Login or Register ಅತ್ಯುತ್ತಮ CarDekho experience ಗೆ
Login

ಹೋಂಡಾ ಎಲಿವೇಟ್ ನ ಖರೀದಿಸಲು ಬುಕಿಂಗ್ ಮಾಡಿ ಎಷ್ಟು ತಿಂಗಳು ಕಾಯಬೇಕು?

ಹೊಂಡಾ ಇಲೆವಟ್ ಗಾಗಿ tarun ಮೂಲಕ ಜುಲೈ 29, 2023 07:33 am ರಂದು ಪ್ರಕಟಿಸಲಾಗಿದೆ

ಆಗಸ್ಟ್ ಮಧ್ಯದ ವೇಳೆಗೆ ಹೋಂಡಾ ತನ್ನ ಹೊಸ ಮಾಡೆಲ್ ಆಗಿರುವ ಎಲಿವೇಟ್ ನ್ನು ಶೋರೂಮ್‌ಗಳಿಗೆ ನೀಡಲಿದೆ.

  • ಜುಲೈ ಆರಂಭದಲ್ಲಿ ಹೋಂಡಾ ಎಲಿವೇಟ್ ಎಸ್‌ಯುವಿಯ ಬುಕ್ಕಿಂಗ್‌ಗಳು ತೆರೆದಿವೆ.

  • ಪ್ರಸ್ತುತ ಬೇಡಿಕೆಯ ಆಧಾರದ ಮೇಲೆ, ಇದು ನಾಲ್ಕು ತಿಂಗಳವರೆಗೆ ಕಾಯುವಿಕೆ ಅವಧಿಯನ್ನು ಹೊಂದಿದೆ.

  • ಈ ಎಸ್‌ಯುವಿಯ ಸರಣಿ ಉತ್ಪಾದನೆಯು ಜುಲೈ ಅಂತ್ಯದಿಂದ ಪ್ರಾರಂಭವಾಗುತ್ತದೆ ಹಾಗೂ ಸೆಪ್ಟೆಂಬರ್‌ನಲ್ಲಿ ನಿರೀಕ್ಷಿತ ಬೆಲೆಗಳು ಪ್ರಕಟಗೊಳ್ಳುವ ನಿರೀಕ್ಷೆಯಿದೆ.

  • ಇದು 121PS 1.5-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದ್ದು ಇದು 16.92kmpl ಮೈಲೇಜ್ ಅನ್ನು ಕ್ಲೈಮ್ ಮಾಡುತ್ತದೆ.

  • ಎಲೆಕ್ಟ್ರಿಕ್ ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು ಮತ್ತು ADAS ಅನ್ನು ಫೀಚರ್ ಆಗಿ ಹೊಂದಿದೆ.

  • ಇದರ ಬೆಲೆಗಳು ರೂ. 11 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುತ್ತವೆ.

ಬಹು-ನಿರೀಕ್ಷಿತ ಹೋಂಡಾ ಎಲಿವೇಟ್ ಸೆಪ್ಟೆಂಬರ್ ಮೊದಲ ವಾರದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಜುಲೈನಿಂದ ಇದರ ಬುಕ್ಕಿಂಗ್‌ಗಳು ಆರಂಭವಾಗಿದ್ದು, ಹೋಂಡಾ ತನ್ನ ಸಂಪೂರ್ಣ-ನವೀನ ಎಸ್‌ಯುವಿಯ ಪ್ರಸ್ತುತ ಬೇಡಿಕೆಯ ಆಧಾರದ ಮೇಲೆ ಬಿಡುಗಡೆಯ ನಂತರ ಸುಮಾರು ನಾಲ್ಕು ತಿಂಗಳುಗಳ ಕಾಯುವಿಕೆ ಅವಧಿಯನ್ನು ಅಂದಾಜಿಸಿದೆ.

ಎಲಿವೇಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಸರಣಿ ಉತ್ಪಾದನೆಯು ಜುಲೈ ಅಂತ್ಯದ ವೇಳೆಗೆ ಪ್ರಾರಂಭವಾಗುತ್ತದೆ ಎಂದು ಹೋಂಡಾ ತಿಳಿಸಿದೆ. ಆಗಸ್ಟ್ ಮಧ್ಯದ ವೇಳೆಗೆ ಯೂನಿಟ್‌ಗಳು ಡೀಲರ್‌ಶಿಪ್‌ಗಳನ್ನು ತಲುಪಲು ಪ್ರಾರಂಭಿಸುವುದರಿಂದ ಖರೀದಿದಾರರು ಮತ್ತು ಆಸಕ್ತರು ಆ ಸಮಯದಲ್ಲಿ ಕಾರನ್ನು ಸ್ವತಃ ಪರಿಶೀಲಿಸಬಹುದು.

ಎಲಿವೇಟ್ ಪವರ್‌ಟ್ರೇನ್

ಎಲಿವೇಟ್ 1.5-ಲೀಟರ್ ಪೆಟ್ರೋಲ್ i-VTEC ಎಂಜಿನ್ ಅನ್ನು ಹೊಂದಿದ್ದು, ಇದು 121PS ಮತ್ತು 145Nm ಬಿಡುಗಡೆಗೊಳಿಸುತ್ತದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಮತ್ತು CVT ಯೊಂದಿಗೆ ಜೋಡಿಯಾಗಿದೆ. ಮ್ಯಾನ್ಯುವಲ್ ವೇರಿಯೆಂಟ್ 15.31kmpl ದಕ್ಷತೆಯನ್ನು ಕ್ಲೈಮ್ ಮಾಡಿದರೆ, CVT ಯು 16.92kmpl ದಕ್ಷತೆಯನ್ನು ಕ್ಲೈಮ್ ಮಾಡುತ್ತದೆ.

ಸಿಟಿಗಿಂತ ಭಿನ್ನವಾಗಿ, ಇದು ಯಾವುದೇ ಬಲವಾದ-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಪಡೆಯುವುದಿಲ್ಲ. ಬದಲಿಗೆ, 2026 ರ ವೇಳೆಗೆ ಎಲಿವೇಟ್‌ನ ಇವಿ ಆವೃತ್ತಿಯನ್ನು ಪಡೆಯಬಹುದು.

ಎಲಿವೇಟ್‌ನ ಫೀಚರ್‌ಗಳು

ಹೋಂಡಾ ಎಲಿವೇಟ್ ಎಲೆಕ್ಟ್ರಿಕ್ ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಎಸಿ, ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಮತ್ತು ADAS ಅನ್ನು ಇದರಲ್ಲಿ ನೀಡಲಾಗಿದೆ. ರಾಡಾರ್ ಮತ್ತು ಕ್ಯಾಮರಾ ಆಧಾರಿತ ಸುರಕ್ಷತಾ ಫೀಚರ್‌ಗಳು ಆಟೋಮ್ಯಾಟಿಕ್ ತುರ್ತು ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್ ಅನ್ನು ಪಡೆಯುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಹೋಂಡಾ ಎಲಿವೇಟ್ ಜೊತೆಗೆ ಇತ್ತೀಚಿನ WR-V ಅನ್ನು ಬಿಡುಗಡೆಗೊಳಿಸಬೇಕೇ?

ನಿರೀಕ್ಷಿತ ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

ಹೋಂಡಾ ಎಲಿವೇಟ್‌ನ ಬೆಲೆಯು ಸುಮಾರು ರೂ. 11 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭಿಸಬಹುದೆಂದು ನಿರೀಕ್ಷಿಸಲಾಗಿದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಸಿಟ್ರಾನ್ C3 ಏರ್‌ಕ್ರಾಸ್, ಸ್ಕೋಡಾ ಕುಶಾಕ್, ಮತ್ತು ಎಂಜಿ ಆಸ್ಟರ್ ಅನ್ನು ಒಳಗೊಂಡಿರುವ ಕಾಂಪ್ಯಾಕ್ಟ್ ಎಸ್‌ಯವಿ ವಿಭಾಗದಲ್ಲಿ ಒಂಭತ್ತನೆಯದಾಗಿ ಪ್ರವೇಶ ಪಡೆದಿದೆ.

Share via

Write your Comment on Honda ಇಲೆವಟ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ