Login or Register ಅತ್ಯುತ್ತಮ CarDekho experience ಗೆ
Login

ಅಂತಿಮವಾಗಿ ಬಹಿರಂಗಗೊಂಡಿದೆ ಹೋಂಡಾದ ಹೊಸ ಕಾಂಪ್ಯಾಕ್ಟ್ SUVಯ ಹೆಸರು

ಹೊಂಡಾ ಇಲೆವಟ್ ಗಾಗಿ rohit ಮೂಲಕ ಮೇ 07, 2023 06:59 am ರಂದು ಪ್ರಕಟಿಸಲಾಗಿದೆ

ಎಲಿವೇಟ್ ಸುಮಾರು ಆರು ವರ್ಷಗಳಲ್ಲೇ ಭಾರತದಲ್ಲಿ ಹೋಂಡಾದ ಮೊದಲ ಈ ಹೊಚ್ಚ ಹೊಸ ಮಾಡೆಲ್ ಆಗಿದ್ದು ಇದು ತನ್ನ ಲೈನ್‌ಅಪ್‌ನಲ್ಲಿ ಸಿಟಿಗಿಂತ ಮೇಲಿನ ಸ್ಥಾನದಲ್ಲಿ ಇರುತ್ತದೆ.

  • ಹೋಂಡಾ ಶೀಘ್ರದಲ್ಲೇ ಎಲಿವೇಟ್ ಅನ್ನು ಅನಾವರಣಗೊಳಿಸಲಿದ್ದು ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
  • ಈ SUVಗಾಗಿ ಈಗಾಗಲೇ ಕೆಲವು ಡೀಲರ್‌ಶಿಪ್‌ಗಳು ಬುಕಿಂಗ್‌ಗಳನ್ನು ಸ್ವೀಕರಿಸುತ್ತಿವೆ.
  • ಎಕ್ಸ್‌ಟೀರಿಯರ್ ನೋಟದಲ್ಲಿ ಸಂಪರ್ಕಿತ LED ಟೈಲ್‌ಲೈಟ್‌ಗಳು, ಒಂದು ದೊಡ್ಡದಾದ ಗ್ರಿಲ್ ಮತ್ತು ಚಂಕಿ ವ್ಹೀಲ್ ಆರ್ಚ್‌ಗಳನ್ನು ಕಾಣಬಹುದು.
  • ವೈರ್‌ಲೆಸ್ ಫೋನ್ ಚಾರ್ಜಿಂಗ್, ದೊಡ್ಡದಾದ ಟಚ್‌ಸ್ಕ್ರೀನ್, ಮತ್ತು ADASನೊಂದಿಗೆ ಬರುವ ನಿರೀಕ್ಷೆ ಇದೆ.
  • ಸಿಟಿಯಿಂದ ಬಲಿಷ್ಠ ಹೈಬ್ರಿಡ್ ಸೆಟಪ್ ಹೊಂದಿರುವ ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳನ್ನು ಪಡೆದಿರಬಹುದು,
  • ಆರಂಭಿಕ ಬೆಲೆ ರೂ 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.

ಈ ಕಾಂಪ್ಯಾಕ್ಟ್ SUV ತನ್ನ ಇನ್ನೊಬ್ಬ ಸದಸ್ಯನನ್ನು ಬರಮಾಡಿಕೊಳ್ಳಲಿದ್ದು, ಅದರ ಹೆಸರನ್ನು ಈಗಷ್ಟೇ ಹೋಂಡಾ ಎಲಿವೇಟ್ ಎಂದು ದೃಢಪಡಿಸಲಾಗಿದೆ. ಇದು ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ ಆದರೂ, ಕೆಲವು ಡೀಲರ್‌ಶಿಪ್‌ಗಳು ಮುಂಬರುವ ಈ SUVಗಾಗಿ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಭಾರತದಲ್ಲಿ ಆರು ವರ್ಷಗಳಲ್ಲೇ ಹೋಂಡಾದ ಮೊದಲನೇ ಹೊಚ್ಚ ಹೊಸ ಮಾಡೆಲ್ ಆಗಿರುವ ಎಲಿವೇಟ್, ಮೊದಲು ಭಾರತದಲ್ಲಿ ಬಿಡುಗಡೆಗೊಳ್ಳಲಿದ್ದು ನಂತರ ಜಗತ್ತಿನಾದ್ಯಂತ ಮಾರಾಟಗೊಳ್ಳಲಿದೆ. “ಎಲಿವೇಟ್” ಎಂಬ ನಾಮಫಲಕದೊಂದಿಗೆ, ಈ ಕಾರುತಯಾರಕರು V ಯಲ್ಲಿ ಕೊನೆಗೊಳ್ಳುವ ಹೆಸರುಗಳ (ಉದಾಹರಣೆಗೆ CR-V, WR-V, ಮತ್ತು BR-V) ತಮ್ಮ ದೀರ್ಘ ಸಂಬಂಧಿತ ನಾಮಕರಣದ ಮಾದರಿಯನ್ನು ಕೈಬಿಟ್ಟಿದ್ದಾರೆ. ಅಲ್ಲದೇ ಇದು ಹೋಂಡಾದ ಹೊಸ ಯುಗದ ಮಾಡೆಲ್‌ಗಳ ಉದಯಕ್ಕೆ ಗುರುತಾಗಬಹುದು, ಕೆಲವೊಂದು ವಿದ್ಯುತ್‌ಚಾಲಿತವೂ ಆಗಿದೆ.

ಹೊಸ ಟೀಸರ್ ವಿವರಗಳು

ಹೋಂಡಾ ಕಾರ್ ಇಂಡಿಯಾ ಹೊಸ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಾಕಿದ್ದು, ಈ SUVಗೆ “ಎಲಿವೇಟ್” ಎಂಬ ನಾಮಫಲಕವನ್ನು ಅನಾವರಣಗೊಳಿಸಿದೆ. ಹೋಂಡಾ ಮೊನಿಕರ್‌ಗಿಂತ ವಿಶೇಷವಾಗಿ ಏನೂ ಕಾಣದಿದ್ದರೂ, ಇದು SUVಯ ಸಂಪರ್ಕಿತ LED ಟೈಲ್‌ಲೈಟ್‌ಗಳ ನೋಟವನ್ನು ಹೊಂದಿದೆ.

ಇದನ್ನೂ ಓದಿ: ಭಾರತದಲ್ಲಿ ದಶಕವನ್ನು ಪೂರೈಸಿದ ಹೋಂಡಾ ಅಮೇಝ್: ಅದರ ಪ್ರಮುಖ ಸಂಖ್ಯೆಗಳ ನೋಟ ಇಲ್ಲಿದೆ

ಈ ತನಕ ತಿಳಿದಿರೋ ಸಂಗತಿಗಳು

ಈ ಕಾರುತಯಾರಕರು ಹಂಚಿಕೊಂಡ ಈ ಹಿಂದಿನ ಟೀಸರ್‌ನಲ್ಲಿ ಈಗಾಗಲೇ ಎಲಿವೇಟ್ SUVಯ ಸಿಲ್ಹೋಟ್‌ನಲ್ಲಿ LED ಹೆಡ್‌ಲೈಟ್‌ಗಳು, DRLಗಳು ಮತ್ತು ಫಾಗ್‌ ಲ್ಯಾಂಪ್‌ಗಳಿಗೆ LED ಇರುವುದನ್ನು ಕಾಣಬಹುದು. ಈ SUVಯ ಹಿಂದಿನ ಸ್ಪೈ ಶಾಟ್‌ಗಳು ಚಂಕಿ ವ್ಹೀಲ್ ಆರ್ಚ್‌ಗಳು, ರೂಫ್ ರೇಲ್‌ಗಳು ಮತ್ತು ದೊಡ್ಡದಾದ ಗ್ರಿಲ್ ಹೊಂದಿರುವುದನ್ನೂ ತೋರಿಸಿದೆ.

ನಿರೀಕ್ಷಿತ ವೈಶಿಷ್ಟ್ಯಗಳ ಪಟ್ಟಿ

ಸಿಟಿಯ 8-ಇಂಚು ಯೂನಿಟ್‌ಗೆ ಹೋಲಿಸಿದರೆ, ಎಲಿವೇಟ್ SUV ದೊಡ್ಡ ಟಚ್ ಸ್ಕ್ರೀನ್ ಅನ್ನು ಹೊಂದಿದ್ದು, ಸಿಂಗಲ್-ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವಾತಾಯನದ ಫ್ರಂಟ್‌ ಸೀಟುಗಳನ್ನು ಪಡೆದಿದೆ.

ಆರು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮರಾ ಪ್ರಯಾಣಿಕ ಸುರಕ್ಷತೆಯ ಕಾಳಜಿ ವಹಿಸಿದೆ. ಇದು ಹಲವಾರು ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಅನ್ನು ನೀಡುವ ನಿರೀಕ್ಷೆ ಇದೆ.

ಡೀಸೆಲ್ ಆಯ್ಕೆ ಇರುವುದಿಲ್ಲ

ಸಿಟಿಯಂತೆ ಎಲಿವೇಟ್ SUVನಲ್ಲೂ ಕೇವಲ ಪೆಟ್ರೋಲ್ ಇಂಜಿನ್ ಮಾತ್ರವೇ ಇರುತ್ತದೆ. ಸಿಟಿಯಲ್ಲಿರುವ 1.5-ಲೀಟರ್‌ನ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್ ಅನ್ನೇ ಇದು ಪಡೆದಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಆಯ್ಕೆಗಲನ್ನು ಹೊಂದಿದೆ. ಹೋಂಡಾದ ಆ ಕಾಂಪ್ಯಾಕ್ಟ್ SUV ಸಿಟಿ ಹೈಬ್ರಿಡ್‌ನ ಸ್ಟ್ರಾಂಗ್-ಪವರ್ ಹೈಬ್ರಿಡ್ ಪವರ್‌ಟ್ರೇನ್ (126PS ಜೋಡಿಸಿದ) ಅನ್ನು ಹೊಂದಿರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಆಧುನಿಕ ಇಂಜಿನ್ ಬ್ರೇಕ್-ಇನ್ ವಿಧಾನದ ಕುರಿತ ಮಿಥ್ಯೆಗಳ ಅನಾವರಣ

ಬೆಲೆ ಮತ್ತು ಸ್ಪರ್ಧೆ

ಈ ಎಲಿವೇಟ್‌ಗೆ ಹೋಂಡಾ ರೂ 11 ಲಕ್ಷದ ಆರಂಭಿಕ ಬೆಲೆಯನ್ನು ನಿಗದಿಪಡಿಸಿ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಈ SUVಯು MG ಆ್ಯಸ್ಟರ್, ಟೊಯೋಟಾ ಅರ್ಬನ್ ಕ್ರ್ಯೂಸಿಯರ್ ಹೈರೈಡರ್, ಹ್ಯುಂಡೈ ಕ್ರೆಟಾ, ಫೋಕ್ಸ್‌ವಾಗನ್ ಟೈಗನ್, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಸಿಟ್ರಾನ್ C3 ಏರ್‌ಕ್ರಾಸ್ ಮತ್ತು ಸ್ಕೋಡಾ ಕುಶಕ್‌ಗೆ ಪ್ರತಿಸ್ಪರ್ಧಿಯಾಗಲಿದೆ.

Share via

Write your Comment on Honda ಇಲೆವಟ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ಫೇಸ್ ಲಿಫ್ಟ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.21.90 - 30.50 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ