ಈ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Hyundai Creta EV
ಹುಂಡೈ ಕ್ರೆಟಾ ಇವಿ ಗಾಗಿ dipan ಮೂಲಕ ನವೆಂಬರ್ 21, 2024 09:28 pm ರಂದು ಮಾರ್ಪಡಿಸಲಾಗಿದೆ
- 101 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಒಒ) ತರುಣ್ ಗಾರ್ಗ್ ಅವರು ಹ್ಯುಂಡೈ ಕ್ರೆಟಾ ಇವಿಯನ್ನು 2025ರ ಜನವರಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ
-
ಕ್ರೆಟಾ ಇವಿ ಬಿಡುಗಡೆಯಾದ ನಂತರ ಭಾರತದಲ್ಲಿ ಹ್ಯುಂಡೈನ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರ್ ಆಗಲಿದೆ.
-
ಇದು ಫೇಸ್‌ಲಿಫ್ಟೆಡ್ ಕ್ರೆಟಾವನ್ನು ಆಧರಿಸಿರುತ್ತದೆ.
-
EV-ನಿರ್ದಿಷ್ಟ ಬದಲಾವಣೆಗಳೊಂದಿಗೆ ಕ್ರೆಟಾದೊಂದಿಗೆ ವಿನ್ಯಾಸ ಹೋಲಿಕೆಗಳನ್ನು ಹೊಂದಿರಲಿದೆ.
-
10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು ಮತ್ತು ಡ್ಯುಯಲ್-ಟೋನ್ ಥೀಮ್‌ನೊಂದಿಗೆ ರೆಗುಲರ್ ಕ್ರೆಟಾದಂತೆಯೇ ಕ್ಯಾಬಿನ್ ವಿನ್ಯಾಸವನ್ನು ಹೊಂದಬಹುದೆಂದು ನಿರೀಕ್ಷಿಸಲಾಗಿದೆ.
-
ಸುರಕ್ಷತಾ ಸೂಟ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಮತ್ತು ADAS ಫೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.
-
ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಸೆಟಪ್ ಅನ್ನು ಇನ್ನೂ ದೃಢೀಕರಿಸಲಾಗಿಲ್ಲ, ಆದರೆ ನಾವು 400 ಕಿ.ಮೀ ಗಿಂತ ಹೆಚ್ಚು ಕ್ಲೈಮ್ ಮಾಡಬಹುದಾದ ವ್ಯಾಪ್ತಿಯನ್ನು ನಿರೀಕ್ಷಿಸುತ್ತೇವೆ.
-
ಬೆಲೆಗಳು 20 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ.
ಹ್ಯುಂಡೈ ಕ್ರೆಟಾ ಇವಿ ಪಬ್ಲಿಕ್ ರೋಡ್‌ಗಳಲ್ಲಿ ದೀರ್ಘಕಾಲದವರೆಗೆ ಸುತ್ತುತ್ತಿರುವುದನ್ನು ತೋರಿಸುವ ಅನೇಕ ಸ್ಪೈ ಶಾಟ್‌ಗಳು ಮತ್ತು ವೀಡಿಯೊಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಇದೀಗ, ಇತ್ತೀಚಿನ ಹೂಡಿಕೆದಾರರ ಸಭೆಯಲ್ಲಿ ಹ್ಯುಂಡೈ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ತರುಣ್ ಗಾರ್ಗ್ ಅವರು ಅದರ ಭಾರತ ಬಿಡುಗಡೆಯ ಸಮಯವನ್ನು ದೃಢಪಡಿಸಿದ್ದಾರೆ. ಹ್ಯುಂಡೈ ಕ್ರೆಟಾ ಇವಿಯನ್ನು 2025ರ ಜನವರಿ ವೇಳೆಗೆ ಭಾರತದಲ್ಲಿ ಪರಿಚಯಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅದು ಏನನ್ನು ಆಫರ್‌ನಲ್ಲಿ ಏನೆಲ್ಲಾ ನೀಡುತ್ತದೆ ಎಂಬುದನ್ನು ನಾವು ಸಂಕ್ಷಿಪ್ತವಾಗಿ ನೋಡೋಣ:
ಕ್ರೆಟಾ ರೀತಿಯ ಡಿಸೈನ್
ಈ ಹಿಂದೆ ಸೆರೆಹಿಡಿಯಲಾದ ಕ್ರೆಟಾ ಇವಿಯ ಪರೀಕ್ಷಾ ಆವೃತ್ತಿಗಳು ಫೇಸ್‌ಲಿಫ್ಟೆಡ್ ಕ್ರೆಟಾ ICE (ಇಂಧನ ಚಾಲಿತ ಎಂಜಿನ್) ನಂತಹ ವಿನ್ಯಾಸವನ್ನು ತೋರಿಸಿದೆ. ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್ ಸೆಟಪ್‌ನೊಂದಿಗೆ ಇದೇ ರೀತಿಯ ಹೆಡ್‌ಲೈಟ್ ವಿನ್ಯಾಸವನ್ನು ಈ ಪರೀಕ್ಷಾ ಆವೃತ್ತಿಗಳಲ್ಲಿ ಗುರುತಿಸಲಾಗಿದೆ. ಟೈಲ್ ಲೈಟ್ ವಿನ್ಯಾಸವು ಮಧ್ಯದಲ್ಲಿ ಲೈಟ್ ಬಾರ್‌ನೊಂದಿಗೆ ICE ಕ್ರೆಟಾವನ್ನು ಹೋಲುತ್ತದೆ ಎಂದು ಸ್ಪೈ ಶಾಟ್‌ಗಳು ಸೂಚಿಸುತ್ತವೆ.
ಭಿನ್ನವಾಗಿರುವುದು ಏನೆಂದರೆ, ಇದು ಖಾಲಿಯಾದ ಗ್ರಿಲ್ ಮತ್ತು ಮಾರ್ಪಾಡು ಮಾಡಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್ ಅನ್ನು ಹೊಂದಿರುತ್ತದೆ. ಇದು 17-ಇಂಚಿನ ಗಾತ್ರವನ್ನು ಹೊಂದಿರುವ ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳನ್ನು ಸಹ ಪಡೆಯುತ್ತದೆ.
ಇದನ್ನೂ ಓದಿ: 500 ಕಿ.ಮೀ.ಗೂ ಹೆಚ್ಚು ಮೈಲೇಜ್ ಹೊಂದಿರುವ Tata Harrier EV ಯ ಬಿಡುಗಡೆಗೆ ಸಮಯ ನಿಗದಿ
ಒಂದೇ ರೀತಿಯ ಇಂಟೀರಿಯರ್ ಡಿಸೈನ್
ರೆಗುಲರ್ ಕ್ರೆಟಾದಂತೆಯೇ ಇಂಟೀರಿಯರ್ ವಿನ್ಯಾಸವನ್ನು ಹೊಂದಿರುವ ಕ್ರೆಟಾ ಇವಿಯ ಪರೀಕ್ಷಾ ಆವೃತ್ತಿಯನ್ನು ಇತ್ತೀಚೆಗೆ ರಸ್ತೆಯಲ್ಲಿ ಗುರುತಿಸಲಾಗಿದೆ. ಸ್ಪೈ ಶಾಟ್‌ಗಳು ಡ್ಯುಯಲ್-ಟೋನ್ ಇಂಟೀರಿಯರ್ ಮತ್ತು ಡ್ಯುಯಲ್-ಸ್ಕ್ರೀನ್ ಡಿಸ್‌ಪ್ಲೇಗಳಿಗಾಗಿ ಸಂಯೋಜಿತ ಸೆಟಪ್ ಅನ್ನು ಬಹಿರಂಗಪಡಿಸಿದವು. ಇದು ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಸ್ಟೀರಿಂಗ್ ಚಕ್ರದ ಹಿಂದೆ ಡ್ರೈವ್ ಸೆಲೆಕ್ಟರ್ ಅನ್ನು ಪಡೆಯುತ್ತದೆ, ಇದು ದೊಡ್ಡ Ioniq 5 ಗೆ ಹೋಲುತ್ತದೆ.
ನಿರೀಕ್ಷಿತ ಫೀಚರ್‌ಗಳು ಮತ್ತು ಸುರಕ್ಷತೆ
ಸ್ಪೈ ಶಾಟ್‌ಗಳಲ್ಲಿ ಗುರುತಿಸಿದಂತೆ, ಕ್ರೆಟಾ ಇವಿಯು 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಪಡೆಯುವ ಸಾಧ್ಯತೆಯಿದೆ.
ಹ್ಯುಂಡೈ ತನ್ನ ಸುರಕ್ಷತಾ ಸೂಟ್ ಅನ್ನು ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ), 360-ಡಿಗ್ರಿ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ನಂತಹ ಫೀಚರ್‌ಗಳೊಂದಿಗೆ ಒದಗಿಸುವ ನಿರೀಕ್ಷೆಯಿದೆ. ಇದು ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ನವೆಂಬರ್ 18ರಿಂದ ರಾಷ್ಟ್ರವ್ಯಾಪಿ Renaultನ ಒಂದು ವಾರದ ಚಳಿಗಾಲದ ಸರ್ವೀಸ್ ಕ್ಯಾಂಪ್
ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್
ಇವಿಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್ ಬಗ್ಗೆ ಹ್ಯುಂಡೈ ಇನ್ನೂ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಅದರ ಪ್ರತಿಸ್ಪರ್ಧಿಗಳಂತೆ, ಇದು ಬಹು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿರುತ್ತದೆ. ಆದರೆ ಒಂದೇ ಮೋಟರ್ ಅನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು 400 ಕಿಲೋಮೀಟರ್‌ಗಿಂತಲೂ ಹೆಚ್ಚು ಕ್ಲೈಮ್ ಮಾಡಲಾದ ಶ್ರೇಣಿಯನ್ನು ನೀಡಬಲ್ಲದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಕ್ರೆಟಾ ಇವಿಯ ಬೆಲೆ 20 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಎಮ್‌ಜಿ ಜೆಡ್‌ಎಸ್ ಇವಿ, ಟಾಟಾ ಕರ್ವ್ ಇವಿ ಮತ್ತು ಮುಂಬರುವ ಮಾರುತಿ eVX ನೊಂದಿಗೆ ಸ್ಪರ್ಧಿಸುತ್ತದೆ. ಇದು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಗೆ ಪ್ರೀಮಿಯಂ ಪರ್ಯಾಯವಾಗಿದೆ.
ಗಮನಿಸಿ: ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ICE-ಚಾಲಿತ ಕ್ರೆಟಾದ ಚಿತ್ರಗಳನ್ನು ಬಳಸಲಾಗಿದೆ
ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇದರ ಬಗ್ಗೆ ಇನ್ನಷ್ಟು ಓದಲು : ಹ್ಯುಂಡೈ ಕ್ರೆಟಾ ಆನ್‌ರೋಡ್ ಬೆಲೆ
0 out of 0 found this helpful