ರಮಾಣಿತ ಮಾದರಿಯಂತೆ ಕಾಣುತ್ತದೆ. ಆದರೆ ಟೇಲ್ ಲೈಟ್ ಗಳಿಗೆ (ಇದು ಸಹ ಬ್ಲ್ಯಾಕ್ ಔಟ್ಲೈನ್ ಅನ್ನು ಪಡೆದಿದೆ) ಸಂಪರ್ಕಿಸುವ ಪಿಯಾನೋ ಬ್ಲ್ಯಾಕ್ ಸ್ಟ್ರಿಪ್ ಅನ್ನು ನೋಡಬಹುದು. ಇಲ್ಲಿ ಸಹ ನೀವು ರೆಡ್ ಇನ್ಸರ್ಟ್ ಗಳನ್ನು ಹೊಂದಿರುವ ಪಿಯಾನೋ ಬ್ಲ್ಯಾಕ್ ಲಿಪ್ ನ ಆಯ್ಕೆಯನ್ನು ಹೊಂದಿದ್ದೀರಿ.
ಕ್ಯಾಬಿನ್
ಇದರ ಕ್ಯಾಬಿನ್ ನಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸ ಅಫೋಲ್ಸ್ಟರಿ, ಹಾಗೂ ಕೆಲ ಐಷಾರಾಮಿ ಮಾದರಿಗಳಲ್ಲಿ ಕಂಡುಬರುವ, ರೆಡ್ ಆಕ್ಸೆಂಟ್ ಗಳು ಮತ್ತು ಕಾರ್ಬನ್ ಫೈಬರ್ ನಂತಹ ಫಿನಿಶ್ ಅನ್ನು ಹೊಂದಿರುವ ಹೊಸ ಟ್ರಿಮ್ ಇನ್ಸರ್ಟ್ ಅನ್ನು ಇದು ಪಡೆದಿದೆ.
ಪ್ರದರ್ಶಿಸಲಾದ ಸ್ವಿಫ್ಟ್ ರೇಸಿಂಗ್ ರೋಡ್ ಸ್ಟಾರ್ ವಾಹನವು ಪ್ರಮಾಣಿತ ಮಾದರಿಯ ಟಾಪ್ ಸ್ಪೆಕ್ Zxi+ ವೇರಿಯಂಟ್ ಅನ್ನು ಆಧರಿಸಿದ್ದು, ಆ ಮಾದರಿಯು ಹೊಂದಿರುವ ಉಪಕರಣಗಳನ್ನೇ ಹೊಂದಿದೆ. ಇದು 9 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ, ವೈರ್ ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್ ಮತ್ತು ಅಟೋ ಎ.ಸಿ ಯನ್ನು ಹೊಂದಿದೆ. ಇದರ ಸುರಕ್ಷತಾ ಕಿಟ್ ನಲ್ಲಿ ಅರು ಏರ್ ಬ್ಯಾಗ್ ಗಳು (ಹೊಸ ಸ್ವಿಫ್ಟ್ ನಲ್ಲಿ ಪ್ರಮಾಣಿತ ಆಯ್ಕೆಯಾಗಿ ಲಭ್ಯ), ರಿವರ್ಸಿಂಗ್ ಕ್ಯಾಮರಾ, ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಸೇರಿದೆ.
ಇದನ್ನು ಸಹ ನೋಡಿರಿ: 2024 ಮಾರುತಿ ಸ್ವಿಫ್ಟ್ ವಾಹನದ ಪ್ರತಿ ವೇರಿಯಂಟ್ ನೀಡಲಿರುವ ಸೌಲಭ್ಯಗಳಿವು...
ಪವರ್ ಟ್ರೇನ್ ಆಯ್ಕೆಗಳು
ರೇಸಿಂಗ್ ರೋಡ್ ಸ್ಟಾರ್ ಆಕ್ಸೆಸರಿ ಪ್ಯಾಕೇಜ್ ಸಂಪೂರ್ಣವಾಗಿ ಸೌಂದರ್ಯಕ್ಕೆ ಸಂಬಂಧಿಸಿರುವುದರಿಂದ 2024 ಸ್ವಿಫ್ಟ್ ನ ಹೊಸ 1.2 ಲೀಟರ್ ಪೆಟ್ರೋಲ್ ಎಂಜಿನ್ ಗೆ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಯಾವುದೇ ವೇರಿಯಂಟ್ ನಲ್ಲಿ ಇರುವಂತೆಯೇ ಇದು 82 PS ಮತ್ತು 112 Nm ಉಂಟು ಮಾಡುತ್ತಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು AMT ಆಯ್ಕೆಗಳೆರಡನ್ನೂ ಹೊಂದಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಸ್ವಿಫ್ಟ್ ಕಾಋು ರೂ. 6.49 ರಿಂದ ರೂ. 9.65 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಪರಿಚಯಾತ್ಮಕ ಎಕ್ಸ್-ಶೋರೂಂ ಪಾನ್ ಇಂಡಿಯಾ). ರೇಸಿಂಗ್ ರೋಡ್ ಸ್ಟಾರ್ ಆಕ್ಸೆಸರಿ ಪ್ಯಾಕೇಜ್‌ನ ಬೆಲೆಗಳು ಇನ್ನೂ ಬಹಿರಂಗಗೊಂಡಿಲ್ಲ. ಈ ಹ್ಯಾಚ್ ಬ್ಯಾಕ್ ವಾಹನಕ್ಕೆ ಹ್ಯುಂಡೈ ಗ್ರಾಂಡ್ i10 ನಿಯೋಸ್ ಮಾತ್ರವೇ ನೇರ ಪ್ರತಿಸ್ಪರ್ಧಿಯಾಗಿದ್ದು, ರೆನೋ ಟ್ರೈಬರ್ ಕ್ರಾಸ್ ಓವರ್ MPV, ಹಾಗೂ ಹ್ಯುಂಡೈ ಎಕ್ಸ್ಟರ್ ಮತ್ತು ಟಾಟಾ ಪಂಚ್ ಇತ್ಯಾದಿ ಮೈಕ್ರೋ SUV ಗಳಿಗೆ ಇದು ಬದಲಿ ಆಯ್ಕೆ ಎನಿಸಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸ್ವಿಫ್ಟ್ AMT