• English
  • Login / Register

ಅನಾವರಣಗೊಳ್ಳುವುದಕ್ಕಿಂತ ಮುಂಚಿತವಾಗಿ ಬಿಡುಗಡೆಗೊಂಡ ಹೋಂಡಾ ಎಲಿವೇಟ್‌ನ ಇನ್ನೊಂದು ಟೀಸರ್

ಹೊಂಡಾ ಇಲೆವಟ್ ಗಾಗಿ tarun ಮೂಲಕ ಜೂನ್ 02, 2023 02:00 pm ರಂದು ಪ್ರಕಟಿಸಲಾಗಿದೆ

  • 45 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ನಂತಹ ಪ್ರಬಲರೊಂದಿಗೆ ಸ್ಪರ್ಧಿಸಲು ಈ ಎಲಿವೇಟ್ ಅನ್ನು ಹೋಂಡಾ ಬಿಡುಗಡೆಗೊಳಿಸಲಿದೆ

Honda Elevate

  • ಎಲಿವೇಟ್ ಎಸ್‌ಯುವಿಯ ನೇರವಾದ ಮತ್ತು ಬಾಕ್ಸ್ ಶೈಲಿಯ ಹಿಂದಿನ ಪ್ರೊಫೈಲ್‌ನ ಭಾಗವನ್ನು ಈ ಟೀಸರ್ ತೋರಿಸುತ್ತದೆ
  • ಇದು ಡಿಆರ್‌ಎಲ್‌ಗಳೊಂದಿಗೆ, ಎಲ್‌ಇಡಿ ಹೆಡ್‌ಲೈಟ್‌ಗಳು, ಬ್ಲ್ಯಾಕ್ಡ್-ಔಟ್ ಅಲಾಯ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಸೊಗಸಾದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಹೊಂದಿರುತ್ತದೆ. 
  •  ನಾವಿದರಲ್ಲಿ ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ADAS ಅನ್ನು ನಿರೀಕ್ಷಿಸಬಹುದು.
  •  ಸಿಟಿಯ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಹಾಗೂ ಸ್ಟ್ರಾಂಗ್-ಹೈಬ್ರಿಡ್ ಟೆಕ್ನಾಲಜಿಯನ್ನು ಸಹ ನಿರೀಕ್ಷಿಸಲಾಗಿದೆ.
  •  ಇದರ ಬೆಲೆಗಳು ಸರಿಸುಮಾರು ರೂ. 11 ಲಕ್ಷದಿಂದ (ಎಕ್ಸ್‌-ಶೋರೂಮ್) ಪ್ರಾರಂಭವಾಗಬಹುದು.

ಜೂನ್ 6 ರಂದು ಜಾಗತಿಕ ಪ್ರೀಮಿಯರ್ ಅನ್ನು ಹೊಂದಿರುವ, ಈ ಹೋಂಡಾ ಎಲಿವೇಟ್ ಮತ್ತೊಮ್ಮೆ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಇದು ಜಾಝ್ ಹ್ಯಾಚ್‌ಬ್ಯಾಕ್‌ನ ಉತ್ಪನ್ನವಾದ WR-V ನಂತರ 2017 ರಿಂದ ಭಾರತಕ್ಕೆ ಜಪಾನಿನ ಕಾರು ತಯಾರಕರ ಹೊಚ್ಚಹೊಸ ಮೊದಲ ಕಾರಾಗಿದೆ. 

Honda Elevate

 ಈ ಟೀಸರ್ ಎಲಿವೇಟ್‌ನ ಹಿಂಭಾಗದ ಪ್ರೊಫೈಲ್‌ನ ಸಿಲೋಯೆಟ್ ಅನ್ನು ತೋರಿಸುತ್ತದೆ. ಇದು ಹಿಂಭಾಗದಲ್ಲಿ ನೇರವಾದ ಸ್ಟ್ಯಾನ್ಸ್ ಅನ್ನು ಹೊಂದಿರುತ್ತದೆ, ಬೂಟ್ ಲಿಡ್ ವಿಂಡ್‌ಸ್ಕ್ರೀನ್ ಗ್ಲಾಸ್ ಪ್ರದೇಶದಿಂದ ದೂರದಲ್ಲಿರುತ್ತದೆ. ಈ ಎಲಿವೇಟ್ ಇತರ ಹಲವಾರು ಕಾಂಪ್ಯಾಕ್ಟ್ ಎಸ್‌ಯುವಿಗಳಂತೆಯೇ ಸಾಂಪ್ರದಾಯಿಕ ಬಾಕ್ಸ್ ತರಹದ ಎಸ್‌ಯುವಿ ಸಿಲೋಯೆಟ್ ಅನ್ನು ಹೊಂದಿದೆ ಎಂಬುದನ್ನು ನಾವು ಈ ಚಿತ್ರದಲ್ಲಿ ಗಮನಿಸಬಹುದು.

 ಇದನ್ನೂ ಓದಿ: ಹೋಂಡಾ ಸಿಟಿ ಹೈಬ್ರಿಡ್ ಪವರ್‌ಟ್ರೇನ್ ಟೆಕ್ ವಿವರಣೆ

 ಹಿಂದಿನ ಸ್ಕೆಚ್‌ಗಳ ಪ್ರಕಾರ, ಈ ಎಲಿವೇಟ್ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೈಲೈಟ್‌ಗಳು, ಬ್ಲ್ಯಾಕ್ಡ್-ಔಟ್ ಅಲಾಯ್ ವ್ಹೀಲ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಸುತ್ತಲೂ ಹರಡಿರುವ ಎಲ್‌ಇಡಿ ಟೈಲ್‌ಲೈಟ್‌ಗಳಂತಹ ಅಂಶಗಳಿಂದ ಸೊಗಸಾಗಿ ಕಾಣುವ ಎಸ್‌ಯುವಿ ಆಗಿದೆ. 

ಫೀಚರ್‌ಗಳ ವಿಷಯದಲ್ಲಿ, ಸಿಟಿಯಲ್ಲಿರುವ 8-ಇಂಚಿನ ಸ್ಕ್ರೀನ್‌ಗಿಂತ ದೊಡ್ಡ ಸ್ಕ್ರೀನ್ ಅನ್ನು ನಿರೀಕ್ಷಿಸಬಹುದು, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಮತ್ತು ವೈರ್‌ಲೆಸ್ ಚಾರ್ಜರ್‌ಗಳನ್ನು ಇದು ಹೊಂದಿರುತ್ತದೆ. ಸುರಕ್ಷತೆಯ ವಿಷಯದಲ್ಲಿ ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ADAS (ಸುಧಾರಿತ ಡ್ರೈವರ್ ಸಹಾಯಕ ವ್ಯವಸ್ಥೆ) ಯನ್ನು ಸಹ ಹೊಂದಿರುತ್ತದೆ. 

Honda Elevate teaser image

ಈ ಎಲಿವೇಟ್, ಸೆಡಾನ್‌ನಲ್ಲಿ 122PS ಕ್ಲೈಮ್ ಮಾಡುವ ಸಿಟಿಯ 1.5-ಲೀಟರ್ i-VTEC ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಇಲ್ಲಿ ನೀಡಲಾಗುವುದು ಎಂಬುದು ನಮ್ಮ ನಿರೀಕ್ಷೆಯಾಗಿದೆ, ಇದು 25kmpl ಗಿಂತಲೂ ಹೆಚ್ಚಿನ ಇಂಧನ ಆರ್ಥಿಕತೆಯೊಂದಿಗೆ ಮೂರನೇ ಕಾಂಪ್ಯಾಕ್ಟ್ ಎಸ್‌ಯುವಿ ಆಗಬಹುದು. ಇದಕ್ಕೆ ಯಾವುದೇ ಡಿಸೇಲ್ ಎಂಜಿನ್ ಅನ್ನು ನೀಡಲಾಗುವುದಿಲ್ಲ. 

ಇದನ್ನೂ ಓದಿ: ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್-ಹೈಬ್ರಿಡ್ ಇಂಧನ ದಕ್ಷತೆ – ಕ್ಲೈಮ್ ಮಾಡಿದ್ದು ವರ್ಸಸ್ ವಾಸ್ತವ

ಈ ಹೋಂಡಾ ಎಲಿವೇಟ್‌ನ ಬೆಲೆಯನ್ನು ರೂ. 11 ಲಕ್ಷದಿಂದ (ಎಕ್ಸ್-ಶೋರೂಮ್) ನಿಗದಿಪಡಿಸುವ ಸಾಧ್ಯತೆಯಿದೆ. ಈಗಾಗಲೇ ಹೇಳಿರುವಂತೆ ಈ ಎಲಿವೇಟ್ ರೂ. 10 ಲಕ್ಷದಿಂದ 20 ಲಕ್ಷ ರೇಂಜ್‌ನಲ್ಲಿ ಬೆಲೆಯನ್ನು ಹೊಂದಿರುವ  ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಸಿಟ್ರಾನ್ C3 ಏರ್‌ಕ್ರಾಸ್, ಸ್ಕೋಡಾ ಕುಶಾಕ್, ಮತ್ತು ಎಂಜಿ ಆಸ್ಟರ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

was this article helpful ?

Write your Comment on Honda ಇಲೆವಟ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience