Login or Register ಅತ್ಯುತ್ತಮ CarDekho experience ಗೆ
Login

ಹುಂಡೈ ಕ್ರೆಟಾ ಫೇಸ್‌ಲಿಫ್ಟ್ Vs ಕಿಯಾ ಸೆಲ್ಟೋಸ್ Vs ಮಾರುತಿ ಗ್ರ್ಯಾಂಡ್ ವಿಟಾರಾ Vs ಹೋಂಡಾ ಎಲಿವೇಟ್: ಬೆಲೆಗಳ ಬಗ್ಗೆ ಚರ್ಚೆ

published on ಜನವರಿ 18, 2024 04:06 pm by shreyash for ಹುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ ಮಾತ್ರ ಡೀಸೆಲ್ ಎಂಜಿನ್ ಅನ್ನು ನೀಡುತ್ತಿರುವ ಕಾಂಪ್ಯಾಕ್ಟ್ SUVಗಳಾಗಿವೆ, ಹಾಗೆಯೇ ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಒಪ್ಶನಲ್ ಆಗಿರುವ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ನೀಡುತ್ತಿವೆ.

2024 ಹ್ಯುಂಡೈ ಕ್ರೆಟಾದ ಬೆಲೆಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ, ಇದು ರೂ 11 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋರೂಂ). ಫೇಸ್‌ಲಿಫ್ಟ್ ಆಗಿರುವ ಕ್ರೆಟಾವು ಹಲವಾರು ಹೊಸ ಫೀಚರ್ ಗಳು ಮತ್ತು ಸುರಕ್ಷತೆಯ ತಂತ್ರಜ್ಞಾನದ ಜೊತೆಗೆ ಒಳಭಾಗ ಮತ್ತು ಹೊರಭಾಗದಲ್ಲಿ ಸಮಗ್ರ ಡಿಸೈನ್ ಅಪ್ಡೇಟ್ ಗಳನ್ನು ಪಡೆದಿದೆ. ಹ್ಯುಂಡೈನ ಈ ಸುಧಾರಿತ ಕಾಂಪ್ಯಾಕ್ಟ್ SUV ತನ್ನ ಸೆಗ್ಮೆಂಟ್ ನ ಪ್ರತಿಸ್ಪರ್ಧಿಗಳಾದ ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್ ಮತ್ತು ಹೋಂಡಾ ಎಲಿವೇಟ್ ನೊಂದಿಗೆ ಬೆಲೆಯ ವಿಷಯದಲ್ಲಿ ಹೇಗೆ ಸ್ಪರ್ಧೆಯನ್ನು ನೀಡುತ್ತಿದೆ ಎಂಬುದನ್ನು ನೋಡೋಣ.

ಪೆಟ್ರೋಲ್ ಮಾನ್ಯುಯಲ್

ಹುಂಡೈ ಕ್ರೆಟಾ ಫೇಸ್‌ಲಿಫ್ಟ್

ಕಿಯಾ ಸೆಲ್ಟೋಸ್

ಮಾರುತಿ ಗ್ರ್ಯಾಂಡ್ ವಿಟಾರಾ

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್

ಹೋಂಡಾ ಎಲಿವೇಟ್

E - ರೂ. 11 ಲಕ್ಷ

HTE- ರೂ. 10.90 ಲಕ್ಷ

ಸಿಗ್ಮಾ - ರೂ. 10.70 ಲಕ್ಷ

E - ರೂ. 11.14 ಲಕ್ಷ

SV - ರೂ. 11.58 ಲಕ್ಷ

EX - ರೂ. 12.18 ಲಕ್ಷ

HTK - ರೂ. 12.10 ಲಕ್ಷ

ಡೆಲ್ಟಾ - ರೂ. 12.10 ಲಕ್ಷ

V - ರೂ. 12.31 ಲಕ್ಷ

S - ರೂ. 12.81 ಲಕ್ಷ

S - ರೂ. 13.39 ಲಕ್ಷ

HTK ಪ್ಲಸ್- ರೂ. 13.50 ಲಕ್ಷ

ಝೀಟಾ- ರೂ. 13.91 ಲಕ್ಷ

VX - ರೂ. 13.70 ಲಕ್ಷ

S(O) - ರೂ. 14.32 ಲಕ್ಷ

G - ರೂ. 14.49 ಲಕ್ಷ

HTK ಪ್ಲಸ್ ಟರ್ಬೊ iMT - ರೂ. 15 ಲಕ್ಷ

SX - ರೂ. 15.27 ಲಕ್ಷ

HTX - ರೂ. 15.18 ಲಕ್ಷ

ಆಲ್ಫಾ - ರೂ. 15.41 ಲಕ್ಷ

ZX - ರೂ. 15.10 ಲಕ್ಷ

SX ಟೆಕ್ - ರೂ. 15.95 ಲಕ್ಷ

V - ರೂ. 16.04 ಲಕ್ಷ

ಆಲ್ಫಾ AWD - ರೂ. 16.91 ಲಕ್ಷ

SX (O) - ರೂ. 17.24 ಲಕ್ಷ

V AWD - ರೂ. 17.54 ಲಕ್ಷ

HTX ಪ್ಲಸ್ ಟರ್ಬೊ iMT - ರೂ. 18.28 ಲಕ್ಷ

  • ಮಾರುತಿ ಗ್ರ್ಯಾಂಡ್ ವಿಟಾರಾ ಈ ಪಟ್ಟಿಯಲ್ಲಿ ಅತ್ಯಂತ ಕಡಿಮೆ ಆರಂಭಿಕ ಬೆಲೆಯನ್ನು ಹೊಂದಿದೆ ಅಂದರೆ ರೂ 10.70 ಲಕ್ಷ, ಇದು ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ಗಿಂತ ರೂ 30,000 ಮತ್ತು ಕಿಯಾ ಸೆಲ್ಟೋಸ್‌ಗಿಂತ ರೂ 20,000 ಕಡಿಮೆ ಬೆಲೆಯಾಗಿದೆ.

  • ಹೋಂಡಾ ಎಲಿವೇಟ್ ಅತ್ಯಧಿಕ ಆರಂಭಿಕ ಬೆಲೆ ಅಂದರೆ ರೂ 11.58 ಲಕ್ಷ ಹೊಂದಿದ್ದರೂ ಕೂಡ, ಅದರ ಮ್ಯಾನುವಲ್ ಟ್ರಾನ್ಸ್‌ಮಿಷನ್ ವೇರಿಯಂಟ್ ನ ಅತ್ಯಧಿಕ ಬೆಲೆಯು ರೂ 15.10 ಲಕ್ಷದವರೆಗೆ ಇದೆ. ಇದು ಇತರ SUV ಗಳಿಗೆ ಹೋಲಿಸಿದರೆ ಅತ್ಯಂತ ಕೈಗೆಟುಕುವ ಬೆಲೆಯಾಗಿದೆ. ಹಾಗೆಯೇ, ಟಾಪ್-ಸ್ಪೆಕ್ ಪೆಟ್ರೋಲ್-ಮ್ಯಾನ್ಯುವಲ್ ಕ್ರೆಟಾವು ಸೆಲ್ಟೋಸ್ ಮತ್ತು ಹೈರೈಡರ್‌ನ ಟಾಪ್-ಎಂಡ್ ಪೆಟ್ರೋಲ್-ಮ್ಯಾನ್ಯುವಲ್ ವೇರಿಯಂಟ್ ಗಳಿಗಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ.

  • ಇಲ್ಲಿರುವ ಎಲ್ಲಾ SUVಯು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅನ್ನು ಪಡೆಯುತ್ತದೆ. ಕ್ರೆಟಾ ಮತ್ತು ಸೆಲ್ಟೋಸ್‌ಗಾಗಿ, ಇದು 115 PS ಮತ್ತು 144 Nm ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್‌ಗೆ ಜೋಡಿಸಲಾಗಿದೆ. ಹೋಂಡಾ ಎಂಜಿನ್ 6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ 121 PS ಉತ್ಪಾದನೆಯೊಂದಿಗೆ ಹೆಚ್ಚಿನ ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ.

  • ಸೆಲ್ಟೋಸ್ ತನ್ನ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS / 253 Nm) ಜೊತೆಗೆ iMT ಗೇರ್‌ಬಾಕ್ಸ್ (ಕ್ಲಚ್ ಪೆಡಲ್ ಇಲ್ಲದೆ ಮ್ಯಾನುಯಲ್ ಟ್ರಾನ್ಸ್‌ಮಿಷನ್) ಆಯ್ಕೆಯನ್ನು ಒದಗಿಸುವ ಈ ಸೆಗ್ಮೆಂಟ್ ನ ಏಕೈಕ SUV ಆಗಿದೆ.

  • ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್ ಒಂದೇ ರೀತಿಯ 1.5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ (103 PS / 137 Nm) ಮತ್ತು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಇದು ಇಲ್ಲಿ ಅತ್ಯಂತ ಕಡಿಮೆ ಶಕ್ತಿಯುತವಾದ ಆಯ್ಕೆಯಾಗಿದೆ, ಆದರೆ ಇವು ಆಲ್-ವೀಲ್-ಡ್ರೈವ್ (AWD) ಆಯ್ಕೆಯನ್ನು ಪಡೆಯುವ ಏಕೈಕ ಕಾಂಪ್ಯಾಕ್ಟ್ SUVಗಳಾಗಿವೆ.

ಇದನ್ನು ಕೂಡ ಓದಿ: ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾದ ಪ್ರತಿಯೊಂದು ವೇರಿಯಂಟ್ ನಲ್ಲಿ ಏನೇನಿದೆ ಎಂಬ ವಿವರಗಳು ಇಲ್ಲಿದೆ

ಪೆಟ್ರೋಲ್ ಆಟೋಮ್ಯಾಟಿಕ್‌

ಹುಂಡೈ ಕ್ರೆಟಾ ಫೇಸ್‌ಲಿಫ್ಟ್

ಕಿಯಾ ಸೆಲ್ಟೋಸ್

ಮಾರುತಿ ಗ್ರ್ಯಾಂಡ್ ವಿಟಾರಾ

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್

ಹೋಂಡಾ ಎಲಿವೇಟ್

ಡೆಲ್ಟಾ - ರೂ. 13.60 ಲಕ್ಷ

V - ರೂ. 13.41 ಲಕ್ಷ

S - ರೂ. 14.01 ಲಕ್ಷ

VX - ರೂ. 14.80 ಲಕ್ಷ

S (O) CVT - ರೂ. 15.82 ಲಕ್ಷ

ಝೀಟಾ- ರೂ. 15.41 ಲಕ್ಷ

G - ರೂ. 15.69 ಲಕ್ಷ

HTX CVT - ರೂ. 16.58 ಲಕ್ಷ

ಆಲ್ಫಾ - ರೂ. 16.91 ಲಕ್ಷ

S (ಹೈಬ್ರಿಡ್)- ರೂ. 16.66 ಲಕ್ಷ

ZX - ರೂ. 16.20 ಲಕ್ಷ

SX ಟೆಕ್ CVT - ರೂ. 17.45 ಲಕ್ಷ

V - ರೂ. 17.24 ಲಕ್ಷ

SX (O) CVT - ರೂ. 18.70 ಲಕ್ಷ

ಝೀಟಾ ಪ್ಲಸ್ (ಹೈಬ್ರಿಡ್) - ರೂ. 18.33 ಲಕ್ಷ

G (ಹೈಬ್ರಿಡ್)- ರೂ. 18.69 ಲಕ್ಷ

HTX ಪ್ಲಸ್ ಟರ್ಬೊ DCT- ರೂ. 19.18 ಲಕ್ಷ

GTX ಪ್ಲಸ್ (S) ಟರ್ಬೊ DCT- ರೂ. 19.38 ಲಕ್ಷ

X ಲೈನ್ (S) - ರೂ. 19.60 ಲಕ್ಷ

SX (O) ಟರ್ಬೊ DCT - ರೂ. 20 ಲಕ್ಷ

GTX ಪ್ಲಸ್ ಟರ್ಬೊ DCT- ರೂ. 19.98 ಲಕ್ಷ

ಆಲ್ಫಾ ಪ್ಲಸ್ (ಹೈಬ್ರಿಡ್) - ರೂ. 19.83 ಲಕ್ಷ

X ಲೈನ್ ಟರ್ಬೊ DCT - ರೂ. 20.30 ಲಕ್ಷ

V (ಹೈಬ್ರಿಡ್)- ರೂ. 20.19 ಲಕ್ಷ

  • 2024 ಕ್ರೆಟಾ ಪೆಟ್ರೋಲ್ ಆಟೋಮ್ಯಾಟಿಕ್‌ನಲ್ಲಿ, ಕ್ರಮವಾಗಿ CVT ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ (DCT) ಅನ್ನು ನೀಡುವ ನ್ಯಾಚುರಲಿ-ಆಸ್ಪಿರೇಟೆಡ್ ಮತ್ತು ಟರ್ಬೋಚಾರ್ಜ್ಡ್ ಆಯ್ಕೆಗಳೊಂದಿಗೆ (ಸೆಲ್ಟೋಸ್‌ನಲ್ಲಿ ಇರುವಂತೆಯೇ) ಲಭ್ಯವಿದೆ.

  • ಇಲ್ಲಿ ಹೋಂಡಾ ಎಲಿವೇಟ್, CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಹೊಂದಿದ್ದು, ಅತ್ಯಂತ ಕೈಗೆಟುಕುವ ಬೆಲೆಯ ಪೆಟ್ರೋಲ್ ಆಟೋಮ್ಯಾಟಿಕ್ ಕಾಂಪ್ಯಾಕ್ಟ್ SUV ಆಗಿದೆ. ಇದು ಎಂಟ್ರಿ ಲೆವೆಲ್ ಗ್ರಾಂಡ್ ವಿಟಾರಾ ಪೆಟ್ರೋಲ್-ಆಟೋಗಿಂತ 19,000 ರೂಪಾಯಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

  • ಕಿಯಾ ಸೆಲ್ಟೋಸ್ DCT, ತನ್ನ ಟಾಪ್-ಸ್ಪೆಕ್ X-ಲೈನ್ ಟ್ರಿಮ್‌ನಲ್ಲಿ ಬೇರೆ ಕಾರುಗಳಿಗೆ ಹೋಲಿಸಿದರೆ ಅತ್ಯಂತ ದುಬಾರಿ ಪೆಟ್ರೋಲ್ ಆಟೋಮ್ಯಾಟಿಕ್ ಮಾಡೆಲ್ ಆಗಿದೆ.

  • ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ನ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ಗಳನ್ನು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ನೊಂದಿಗೆ ಜೋಡಿಸಲಾಗಿದೆ. ಈ ಎರಡೂ SUV ಗಳನ್ನು ಬಲವಾದ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ನೀಡಲಾಗುತ್ತಿದೆ, ಮತ್ತು ಇದು e-CVT ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ. ಈ ಯೂನಿಟ್ 27.97 kmpl ವರೆಗಿನ ಮೈಲೇಜ್ ನೊಂದಿದೆ ಗಮನಾರ್ಹವಾದ ಇಂಧನ ಉಳಿತಾಯದ ಭರವಸೆಯನ್ನು ನೀಡುತ್ತದೆ.

ಇದನ್ನು ಕೂಡ ಓದಿ: ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ವರ್ಸಸ್ ಕಿಯಾ ಸೆಲ್ಟೋಸ್: ಮೈಲೇಜ್ ಹೋಲಿಕೆ

ಡೀಸೆಲ್ ಮಾನ್ಯುಯಲ್

ಹುಂಡೈ ಕ್ರೆಟಾ ಫೇಸ್‌ಲಿಫ್ಟ್

ಕಿಯಾ ಸೆಲ್ಟೋಸ್

E - ರೂ. 12.45 ಲಕ್ಷ

THE iMT - ರೂ. 12.00 ಲಕ್ಷ

EX - ರೂ. 13.68 ಲಕ್ಷ

HTK iMT - ರೂ. 13.60 ಲಕ್ಷ

S - ರೂ. 14.89 ಲಕ್ಷ

HTK ಪ್ಲಸ್ iMT - ರೂ. 15 ಲಕ್ಷ

S (O) - ರೂ. 15.82 ಲಕ್ಷ

TX iMT - ರೂ. 16.68 ಲಕ್ಷ

SX ಟೆಕ್ - ರೂ. 17.45 ಲಕ್ಷ

SX (O) - ರೂ. 18.75 ಲಕ್ಷ

HTX ಪ್ಲಸ್ iMT - ರೂ. 18.28 ಲಕ್ಷ

  • ಈಗ ಮಾರುಕಟ್ಟೆಯಲ್ಲಿರುವ ಕಾಂಪ್ಯಾಕ್ಟ್ SUV ಗಳಲ್ಲಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಮಾತ್ರ ಎರಡು ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡುತ್ತಿವೆ. ಎರಡೂ ಒಂದೇ 1.5-ಲೀಟರ್ ಡೀಸೆಲ್ ಯೂನಿಟ್ ಅನ್ನು (116 PS / 250 Nm) ಬಳಸುತ್ತವೆ. ಆದರೆ, ಪ್ರಾಪರ್ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಕ್ರೆಟಾ ಮಾತ್ರ ಒದಗಿಸುತ್ತಿದೆ, ಮತ್ತು ಸೆಲ್ಟೋಸ್ ಡೀಸೆಲ್ 6-ಸ್ಪೀಡ್ iMT ಯೊಂದಿಗೆ ಬರುತ್ತದೆ.

  • ಹೆಚ್ಚು ಕಡಿಮೆ ಒಂದೇ ರೀತಿಯ ಬೆಲೆಯಿದ್ದರೂ ಕೂಡ, ಸೆಲ್ಟೋಸ್ ಡೀಸೆಲ್ ಬೆಲೆಯು ಹ್ಯುಂಡೈ ಕ್ರೆಟಾಕ್ಕಿಂತ ರೂ.45,000 ಕಡಿಮೆಯಿದೆ. ಕಿಯಾದ ಟಾಪ್-ಸ್ಪೆಕ್ ಡೀಸೆಲ್-ಮ್ಯಾನ್ಯುವಲ್ ಆಯ್ಕೆಯೂ ಕೂಡ ರೂ 47,000 ಅಗ್ಗವಾಗಿದೆ.

ಡೀಸೆಲ್ ಆಟೋಮ್ಯಾಟಿಕ್

ಹುಂಡೈ ಕ್ರೆಟಾ

ಕಿಯಾ ಸೆಲ್ಟೋಸ್

S (O) - ರೂ. 17.32 ಲಕ್ಷ

HTX - ರೂ. 18.18 ಲಕ್ಷ

GTX ಪ್ಲಸ್ (S) - ರೂ. 19.38 ಲಕ್ಷ

X-ಲೈನ್ (S) - ರೂ. 19.60 ಲಕ್ಷ

SX (O) - ರೂ. 20 ಲಕ್ಷ

GTX ಪ್ಲಸ್ (S) - ರೂ. 19.98 ಲಕ್ಷ

X ಲೈನ್ - ರೂ. 20.30 ಲಕ್ಷ

  • ಡೀಸೆಲ್ ಆಟೋಮ್ಯಾಟಿಕ್ ನಲ್ಲಿ, ಸೆಲ್ಟೋಸ್ ಮತ್ತು ಕ್ರೆಟಾ ಎರಡೂ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ನೊಂದಿಗೆ ಬರುತ್ತವೆ.

  • ಕ್ರೆಟಾ ಹೆಚ್ಚು ಕೈಗೆಟುಕುವ ಅಂದರೆ ಕಿಯಾ ಸೆಲ್ಟೋಸ್‌ಗಿಂತ ರೂ 86,000 ಅಗ್ಗವಿರುವ ಬೆಲೆಯ ಎಂಟ್ರಿ ಲೆವೆಲ್ ಡೀಸೆಲ್-ಆಟೋಮ್ಯಾಟಿಕ್ ಆಯ್ಕೆಯನ್ನು ನೀಡುತ್ತದೆ.

  • ಮ್ಯಾಟ್ ಫಿನಿಷ್ ಆಗಿರುವ ಹೊರಭಾಗವನ್ನು ಹೊಂದಿರುವ ಸೆಲ್ಟೋಸ್ X ಲೈನ್ ವೇರಿಯಂಟ್ ಈ ಪಟ್ಟಿಯಲ್ಲಿ ಅತ್ಯಂತ ದುಬಾರಿ ಡೀಸೆಲ್ ಆಟೋಮ್ಯಾಟಿಕ್ ಮಾಡೆಲ್ ಆಗಿದೆ ಮತ್ತು ಇಂದಿನ ಕಾಂಪ್ಯಾಕ್ಟ್ SUV ಸೆಗ್ಮೆಂಟ್ ನಲ್ಲಿ ಇದು ಅತ್ಯಂತ ದುಬಾರಿ ಆಯ್ಕೆಯಾಗಿದೆ.

2024 ಹ್ಯುಂಡೈ ಕ್ರೆಟಾ ಈಗ ಪ್ರೀಮಿಯಂ ಸೌಕರ್ಯಗಳ ವಿಷಯದಲ್ಲಿ ಕಿಯಾ ಸೆಲ್ಟೋಸ್‌ಗೆ ಸಮಾನವಾಗಿದೆ. ಎರಡೂ SUV ಗಳು ಇಲ್ಲಿ ಪಟ್ಟಿ ಮಾಡಲಾದ ಇತರ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮೌಲ್ಯವನ್ನು ನೀಡುತ್ತವೆ. ಹೋಂಡಾ ಎಲಿವೇಟ್ ನ ಟಾಪ್ ವೇರಿಯಂಟ್ ಹೆಚ್ಚು ಆಕರ್ಷಕವಾದ ಬೆಲೆಯನ್ನು ಹೊಂದಿರಬಹುದು, ಆದರೆ ಅದು ಎಲ್ಲಾ ರೀತಿಯಲ್ಲಿ ಸುಸಜ್ಜಿತವಾಗಿಲ್ಲ. ಆದರೆ ಮಾರುತಿ ಮತ್ತು ಟೊಯೋಟಾ SUV, ಇಂಧನ ಉಳಿಸುವ ಹೈಬ್ರಿಡ್‌ಗಳು ಮತ್ತು AWD ಆಯ್ಕೆಯನ್ನು ಒಳಗೊಂಡಂತೆ ಫೀಚರ್ ಗಳು ಮತ್ತು ತಂತ್ರಜ್ಞಾನದ ಉತ್ತಮ ಮಿಶ್ರಣವನ್ನು ನೀಡುತ್ತವೆ, ಆದರೆ ಪರ್ಫಾರ್ಮೆನ್ಸ್ ವಿಷಯದಲ್ಲಿ ಅಂತಹ ಆಕರ್ಷಣೆಯನ್ನು ಹೊಂದಿಲ್ಲ.

ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಹೊಸ ಕ್ರೆಟಾದ ಬೆಲೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗಿನ ಕಾಮೆಂಟ್ ವಿಭಾಗದಲ್ಲಿ ಬರೆದು ನಮಗೆ ತಿಳಿಸಿ.

ಇನ್ನಷ್ಟು ಓದಿ: ಹುಂಡೈ ಕ್ರೆಟಾ ಡೀಸೆಲ್

s
ಅವರಿಂದ ಪ್ರಕಟಿಸಲಾಗಿದೆ

shreyash

  • 184 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ಕ್ರೆಟಾ

Read Full News

explore similar ಕಾರುಗಳು

ಮಾರುತಿ ಗ್ರಾಂಡ್ ವಿಟರಾ

ಪೆಟ್ರೋಲ್21.11 ಕೆಎಂಪಿಎಲ್
ಸಿಎನ್‌ಜಿ26.6 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಕಿಯಾ ಸೆಲ್ಟೋಸ್

ಡೀಸಲ್19.1 ಕೆಎಂಪಿಎಲ್
ಪೆಟ್ರೋಲ್17.7 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ಕ್ರೆಟಾ

ಡೀಸಲ್21.8 ಕೆಎಂಪಿಎಲ್
ಪೆಟ್ರೋಲ್17.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ