• English
  • Login / Register

Honda Elevate: ಶರವೇಗದಲ್ಲಿ ಉತ್ಪಾದನೆ, ಸೆಪ್ಟೆಂಬರ್‌ನಲ್ಲಿ ಬೆಲೆಗಳ ಪ್ರಕಟಣೆ

ಹೊಂಡಾ ಇಲೆವಟ್ ಗಾಗಿ shreyash ಮೂಲಕ ಆಗಸ್ಟ್‌ 01, 2023 11:07 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೋಂಡಾ ಎಲಿವೇಟ್‌ಗೆ ಬುಕಿಂಗ್‌ಗಳನ್ನು ತೆರೆಯಲಾಗಿದೆ ಮತ್ತು ಬಿಡುಗಡೆಯ ಸಮಯದಲ್ಲಿ ಕೆಲವು ತಿಂಗಳುಗಳ ಕಾಯುವಿಕೆ ಅವಧಿ ಇರಲಿದೆ

Honda Elevate Roll out

  •  ಜಾಗತಿಕ ಮಾಡೆಲ್ ಆಗಿರುವ ಹೋಂಡಾ ಎಲಿವೇಟ್‌ನ 90 ಪ್ರತಿಶತ ಉತ್ಪಾದನೆಯು ಸ್ಥಳೀಯವಾಗಿ ನಡೆಯುತ್ತದೆ.

  •  ಇದು ಹೋಂಡಾ ಸಿಟಿಯಲ್ಲಿರುವಂತೆಯೇ 1.5-ಲೀಟರ್ 121PS ಅನ್ನು ಬಳಸುತ್ತದೆ.

  •   ಒಳಗೆ , ಇದು 10.25-ಇಂಚು ಟಚ್‌ಸ್ಕ್ರೀನ್ ಯುನಿಟ್ ಅನ್ನು ಹೊಂದಿದ್ದು ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತದೆ.

  •  ಇದರ ಸುರಕ್ಷತಾ ಕಿಟ್ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನ ಸಂಪೂರ್ಣ ಫೀಚರ್‌ಗಳನ್ನು ಒಳಗೊಂಡಿದೆ.

  •  ನಿಮ್ಮ ಸನಿಹದ ಹೋಂಡಾ ಡೀಲರ್‌ಶಿಪ್‌ನಲ್ಲಿ ಇದನ್ನು ಆಗಸ್ಟ್ ಮಧ್ಯದಲ್ಲಿ ಕಾಣುವ ನಿರೀಕ್ಷೆಯಿದೆ.

  •  ಹೋಂಡಾ ಎಲಿವೇಟ್ ಬೆಲೆ ರೂ 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.

  ಹೋಂಡಾ ಎಲಿವೇಟ್  ಭಾರತದಲ್ಲಿ ಮಾರಾಟಕ್ಕೆ ಸಿದ್ಧವಾಗಿದ್ದು, ಇದರ ಹೆಚ್ಚಿನ ತಾಂತ್ರಿಕ ನಿರ್ದಿಷ್ಟತೆಗಳು ಮತ್ತು ಫೀಚರ್‌ಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಈಗ, ಹೋಂಡಾ ತನ್ನ ಹೊಸ ಕಾಂಪ್ಯಾಕ್ಟ್ SUVಯ ಸರಣಿ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಮೊದಲನೇ ಎಲಿವೇಟ್ ಅನ್ನು ರಾಜಸ್ಥಾನದಲ್ಲಿನ ಟಪುಕಾರದ ಹೋಂಡಾ ತಯಾರಿಕಾ ಘಟಕದಿಂದ ಹೊರತರಲಾಗಿದೆ.

ಹೋಂಡಾದ ಪ್ರಕಾರ, ಎಲಿವೇಟ್‌ನ 90 ಪ್ರತಿಶತದಷ್ಟು ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಳೀಯವಾಗಿ ನಡೆಸಲಾಗುತ್ತದೆ. ಈ ಎಲಿವೇಟ್ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದ್ದು, ರೂ 5,000 ಮುಂಗಡ ಹಣದೊಂದಿಗೆ ಬುಕಿಂಗ್‌ಗಳನ್ನು ತೆರೆಯಲಾಗಿದೆ.

 

ಆಫರ್‌ನಲ್ಲಿರುವ ಸಾಧನಗಳು

Honda Elevate cabin

ಹೋಂಡಾ ತನ್ನ ಕಾಂಪ್ಯಾಕ್ಟ್ SUV ಅನ್ನು 10.25-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್‌ನೊಂದಿಗೆ ಸಿದ್ಧಪಡಿಸಿದ್ದು, ಇದು ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುವುದರೊಂದಿಗೆ, 7-ಇಂಚು ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಸಿಂಗಲ್-ಪೇನ್ ಸನ್‌ರೂಫ್ ಮುಂತಾದ ಫೀಚರ್‌ಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಲ್ಲಿ, ಈ ಎಲಿವೇಟ್ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳ (ADAS) ಸಂಪೂರ್ಣ ಸೂಟ್‌ನೊಂದಿಗೆ ಆರು ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಲೇನ್ ವಾಚ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಪಡೆದಿದೆ. 

 ಇದನ್ನೂ ಓದಿ: ಹೋಂಡಾ ಎಲಿವೇಟ್  ಇಂಧನ ದಕ್ಷತೆಯ ಅಂಕಿಗಳು ಬಹಿರಂಗ!

 

ಕೇವಲ ಒಂದು ಇಂಜಿನ್ ಆಯ್ಕೆ

Honda Elevate

  ಈ ಹೋಂಡಾ ಎಲಿವೇಟ್, ಹೋಂಡಾ ಸಿಟಿಯಲ್ಲಿನ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನೇ ಬಳಸಿದ್ದು, ಇದು 121PS ಮತ್ತು 145Nm ಅನ್ನು ಉತ್ಪಾದಿಸುತ್ತದೆ ಮತ್ತು ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ CVTಯೊಂದಿಗೆ ಜೋಡಿಸಲಾಗಿದೆ. ಇದು ಭಾರತದಲ್ಲಿ ಹೈಬ್ರಿಡ್ ಆಯ್ಕೆಯನ್ನು ಪಡೆದಿಲ್ಲ ಆದರೆ ಕೆಲವು ವರ್ಷಗಳಲ್ಲಿ   ಸಂಪೂರ್ಣ ಇಲೆಕ್ಟ್ರಿಕ್ ಪುನರಾವರ್ತನೆಯನ್ನು ಪಡೆಯಲಿದೆ.

 ಇದನ್ನೂ ಪರಿಶೀಲಿಸಿ: ಭಾರತದಲ್ಲಿ ಇತ್ತೀಚಿನ WR-V ಅನ್ನು ಹೊಂಡಾ ಎಲಿವೇಟ್ ಜೊತೆಗೆ ನೀಡಬೇಕೆ?

 ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಹೋಂಡಾವು ಎಲಿವೇಟ್ ಬೆಲೆಯನ್ನು ರೂ 12 ಲಕ್ಷ (ಎಕ್ಸ್-ಶೋರೂಂ) ದಿಂದ ನಿಗದಿಪಡಿಸಿದೆ. ಕಾರುತಯಾರಕರ ಅಂದಾಜಿನ ಪ್ರಕಾರ, ಇದು ಬಿಡುಗಡೆಯ ವೇಳೆಗೆ  3 ತಿಂಗಳಿಗೂ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿರುತ್ತದೆ, ಆದ್ದರಿಂದ ನೀವು ಇದನ್ನು ಖರೀದಿಸಲು ನಿರ್ಧರಿಸಿದ್ದರೆ, ಶೀಘ್ರದಲ್ಲೇ ಕರೆ ಮಾಡಬಹುದು.

 ಎಲಿವೇಟ್‌ನೊಂದೆಗೆ ಪೈಪೋಟಿಗಿಳಿಯುವ ಕಾರುಗಳೆಂದರೆ, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವಾಗನ್ ಟೈಗನ್, ಸ್ಕೋಡಾ ಕುಷಕ್ , ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು MG ಎಸ್ಟರ್. ಅಲ್ಲದೇ ಇದು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸಿಟ್ರನ್ C3 ಏರ್‌ಕ್ರಾಸ್‌ಗೂ ಪೈಪೋಟಿ ನೀಡಲಿದೆ.

was this article helpful ?

Write your Comment on Honda ಇಲೆವಟ್

1 ಕಾಮೆಂಟ್
1
S
shashank urankar
Jul 31, 2023, 5:34:00 PM

What is the LxWxH of Honda elevate Please furnish specifications

Read More...
    ಪ್ರತ್ಯುತ್ತರ
    Write a Reply

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    • ಟಾಟಾ ಸಿಯೆರಾ
      ಟಾಟಾ ಸಿಯೆರಾ
      Rs.10.50 ಲಕ್ಷಅಂದಾಜು ದಾರ
      ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
    • ಕಿಯಾ syros
      ಕಿಯಾ syros
      Rs.9.70 - 16.50 ಲಕ್ಷಅಂದಾಜು ದಾರ
      ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
    • ಬಿವೈಡಿ sealion 7
      ಬಿವೈಡಿ sealion 7
      Rs.45 - 49 ಲಕ್ಷಅಂದಾಜು ದಾರ
      ಮಾರಚ್‌, 2025: ನಿರೀಕ್ಷಿತ ಲಾಂಚ್‌
    • ಎಂಜಿ majestor
      ಎಂಜಿ majestor
      Rs.46 ಲಕ್ಷಅಂದಾಜು ದಾರ
      ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
    • ಟಾಟಾ ಹ್ಯಾರಿಯರ್ ಇವಿ
      ಟಾಟಾ ಹ್ಯಾರಿಯರ್ ಇವಿ
      Rs.30 ಲಕ್ಷಅಂದಾಜು ದಾರ
      ಮಾರಚ್‌, 2025: ನಿರೀಕ್ಷಿತ ಲಾಂಚ್‌
    ×
    We need your ನಗರ to customize your experience