ಸೆಪ್ಟೆಂಬರ್ 4ರಂದು Honda Elevateನ ಬೆಲೆಗಳು ಪ್ರಕಟ
ಆಗಸ್ಟ್ 22, 2023 04:35 pm tarun ಮೂಲಕ ಮಾರ್ಪಡಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಎಲಿವೇಟ್ ಜುಲೈನಲ್ಲಿ ಬುಕಿಂಗ್‌ಗಳನ್ನು ತೆರೆದಿದ್ದು, ಇದು ಈಗಾಗಲೇ ಡೀಲರ್‌ಶಿಪ್‌ಗಳನ್ನು ತಲುಪಿದೆ
-
ಎಲಿವೇಟ್‌ನ ಬಿಡುಗಡೆ ಸೆಪ್ಟೆಂಬರ್ 4ಕ್ಕೆ ನಿಗದಿಯಾಗಿದೆ.
-
SV, V, VX, ಮತ್ತು ZX ಈ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ.
-
ಫೀಚರ್‌ಗಳ ಪಟ್ಟಿಯಲ್ಲಿ, ಇಲೆಕ್ಟ್ರಿಕ್ ಸನ್‌ರೂಫ್, 10.25 ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು ಮತ್ತು ADAS ಅನ್ನು ಹೊಂದಿದೆ.
-
6-ಸ್ಪೀಡ್ ಮ್ಯಾನುವಲ್ ಮತ್ತು CVT ಟ್ರಾನ್ಸ್‌ಮಿಷನ್‌ಗಳೊಂದಿಗೆ ಜೋಡಿಸಲಾದ 121PS 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ.
-
ಬೆಲೆಗಳು ಸಮಾರು ರೂ 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ
ಹೋಂಡಾ ಎಲಿವೇಟ್ ಸೆಪ್ಟೆಂಬರ್ 4 ರಂದು ಬಿಡುಗಡೆಗೆ ಸಿದ್ಧವಾಗಿದೆ. ಜಪಾನಿನ ಕಾರುತಯಾರಕರ ಬಹುನಿರೀಕ್ಷಿತ ಕಾಂಪ್ಯಾಕ್ಟ್ SUV ಕಂಟೆಂಡರ್ ಈಗ ಬುಕಿಂಗ್‌ಗೆ ಲಭ್ಯವಿದ್ದು ಡೀಲರ್‌ಶಿಪ್‌ಗಳಲ್ಲಿಯೂ ಪರಿಶೀಲಿಸಬಹುದಾಗಿದೆ.
ಈ ಎಲಿವೇಟ್ SV, V, VX, ಮತ್ತು ZX ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದು ಹೋಂಡಾದ ಎಂದಿನ ಕ್ಲಾಸಿ ಇಂಟೀರಿಯರ್ ಸ್ಟೈಲಿಂಗ್ ಅನ್ನು ಕಾಯ್ದುಕೊಂಡಿದ್ದು ಸ್ಫುಟವಾದ ಮತ್ತು ಸರಳ ವಿನ್ಯಾಸವನ್ನು ಹೊಂದಿದೆ. ಇದರ 458-ಲೀಟರ್ ಬೂಟ್ ಸ್ಪೇಸ್ ಕಾಂಪ್ಯಾಕ್ಟ್ SUV ವಿಭಾಗದಲ್ಲೇ ದೊಡ್ಡದಾಗಿದೆ.
ಎಲಿವೇಟ್ ಕಂಫರ್ಟ್‌ಗಳು
ಫೀಚರ್‌ಗಳ ವಿಷಯಕ್ಕೆ ಬಂದರೆ, ಹೋಂಡಾ ಈ ಎಲಿವೇಟ್ ಅನ್ನು ಇಲೆಕ್ಟ್ರಿಕ್ ಸನ್‌ರೂಫ್, 10.25 ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, 7-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜರ್ ಮತ್ತು ಆಟೋಮ್ಯಾಟಿಕ್ AC ಮುಂತಾದ ಫೀಚರ್‌ಗಳಿಂದ ಸಜ್ಜುಗೊಳಿಸಿದೆ.
ಆರು ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಲೇನ್ ವಾಚ್ ಕ್ಯಾಮರಾ, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್, ಆಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಹೈ ಬೀಮ್ ಅಸಿಸ್ಟ್ ಅನ್ನು ಒಳಗೊಂಡ ADAS (ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಸೂಟ್‌ನಿಂದ ಸುರಕ್ಷತೆ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಇಲ್ಲಿದೆ ಹೋಂಡಾ ಎಲಿವೇಟ್‌ನ ವೇರಿಯೆಂಟ್‌ವಾರು ಫೀಚರ್‌ಗಳ ನೋಟ
ಇಂಜಿನ್ ವಿವರ
ಈ ಎಲಿವೇಟ್, 121PS ಮತ್ತು 145Nm ಅನ್ನು ಉತ್ಪಾದಿಸುವ ಸಿಟಿಯ 1.5-ಲೀಟರ್ i-VTEC ಪೆಟ್ರೋಲ್ ಇಂಜಿನ್‌ನಲ್ಲಿ ಓಡುತ್ತದೆ.6-ಸ್ಪೀಡ್ ಮ್ಯಾನುವಲ್ ಮತ್ತು CVT ಯೂನಿಟ್‌ಗಳು ಟ್ರಾನ್ಸ್‌ಮಿಷನ್ ಕಾರ್ಯ ನಿರ್ವಹಿಸುತ್ತವೆ. ಇದು ಸಿಟಿಯಲ್ಲಿರುವಂತೆ ಸ್ಟ್ರಾಂಗ್-ಹೈಬ್ರಿಡ್ ಆಯ್ಕೆಯನ್ನು ಹೊಂದಿರುವುದಿಲ್ಲ ಆದರೆ ಈ ಎಲಿವೇಟ್ 2026ರ ವೇಳೆಗೆ ಇಲೆಕ್ಟ್ರಿಕ್ ಆಗುತ್ತದೆ.
ಇದನ್ನು ಓದಿ: ಹೋಂಡಾ ಎಲಿವೇಟ್ ರಿವ್ಯೂ: ವ್ಹಾವ್ ಮಸ್ತ್
ಇದರ ಬೆಲೆಗಳು ಸುಮಾರು ರೂ 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಬಹುದು ಎಂಬುದು ನಮ್ಮ ನಿರೀಕ್ಷೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಫೋಕ್ಸ್‌ವಾಗನ್ ಟೈಗನ್, ಸಿಟ್ರಾನ್ C3 ಏರ್‌ಕ್ರಾಸ್, ಸ್ಕೋಡಾ ಕುಶಕ್, ಮತ್ತು MG ಎಸ್ಟರ್‌ಗೆ ಪ್ರತಿಸ್ಪರ್ಧಿಯಾಗಲಿದೆ.