ಒಂದು ತಿಂಗಳಲ್ಲಿ ಬರೋಬ್ಬರಿ 51,000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದ Hyundai Creta Facelift
ಹುಂಡೈ ಕ್ರೆಟಾ ಗಾಗಿ shreyash ಮೂಲಕ ಫೆಬ್ರವಾರಿ 06, 2024 05:22 pm ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಲ್ಲಾ-ಹೊಸ ಕ್ಯಾಬಿನ್, ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
- ಹ್ಯುಂಡೈ ಜನವರಿ ಮೊದಲ ವಾರದಲ್ಲಿ 2024ರ ಕ್ರೆಟಾಗಾಗಿ ತನ್ನ ಆರ್ಡರ್ ಪುಸ್ತಕಗಳನ್ನು ತೆರೆಯಿತು, ಆದರೆ ಅದರ ಬೆಲೆಗಳನ್ನು ಜನವರಿ 16 ರಂದು ಘೋಷಿಸಲಾಯಿತು.
- 2024ರ ಕ್ರೆಟಾ ಒಳಗೆ ಮತ್ತು ಹೊರಗೆ ಸಮಗ್ರ ವಿನ್ಯಾಸ ಬದಲಾವಣೆಗಳನ್ನು ಪಡೆದುಕೊಂಡಿದೆ.
- ಇದು ಈಗ ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್‌ಗಳ ಡಿಸ್‌ಪ್ಲೇಗಾಗಿ 10.25-ಇಂಚಿನ ಸಂಯೋಜಿತ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ.
- ಕ್ರೆಟಾ ಈಗ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS / 253 Nm) ಆಯ್ಕೆಯೊಂದಿಗೆ ಬರುತ್ತದೆ, 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಗೆ ಜೋಡಿಸಲಾಗಿದೆ.
ಹ್ಯುಂಡೈ ಕ್ರೆಟಾಗೆ ಜನವರಿ 2024 ರಲ್ಲಿ ಮಿಡ್‌ಲೈಫ್ ಆಪ್‌ಗ್ರೇಡ್‌ಗಳನ್ನು ನೀಡಲಾಗಿದೆ, ಇದು ತಾಜಾ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳ ದೊಡ್ಡ ಸಂಖ್ಯೆಯನ್ನೇ ಹೊಂದಿದೆ. ಹ್ಯುಂಡೈ ಜನವರಿ ಮೊದಲ ವಾರದಲ್ಲಿ ಫೇಸ್‌ಲಿಫ್ಟೆಡ್ ಕ್ರೆಟಾಗಾಗಿ ಆರ್ಡರ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿತು ಮತ್ತು ಕೇವಲ ಒಂದು ತಿಂಗಳಲ್ಲಿ ಈ ಕಾಂಪ್ಯಾಕ್ಟ್ ಎಸ್‌ಯುವಿಯು ಸುಮಾರು 51,000 ಕ್ಕೂ ಮಿಕ್ಕಿ ಬುಕಿಂಗ್‌ಗಳನ್ನು ಗಳಿಸಿದೆ.
ಆಫರ್‌ನಲ್ಲಿ ಏನಿದೆ?
2024ರ ಹ್ಯುಂಡೈ ಕ್ರೆಟಾ ವೈಶಿಷ್ಟ್ಯಗಳ ವಿಷಯದಲ್ಲಿ ಸಮಗ್ರ ನವೀಕರಣಗಳನ್ನು ಪಡೆದುಕೊಂಡಿದೆ. ಇದು ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಡ್ರೈವರ್ ಡಿಸ್ಪ್ಲೇಗಾಗಿ 10.25-ಇಂಚಿನ ಎರಡು ಡಿಸ್‌ಪ್ಲೇ, ಡ್ಯುಯಲ್ ಝೋನ್ ಎಸಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವಯರ್‌ಲೆಸ್ ಫೋನ್ ಚಾರ್ಜಿಂಗ್, 8-ವೇ ಪವರ್-ಹೊಂದಾಣಿಕೆ ಮಾಡಬಲ್ಲ ಚಾಲಕನ ಆಸನ ಮತ್ತು ವೆಂಟಿಲೇಶನ್ ಹೊಂದಿರುವ ಮುಂಭಾಗದ ಆಸನಗಳನ್ನು ಪಡೆದಿದೆ.
ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಮತ್ತು ಡಿಪಾರ್ಚರ್ ಆಸಿಸ್ಟ್ ಮತ್ತು ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಮೂಲಕ ನೋಡಿಕೊಳ್ಳಲಾಗುತ್ತದೆ.
ಇದನ್ನೂ ಪರಿಶೀಲಿಸಿ: ವಾರ್ಷಿಕವಾಗಿ ನಡೆಯಲಿರುವ ಭಾರತ್ ಮೊಬಿಲಿಟಿ ಎಕ್ಸ್‌ಪೋ, ಇದು ಆಟೋ ಎಕ್ಸ್‌ಪೋವನ್ನು ಬದಲಾಯಿಸಬಹುದೇ?
ಮೂರು ಪವರ್‌ಟ್ರೇನ್ ಆಯ್ಕೆಗಳು
ಹುಂಡೈ 2024ರ ಕ್ರೆಟಾವನ್ನು ಮೂರು ಎಂಜಿನ್ ಆಯ್ಕೆಗಳು ಮತ್ತು ನಾಲ್ಕು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ನೀಡುತ್ತಿದೆ. ಅವುಗಳ ವಿಶೇಷಣಗಳನ್ನು ಕೆಳಗಿನ ಕೋಷ್ಟಕದಲ್ಲಿ ವಿವರಿಸಲಾಗಿದೆ:
ಇಂಜಿನ್ |
1.5-ಲೀಟರ್ ಎನ್‌ಎ ಪೆಟ್ರೋಲ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
115 ಪಿಎಸ್ |
160 ಪಿಎಸ್ |
116 ಪಿಎಸ್ |
ಟಾರ್ಕ್ |
144 ಎನ್ಎಂ |
253 ಎನ್ಎಂ |
250 ಎನ್ಎಂ |
ಟ್ರಾನ್ಸ್‌ಮಿಷನ್ |
6-ಮ್ಯಾನುಯಲ್ / ಸಿವಿಟಿ |
7-ಡಿಸಿಟಿ |
6-ಮ್ಯಾನುಯಲ್ / 6-ಆಟೋಮ್ಯಾಟಿಕ್ |
1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಪ್ರಸ್ತುತ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) ಗೆ ಸೀಮಿತವಾಗಿದೆ. ಆದಾಗಿಯೂ, ಹುಂಡೈಯು ಕ್ರೆಟಾ ಎನ್ ಲೈನ್‌ನ ಪರಿಚಯದೊಂದಿಗೆ ತನ್ನ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ನೀಡುವ ಸಾಧ್ಯತೆಯಿದೆ. ಎಸ್‌ಯುವಿಯ ಎನ್ ಲೈನ್ ಆವೃತ್ತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಈ ಲಿಂಕ್‌ನ ಕ್ಲಿಕ್ ಮಾಡಬಹುದು.
ಇದನ್ನು ಸಹ ಪರಿಶೀಲಿಸಿ: ಈ 8 ಚಿತ್ರಗಳಲ್ಲಿ Hyundai Creta S(O) ಆವೃತ್ತಿಯ ಸಂಪೂರ್ಣ ವಿವರ
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ಭಾರತದಾದ್ಯಂತ 2024ರ ಹ್ಯುಂಡೈ ಕ್ರೆಟಾದ ಎಕ್ಸ್ ಶೋರೂಂ ಬೆಲೆಯು 11 ಲಕ್ಷ ರೂ.ನಿಂದ 20.15 ಲಕ್ಷ ರೂ.ವರೆಗೆ ಇರಲಿದೆ. ಇದು ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗನ್, ಹೋಂಡಾ ಎಲಿವೇಟ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ಗಳ ವಿರುದ್ಧ ಸ್ಪರ್ಧಿಸುತ್ತದೆ.
ಇದರ ಬಗ್ಗೆ ಇನ್ನಷ್ಟು ಓದಿ: ಕ್ರೆಟಾ ಆನ್‌ರೋಡ್ ಬೆಲೆ
0 out of 0 found this helpful