• English
  • Login / Register

7 ಚಿತ್ರಗಳಲ್ಲಿ Hyundai Creta Knight ಎಡಿಷನ್‌ನ ವಿವರಣೆ

ಹುಂಡೈ ಕ್ರೆಟಾ ಗಾಗಿ ansh ಮೂಲಕ ಸೆಪ್ಟೆಂಬರ್ 27, 2024 07:14 pm ರಂದು ಪ್ರಕಟಿಸಲಾಗಿದೆ

  • 80 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಸ್ಪೇಷಲ್‌ ಎಡಿಷನ್‌ ಪ್ರಿ-ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಲಭ್ಯವಿತ್ತು ಮತ್ತು ಈಗ 2024 ಕ್ರೆಟಾದ ಮಿಡ್-ಸ್ಪೆಕ್ ಎಸ್‌(ಒಪ್ಶನಲ್‌) ಮತ್ತು ಟಾಪ್-ಸ್ಪೆಕ್ ಎಸ್‌ಎಕ್ಸ್‌(ಒಪ್ಶನಲ್‌) ಆವೃತ್ತಿಗಳಲ್ಲಿ ನೀಡಲಾಗುತ್ತದೆ

Hyundai Creta Knight Edition Detailed In Pics

ಹ್ಯುಂಡೈ ಕ್ರೆಟಾ ನೈಟ್ ಎಡಿಷನ್‌ ಅನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಗಿದ್ದು, ಒಳಗೆ ಮತ್ತು ಹೊರಗೆ ಸಂಪೂರ್ಣ ಕಪ್ಪು ಬಣ್ಣವನ್ನು ಹೊಂದಿದೆ. ಇದು ಬಹು ಬಣ್ಣದ ಆಯ್ಕೆಗಳೊಂದಿಗೆ ಲಭ್ಯವಿದ್ದರೂ, ಹೊರಭಾಗದ ಪ್ರಮುಖ ವಿನ್ಯಾಸ ವ್ಯತ್ಯಾಸಗಳು ಅದನ್ನು ರಹಸ್ಯವಾದ ನೋಟವನ್ನು ನೀಡಲು ಸಂಪೂರ್ಣ ಕಪ್ಪಾದ ಅಂಶಗಳನ್ನು ಒಳಗೊಂಡಿವೆ. ಇದು ಮಿಡ್-ಸ್ಪೆಕ್ ಎಸ್‌(ಒಪ್ಶನಲ್‌) ಮತ್ತು ಟಾಪ್-ಸ್ಪೆಕ್ ಎಸ್‌ಎಕ್ಸ್‌(ಒಪ್ಶನಲ್‌) ವೇರಿಯೆಂಟ್‌ಗಳನ್ನು ಆಧರಿಸಿದೆ ಮತ್ತು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ನೀವು ಈ ಸ್ಪೆಷಲ್‌ ಎಡಿಷನ್‌ನ ಕ್ರೆಟಾವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ವಿವರವಾದ ಗ್ಯಾಲರಿಯಲ್ಲಿ ಅದರ ಕುರಿತು ಪರಿಶೀಲಿಸಿ.

ಎಕ್ಸ್‌ಟಿರಿಯರ್‌

Hyundai Creta Knight Edition Front

ಮುಂಭಾಗವು ಸಂಪೂರ್ಣ ಕಪ್ಪಾದ ಗ್ರಿಲ್ ಮತ್ತು ಸ್ಕಿಡ್ ಪ್ಲೇಟ್‌ಗೆ ಕಪ್ಪು ಫಿನಿಶ್ ಅನ್ನು ಪಡೆಯುತ್ತದೆ. ಗ್ರಿಲ್‌ನ ಮಧ್ಯಭಾಗದಲ್ಲಿರುವ ಹ್ಯುಂಡೈ ಲೋಗೋಗೆ ಮ್ಯಾಟ್ ಬ್ಲ್ಯಾಕ್ ಫಿನಿಶ್‌ನಿಂದ ಈ ಕಪ್ಪು ನೋಟವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

Hyundai Creta Knight Edition Side

ಬದಿಯಿಂದ ಗಮನಿಸುವಾಗ, ಇದು 17-ಇಂಚಿನ ಕಪ್ಪು ಬಣ್ಣದ ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ, ಇದು ಸ್ಪೋರ್ಟಿ ಲುಕ್‌ಗಾಗಿ ಕೆಂಪು ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಬರುತ್ತದೆ. ಇಲ್ಲಿನ ರೂಫ್‌ ರೇಲ್ಸ್‌ಗಳನ್ನು ಕಪ್ಪು ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದೆ. 

Hyundai Creta Knight Edition Rear

ಹಿಂಭಾಗದಿಂದ ಗಮನಿಸುವಾಗ, ಇದು ಇದೇ ರೀತಿಯ ಅಂಶವನ್ನು ಪಡೆಯುತ್ತದೆ. ಸ್ಕಿಡ್ ಪ್ಲೇಟ್ ಮತ್ತು ರೂಫ್ ಸ್ಪಾಯ್ಲರ್ ಅನ್ನು ಕಪ್ಪು ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದೆ, ಹ್ಯುಂಡೈ ಲೋಗೋವನ್ನು ಮ್ಯಾಟ್ ಬ್ಲ್ಯಾಕ್‌ನಲ್ಲಿ ಫಿನಿಶ್‌ ಮಾಡಲಾಗಿದೆ ಮತ್ತು ಟೈಲ್‌ಗೇಟ್‌ನಲ್ಲಿ “ನೈಟ್ ಎಡಿಷನ್‌” ಬ್ಯಾಡ್ಜ್ ಇದೆ.

ಇಂಟಿರಿಯರ್‌

Hyundai Creta Knight Edition Dashboard

ನೈಟ್ ಎಡಿಷನ್‌ನ ಒಳಗೆ, ಕ್ಯಾಬಿನ್ ಕಪ್ಪು ಡ್ಯಾಶ್‌ಬೋರ್ಡ್ ಮತ್ತು ಡ್ಯಾಶ್‌ಬೋರ್ಡ್ ಸುತ್ತಲೂ ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಹಿತ್ತಾಳೆಯ ಎಕ್ಸೆಂಟ್‌ನೊಂದಿಗೆ ಸಂಪೂರ್ಣ ಕಪ್ಪು ಬಣ್ಣವನ್ನು ಪಡೆಯುತ್ತದೆ. ಇದು ಮೆಟಲ್‌ನಲ್ಲಿ ಫಿನಿಶ್‌ ಮಾಡಲಾದ ಪೆಡಲ್‌ಗಳನ್ನು ಸಹ ಪಡೆಯುತ್ತದೆ.

Hyundai Creta Knight Edition Front Seats

ಚಿತ್ರಗಳಲ್ಲಿ ಪ್ರದರ್ಶಿಸಲಾದ ಆವೃತ್ತಿಯು ಮಿಡ್-ಸ್ಪೆಕ್ ಎಸ್‌(ಒಪ್ಶನಲ್‌), ಇದು ಡ್ಯುಯಲ್-ಟೋನ್ ಕಪ್ಪು ಮತ್ತು ಗ್ರೇ ಬಣ್ಣದ ಫ್ಯಾಬ್ರಿಕ್‌ ಕವರ್‌ಗಳನ್ನು ಪಡೆಯುತ್ತದೆ.

ಫೀಚರ್‌ಗಳು

Hyundai Creta Knight Edition Screens

ಎಸ್‌(O) ನೈಟ್ ಎಡಿಷನ್‌ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಪಡೆಯುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ನೀಡುತ್ತದೆ.

ಪವರ್‌ಟ್ರೈನ್‌

Hyundai Creta Knight Edition Manual Transmission

ನೈಟ್ ಎಡಿಷನ್‌ 1.5-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ (115 ಪಿಎಸ್‌ ಮತ್ತು 143 ಎನ್‌ಎಮ್‌), ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (116 ಪಿಎಸ್‌ ಮತ್ತು 250 ಎನ್‌ಎಮ್‌) ನೊಂದಿಗೆ ಲಭ್ಯವಿದೆ. ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಎಲ್ಲಾ ಆವೃತ್ತಿಗಳಲ್ಲಿ ಪಡೆಯುತ್ತವೆ ಮತ್ತು ಆಟೋಮ್ಯಾಟಿಕ್‌ ಆಯ್ಕೆಗಳಿಗಾಗಿ, ಪೆಟ್ರೋಲ್ ಆವೃತ್ತಿಯು CVT ಮತ್ತು ಡೀಸೆಲ್ ಆವೃತ್ತಿಗಳು 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಅನ್ನು ಪಡೆಯುತ್ತವೆ.

ಇದನ್ನು ಓದಿ: ಬಹುನಿರೀಕ್ಷಿತ Tata Nexon ಸಿಎನ್‌ಜಿ ಬಿಡುಗಡೆ, ಬೆಲೆಗಳು 8.99 ರೂ.ನಿಂದ ಪ್ರಾರಂಭ

ಹುಂಡೈ ಇತರ ಆವೃತ್ತಿಗಳಲ್ಲಿ ಲಭ್ಯವಿರುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಕ್ರೆಟಾ ನೈಟ್ ಎಡಿಷನ್‌ನಲ್ಲಿ ನೀಡುವುದಿಲ್ಲ.

ಬೆಲೆ & ಪ್ರತಿಸ್ಪರ್ಧಿಗಳು

ದೆಹಲಿಯಲ್ಲಿ ಹ್ಯುಂಡೈ ಕ್ರೆಟಾ ನೈಟ್ ಎಡಿಷನ್‌ನ ಎಕ್ಸ್ ಶೋರೂಂ ಬೆಲೆ 14.51 ಲಕ್ಷ ರೂ.ನಿಂದ 20.30 ಲಕ್ಷ ವರೆಗೆ ಇರಲಿದೆ. ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್‌, ವೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ನಂತಹ ಇತರ ಕಾಂಪ್ಯಾಕ್ಟ್ ಎಸ್‌ಯುವಿಗಳೊಂದಿಗೆ ಸ್ಪರ್ಧಿಸುತ್ತದೆ.  

 ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ:  ಹ್ಯುಂಡೈ ಕ್ರೆಟಾ ಆನ್‌ ರೋಡ್‌ ಬೆಲೆ

was this article helpful ?

Write your Comment on Hyundai ಕ್ರೆಟಾ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience