Login or Register ಅತ್ಯುತ್ತಮ CarDekho experience ಗೆ
Login

Hyundai Creta N Line ನ ಅನಾವರಣ , ಮಾರ್ಚ್ 11 ರಂದು ಬಿಡುಗಡೆಗೆ ಮುಂಚಿತವಾಗಿ ಬುಕಿಂಗ್‌ಗಳು ಆರಂಭ

published on ಮಾರ್ಚ್‌ 04, 2024 08:58 pm by rohit for ಹುಂಡೈ ಕ್ರೇಟಾ ಎನ್ ಲೈನ್

ಹ್ಯುಂಡೈಯು ಆನ್‌ಲೈನ್ ಮತ್ತು ಅದರ ಡೀಲರ್‌ಶಿಪ್‌ಗಳಲ್ಲಿ 25,000 ರೂ.ಗೆ ಕ್ರೆಟಾ ಎನ್‌ ಲೈನ್‌ಗೆ ಬುಕಿಂಗ್‌ಗಳನ್ನು ಸ್ವೀಕರಿಸುತ್ತಿದೆ

  • ಹೊರಗಿನ ಪ್ರಮುಖ ಅಂಶಗಳಲ್ಲಿ ಕೆಂಪು ಬ್ರೇಕ್ ಕ್ಯಾಲಿಪರ್‌ಗಳು, 18-ಇಂಚಿನ ಅಲಾಯ್‌ ವೀಲ್‌ಗಳು ಮತ್ತು 'ಎನ್ ಲೈನ್' ಬ್ಯಾಡ್ಜ್‌ಗಳನ್ನು ಒಳಗೊಂಡಿವೆ.
  • ಕಾಂಟ್ರೆಸ್ಟ್‌ ರೆಡ್‌ ಎಕ್ಸೆಂಟ್‌ಗಳು ಮತ್ತು ಅಪ್ಹೋಲ್ಸ್‌ಟೆರಿಗಾಗಿ ಸ್ಟಿಚಿಂಗ್‌ನೊಂದಿಗೆ ಸಂಪೂರ್ಣ ಕಪ್ಪು ಥೀಮ್ ಅನ್ನು ಕ್ಯಾಬಿನ್‌ ಪಡೆದಿದೆ.
  • 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು, ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
  • 6-ಸ್ಪೀಡ್ ಮ್ಯಾನುಯಲ್‌ ಮತ್ತು 7-ಸ್ಪೀಡ್ ಡಿಸಿಟಿ ಎರಡನ್ನೂ ಹೊಂದಿರುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.
  • ಇದರ ಎಕ್ಸ್ ಶೋರೂಂ ಬೆಲೆಗಳು 17.50 ಲಕ್ಷ ರೂ.ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

ಹುಂಡೈ ಕ್ರೆಟಾ ಎನ್ ಲೈನ್ ಅನ್ನು ಮಾರ್ಚ್ 11 ರಂದು ಬಿಡುಗಡೆ ಮಾಡುವ ಮೊದಲು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಹ್ಯುಂಡೈಯು ಆನ್‌ಲೈನ್ ಮತ್ತು ಭಾರತದಾದ್ಯಂತ ತನ್ನ ಡೀಲರ್‌ಶಿಪ್‌ಗಳಲ್ಲಿ ರೂ 25,000 ಕ್ಕೆ ಈ ಸ್ಪೋರ್ಟಿಯರ್ ಎಸ್‌ಯುವಿಗಾಗಿ ಬುಕಿಂಗ್ ಅನ್ನು ತೆರೆದಿದೆ.

ಇದು ನೋಡಲು ಹೇಗಿದೆ?

ಹುಂಡೈ ಕ್ರೆಟಾ ಎನ್ ಲೈನ್ ಆವೃತ್ತಿಯು 'ಎನ್ ಲೈನ್' ಬ್ಯಾಡ್ಜ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಕೆಂಪು ಇನ್ಸರ್ಟ್‌ಗಳೊಂದಿಗೆ ಹೊಸ ಮುಂಭಾಗದ ಬಂಪರ್ ವಿನ್ಯಾಸವನ್ನು ಪಡೆಯುತ್ತದೆ. ಇದರ ಸೈಡ್‌ ವ್ಯೂವನ್ನು ಗಮನಿಸುವಾಗ ಕೆಂಪು ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಹೊಸ 18-ಇಂಚಿನ ಅಲಾಯ್‌ ವೀಲ್‌ಗಳನ್ನು ಮತ್ತು ಸೈಡ್ ಸ್ಕರ್ಟಿಂಗ್‌ಗಳಲ್ಲಿ ಕೆಂಪು ಇನ್ಸರ್ಟ್‌ಗಳನ್ನು ಒಳಗೊಂಡಿದೆ. ಹಿಂಭಾಗದಲ್ಲಿ, ಇದು ಬದಲಾವಣೆ ಮಾಡಿದ ಬಂಪರ್‌ನೊಂದಿಗೆ ಬರುತ್ತದೆ, ಇದು ಸ್ಕಿಡ್ ಪ್ಲೇಟ್‌ಗೆ ಕೆಂಪು ಇನ್ಸರ್ಟ್‌ ಮತ್ತು ಡ್ಯುಯಲ್-ಟಿಪ್ ಎಕ್ಸಾಸ್ಟ್ ಅನ್ನು ಪಡೆಯುತ್ತದೆ.

ಸಾಮಾನ್ಯ ಕ್ರೆಟಾದ ಸ್ಪೋರ್ಟಿಯರ್ ಆವೃತ್ತಿಯಾಗಿರುವುದರಿಂದ, ಇದು ಮುಂಭಾಗ, ಸೈಡ್‌ ಮತ್ತು ಹಿಂಭಾಗದ ಪ್ರೊಫೈಲ್‌ಗಳಲ್ಲಿ 'ಎನ್ ಲೈನ್' ಲಾಂಛನಗಳನ್ನು ಪಡೆಯುತ್ತದೆ. ಕ್ರೆಟಾ ಎನ್ ಲೈನ್‌ಗೆ ಒದಗಿಸಲಾದ ಮತ್ತೊಂದು ವಿಶೇಷ ಟಚ್‌ ಎಂದರೆ ಕಪ್ಪು ರೂಫ್‌ನೊಂದಿಗೆ ಥಂಡರ್ ಬ್ಲೂ ಬಣ್ಣವಾಗಿದೆ.

ಕ್ಯಾಬಿನ್‌ನಲ್ಲಿನ ಬದಲಾವಣೆಗಳು

ಇದರ ಒಳಭಾಗವನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿಲ್ಲವಾದರೂ, ಇದರ ಇತ್ತೀಚಿನ ಇಂಟೀರಿಯರ್ ಟೀಸರ್ ಚಿತ್ರವು ಕ್ರೆಟಾ ಎನ್ ಲೈನ್ ಸಂಪೂರ್ಣ ಕಪ್ಪು ಥೀಮ್‌ನೊಂದಿಗೆ ರಿಫ್ರೆಶ್ ಕ್ಯಾಬಿನ್ ಅನ್ನು ಪಡೆಯುತ್ತದೆ ಎಂಬುವುದನ್ನು ಖಚಿತಪಡಿಸುತ್ತದೆ. ಇದು ಡ್ಯಾಶ್‌ಬೋರ್ಡ್‌ನ ಸುತ್ತಲೂ ಕೆಂಪು ಎಕ್ಸೆಂಟ್‌ಗಳಿಂದ ಪೂರಕವಾಗಿರುತ್ತದೆ ಮತ್ತು ಗೇರ್ ಲಿವರ್ ಮತ್ತು ಅಪ್ಹೋಲ್‌ಸ್ಟರಿ ಎರಡರಲ್ಲೂ ಕಾಂಟ್ರಾಸ್ಟ್ ರೆಡ್ ಸ್ಟಿಚಿಂಗ್ ಇರುತ್ತದೆ. N ಲೈನ್-ನಿರ್ದಿಷ್ಟ ಸ್ಟೀರಿಂಗ್ ಚಕ್ರವನ್ನು ಸಹ ಪ್ಯಾಕೇಜ್‌ನಲ್ಲಿ ಸೇರಿಸಲಾಗುತ್ತದೆ.

ಬೋರ್ಡ್‌ನಲ್ಲಿ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ತಂತ್ರಜ್ಞಾನ

ಕ್ರೆಟಾ ಎನ್ ಲೈನ್ ಹೆಚ್ಚಾಗಿ ಸ್ಟ್ಯಾಂಡರ್ಡ್ ಕ್ರೆಟಾದ ಟಾಪ್‌-ಎಂಡ್‌ ವೇರಿಯೆಂಟ್‌ಅನ್ನು ಆಧರಿಸಿದೆ. ಆದ್ದರಿಂದ ಇದು ಸಾಮಾನ್ಯ ಕ್ರೆಟಾದಂತೆಯೇ ಅದೇ 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳೊಂದಿಗೆ (ಒಂದು ಇನ್ಸ್ಟ್ರುಮೆಂಟೇಶನ್ಗಾಗಿ ಮತ್ತು ಇನ್ನೊಂದು ಇನ್ಫೋಟೈನ್ಮೆಂಟ್ಗಾಗಿ), ಡ್ಯುಯಲ್-ಝೋನ್ ಎಸಿ, ವೈರ್ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳೊಂದಿಗೆ ಅಳವಡಿಸಲಾಗಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ಕ್ರೆಟಾ ಎನ್ ಲೈನ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಹಿಲ್-ಅಸಿಸ್ಟ್ ಅನ್ನು ಪಡೆಯಲಿದೆ ಎಂದು ಹ್ಯುಂಡೈ ದೃಢಪಡಿಸಿದೆ. ಸ್ಟ್ಯಾಂಡರ್ಡ್ ಕ್ರೆಟಾದಲ್ಲಿ ಲಭ್ಯವಿರುವಂತೆ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಇದು ಸಹ ಒಂದಿರಬಹುದೆಂದು ನಾವು ನಿರೀಕ್ಷಿಸುತ್ತಿದ್ದೇವೆ.

ಇದನ್ನೂ ಸಹ ಪರಿಶೀಲಿಸಿ: ಯುರೋಪ್‌ಗಾಗಿ ಹ್ಯುಂಡೈ i20 N ಲೈನ್ ಫೇಸ್‌ಲಿಫ್ಟ್ ಎಡಿಷನ್‌ ಅನಾವರಣ, ಇದು ಭಾರತ-ಸ್ಪೆಕ್ ಮಾಡೆಲ್‌ನಿಂದ ಹೇಗೆ ಭಿನ್ನವಾಗಿದೆ ಎಂಬುದು ಇಲ್ಲಿದೆ

ಟರ್ಬೊ-ಪೆಟ್ರೋಲ್ ಮಾತ್ರ

ಇದು ಸ್ಟ್ಯಾಂಡರ್ಡ್ ಮೊಡೆಲ್‌ನಂತೆಯೇ ಅದೇ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS/ 253 Nm) ನಿಂದ ಚಾಲಿತವಾಗುತ್ತದೆ, ಆದರೆ 7-ಸ್ಪೀಡ್ DCT (ಡ್ಯುಯಲ್- ಕ್ಲಚ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌) ಜೊತೆಗೆ 6-ಸ್ಪೀಡ್ ಮ್ಯಾನ್ಯುವಲ್ ಆಯ್ಕೆಯನ್ನು ಪಡೆಯುವ ಸಾಧ್ಯತೆಯಿದೆ.

ಎಸ್‌ಯುವಿಯ N ಲೈನ್ ಆವೃತ್ತಿಯಾಗಿರುವುದರಿಂದ, ಸಾಮಾನ್ಯ ಕ್ರೆಟಾದಿಂದ ಮತ್ತಷ್ಟು ಪ್ರತ್ಯೇಕಿಸಲು ಸುಧಾರಿತ ನಿರ್ವಹಣೆಗಾಗಿ ಸ್ವಲ್ಪ ವಿಭಿನ್ನವಾದ ಸಸ್ಪೆನ್ಸನ್‌ ಸೆಟಪ್ ಮತ್ತು ತ್ವರಿತ ಸ್ಟೀರಿಂಗ್ ರೆಸ್ಪಾನ್ಸ್‌ ಅನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಸ್ಪೋರ್ಟಿಯರ್-ಸೌಂಡಿಂಗ್‌ನ ಎಕ್ಸಾಸ್ಟ್ ಸೆಟಪ್ ಸಹ ಪ್ರಸ್ತಾಪದಲ್ಲಿರಬಹುದು.

ನಿರೀಕ್ಷಿತ ಬೆಲೆಗಳು ಮತ್ತು ಸ್ಪರ್ಧಿಗಳು

ಹ್ಯುಂಡೈ ಕ್ರೆಟಾ ಎನ್ ಲೈನ್ ಆರಂಭಿಕ ಬೆಲೆ 17.50 ಲಕ್ಷ ರೂ. ನಿಂದ(ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಜಿಟಿಎಕ್ಸ್+ ಮತ್ತು ಎಕ್ಸ್-ಲೈನ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಹಾಗೆಯೇ, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗನ್ ಜಿಟಿ ಲೈನ್ ಮತ್ತು ಎಂಜಿ ಆಸ್ಟರ್‌ಗೆ ಸ್ಪೋರ್ಟಿಯರ್-ಕಾಣುವ ಪರ್ಯಾಯವಾಗಿದೆ.

ಇಲ್ಲಿ ಇನ್ನಷ್ಟು ಓದಿ : ಕ್ರೆಟಾ ಆನ್‌ರೋಡ್‌ ಬೆಲೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 39 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ಕ್ರೆಟಾ n Line

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ