ಹಿಂದಿನ ಹ್ಯುಂಡೈ ವರ್ನಾಗಿಂತ ಅದರ ಹೊಸ ಆವೃತ್ತಿ ಹೇಗೆ ಭಿನ್ನವಾಗಿದೆ ?
ಪೀಳಿಗೆಯ ನವೀಕರಣದೊಂದಿಗೆ, ಈ ಸೆಡಾನ್ ತನ್ನ ಪವರ್‌ಟ್ರೇನ್ ಆಯ್ಕೆಯೊಂದಿಗೆ ಪ್ರಾರಂಭಿಸಿ ಹಲವಾರು ಪ್ರಮುಖ ಬದಲಾವಣೆಗೆ ಒಳಗಾಗಿದೆ.
ಈ ಆರನೇ-ಪೀಳಿಗೆಯ ಹ್ಯುಂಡೈ ವರ್ನಾ ಇತ್ತೀಚಿಗೆ ಖರೀದಿದಾರರಿಗೆ ಪ್ರಭಾವಶಾಲಿ ಪರಿಚಯಾತ್ಮಕ ಪ್ರಾಸ್ತಾವಿಕ ಬೆಲೆಯಲ್ಲಿ ಲಭ್ಯವಿದೆ. ಇದರ ಪೂರ್ವಾವೃತ್ತಿಗೆ ಹೋಲಿಸಿದರೆ, ಹೊಸ ವರ್ನಾ ಹೆಚ್ಚು ದೊಡ್ಡದಾಗಿದೆ, ಹೊಸ ಪವರ್‌ಟ್ರೇನ್ ಅನ್ನು ಪಡೆಯುತ್ತದೆ ಮತ್ತು ಹೆಚ್ಚಿನ ಪ್ರೀಮಿಯಂ ಫೀಚರ್‌ಗಳನ್ನು ಸಹ ಒಳಗೊಂಡಿದೆ. ಇವೆರಡೂ ಎಷ್ಟು ಹೋಲುತ್ತವೆ ಅಥವಾ ಎಷ್ಟು ವಿಭಿನ್ನವಾಗಿವೆ ಎಂಬುದರ ಸ್ಪಷ್ಟ ಚಿತ್ರಣಕ್ಕಾಗಿ, ನಾವು ಅವುಗಳನ್ನು ಅನೇಕ ಅಂಶಗಳಲ್ಲಿ ವಿವರವಾಗಿ ಹೋಲಿಕೆ ಮಾಡಿದ್ದೇವೆ:
ಎಕ್ಸ್‌ಟೀರಿಯರ್
ಹ್ಯುಂಡೈ ಹೊಸ ವರ್ನಾದ ಮರುವಿನ್ಯಾಸಕ್ಕೆ ಕ್ರಾಂತಿಕಾರಿ ವಿಧಾನವನ್ನು ಆರಿಸಿಕೊಂಡಿದೆ. ಹಳೆಯ ಮಾಡೆಲ್ ಹೆಚ್ಚು ಉನ್ನತ ಅಂಶಗಳನ್ನು ಹೊಂದಿಲ್ಲದಿದ್ದರೂ, ಆರನೇ-ತಲೆಮಾರಿನ ಈ ಸೆಡಾನ್ ಹೆಚ್ಚು ದಟ್ಟವಾದ ಮುಂಭಾಗವನ್ನು ಪಡೆಯುತ್ತವೆ, ಗ್ರಿಲ್‌ನಲ್ಲಿ ಉದ್ದನೆಯ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್ ಮತ್ತು “ಪ್ಯಾರಾಮೆಟ್ರಿಕ್ ಜ್ಯುವೆಲ್” ವಿನ್ಯಾಸವನ್ನು ಅಳವಡಿಸಲಾಗಿದೆ. ಹೊಸ ವರ್ನಾ ಅದರ ತಲೆಮಾರಿನ ಶ್ರೇಣಿಗಳಿಗಿಂತ ಜಾಗತಿಕವಾಗಿ ಮಾರಾಟವಾದ ಇತ್ತೀಚಿನ-ತಲೆಮಾರಿನ ಎಲಾಂಟ್ರಾವನ್ನು ಹೆಚ್ಚು ನೆನಪಿಸುತ್ತದೆ.
ಈ ಸೆಡಾನ್ ಫಾಗ್‌ಲ್ಯಾಂಪ್‌ಗಳನ್ನು ಪಡೆಯದಿದ್ದರೂ (ಅದರ ಹೆಡ್‌ಲೈಟ್‌ಗಳು ಕಾರ್ನರಿಂಗ್ ಕಾರ್ಯವಿಧಾನವನ್ನು ಪಡೆಯುತ್ತವೆ), ಇದು ಮಲ್ಟಿ-ರಿಫ್ಲೆಕ್ಟರ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ. ಈ ವರ್ನಾಗೆ ಮತ್ತೊಂದು ಹೊಸ ಸೇರ್ಪಡೆಯೆಂದರೆ, ಇದರಲ್ಲಿ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಗಾಗಿ ರಡಾರ್ ಅಳವಡಿಸಲಾಗಿದೆ.
ಪ್ರೊಫೈಲ್‌ನಲ್ಲಿ, ಐದನೇ-ತಲೆಮಾರಿನ ವರ್ನಾ ಶಾಂತವಾಗಿ ಕಾಣುತ್ತದೆ, ಇದಕ್ಕೆ ಕಾರಣವಾದ, ಮುಂಭಾಗದಿಂದ ಹಿಂಭಾಗದವರೆಗಿರುವ ಸರಳ ರೇಖೆಗಳಿಗೆ ಧನ್ಯವಾದವನ್ನು ಹೇಳಲೇಬೇಕು. ಹೊಸ ಮಾಡೆಲ್, ಹೋಲಿಸಿದರೆ, ಚೂಪಾದ ಅಂಚುಗಳು ಮತ್ತು ನೆರಿಗೆಗಳಿಂದ ತುಂಬಿದ್ದು ಪ್ರಸ್ತುತ ಟಕ್ಸನ್ ಅನ್ನು ನೆನಪಿಸುತ್ತದೆ, ಮತ್ತು ಅದರ ಬದಿಗಳು ಸಹ ಉದ್ದವಾದ ಗುರುತುಗಳನ್ನು ಮತ್ತು ಸೆಡಾನ್‌ನ ಫಾಸ್ಟ್‌ಬ್ಯಾಕ್ ತರಹದ ವಿನ್ಯಾಸವನ್ನು ಹೊಂದಿವೆ. ಇದು 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳನ್ನು (ಟರ್ಬೋ ವೇರಿಯೆಂಟ್‌ಗಳು ಕೆಂಪು ಬ್ರೇಕ್ ಕ್ಯಾಲಿಪರ್‌ನೊಂದಿಗೆ ಹೊರಗೆ ಕಪ್ಪು ಬಣ್ಣವನ್ನು ವ್ಹೀಲ್‌ಗಳನ್ನು ಪಡೆಯುತ್ತವೆ) ಹೊಂದಿದೆ.
ಹಿಂಭಾಗದಲ್ಲಿಯೂ ಸಹ, ಹೊಸ ವರ್ನಾ ಹಳೆಯ ವರ್ನಾಗಿಂತ ಬಹಳಷ್ಟು ವ್ಯತ್ಯಾಸವನ್ನು ಹೊಂದಿದೆ. ಎರಡನೆಯದು ಸುತ್ತಲ್ಪಟ್ಟ ಎಲ್‌ಇಡಿ ಟೈಲ್‌ಲೈಟ್‌ಗಳೊಂದಿಗೆ ಸ್ವಚ್ಛ ಅಪೀಲ್ ಹೊಂದಿದ್ದರೆ, ಹೊಸ ಮಾಡೆಲ್ ಹಿಂಭಾಗದಲ್ಲಿ ಚೂಪಾದ ಸಂಪರ್ಕಿತ ಟೈಲ್‌ಲೈಟ್‌ಗಳು ಮತ್ತು ಬಂಪರ್‌ನಲ್ಲಿ ಜ್ಯಾಮಿತೀಯ ಅಂಶಗಳನ್ನು ಒಳಗೊಂಡಿದೆ.
ಸಂಬಂಧಿತ: ಸೆಗ್ಮೆಂಟ್ ಲೀಡರ್‌ಶಿಪ್‌ನಲ್ಲಿ ತನ್ನ ದೃಷ್ಟಿಯನ್ನು ಹೊಂದಿರುವ ಹೊಸ ಹ್ಯುಂಡೈ ವರ್ನಾ
ಅವುಗಳ ಆಯಾಮಗಳು ಈ ಕೆಳಗಿನಂತಿವೆ:
ಆಯಾಮಗಳು |
ಹಳೆಯ ವರ್ನಾ |
ಹೊಸ ವರ್ನಾ |
ವ್ಯತ್ಯಾಸ |
ಉದ್ದ |
4,440mm |
4,535mm |
+95mm |
ಅಗಲ |
1,729mm |
17,65mm |
+36mm |
ಎತ್ತರ |
1,475mm |
1,475mm |
ಯಾವುದೇ ಬದಲಾವಣೆಯಿಲ್ಲ |
ವ್ಹೀಲ್‌ಬೇಸ್ |
2,600mm |
2,670mm |
+70mm |
ಅದರ ಎತ್ತರವನ್ನು ಹೊರತುಪಡಿಸಿ, ಹೊಸ ವರ್ನಾ ಎಲ್ಲಾ ಆಯಾಮಗಳಲ್ಲಿ ಐದನೇ-ತಲೆಮಾರಿನ ಮಾಡೆಲ್‌ಗಿಂತ ದೊಡ್ಡದಾಗಿದ್ದು ಇದು ಕ್ಯಾಬಿನ್‌ನಲ್ಲಿ ಹೆಚ್ಚು ಸ್ಥಳಾವಕಾಶವನ್ನು ಹೊಂದಿರುವ ಸಾಧ್ಯತೆಯಿದೆ.
ಇಂಟೀರಿಯರ್
ಹೊರಭಾಗದಂತೆಯೇ, ಒಳಭಾಗವೂ – ತಲೆಮಾರಿನ ನವೀಕರಣದೊಂದಿಗೆ – ಈ ಸೆಡಾನ್‌ನ ಬಹುದೊಡ್ಡ ಅಂಶವಾಗಿದೆ. ಹ್ಯುಂಡೈ ಹೊಸ ವರ್ನಾದ ಕ್ಯಾಬಿನ್‌ಗೆ ಸ್ಲೀಕರ್ ಎಸಿ ವೆಂಟ್‌ಗಳು, ಹೆಚ್ಚು ಮೃದುವಾದ ಸಾಮಗ್ರಿಗಳು, ಎರಡು-ಸ್ಪೋಕ್ ಸ್ಟಿಯರಿಂಗ್ ವ್ಹೀಲ್‌ಗಳು ಮತ್ತು ಸಿಲ್ವರ್ ಆ್ಯಕ್ಸೆಂಟ್‌ಗಳನ್ನು ನೀಡುವ ಮೂಲಕ ಹೆಚ್ಚು ಪ್ರೀಮಿಯಂ ಅನುಭವವನ್ನು ಪಡೆಯಲು ಸಹಾಯ ಮಾಡುತ್ತದೆ.
ಈ ವರ್ನಾ ಎರಡು ಕ್ಯಾಬಿನ್ ಥೀಮ್ ಆಯ್ಕೆಗಳೊಂದಿಗೆ ಮುಂದುವರಿಯುತ್ತದೆ: ಪ್ರಮಾಣಿತವಾಗಿ ಡ್ಯುಯಲ್-ಟೋನ್ (ಕಪ್ಪು ಮತ್ತು ಬೀಜ್) ಅನ್ನು ಪಡೆದರೆ ಟರ್ಬೋ ವೇರಿಯೆಂಟ್‌ಗಳಿಗಾಗಿ ಕೆಂಪು ಆ್ಯಕ್ಸೆಂಟ್‌ನೊಂದಿಗೆ ಸಂಪೂರ್ಣ ಕಪ್ಪು ಬಣ್ಣದ ಆಯ್ಕೆಯನ್ನು ಹೊಂದಿದೆ. ಇದರ ಪ್ರಮುಖ ಅಂಶವೆಂದರೆ, ಡ್ಯುಯಲ್ ಡಿಸ್‌ಪ್ಲೇ ಸೆಟ್‌ಅಪ್ (ಡಿಜಿಟೈಸ್ಡ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು 10.25-ಇಂಚಿನ ಟಚ್‌ಸ್ಕ್ರೀನ್) ಅನ್ನು ಹೊಂದಿದೆ.
ಸಂಬಂಧಿತ: ಹೊಸ ಹ್ಯುಂಡಾ ವರ್ನಾ ಮತ್ತು ಪ್ರತಿಸ್ಪರ್ಧಿಗಳು: ವಿಶೇಷತೆಗಳ ಹೋಲಿಕೆ
ಪವರ್‌ಟ್ರೇನ್‌ಗಳು
ವಿಶೇಷತೆಗಳು |
ಹಳೆಯ ವರ್ನಾ |
ಹೊಸ ವರ್ನಾ |
|||
ಎಂಜಿನ್ |
1.5-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೋ-ಪೆಟ್ರೋಲ್ |
1.5-ಲೀಟರ್ ಡಿಸೇಲ್ diesel |
1.5-ಲೀಟರ್ ಪೆಟ್ರೋಲ್ |
1.5-ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
115PS |
120PS |
115PS |
115PS |
160PS |
ಟಾರ್ಕ್ |
144Nm |
172Nm |
250Nm |
144Nm |
253Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, CVT |
7-ಸ್ಪೀಡ್ DCT |
6-ಸ್ಪೀಡ್ MT, 6-ಸ್ಪೀಡ್ AT |
6-ಸ್ಪೀಡ್ MT, CVT |
6-ಸ್ಪೀಡ್ MT, 7-ಸ್ಪೀಡ್ DCT |
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಅದರ ಜೀವಿತಾವಧಿಯ ಅಂತ್ಯದ ವೇಳೆಗೆ, ಹಳೆಯ ವರ್ನಾ ರೂ. 9.64 ಲಕ್ಷದಿಂದ ರೂ. 15.72 ಲಕ್ಷದವರೆಗೆ ಬೆಲೆಯನ್ನು ಹೊಂದಿದೆ. ಹ್ಯುಂಡೈ ಆರನೇ-ತಲೆಮಾರಿನ ನೆಡಾನ್ ಅನ್ನು ರೂ. 10.90 ಲಕ್ಷದಿಂದ ರೂ. 17.38 ಲಕ್ಷಗಳ ನಡುವೆ (ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್ ಪ್ಯಾನ್ ಇಂಡಿಯಾ) ಮಾರಾಟ ಮಾಡಲಾಗುತ್ತದೆ.
ಈ ಕಾಂಪ್ಯಾಕ್ಟ್ ಸೆಡಾನ್ ಫೋಕ್ಸ್‌ವ್ಯಾಗನ್ ವರ್ಟಸ್, ಹೋಂಡಾ ಸಿಟಿ, ಸ್ಕೋಡಾ ಸ್ಲಾವಿಯಾ, ಮತ್ತು ಮಾರುತಿ ಸಿಯಾಜ್‌ಗೆ ಪ್ರತಿಸ್ಪರ್ಧಿಯಾಗಿದೆ.
ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಹ್ಯುಂಡೈ ವರ್ನಾ ಆನ್ ರೋಡ್ ಬೆಲೆ