• English
  • Login / Register

Hyundai Creta EV ಬಿಡುಗಡೆಗೆ ಸಮಯ ನಿಗದಿ, ರೆಗುಲರ್‌ ಕ್ರೇಟಾಗಿಂತ ಇದು ಹೇಗೆ ಭಿನ್ನ?

ಹುಂಡೈ ಕ್ರೆಟಾ ಇವಿ ಗಾಗಿ rohit ಮೂಲಕ ಜೂನ್ 21, 2024 06:17 pm ರಂದು ಪ್ರಕಟಿಸಲಾಗಿದೆ

  • 101 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯುಂಡೈ 2024ರ ಅಂತ್ಯದ ವೇಳೆಗೆ ಭಾರತದಲ್ಲಿ ಕ್ರೆಟಾ ಇವಿ ಉತ್ಪಾದನೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ

Hyundai Creta EV launch timeline confirmed

  • ಕ್ರೆಟಾ ಇವಿಯು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಫೇಸ್‌ಲಿಫ್ಟೆಡ್ ಕ್ರೆಟಾವನ್ನು ಆಧರಿಸಿದೆ.
  • ಮುಚ್ಚಿದ ಗ್ರಿಲ್, ಹೊಸ ಅಲಾಯ್‌ ವೀಲ್‌ಗಳು ಮತ್ತು ಕನೆಕ್ಟೆಡ್‌ ಲೈಟಿಂಗ್‌ಗಳು ವಿನ್ಯಾಸ ಬದಲಾವಣೆಯಲ್ಲಿ ಒಳಗೊಂಡಿದೆ.
  • ತಾಜಾ 3-ಸ್ಪೋಕ್ ಸ್ಟೀರಿಂಗ್ ಚಕ್ರವನ್ನು ಪಡೆಯಲು ಕ್ಯಾಬಿನ್ ಒಂದೇ ರೀತಿಯ ವಿನ್ಯಾಸವನ್ನು ಹೊಂದಿರಬಹುದೆಂದು ನಿರೀಕ್ಷಿಸಲಾಗಿದೆ. 
  • ಫೀಚರ್‌ಗಳಲ್ಲಿ 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು, ಪ್ಯಾನರೋಮಿಕ್‌ ಸನ್‌ರೂಫ್ ಮತ್ತು ADAS ಅನ್ನು ಒಳಗೊಂಡಿರಬಹುದು.
  • ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಸೆಟಪ್ ಕುರಿತು ಇನ್ನೂ ಮಾಹಿತಿ ನೀಡಿಲ್ಲ; 400 ಕಿಲೋಮೀಟರ್‌ಗಿಂತಲೂ ಹೆಚ್ಚಿನ ರೇಂಜ್‌ ಅನ್ನು ಹೊಂದುವ ನಿರೀಕ್ಷೆಯಿದೆ.
  • 2025 ರ ಆರಂಭದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ; ಬೆಲೆಗಳು 20 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು .

ಮುಂಬರುವ ಹ್ಯುಂಡೈ ಕ್ರೆಟಾ ಇವಿಯು ವರ್ಷದ ಅಂತ್ಯದ ವೇಳೆಗೆ ಉತ್ಪಾದನೆಯನ್ನು ಪ್ರಾರಂಭಿಸಲಿದೆ ಎಂಬ ಅಧಿಕೃತ ಮಾಹಿತಿಯನ್ನು 2024ರ ಏಪ್ರಿಲ್‌ನಲ್ಲಿ,ಯೇ ತಿಳಿದಿದ್ದೇವು. ಈಗ, ಸಂಪೂರ್ಣ ಎಲೆಕ್ಟ್ರಿಕ್ ಹ್ಯುಂಡೈ ಕ್ರೆಟಾವನ್ನು 2024-25 ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ದೃಢಪಡಿಸಲಾಗಿದೆ, ಅಂದರೆ ಇದು  2025ರ ಜನವರಿಯಿಂದ ಮಾರ್ಚ್ ಒಳಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹ್ಯುಂಡೈ ನಮ್ಮ ಮಾರುಕಟ್ಟೆಗೆ ಸಿದ್ಧಪಡಿಸುತ್ತಿರುವ ನಾಲ್ಕು ಹೊಸ ಇವಿಗಳಲ್ಲಿ ಇದು ಒಂದಾಗಿದೆ. ಇಲ್ಲಿಯವರೆಗೆ ನಮಗೆ ತಿಳಿದಿರುವ ಎಲ್ಲವೂ ಕೆಳಗೆ ವಿವರಿಸಿದ್ದೇವೆ. 

ರೆಗುಲರ್‌ ಕ್ರೆಟಾಗಿಂತ ಭಿನ್ನವಾಗಿರುವ ವಿನ್ಯಾಸಗಳು

Hyundai Creta EV spied

ಹ್ಯುಂಡೈ ಎಲೆಕ್ಟ್ರಿಕ್ ಎಸ್‌ಯುವಿಯು ಈಗಾಗಲೇ ಅನೇಕ ಬಾರಿ ವಿದೇಶದಲ್ಲಿ ಮತ್ತು ಭಾರತದಲ್ಲಿಯೂ ಸಹ ಕೆಲವು ಸಂದರ್ಭಗಳಲ್ಲಿ ಹೊಸ ವಿನ್ಯಾಸದ ಹೆಚ್ಚಿನ ವಿವರಗಳನ್ನು ರಹಸ್ಯವಾಗಿ ಸೆರೆಹಿಡಿಯಲಾಗಿದೆ. ಪ್ರಮುಖ ಹೊರಗಿನ ಬದಲಾವಣೆಗಳು ಮುಚ್ಚಿದ ಗ್ರಿಲ್, ಮಾರ್ಪಾಡು ಮಡಲಾದ ಬಂಪರ್ ಮತ್ತು ಏರೋಡೈನಾಮಿಕಲಿ ವಿನ್ಯಾಸಗೊಳಿಸಲಾದ ಅಲಾಯ್‌ ವೀಲ್‌ಗಳನ್ನು ಒಳಗೊಂಡಿರುತ್ತದೆ. ಇಂಧನದಿಂದ ಚಾಲಿತ ಕ್ರೆಟಾದ ಫೇಸ್‌ಲಿಫ್ಟೆಡ್ ಆವೃತ್ತಿಯಲ್ಲಿ ಕಂಡುಬರುವ ಅದೇ ಡಬಲ್ L-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಇದು ಹೊಂದಿರಲಿದೆ.  ಇದೇ ರೀತಿಯ ಕನೆಕ್ಟೆಡ್‌ ಎಲ್ಇಡಿ ಟೈಲ್ ಲೈಟ್ ಸೆಟಪ್ ಮತ್ತು ಮರುವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಸಹ ಇದರಲ್ಲಿ ನಿರೀಕ್ಷಿಸಬಹುದು.

ಕ್ಯಾಬಿನ್‌ನ ಒಳಗೆ ನಿರೀಕ್ಷಿತ ಬದಲಾವಣೆಗಳು

Hyundai Creta cabin

ವಿವರಣೆಗಾಗಿ ಹುಂಡೈ ಕ್ರೆಟಾದ ಕ್ಯಾಬಿನ್‌ ಚಿತ್ರವನ್ನು ಬಳಸಲಾಗಿದೆ

ಹಿಂದಿನ ಸ್ಪೈ ಶಾಟ್ ಅನ್ನು ಆಧರಿಸಿ, ಕ್ರೆಟಾ ಇವಿಯು ಅದೇ ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಮತ್ತು ಡ್ಯುಯಲ್-ಇಂಟಿಗ್ರೇಟೆಡ್ ಡಿಜಿಟಲ್ ಡಿಸ್‌ಪ್ಲೇಗಳನ್ನು ಒಳಗೊಂಡು ಇಂಧನದಿಂದ ಚಾಲಿತ ಕ್ರೆಟಾದ ಅದೇ ಕ್ಯಾಬಿನ್ ವಿನ್ಯಾಸವನ್ನು ಹೊಂದಿರುತ್ತದೆ ಎಂಬುದು ಬಹುತೇಕ ಖಚಿತವಾಗಿದೆ. ಸಂಪೂರ್ಣ-ಎಲೆಕ್ಟ್ರಿಕ್‌ ಕ್ರೆಟಾದಲ್ಲಿ ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್ ಇರುವುದನ್ನು ಸ್ಪೈ ಶಾಟ್‌ಗಳು ಈಗಾಗಲೇ ಬಹಿರಂಗಪಡಿಸಿದೆ. 

ಫೀಚರ್‌ಗಳು ಮತ್ತು ಸುರಕ್ಷತಾ ತಂತ್ರಜ್ಞಾನ

Hyundai Creta 360-degree camera

ಹ್ಯುಂಡೈ ಇದನ್ನು 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಪ್ಯಾನರೋಮಿಕ್‌ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳೊಂದಿಗೆ ಸಜ್ಜುಗೊಳಿಸಬಹುದೆಂದು ನಿರೀಕ್ಷಿಸಲಾಗುತ್ತಿದೆ. ಇದರ ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ), 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿರುವ ಸಾಧ್ಯತೆಯಿದೆ.

ಇದನ್ನೂ ಓದಿ: WWDC 2024 ರಲ್ಲಿ ಮುಂದಿನ ಜನರೇಶನ್‌ನ ಆಪಲ್ ಕಾರ್‌ಪ್ಲೇ ಅನಾವರಣ: ಜಗತ್ತಿನ ಅತ್ಯುತ್ತಮ ಮತ್ತು ಅತ್ಯಾಧುನಿಕ ಕಾರ್ ಡಿಸ್‌ಪ್ಲೇ

ಕ್ರೆಟಾ ಇವಿ ಎಲೆಕ್ಟ್ರಿಕ್ ಪವರ್‌ಟ್ರೇನ್

ಕ್ರೆಟಾ ಇವಿಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್ ಕುರಿತು ವಿವರಗಳು ಇನ್ನೂ ವಿರಳವಾಗಿದ್ದರೂ, ಇದು 400 ಕಿಮೀಗಿಂತ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್‌ಅನ್ನು ಹೊಂದಿರುತ್ತದೆ ಎಂದು ನಾವು ಭಾವಿಸುತ್ತೇವೆ. ಹ್ಯುಂಡೈ ತನ್ನ ಜಾಗತಿಕ ಶ್ರೇಣಿಯಲ್ಲಿರುವ ಇತರ ಇವಿಗಳಂತೆ ಮತ್ತು ಭಾರತದಲ್ಲಿನ ಕೆಲವು ಇವಿ ಪ್ರತಿಸ್ಪರ್ಧಿಗಳಂತೆ ಬಹು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಇದನ್ನು ನೀಡಬಹುದು. ಆದಾಗಿಯೂ, ಇದನ್ನು ಸಿಂಗಲ್-ಮೋಟರ್ ಸೆಟಪ್‌ನೊಂದಿಗೆ ಮಾತ್ರ ನೀಡಲಾಗುವುದು, ಇದು ಕಡಿಮೆ ಬೆಲೆಗಳು ಮತ್ತು ಹೆಚ್ಚಿನ ರೇಂಜ್‌ಗೆ ಉತ್ತಮವಾಗಿರುತ್ತದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಹ್ಯುಂಡೈ ಕ್ರೆಟಾ ಇವಿಯ ಆರಂಭಿಕ ಬೆಲೆಯು 20 ಲಕ್ಷ ರೂ (ಎಕ್ಸ್ ಶೋ ರೂಂ)ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಎಮ್‌ಜಿ ಝೆಡ್‌ಎಸ್‌ ಇವಿ ಮತ್ತು ಮುಂಬರುವ ಟಾಟಾ ಕರ್ವ್‌ ಇವಿ ಮತ್ತು ಮಾರುತಿ ಇವಿಎಕ್ಸ್‌ನೊಂದಿಗೆ ಸ್ಪರ್ಧಿಸುತ್ತದೆ. ಕ್ರೆಟಾ ಇವಿಯು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400ಗೆ ಪ್ರೀಮಿಯಂ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

 ಹೆಚ್ಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ತಪ್ಪದೇ ಫಾಲೋ ಮಾಡಿ.

ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಕ್ರೆಟಾ ಇವಿ

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience