Login or Register ಅತ್ಯುತ್ತಮ CarDekho experience ಗೆ
Login

ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಆರಂಭವಾಗಿದೆ ಲೆಫ್ಟ್ ಹ್ಯಾಂಡ್ ಡ್ರೈವ್ Nissan Magnite ರಫ್ತು

ನಿಸ್ಸಾನ್ ಮ್ಯಾಗ್ನೈಟ್ ಗಾಗಿ dipan ಮೂಲಕ ಫೆಬ್ರವಾರಿ 04, 2025 12:42 pm ರಂದು ಪ್ರಕಟಿಸಲಾಗಿದೆ

ಮ್ಯಾಗ್ನೈಟ್‌ನ ಎಲ್ಲಾ ವೇರಿಯಂಟ್‌ಗಳ ಬೆಲೆಗಳನ್ನು ಇತ್ತೀಚೆಗೆ ರೂ. 22,000 ಗಳವರೆಗೆ ಹೆಚ್ಚಿಸಲಾಗಿದೆ

ನಿಸ್ಸಾನ್ ಭಾರತದಿಂದ ಕೆಲವು ಲ್ಯಾಟಿನ್ ಅಮೇರಿಕನ್ ದೇಶಗಳಿಗೆ ಸಬ್-4m ಎಸ್‌ಯುವಿಯಾದ ಮ್ಯಾಗ್ನೈಟ್ ಲೆಫ್ಟ್ ಹ್ಯಾಂಡ್ ಡ್ರೈವ್ ವರ್ಷನ್ ಅನ್ನು ರಫ್ತು ಮಾಡಲು ಪ್ರಾರಂಭಿಸಿದೆ. ಜನವರಿ 2025 ರಲ್ಲಿ, 2,900 ಯುನಿಟ್‌ಗಳನ್ನು ರವಾನಿಸಲಾಯಿತು. ಈ ಕಾರು ತಯಾರಕರು ಮಿಡಲ್ ಈಸ್ಟ್, ಉತ್ತರ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶದ ಮಾರುಕಟ್ಟೆಗಳಿಗೆ 7,100 ಕ್ಕೂ ಹೆಚ್ಚು ಯುನಿಟ್‌ಗಳನ್ನು ರಫ್ತು ಮಾಡಲು ಯೋಜಿಸಿದ್ದಾರೆ. ರೈಟ್ ಹ್ಯಾಂಡ್ ಡ್ರೈವ್ ಮಾರುಕಟ್ಟೆಗಳಿಗೆ ಫೇಸ್‌ಲಿಫ್ಟ್ ಆಗಿರುವ ಮ್ಯಾಗ್ನೈಟ್‌ನ ರಫ್ತು ನವೆಂಬರ್ 2024 ರಲ್ಲಿ ಪ್ರಾರಂಭವಾಯಿತು ಮತ್ತು ಈಗ ಲೆಫ್ಟ್ ಹ್ಯಾಂಡ್ ಡ್ರೈವ್ ಮಾರುಕಟ್ಟೆಗಳಿಗೆ ಕೂಡ ರಫ್ತು ನಡೆಯುತ್ತಿದೆ.

LHD ಮಾಡೆಲ್‌ನಲ್ಲಿ, ಲೆಫ್ಟ್ ಡ್ರೈವ್ ಮಾರುಕಟ್ಟೆಗಳಿಗೆ ಸರಿಹೊಂದುವಂತೆ ಸ್ಟೀರಿಂಗ್ ವೀಲ್ ಅನ್ನು ಎಡಕ್ಕೆ ಸರಿಸಲಾಗಿದೆ. ಇದಲ್ಲದೆ, ಹೊರಭಾಗ ಮತ್ತು ಒಳಭಾಗದ ಡಿಸೈನ್, ಫೀಚರ್ ಗಳು, ಸುರಕ್ಷತಾ ಸೂಟ್‌ಗಳು ಮತ್ತು ಎಂಜಿನ್ ಆಯ್ಕೆಗಳು ಭಾರತ-ಸ್ಪೆಕ್ ಮಾಡೆಲ್‌ನಂತೆಯೇ ಇರುತ್ತವೆ.

ಹಾಗೆಯೇ, ನಿಸ್ಸಾನ್ ಇತ್ತೀಚೆಗೆ ಭಾರತದಲ್ಲಿ ಮ್ಯಾಗ್ನೈಟ್ ಬೆಲೆಗಳನ್ನು ಹೆಚ್ಚಿಸಿದೆ. ಪ್ರತಿ ವೇರಿಯಂಟ್‌ನ ವಿವರವಾದ ಬೆಲೆ ಇಲ್ಲಿದೆ:

ನಿಸ್ಸಾನ್ ಮ್ಯಾಗ್ನೈಟ್: ಹೊಸ ಬೆಲೆಗಳು

ಪರಿಚಯಾತ್ಮಕ ಬೆಲೆಗಳು ಕೊನೆಗೊಳ್ಳುವುದರೊಂದಿಗೆ, ನಿಸ್ಸಾನ್ ಮ್ಯಾಗ್ನೈಟ್ ಬೆಲೆಯು ಈಗ ರೂ. 6.12 ಲಕ್ಷದಿಂದ 11.72 ಲಕ್ಷಗಳವರೆಗೆ (ಎಕ್ಸ್ ಶೋರೂಂ, ಭಾರತದಾದ್ಯಂತ) ಇದೆ. ವಿವರಗಳು ಇಲ್ಲಿವೆ:

ವೇರಿಯಂಟ್

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

ವಿಸಿಯಾ

ರೂ. 5.99 ಲಕ್ಷ

ರೂ. 6.12 ಲಕ್ಷ

ರೂ. 13,000

ವಿಸಿಯಾ ಪ್ಲಸ್

ರೂ. 6.49 ಲಕ್ಷ

ರೂ. 6.62 ಲಕ್ಷ

ರೂ. 13,000

ಅಸೆಂಟಾ

ರೂ. 7.14 ಲಕ್ಷ

ರೂ. 7.27 ಲಕ್ಷ

ರೂ. 13,000

ಎನ್-ಕನೆಕ್ಟಾ

ರೂ. 7.86 ಲಕ್ಷ

ರೂ. 7.94 ಲಕ್ಷ

ರೂ. 8,000

ಟೆಕ್ನಾ

ರೂ. 8.75 ಲಕ್ಷ

ರೂ. 8.89 ಲಕ್ಷ

ರೂ. 14,000

ಟೆಕ್ನಾಪ್ಲಸ್

ರೂ. 9.10 ಲಕ್ಷ

ರೂ. 9.24 ಲಕ್ಷ

ರೂ. 14,000

5-ಸ್ಪೀಡ್ AMT (ಆಟೋಮ್ಯಾಟಿಕ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌) ಜೊತೆಗೆ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

ವಿಸಿಯಾ

ರೂ. 6.60 ಲಕ್ಷ

ರೂ. 6.73 ಲಕ್ಷ

ರೂ. 13,000

ಅಸೆಂಟಾ

ರೂ. 7.64 ಲಕ್ಷ

ರೂ. 7.82 ಲಕ್ಷ

ರೂ. 18,000

ಎನ್-ಕನೆಕ್ಟಾ

ರೂ. 8.36 ಲಕ್ಷ

ರೂ. 8.49 ಲಕ್ಷ

ರೂ. 13,000

Tekna

ಟೆಕ್ನಾ

Rs 9.25 lakh

ರೂ. 9.25 ಲಕ್ಷ

Rs 9.44 lakh

ರೂ. 9.44 ಲಕ್ಷ

Rs 19,000

ರೂ. 19,000

ಟೆಕ್ನಾಪ್ಲಸ್

ರೂ. 9.60 ಲಕ್ಷ

ರೂ. 9.79 ಲಕ್ಷ

ರೂ. 19,000

1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌

ಎನ್-ಕನೆಕ್ಟಾ

ರೂ. 9.19 ಲಕ್ಷ

ರೂ. 9.34 ಲಕ್ಷ

ರೂ. 15,000

ಟೆಕ್ನಾ

ರೂ. 9.99 ಲಕ್ಷ

ರೂ. 10.14 ಲಕ್ಷ

ರೂ. 15,000

ಟೆಕ್ನಾಪ್ಲಸ್

ರೂ. 10.35 ಲಕ್ಷ

ರೂ. 10.50 ಲಕ್ಷ

ರೂ. 15,000

CVT ಯೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (ಕಂಟಿನ್ಯುಸ್ಲಿ ವೇರಿಯೇಬಲ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌)

ಅಸೆಂಟಾ

ರೂ. 9.79 ಲಕ್ಷ

ರೂ. 9.99 ಲಕ್ಷ

ರೂ. 20,000

ಎನ್-ಕನೆಕ್ಟಾ

ರೂ. 10.34 ಲಕ್ಷ

ರೂ. 10.49 ಲಕ್ಷ

ರೂ. 15,000

ಟೆಕ್ನಾ

ರೂ. 11.14 ಲಕ್ಷ

ರೂ. 11.36 ಲಕ್ಷ

ರೂ. 22,000

ಟೆಕ್ನಾಪ್ಲಸ್

ರೂ. 11.50 ಲಕ್ಷ

ರೂ. 11.72 ಲಕ್ಷ

ರೂ. 22,000

ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್, ಭಾರತಾದ್ಯಂತ ಇರುವ ಬೆಲೆಗಳಾಗಿವೆ.

ಅಕ್ಟೋಬರ್ 2024 ರಲ್ಲಿ ಫೇಸ್‌ಲಿಫ್ಟ್ ಮಾಡಿರುವ ಮಾಡೆಲ್ ಅನ್ನು ಬಿಡುಗಡೆ ಮಾಡಿದ ನಂತರ ಮ್ಯಾಗ್ನೈಟ್‌ನ ಬೆಲೆಯಲ್ಲಿ ಇದು ಮೊದಲ ಏರಿಕೆಯಾಗಿದೆ. ಬನ್ನಿ, ನಿಸ್ಸಾನ್ ಮ್ಯಾಗ್ನೈಟ್‌ನಲ್ಲಿ ಯಾವ ಯಾವ ಫೀಚರ್‌ಗಳನ್ನು ನೀಡಲಾಗಿದೆ ಎಂದು ನೋಡೋಣ:

ಇದನ್ನು ಕೂಡ ಓದಿ: ಸ್ಕೋಡಾ ಕೈಲಾಕ್ ಎಲ್ಲಾ ವೇರಿಯಂಟ್‌ಗಳ ವಿವರ ಇಲ್ಲಿದೆ: ನೀವು ಯಾವ ವೇರಿಯಂಟ್ ಅನ್ನು ಖರೀದಿಸಬೇಕು?

ನಿಸ್ಸಾನ್ ಮ್ಯಾಗ್ನೈಟ್: ಒಂದು ಓವರ್‌ವ್ಯೂ

ನಿಸ್ಸಾನ್ ಮ್ಯಾಗ್ನೈಟ್ ಫುಲ್-ಎಲ್ಇಡಿ ಲೈಟ್‌ಗಳು, ಪ್ರತಿ ಬದಿಯಲ್ಲಿ ಎರಡು ಸಿ-ಆಕಾರದ ಕ್ರೋಮ್ ಬಾರ್‌ಗಳನ್ನು ಹೊಂದಿರುವ ಬ್ಲಾಕ್ ಫಿನಿಷ್ ಇರುವ ಗ್ರಿಲ್ ಮತ್ತು ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳನ್ನು ಒಳಗೊಂಡಿದೆ. ಇದು 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಸಿಲ್ವರ್ ರೂಫ್ ರೈಲ್‌ಗಳೊಂದಿಗೆ ಬರುತ್ತದೆ.

ಒಳಭಾಗದಲ್ಲಿ, ಇದು ಬ್ಲಾಕ್ ಮತ್ತು ಆರೆಂಜ್ ಬಣ್ಣದ ಲೆದರೆಟ್ ಸೀಟುಗಳು ಮತ್ತು 3-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಡ್ಯುಯಲ್-ಟೋನ್ ವಿನ್ಯಾಸವನ್ನು ಹೊಂದಿದೆ.

ಇದು 8-ಇಂಚಿನ ಟಚ್‌ಸ್ಕ್ರೀನ್ (ಕೆಲವು ವೇರಿಯಂಟ್‌ಗಳು 9-ಇಂಚಿನ ದೊಡ್ಡ ಯೂನಿಟ್ ಅನ್ನು ಹೊಂದಿವೆ), 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಬರುತ್ತದೆ. ಇದು ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಕೂಡ ಹೊಂದಿದೆ. ಇದು ಅದರ ಅನೇಕ ಸ್ಪರ್ಧಿಗಳು ನೀಡುತ್ತಿರುವ ಸನ್‌ರೂಫ್ ಅನ್ನು ಹೊಂದಿಲ್ಲ.

ಸುರಕ್ಷತಾ ವಿಷಯದಲ್ಲಿ ಇದು ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಆಟೋ-ಡಿಮ್ಮಿಂಗ್ ಇನ್ಸೈಡ್ ರಿಯರ್‌ವ್ಯೂ ಮಿರರ್ (IRVM), ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ.

ನಿಸ್ಸಾನ್ ಮ್ಯಾಗ್ನೈಟ್: ಪವರ್‌ಟ್ರೇನ್ ಆಯ್ಕೆಗಳು

ನಿಸ್ಸಾನ್ ಮ್ಯಾಗ್ನೈಟ್ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅಥವಾ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದರ ವಿವರವಾದ ಸ್ಪೆಸಿಫಿಕೇಷನ್‌ಗಳನ್ನು ಈ ಕೆಳಗೆ ನೀಡಲಾಗಿದೆ.

ಎಂಜಿನ್

1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

ಪವರ್

72 PS

100 PS

ಟಾರ್ಕ್

96 Nm

Up to 160 Nm

ಟ್ರಾನ್ಸ್‌ಮಿಷನ್‌

5-ಸ್ಪೀಡ್ MT / 5-ಸ್ಪೀಡ್ AMT

5-ಸ್ಪೀಡ್ MT / 7-ಸ್ಟೆಪ್ CVT

ನಿಸ್ಸಾನ್ ಮ್ಯಾಗ್ನೈಟ್: ಪ್ರತಿಸ್ಪರ್ಧಿಗಳು

ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಹುಂಡೈ ವೆನ್ಯೂ ಮತ್ತು ಮಹೀಂದ್ರಾ XUV 3XO ನಂತಹ ಇತರ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದು ಟೊಯೋಟಾ ಟೈಸರ್ ಮತ್ತು ಮಾರುತಿ ಫ್ರಾಂಕ್ಸ್‌ನಂತಹ ಸಬ್-4 ಮೀಟರ್‌ ಕ್ರಾಸ್‌ಒವರ್‌ಗಳೊಂದಿಗೆ ಕೂಡ ಸ್ಪರ್ಧಿಸುತ್ತದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

Share via

Write your Comment on Nissan ಮ್ಯಾಗ್ನೈಟ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.2.84 - 3.12 ಸಿಆರ್*
ಹೊಸ ವೇರಿಯೆಂಟ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.50 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ