ಸಮೀಪಿಸುತ್ತಿದೆ ಹೋಂಡಾ ಎಲಿವೇಟ್ SUVಯ ಪಾದಾರ್ಪಣೆಯ ದಿನಾಂಕ : ಆದರೆ ಪನೋರಮಿಕ್ ಸನ್‌ರೂಫ್ ಇರುವುದಿಲ್ಲ !
ಹೊಂಡಾ ಇಲೆವಟ್ ಗಾಗಿ rohit ಮೂಲಕ ಮೇ 17, 2023 02:00 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಈ SUV ಅನ್ನು ಟಾಪ್‌ನಿಂದ ತೋರಿಸುವ ಹೊಸ ಟೀಸರ್‌ನೊಂದಿಗೆ ಈ ಸುದ್ದಿ ಬಂದಿದೆ
- ಹೋಂಡಾ ಎಲಿವೇಟ್ ಜೂನ್ 6ರಂದು ಜಾಗತಿಕವಾಗಿ ಪಾದಾರ್ಪಣೆ ಮಾಡುತ್ತಿದೆ.
- ಈ SUVಗೆ ಕೆಲವು ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಈಗಾಗಲೇ ಆಫ್‌ಲೈನ್ ಬುಕಿಂಗ್‌ಗಳು ತೆರೆದಿವೆ.
- ಈ ಎಲಿವೇಟ್ SUV, ಪನೋರಮಿಕ್ ಸನ್‌ರೂಫ್ ಹೊಂದಿರುವುದಿಲ್ಲ ಆದರೆ ಸಿಂಗಲ್-ಪೇನ್ ಯೂನಿಟ್ ಅನ್ನು ಪಡೆದಿರುತ್ತದೆ.
- ಇದು ರೂಫ್ ರೇಲ್ ಮತ್ತು ವೈಟ್ ಬಾಡಿ ಶೇಡ್ ಅನ್ನು ಹೊಂದಿರುವುದನ್ನು ಟೀಸರ್‌ನಲ್ಲಿ ಗಮನಿಸಬಹುದು
- ಸಿಟಿಯಲ್ಲಿರುವುದಕ್ಕಿಂತ ದೊಡ್ಡದಾದ ಟಚ್‌ಸ್ಕ್ರೀನ್ ಮತ್ತು ADAS ಅನ್ನು ಹೋಂಡಾ ಇದರಲ್ಲಿ ನೀಡುವ ನಿರೀಕ್ಷೆ ಇದೆ.
- ಸಿಟಿಯ 1.5-ಲೀಟರ್ ಪೆಟ್ರೋಲ್ ಯೂನಿಟ್ ಮತ್ತು ಸಿಟಿ ಹೈಬ್ರಿಡ್‌ನ 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿರಬಹುದು.
- ರೂ 11 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಇತ್ತೀಚೆಗಷ್ಟೆ ತನ್ನ ಕಾಂಪ್ಯಾಕ್ಟ್ SUV ಗೆ “ಎಲಿವೇಟ್,” ಎಂದು ಹೆಸರಿಟ್ಟ ಹೋಂಡಾ ಈಗ ತನ್ನ ಹೊಸ SUV ಜೂನ್ 6ರಂದು ಬಿಡುಗಡೆಗೊಳ್ಳಲಿದೆ ಎಂದು ಪ್ರಕಟಿಸಿರುವ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ದೇಶಾದ್ಯಂತ ಅನೇಕ ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಇದಕ್ಕೆ ಆಫ್‌ಲೈನ್ ಬುಕಿಂಗ್‌ಗಳನ್ನು ಈಗಾಗಲೇ ಸ್ವೀಕರಿಸಲಾಗುತ್ತಿದೆ.
ಟೀಸರ್‌ನಲ್ಲಿ ಬಹಿರಂಗಪಡಿಸಲಾದ ಹೊಸ ವಿವರಗಳು
Witness the #WorldPremiere of the most awaited SUV, the all-new Honda Elevate on June 06, 2023. Mark your calendar for the big unveil!#HondaElevate #NewHondaSUV #AllNewElevate pic.twitter.com/sc8TVGpjgN
— Honda Car India (@HondaCarIndia) May 15, 2023
ಹೋಂಡಾದ ಎಲಿವೇಟ್ SUVಯ ಇತ್ತೀಚಿನ ಚಿತ್ರದ ಮೇಲಿನಿಂದ ಕೆಳಗಿನ ನೋಟದಲ್ಲಿ ವೈಟ್ ಬಣ್ಣದ ಫಿನಿಷಿಂಗ್ ಹೊಂದಿರುವುದನ್ನು ಕಾಣಬಹುದು. ಆದಾಗ್ಯೂ, ಎಲ್ಲಕ್ಕಿಂತ ಮಹತ್ವದ ವಿವರವೆಂದರೆ ಇದು ವಿಹಂಗಮ ಸನ್‌ರೂಫ್ ಹೊಂದಿರುವುದಿಲ್ಲ ಆದರೆ ಸಿಂಗಲ್-ಪೇನ್ ಯೂನಿಟ್ ಅನ್ನು ಪಡೆದಿರುತ್ತದೆ. ಅಲ್ಲದೇ ಅಪ್‌ಫ್ರಂಟ್‌ನಲ್ಲಿ LED DRL ಗಳು ಮತ್ತು LED ಟೇಲ್‌ಲೈಟ್‌ಗಳು ಮತ್ತು ರೂಫ್‌ರೇಲ್ ಇರುವುದನ್ನು ಟೀಸರ್‌ನಲ್ಲಿ ನೋಡಬಹುದು.
ವಿಹಂಗಮ ಸನ್‌ರೂಫ್ ಹೊಂದಿರುವ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾಗೆ ಹೋಲಿಸಿದರೆ ಇದನ್ನು ಹೊಂದಿರದ ಎಲಿವೇಟ್ ಸ್ಪರ್ಧೆಯಲ್ಲಿ ಹಿಂದುಳಿಯಬಹುದು. ಅಲ್ಲದೇ ಮುಂಬರುವ ನವೀಕೃತ ಕಿಯಾ ಸೆಲ್ಟೋಸ್ ಕೂಡಾ ಇದನ್ನು ನೀಡುತ್ತದೆ.
ಇತರ ನಿರೀಕ್ಷಿತ ಫೀಚರ್‌ಗಳು
ಸನ್‌ರೂಫ್ ಹೊರತಾಗಿ, ಈ ಎಲಿವೇಟ್ ಸಿಟಿಯ 8-ಇಂಚು ಡಿಸ್‌ಪ್ಲೇಗಿಂತ ದೊಡ್ಡದಾದ ಟಚ್‌ಸ್ಕ್ರೀನ್ ಯೂನಿಟ್, ವಾತಾಯನದ ಫ್ರಂಟ್ ಸೀಟುಗಳು, ಕ್ರೂಸ್ ಕಂಟ್ರೋಲ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಹೊಂದಿರುವ ನಿರೀಕ್ಷೆ ಇದೆ.
ಸುರಕ್ಷತೆಯ ವಿಚಾರದಲ್ಲಿ, ಹೋಂಡಾ ಆರು ಏರ್‌ಬ್ಯಾಗ್‌ಗಳು, ಟ್ರಾಕ್ಷನ್ ಕಂಟ್ರೋಲ್, 360-ಕ್ಯಾಮರಾ ಮತ್ತು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್‌ನೊಂದಿಗೆ(ESC) ಇದನ್ನು ಸುಸಜ್ಜಿತಗೊಳಿಸಿರುವ ನಿರೀಕ್ಷೆ ಇದೆ. ಅಲ್ಲದೇ ಎಲಿವೇಟ್‌ನಲ್ಲಿ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳು (ADAS) ಇದ್ದು, ಲೇನ್-ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಫಾರ್ವರ್ಡ್-ಕೊಲಿಶನ್ ವಾರ್ನಿಂಗ್ ಅನ್ನು ಹೊಂದಿರುವ ಸಾಧ್ಯತೆ ಇದೆ.
ಇದನ್ನೂ ಓದಿ: IPL ಸ್ಟಾರ್ ಋತುರಾಜ್ ಗಾಯಕ್‌ವಾಡ್ ಹಂಚಿಕೊಂಡಿದ್ದಾರೆ ಟಾಟಾ ಟಿಯಾಗೋ EV ಬಗೆಗಿನ ತಮ್ಮ ಮೊದಲ ಅಭಿಪ್ರಾಯ
ಬಾನೆಟ್ ಅಡಿಯಲ್ಲಿ ಏನಿದೆ?
ಈ ಎಲಿವೇಟ್ SUV ಸಿಟಿಯ 1.5-ಲೀಟರ್ ಪೆಟ್ರೋಲ್ ಇಂಜಿನ್ (121PS ಮತ್ತು 145Nm) ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಯ್ಕೆಗಳ ಜೊತೆಗೆ ಪಡೆದಿರುತ್ತದೆ. ಹೋಂಡಾ ಇದಕ್ಕೆ ಸಿಟಿ ಹೈಬ್ರಿಡ್‌ನ 126PS ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಅನ್ನೂ ನೀಡಿರುವ ಸಾಧ್ಯತೆ ಇದೆ. ಕೆಲವು ಹೊಸ ಕಾಂಪ್ಯಾಕ್ಟ್ SUVಗಳಂತೆ, ಎಲೆವೇಟ್‌ನಲ್ಲೂ ಡೀಸೆಲ್ ಇಂಜಿನ್ ಇರುವುದಿಲ್ಲ.
ಇದರ ಸ್ಪರ್ಧೆಯ ನೋಟ
ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಕ್, ಕಿಯಾ ಸೆಲ್ಟೋಸ್, ಫೋಕ್ಸ್‌ವಾಗನ್ ಟೈಗನ್ ಮತ್ತು ಮುಂಬರುವ ಸಿಟ್ರನ್ C3 ಏರ್‌ಕ್ರಾಸ್ ಮುಂತಾದವುಗಳೊಂದಿಗೆ ಹೋಂಡಾದ ಈ SUV ಪ್ರತಿಸ್ಪರ್ಧಿಯಾಗಲಿದೆ. ಇದು ಆಗಸ್ಟ್ 2023ರಲ್ಲಿ ಆರಂಭಿಕ ಬೆಲೆ ರೂ 11 ಲಕ್ಷದೊಂದಿಗೆ (ಎಕ್ಸ್-ಶೋರೂಂ) ಮಾರಾಟಕ್ಕೆ ಬರುವ ನಿರೀಕ್ಷೆ ಇದೆ.