Login or Register ಅತ್ಯುತ್ತಮ CarDekho experience ಗೆ
Login

ಅಪ್ಡೇಟ್ ಆಗಿರೋ ಹ್ಯುಂಡೈ ಐ20 ಎನ್ ಲೈನ್ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆ

ಹುಂಡೈ ಐ20 ಎನ್‌-ಲೈನ್ ಗಾಗಿ rohit ಮೂಲಕ ಜೂನ್ 14, 2023 02:00 pm ರಂದು ಪ್ರಕಟಿಸಲಾಗಿದೆ

ಹೊಸ ಅಲಾಯ್ ವ್ಹೀಲ್ ಡಿಸೈನ್‌ನಲ್ಲಿ ಕಂಡಿದೆ

  • 2021ರ ಮಧ್ಯದಲ್ಲಿ ಹ್ಯುಂಡೈ ಭಾರತದಲ್ಲಿ i20 ಹ್ಯಾಚ್‌ಬ್ಯಾಕ್ ಅನ್ನು ಪ್ರಾರಂಭಿಸುವ ಮೂಲಕ “N ಲೈನ್” ವಿಭಾಗವನ್ನು ಪರಿಚಯಿಸಿದೆ,

  • ಎರಡು ಸಾಮಾನ್ಯ ನವೀಕೃತ i20ಗಳೊಂದಿಗೆ ಈ ನವೀಕೃತ i20 N ಲೈನ್ ಕಂಡಿದ್ದು ಎಲ್ಲಾ ಮಾಡೆಲ್‌ಗಳನ್ನು ಭಾಗಶಃ ಕಪ್ಪು ಮುಚ್ಚಿಕೆಯಿಂದ ಮರೆಮಾಚಲಾಗಿದೆ.

  • ಸ್ಪೈ ಶಾಟ್‌ಗಳನ್ನು ಪ್ರಸ್ತುತ ಇರುವ i20 N ಲೈನ್‌ ಮಾದರಿಯಲ್ಲೇ ಕಾಂಟ್ರಾಸ್ಟ್ ರೆಡ್ ಹೊಲಿಗೆಯೊಂದಿಗೆ ಅದೇ ಕಪ್ಪು ಅಪ್‌ಹೋಲ್ಸ್‌ಟ್ರಿಯನ್ನು ತೋರಿಸಿದೆ.

  • ಈ ಹ್ಯಾಚ್‌ಬ್ಯಾಕ್‌ನ ಸಮಾನ್ಯ ಆವೃತ್ತಿಗಳು ಪ್ಯಾಡಲ್ ಶಿಫ್ಟರ್‌ಗಳು ಮತ್ತು ಹೊಸ ವರ್ನಾದಂತಹ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್‌ನೊಂದಿಗೆ ಬರುತ್ತದೆ.

  • ನವೀಕೃತ i20 N ಲೈನ್ ಪ್ರಸ್ತುತ ಇರುವ ಮಾಡೆಲ್‌ಗಿಂತ ದುಬಾರಿ ಬೆಲೆಯಲ್ಲಿ 2023ರ ಕೊನೆಯ ಅರ್ಧದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ.

ಭಾರತದಲ್ಲಿ ಪರೀಕ್ಷೆ ಮಾಡಲಾದ ನವೀಕೃತ ಹ್ಯುಂಡೈ i20 ಅನ್ನು ನಾವು ಗುರುತಿಸಿದ ಕೇವಲ ಒಂದು ವಾರದ ನಂತರ, ಈ i20 N ಲೈನ್‌ನ ತಾಜಾ ಆವೃತ್ತಿ ಯನ್ನು ಮೊದಲ ಬಾರಿಗೆ ಕ್ಯಾಮರಾದಲ್ಲಿ ಸೆರೆಹಿಡಿಯಲಾಯಿತು. ಇದರ ಜೊತೆಗೆ ಸಾಮಾನ್ಯ ಆವೃತ್ತಿಯ ನವೀಕೃತ ಹ್ಯಾಚ್‌ಬ್ಯಾಕ್‌ಗಳೂ ಇದ್ದು, ಡಿಸೈನ್ ಟ್ವೀಕ್‌ಗಳನ್ನು ಮರೆಮಾಚಲು ಎಲ್ಲಾ ಮೂರು ಹ್ಯಾಚ್‌ಬ್ಯಾಕ್‌ಗಳನ್ನೂ ಕಪ್ಪು ಮುಚ್ಚಿಕೆಯಿಂದ ಮುಚ್ಚಲಾಗಿತ್ತು. 2021ರಲ್ಲಿ ಭಾರತದಲ್ಲಿ ಈ ವಿಭಾಗವನ್ನು ಪರಿಚಯಿಸಿದಾಗ i20 ಯು N ಲೈನ್ ಟ್ರೀಟ್‌ಮೆಂಟ್ ಪಡೆದಿರುವ ಮೊದಲ ಮಾಡೆಲ್ ಆಗಿತ್ತು.

ಹೊಸ ವಿಷಯಗಳು

ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಮುಂಭಾಗ ಮತ್ತು ಹಿಂಭಾಗವನ್ನು ಕಪ್ಪು ಮುಚ್ಚಿಕೆಯಿಂದ ಮರೆಮಾಚಲಾಗಿದ್ದರೂ, ಇದರ ಪ್ರೊಫೈಲ್ ಪ್ರಸ್ತುತ ಇರುವ i20 N ಲೈನ್‌ನ ಮಾದರಿಯಲ್ಲಿಯೇ ರೆಡ್ ಸೈಡ್ ಸ್ಕರ್ಟ್‌ಗಳನ್ನು ತೋರಿಸಿದೆ. ಇದರ ಮುಂಭಾಗದಲ್ಲಿ ರೆಡ್ ಬ್ರೇಕ್ ಕ್ಯಾಪಿಲ್ಲರ್‌ಗಳನ್ನು ಹೊಂದಿದ ಹೊಸ ಜೊತೆಯ ಅಲಾಯ್ ವ್ಹೀಲ್‌ಗಳನ್ನು, ಹಬ್‌ಕ್ಯಾಪ್‌ಗಳಲ್ಲಿ “N” ಬ್ಯಾಡ್ಜ್‌ ಇರುವುದು ಕಂಡಿದೆ. ಇದರೊಂದಿಗಿದ್ದ i20ಯ ಒಂದು ಸಾಮಾನ್ಯ ವೇರಿಯೆಂಟ್‌ನಲ್ಲಿ ಕವರ್‌ಗಳನ್ನು ಹೊಂದಿದ ಸ್ಟೀಲ್ ವ್ಹೀಲ್‌ಗಳು ಇದ್ದರೆ, ಇನ್ನೊಂದಕ್ಕೆ ಹಿಂದಿನ ಪರೀಕ್ಷಾರ್ಥ ಕಾರಿನಲ್ಲಿ ಗಮನಿಸಿದಂತೆ ಹೊಸ ಅಲಾಯ್ ವ್ಹೀಲ್ ಡಿಸೈನ್ ಮತ್ತು ಸಿಲ್ವರ್ ಪೇಂಟ್ ಫಿನಿಷಿಂಗ್ ಹೊಂದಿರುವುದು ಕಂಡುಬಂದಿದೆ.

ಮೇಲೆ ಹೇಳಲಾದ ಪರಿಷ್ಕರಣೆಗಳ ಹೊರತಾಗಿ, ಈ ನವೀಕೃತ N ಲೈನ್‌ನ ಅಪ್‌ಡೇಟ್‌ಗಳು ಟ್ವೀಕ್ ಬಂಪರ್‌ಗಳು ಮತ್ತು ಮಲ್ಟಿ-ರಿಫ್ಲೆಕ್ಟರ್ LED ಹೆಡ್‌ಲೈಟರ್‌ಗಳನ್ನು ಒಳಗೊಂಡಂತೆ ಇತ್ತೀಚೆಗೆ ಬಿಡುಗಡೆಯಾದ ಯುರೋಪಿಯನ್ ಸ್ಪೆಕ್‌ನ ನವೀಕೃತ i20ಯಲ್ಲಿ ಗಮನಿಸಿದ ಬದಲಾವಣೆಗಳಿಗೆ ಅನುಗುಣವಾಗಿ ಇದೆ. ಹಿಂಭಾಗದಲ್ಲಿ ಈ ನವೀಕೃತ i20 N ಕೂಡಾ ಸಂಪರ್ಕಿತ LED ಟೇಲ್‌ಲೈಟ್ ಸೆಟಪ್ ಅನ್ನೂ ಹೊಂದಿದೆ.

ಇದನ್ನೂ ಓದಿ: ಹ್ಯುಂಡೈ ಎಕ್ಸ್‌ಟರ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ ಹಾರ್ದಿಕ್ ಪಾಂಡ್ಯಾ

ಒಳಗಿನ ವಿವರಗಳು

ನವೀಕೃತ i20 N ಲೈನ್‌ನ ಕ್ಯಾಬಿನ್‌ನಲ್ಲಿ ಚಿತ್ರಗಳು ಕಾಂಟ್ರಾಸ್ಟ್ ರೆಡ್ ಹೊಲಿಗೆಯೊಂದಿಗೆ ಅದೇ ಬ್ಲಾಕ್ ಅಪ್‌ಹೋಲ್ಸ್‌ಟ್ರಿ ಮಾತ್ರ ತೋರಿಸಿದ್ದು, ಇನ್ನೊಂದು ಸ್ಪೈ ಚಿತ್ರದಲ್ಲಿ ಸಾಮಾನ್ಯ i20 ಕ್ಯಾಬಿನ್‌ ಡ್ಯಾಶ್‌ಬೋರ್ಡ್‌ನ ಒಂದು ನೋಟವನ್ನು ನೋಡಿದೆ. ಕೊನೆಯದು ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿದ್ದು 6ನೇ ಪೀಳಿಗೆ ವರ್ನಾದಲ್ಲಿ ಇರುವಂತೆ ಹೊಸ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಹೊಂದಿರುವ ಸಾಧ್ಯತೆ ಇದ್ದು ಮೊದಲಿನಂತೆಯೇ ಡ್ಯಾಶ್‌ಕ್ಯಾಮ್ ಮತ್ತು ಟಚ್‌ಸ್ಕ್ರೀನ್ ಸೆಟಪ್ ಫೀಚರ್‌ಗಳನ್ನು ಹೊಂದಿದೆ.

ಹ್ಯುಂಡೈ ಸ್ಟಾಂಡರ್ಡ್ ಮಾಡೆಲ್‌ನ ನವೀಕೃತ ಆವೃತ್ತಿಯಲ್ಲಿ ನಿರೀಕ್ಷಿಸಿದಂತೆ ಈ, i20 N ಲೈನ್‌ಗೆ ವಾತಾಯನದ ಮುಂಭಾಗದ ಸೀಟುಗಳು ಮತ್ತು ಆ್ಯಂಬಿಯೆಂಟ್ ಲೈಟಿಂಗ್ ಮುಂತಾದ ಹೊಸ ಸಾಧನಗಳನ್ನು ನೀಡಬಹುದು. ವೈರ್‌ಲೆಸ್ ಫೋನ್ ಚಾರ್ಜಿಂಗ್, 10.25-ಟಚ್‌ಸ್ಕ್ರೀನ್, ಸಂಪರ್ಕಿತ ಕಾರ್ ಟೆಕ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಮುಂತಾದ ಇತರ ಫೀಚರ್‌ಗಳನ್ನು ಮುಂದುವರೆಸಿಕೊಂಡು ಹೋಗುವ ಸಾಧ್ಯತೆ ಇದೆ. ಸುರಕ್ಷತೆಗೆ ಆರರ ತನಕ ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ರಿವರ್ಸಿಂಗ್ ಕ್ಯಾಮರಾವನ್ನು ಹೊಂದಿದೆ.

ಬಾನೆಟ್ ಅಡಿಯಲ್ಲಿ ಟರ್ಬೋ-ಪೆಟ್ರೋಲ್

ಈ ನವೀಕೃತ i20 N ಅದೇ 1-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ (120PS/172Nm) ಅನ್ನೇ ಪಡೆದಿರಬಹುದು. ಪ್ರಸ್ತುತ ಕೊಟ್ಟಿರುವ ಆದೇ 6-ಸ್ಪೀಡ್ iMT (ಕ್ಲಚ್‌ಲೆಸ್ ಮ್ಯಾನುವಲ್) ಮತ್ತು 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ಅನ್ನು ನೀಡಬಹುದು.

ಇದನ್ನೂ ಓದಿ: ಸ್ವಿಫ್ಟ್,ವ್ಯಾಗನ್ ಆರ್ ಮತ್ತು ಟಾಟಾ ನೆಕ್ಸಾನ್ ಅನ್ನು ಹಿಂದಿಕ್ಕಿದ ಮಾರುತಿ ಬಲೆನೋ ಮೇ 2023ರ ಅತ್ಯುತ್ತಮವಾಗಿ ಮಾರಾಟವಾದ ಕಾರು

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

ಹ್ಯುಂಡೈ ನವೀಕೃತ i20 N ಲೈನ್ ಅನ್ನು ಬಹುಶಃ ನವೀಕೃತ i20 ಯೊಂದಿಗೆ 2023ರ ಕೊನೆಯಾರ್ಧದಲ್ಲಿ ಬಿಡುಗಡೆ ಮಾಡಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ. ಇದರ ಬೆಲೆಗಳು ಪ್ರಸ್ತುತ ಇರುವ ಮಾಡೆಲ್‌ಗಳಿಗಿಂತ ದುಬಾರಿಯಾಗಿರಬಹುದು. ಟಾಟಾ ಆಲ್ಟ್ರೋಝ್‌ನ ಟರ್ಬೋ ವೇರಿಯೆಂಟ್‌ಗಳು ಇದರ ಏಕೈಕ ನೇರ ಪ್ರತಿಸ್ಪರ್ಧಿಯಾಗಿದೆ.

ಚಿತ್ರದ ಮೂಲ

ಇನ್ನಷ್ಟು : i20 ಯ ಆನ್‌ರೋಡ್ ಬೆಲೆ

Share via

Write your Comment on Hyundai ಐ20 ಎನ್‌-ಲೈನ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ