ಈ ಬಹುನಿರೀಕ್ಷಿತ ಫೀಚರ್‌ಗಾಗಿ ನವೀಕೃತಗೊಳ್ಳುತ್ತಿದೆ ಕಿಯಾ ಸೆಲ್ಟೋಸ್
ಕಿಯಾ ಸೆಲ್ಟೋಸ್ ಗಾಗಿ ansh ಮೂಲಕ ಮೇ 12, 2023 02:00 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಈ ಕಾರು ತಯಾರಕರು ಕೊನೆಗೂ ಈ ಕಾಂಪ್ಯಾಕ್ಟ್ SUVಗೆ ವಿಹಂಗಮ ಸನ್‌ರೂಫ್ ನೀಡಲು ನಿರ್ಧರಿಸಿದ್ದಾರೆ.
- ಸನ್‌ರೂಫ್ ಹೊಂದಿರುವ ಪರೀಕ್ಷಾರ್ಥ ಕಾರೊಂದು ಇದರ ಉಪಸ್ಥಿತಿಯನ್ನು ದೃಢೀಕರಿಸಿದೆ.
- ಅದೇ 115PS ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳನ್ನು ಹೊಂದಿರುವ ನಿರೀಕ್ಷೆ ಇದೆ.
- ಕರೇನ್ಸ್‌ನ ಹೊಸ 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಕೂಡಾ ಇದರೊಂದಿಗೆ ಬರಬಹುದು.
- ಎರಡು 10.25-ಇಂಚು ಡಿಸ್‌ಪ್ಲೇಗಳು, ಹೀಟೆಡ್ ಫ್ರಂಟ್ ಸೀಟುಗಳು ಮತ್ತು ADAS ಮುಂತಾದ ಫೀಚರ್‌ಗಳನ್ನು ಹೊಂದಿರುವ ನಿರೀಕ್ಷೆ ಇದೆ.
- ಬೆಲೆಗಳು ರೂ 10 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.
ನವೀಕೃತ ಕಿಯಾ ಸೆಲ್ಟೋಸ್ ನ ಪರೀಕ್ಷಾರ್ಥ ಕಾರೊಂದನ್ನು ಇತ್ತೀಚೆಗೆ ಗುರುತಿಸಲಾಗಿದ್ದು ಇದು ಅನೇಕ ಕಿಯಾ ಖರೀದಿದಾರರು ನಿರೀಕ್ಷಿಸುತ್ತಿದ್ದ ವಿಹಂಗಮ ಸನ್‌ರೂಫ್‌ನ ಹೆಚ್ಚುವರಿ ಫೀಚರ್ ಅನ್ನು ತೋರಿಸಿದೆ. ಇದನ್ನು ಹ್ಯುಂಡೈ ಕ್ರೆಟಾದಲ್ಲಿ ಪರಿಚಯಿಸಲಾಗಿತ್ತು ಮತ್ತು ಈಗ ಮಾರುತಿ ಗ್ರ್ಯಾಂಡ್ ವಿಟಾರಾದಂತಹ ಪ್ರತಿಸ್ಪರ್ಧಿಗಳಲ್ಲಿಯೂ ಇದೆ. ಈಗ, ನವೀಕೃತ ಸೆಲ್ಟೋಸ್ ಕೂಡಾ ದೊಡ್ಡದಾದ ಗಾಜಿನ ಮೇಲ್ಮೈ ಅನ್ನು ಹೊಂದಿದೆ.
ಇತರ ಫೀಚರ್‌ಗಳು
ನವೀಕೃತ SUVಯಲ್ಲಿ ನಿರೀಕ್ಷಿಸಲಾದ ಹೊಸ ಫೀಚರ್‌ಗಳಲ್ಲಿ ವಿಹಂಗಮ ಸನ್‌ರೂಫ್ ಕೂಡಾ ಒಂದು, ಇವುಗಳಲ್ಲಿ ಕೆಲವನ್ನು ಜಾಗತಿಕವಾಗಿ ಲಭ್ಯವಿರುವ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ನಲ್ಲಿ ನೀಡಲಾಗಿದೆ. ಇಂಡಿಯಾ-ಸ್ಪೆಕ್ ಮಾಡೆಲ್‌ನಲ್ಲಿ ತುಸು ಸೂಕ್ಷ್ಮವಾಗಿ ಹೊಂದಿಸಲಾದ ಡ್ಯಾಶ್‌ಬೋರ್ಡ್ ಲೇಔಟ್ ಜೊತೆಗೆ ಎರಡು ಸಂಯೋಜಿತ 10.25-ಇಂಚು ಡಿಸ್‌ಪ್ಲೇಗಳು (ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್), ಸ್ಲೀಕರ್ AC ವೆಂಟ್‌ಗಳು ಇವೆ ಮತ್ತು ಇದು ಹೀಟಡ್ ಫ್ರಂಟ್ ಸೀಟುಗಳನ್ನೂ ಹೊಂದಿದೆ.
ಇದನ್ನೂ ಓದಿ: ಕಿಯಾ ಸೋನೆಟ್ ಪಡೆದಿದೆ ಹೊಸ ‘ಆರಾಕ್ಸ್ ಆವೃತ್ತಿ’; ಬೆಲೆ ರೂ 11.85 ಲಕ್ಷದಿಂದ ಪ್ರಾರಂಭ
ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿರುವ ನಿರೀಕ್ಷೆ ಇದ್ದು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ VSC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ISOFIX ಚೈಲ್ಡ್ ಸೀಟ್ ಆ್ಯಂಕರ್‌ಗಳನ್ನು ಪಡೆದಿರುವ ನಿರೀಕ್ಷೆ ಇದೆ. ADAS, ಈ ಕಾಂಪ್ಯಾಕ್ಟ್ SUV ಯ ಇನ್ನೊಂದು ಫೀಚರ್ ಸೇರ್ಪಡೆಯಾಗಿರಬಹುದು.
ಪವರ್‌ಟ್ರೇನ್
ಈ ನವೀಕೃತ ಸೆಲ್ಟೋಸ್ 1.5-ಲೀಟರ್ ಪೆಟ್ರೋಲ್ ಯೂನಿಟ್ (115PS/144Nm) ಮತ್ತು 1.5-ಲೀಟರ್ ಡೀಸೆಲ್ ಯೂನಿಟ್ (115PS/250Nm) ಅನ್ನು ಒಳಗೊಂಡಿರುವ ಪ್ರಸ್ತುತ ಇಂಜಿನ್ ಆಯ್ಕೆಯನ್ನೇ ಪಡೆದಿರುವ ನಿರೀಕ್ಷೆ ಇದೆ. ಮೊದಲನೆಯದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು CVT ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದರೆ, ಎರಡನೆಯದು 6-ಸ್ಪೀಡ್ iMT ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.
ಇದನ್ನೂ ನೋಡಿ: ನವೀಕೃತ ಕಿಯಾ ಸೆಲ್ಟೋಸ್‌ನಲ್ಲಿ ಈ ಹೊಸ ಸ್ಟೈಲಿಂಗ್ ಅಂಶವನ್ನು ನೋಡಿ
ಇದೇ ವೇಳೆ, 1.4-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಬದಲಿಗೆ 1.5-ಲೀಟರ್ ಯೂನಿಟ್ (160PS/253Nm) ನೀಡಲಾಗಿದ್ದು ಇದನ್ನು ನವೀಕೃತ ಕಿಯಾ ಕರೇನ್ಸ್ ಮತ್ತು ಹೊಸ-ಪೀಳಿಗೆ ಹ್ಯುಂಡೈ ವರ್ನಾದಲ್ಲಿ ಕಾಣಬಹುದು.
ಬಿಡುಗಡೆ, ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಈ ನವೀಕೃತ ಕಿಯಾ ಸೆಲ್ಟೋಸ್ 2023ರ ಮಧ್ಯದಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆ ಇದ್ದು, ರೂ 10 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆ ಹೊಂದಿರುವ ನಿರೀಕ್ಷೆ ಇದೆ. ಇದು ಹ್ಯುಂಡೈ ಕ್ರೆಟಾ, ಫೋಕ್ಸ್‌ವಾಗೆನ್ ಟೈಗನ್, ಸ್ಕೋಡಾ ಕುಶಕ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ಗೆ ಪ್ರತಿಸ್ಪರ್ಧಿಯಾಗಿಯೇ ಮುಂದುವರೆದಿದೆ.
ಇನ್ನಷ್ಟು ಓದಿ : ಕಿಯಾ ಸೆಲ್ಟೋಸ್ ಡೀಸೆಲ್