ಬಹುನಿರೀಕ್ಷಿತ Hyundai Creta Electric ಬಿಡುಗಡೆ, ಬೆಲೆ 17.99 ಲಕ್ಷ ರೂ.ನಿಂದ ಪ್ರಾರಂಭ
ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಗಾಗಿ rohit ಮೂಲಕ ಜನವರಿ 18, 2025 11:09 am ರಂದು ಪ್ರಕಟಿಸಲಾ ಗಿದೆ
- 56 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಲಭ್ಯವಿದೆ, ಗರಿಷ್ಠ 473 ಕಿ.ಮೀ. ರೇಂಜ್ ಅನ್ನು ನೀಡುತ್ತದೆ
-
ಕ್ರೆಟಾ ಎಲೆಕ್ಟ್ರಿಕ್ ಬೆಲೆಗಳು 17.99 ಲಕ್ಷ ರೂ.ಗಳಿಂದ 23.50 ಲಕ್ಷ ರೂ.ಗಳವರೆಗೆ (ಪರಿಚಯಾತ್ಮಕ ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ) ಇದೆ.
-
ಇದು ಎಕ್ಸಿಕ್ಯುಟಿವ್, ಸ್ಮಾರ್ಟ್, ಪ್ರೀಮಿಯಂ ಮತ್ತು ಎಕ್ಸಲೆನ್ಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
-
ನೀಡಲಾಗುವ ಫೀಚರ್‌ಗಳಲ್ಲಿ ಡ್ಯುಯಲ್-ಝೋನ್ ಎಸಿ, ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು ಮತ್ತು ADAS ಸೇರಿವೆ.
-
42 ಕಿ.ವ್ಯಾಟ್ ಮತ್ತು 51.4 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ಗಳನ್ನು ಪಡೆಯುತ್ತದೆ; ಆಯ್ಕೆ ಮಾಡಿದ ಬ್ಯಾಟರಿ ಪ್ಯಾಕ್ ಅನ್ನು ಅವಲಂಬಿಸಿ 171 ಪಿಎಸ್‌ವರೆಗಿನ ಒಂದೇ ವಿದ್ಯುತ್ ಮೋಟರ್ ಅನ್ನು ಹೊಂದಿದೆ.
ಹ್ಯುಂಡೈಯ ಭಾರತದಲ್ಲಿ ಅತ್ಯಂತ ಕೈಗೆಟುಕುವ ಮತ್ತು ಮೊದಲ ಬಾರಿಗೆ ಸಂಪೂರ್ಣವಾಗಿ ಸ್ಥಳೀಯವಾಗಿ ತಯಾರಿಸಿದ EV ಆಗಿರುವ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರ ಬೆಲೆ ರೂ. 17.99 ಲಕ್ಷದಿಂದ (ಪರಿಚಯಾತ್ಮಕ ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ) ಪ್ರಾರಂಭವಾಗುತ್ತದೆ. ಇದು ಎಕ್ಸಿಕ್ಯುಟಿವ್, ಸ್ಮಾರ್ಟ್, ಪ್ರೀಮಿಯಂ ಮತ್ತು ಎಕ್ಸಲೆನ್ಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ ಮತ್ತು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ.
ವೇರಿಯೆಂಟ್-ವಾರು ಬೆಲೆಗಳು
ವೇರಿಯೆಂಟ್ |
ಮೀಡಿಯಮ್ ರೇಂಜ್ (42 ಕಿ.ವ್ಯಾಟ್) |
ಲಾಂಗ್ ರೇಂಜ್ (51.4 ಕಿ.ವ್ಯಾಟ್) |
ಎಕ್ಸ್‌ಕ್ಯೂಟಿವ್ |
17.99 ಲಕ್ಷ ರೂ. |
– |
ಸ್ಮಾರ್ಟ್ |
19 ಲಕ್ಷ ರೂ. |
– |
ಸ್ಮಾರ್ಟ್ (ಒಪ್ಶನಲ್) |
19.50 ಲಕ್ಷ ರೂ. |
21.50 ಲಕ್ಷ ರೂ. |
ಪ್ರೀಮಿಯಮ್ |
20 ಲಕ್ಷ ರೂ. |
– |
ಎಕ್ಸಲೆನ್ಸ್ |
– |
23.50 ಲಕ್ಷ ರೂ. |
ಮೇಲಿನ ಕೋಷ್ಟಕದಲ್ಲಿ ನೋಡಿದಂತೆ, ದೊಡ್ಡ ಬ್ಯಾಟರಿ ಪ್ಯಾಕ್ ಕ್ರೆಟಾ ಎಲೆಕ್ಟ್ರಿಕ್‌ನ ಮಿಡ್-ಸ್ಪೆಕ್ ಸ್ಮಾರ್ಟ್ (ಒಪ್ಶನಲ್) ಮತ್ತು ಟಾಪ್-ಸ್ಪೆಕ್ ಎಕ್ಸಲೆನ್ಸ್ ಟ್ರಿಮ್‌ಗಳಿಗೆ ಮಾತ್ರ ಸೀಮಿತವಾಗಿದೆ. 11 ಕಿ.ವ್ಯಾಟ್ AC ಚಾರ್ಜರ್ ಬೆಲೆ ಮೇಲೆ ತಿಳಿಸಿದ ಬೆಲೆಗಳಿಗಿಂತ 73,000 ರೂ. ಹೆಚ್ಚಾಗಿದೆ.
ಇದನ್ನೂ ಓದಿ: ಹೊಸ ಹ್ಯುಂಡೈ ಅಲ್ಕಾಜರ್ ಪರಿಚಯಾತ್ಮಕ ಬೆಲೆಗಳು ಸ್ಥಗಿತ, ಇನ್ನು ಮುಂದೆ 15,000 ರೂ.ಗಳವರೆಗೆ ದುಬಾರಿ
ಹ್ಯುಂಡೈ ಕ್ರೆಟಾ ವಿನ್ಯಾಸ
ಕ್ರೆಟಾ ಎಲೆಕ್ಟ್ರಿಕ್, ಎಸ್‌ಯುವಿಯ ಆಂತರಿಕ ದಹನಕಾರಿ ಎಂಜಿನ್ (ICE) ಆವೃತ್ತಿಯನ್ನು ಹೋಲುತ್ತದೆ, ಆದರೂ ಅದರ ಎಲೆಕ್ಟ್ರಿಕ್ ಆವೃತ್ತಿಗೆ ಅನುಗುಣವಾಗಿ ಸೂಕ್ಷ್ಮವಾದ ಕೆಲವು ಮಾರ್ಪಾಡುಗಳನ್ನು ಹೊಂದಿದೆ. ಬದಲಾವಣೆಗಳಲ್ಲಿ ಮುಚ್ಚಿದ ಗ್ರಿಲ್, ಸಕ್ರಿಯ ಏರ್ ಫ್ಲಾಪ್‌ಗಳು, 17-ಇಂಚಿನ ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳು ಮತ್ತು ಮಾರ್ಪಾಡು ಮಾಡಲಾದ ಬಂಪರ್‌ಗಳು ಸೇರಿವೆ.
ಒಳಭಾಗದಲ್ಲಿ, ಇದು ರೆಗ್ಯುಲರ್ ಕ್ರೆಟಾದಂತೆಯೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ. ಆದರೆ ಅಯೋನಿಕ್ 5 ನಲ್ಲಿ ಕಂಡುಬರುವಂತೆ ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಬರುತ್ತದೆ. ಇದು ಕಪ್ಪು ಮತ್ತು ಬಿಳಿ ಸೀಟ್ ಕವರ್ ಅನ್ನು ಹೊಂದಿದ್ದು, ಕ್ಯಾಬಿನ್‌ನ ಸುತ್ತಲೂ ನೀಲಿ ಬಣ್ಣದ ಡಿಸೈನ್‌ಗಳು ಕಂಡುಬರುತ್ತವೆ, ಇದು ಅದರ ಸಂಪೂರ್ಣ ಎಲೆಕ್ಟ್ರಿಕ್ ಅಂಶವನ್ನು ಎತ್ತಿ ತೋರಿಸುತ್ತದೆ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಬ್ಯಾಟರಿ ಪ್ಯಾಕ್ ಮತ್ತು ರೇಂಜ್
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ಗೆ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಒದಗಿಸಿದೆ: ARAI- ಕ್ಲೈಮ್ ಮಾಡಿದ 390 ಕಿಮೀ ರೇಂಜ್ ಅನ್ನು ಹೊಂದಿರುವ 42 ಕಿ.ವ್ಯಾಟ್ ಘಟಕ ಮತ್ತು ಇನ್ನೊಂದು 51.4 ಕಿ.ವ್ಯಾಟ್ ಘಟಕವು 473 ಕಿಮೀ ಕ್ಲೈಮ್ ಮಾಡಲಾದ ರೇಂಜ್ ಅನ್ನು ಹೊಂದಿದೆ. ಈ ಆಲ್-ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿಯು 171 ಪಿಎಸ್ ಪವರ್ ನೀಡುವ (ಆಯ್ಕೆ ಮಾಡಿದ ವೇರಿಯೆಂಟ್ ಅನ್ನು ಅವಲಂಬಿಸಿ) ಒಂದೇ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದ್ದು ಅದು ಮುಂಭಾಗದ ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಫೀಚರ್‌ಗಳು
ಫೀಚರ್‌ಗಳ ವಿಷಯದಲ್ಲಿ, ಕ್ರೆಟಾ ಎಲೆಕ್ಟ್ರಿಕ್ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳನ್ನು (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್ಸ್‌ಟ್ರುಮೆಂಟೇಶನ್‌ಗಾಗಿ), ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಮತ್ತು ಪನೋರಮಿಕ್ ಸನ್‌ರೂಫ್‌ನೊಂದಿಗೆ ಸಜ್ಜುಗೊಂಡಿದೆ. ಇದು ವೈರ್‌ಲೆಸ್ ಫೋನ್ ಚಾರ್ಜರ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಡ್ಯುಯಲ್-ಜೋನ್ ಎಸಿ ಅನ್ನು ಸಹ ಪಡೆಯುತ್ತದೆ.
ಇದರ ಸುರಕ್ಷತಾ ಸೂಟ್ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ISOFIX ಚೈಲ್ಡ್ ಸೀಟ್ ಮೌಂಟ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಪ್ರತಿಸ್ಪರ್ಧಿಗಳು
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಎಮ್‌ಜಿ ಜೆಡ್‌ಎಸ್ ಇವಿ, ಮಾರುತಿ ಸುಜುಕಿ ಇ ವಿಟಾರಾ, ಟಾಟಾ ಕರ್ವ್ ಇವಿ ಮತ್ತು ಮಹೀಂದ್ರಾ BE 6 ಗಳಿಂದ ಸ್ಪರ್ಧೆಯನ್ನು ಎದುರಿಸುತ್ತದೆ.
ಇದನ್ನೂ ಓದಿ: ಆಟೋ ಎಕ್ಸ್‌ಪೋದಲ್ಲಿ ಉತ್ಪಾದನೆಗೆ ಸಿದ್ಧವಾದ ಅವತಾರದಲ್ಲಿ Tata Harrier EVಯ ಪ್ರದರ್ಶನ
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ