• English
  • Login / Register

2025ರ ಜನವರಿಯಲ್ಲಿ ಮಾರಾಟದಲ್ಲಿ ಗರಿಷ್ಠ ಮಟ್ಟದ ದಾಖಲೆಯನ್ನು ಬರೆದ Hyundai Creta..

ಹುಂಡೈ ಕ್ರೆಟಾ ಗಾಗಿ kartik ಮೂಲಕ ಫೆಬ್ರವಾರಿ 10, 2025 08:30 pm ರಂದು ಪ್ರಕಟಿಸಲಾಗಿದೆ

  • 25 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಸಾರ್ವಕಾಲಿಕ ಗರಿಷ್ಠ ಅಂಕಿ ಅಂಶವು ಹ್ಯುಂಡೈ ಕ್ರೆಟಾ ನೇಮ್‌ಟ್ಯಾಗ್‌ಗೆ ಸುಮಾರು 50 ಪ್ರತಿಶತದಷ್ಟು ಮಾಸಿಕ (MoM) ಬೆಳವಣಿಗೆಯನ್ನು ಸೂಚಿಸುತ್ತದೆ

Creta All time high sales

ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಿರಂತರವಾಗಿ ಹೆಚ್ಚು ಮಾರಾಟವಾಗುವ ಹ್ಯುಂಡೈ ಕ್ರೆಟಾ, 2025ರ ಜನವರಿಯಲ್ಲಿ 18,522 ಕಾರುಗಳ ಮಾರಾಟದ ಸಾರ್ವಕಾಲಿಕ ಗರಿಷ್ಠ ಅಂಕಿಅಂಶವನ್ನು ತಲುಪಿದೆ. ಕಳೆದ ವರ್ಷದ ಮಾರಾಟದ ಅಂಕಿಅಂಶಗಳಿಗೆ ಹೋಲಿಸಿದರೆ, ಇದು ಈ ಕೊರಿಯಾದ ಕಾರು ತಯಾರಕರ ಎಸ್‌ಯುವಿಗೆ  ಶೇಕಡಾ 40ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಈ ಅಂಕಿಅಂಶದಲ್ಲಿ ಹ್ಯುಂಡೈ ಕಂಪನಿಯು ICE ಕ್ರೆಟಾ, ಕ್ರೆಟಾ ಎನ್‌-ಲೈನ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಕ್ರೆಟಾ ಎಲೆಕ್ಟ್ರಿಕ್ ಮಾರಾಟದ ಅಂಕಿಅಂಶಗಳನ್ನು ಒಟ್ಟುಗೂಡಿಸಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ನಾವು ಈ ಎಸ್‌ಯುವಿಗಳ ಕುರಿತು ತ್ವರಿತವಾಗಿ ನೋಡೋಣ.

ಹ್ಯುಂಡೈ ಕ್ರೆಟಾ ಮತ್ತು ಕ್ರೆಟಾ ಎಲೆಕ್ಟ್ರಿಕ್ ವಿನ್ಯಾಸ

Hyundai Creta Electric Front

ಹ್ಯುಂಡೈ ಕಂಪನಿಯು ಎಸ್‌ಯುವಿಗಳ ಮುಂಭಾಗ ಮತ್ತು ಹಿಂಭಾಗವನ್ನು ಪ್ರತ್ಯೇಕವಾಗಿ ಕಾಣುವಂತೆ ನೋಡಿಕೊಂಡಿತು. ಕ್ರೆಟಾ ಎಲೆಕ್ಟ್ರಿಕ್ ಸಕ್ರಿಯ ಏರ್ ಫ್ಲಾಪ್‌ಗಳನ್ನು ಹೊಂದಿರುವ ಪಿಕ್ಸಲೇಟೆಡ್ ಗ್ರಿಲ್‌ನೊಂದಿಗೆ ಹೆಚ್ಚಾಗಿ N-ಲೈನ್‌ನಂತಹ ಲುಕ್ ಅನ್ನು ಹೊಂದಿದೆ, ಆದರೆ ICE ಕ್ರೆಟಾ ದಪ್ಪವಾದ ಕಪ್ಪು ಗ್ರಿಲ್ ಅನ್ನು ಹೊಂದಿದೆ. ಈ ಎಸ್‌ಯುವಿಗಳಲ್ಲಿ ಲೈಟಿಂಗ್‌ ಅಂಶಗಳನ್ನು ಒಂದೇ ರೀತಿ ನೀಡಲಾಗಿದೆ. 

ಸೈಡ್‌ನಿಂದ ಗಮನಿಸುವಾಗ ಇವಿಯಲ್ಲಿ ಕಪ್ಪು ಬಣ್ಣದ ರೂಫ್ ರೇಲ್‌ಗಳು ಮತ್ತು ORVM ಗಳನ್ನು ಪಡೆಯುವುದನ್ನು ಹೊರತುಪಡಿಸಿ ಎರಡನ್ನೂ ಬೇರ್ಪಡಿಸಲು ಕಷ್ಟಕರವಾಗಿಸುತ್ತದೆ, ಆದರೆ ಕ್ರೆಟಾ ಬಾಡಿ ಕಲರ್‌ನ ORVM ಗಳೊಂದಿಗೆ ಸಿಲ್ವರ್‌ ರೂಫ್ ರೇಲ್ಸ್‌ಗಳನ್ನು ಪಡೆಯುತ್ತದೆ.

ಹಿಂಭಾಗದ ಲೈಟಿಂಗ್‌ ಅಂಶಗಳನ್ನು ಎರಡೂ ಎಸ್‌ಯುವಿಗಳಲ್ಲಿ ಹಂಚಿಕೊಳ್ಳಲಾಗಿದೆ, ಬದಲಾವಣೆಗಳು ಬಂಪರ್ ಮತ್ತು ಸ್ಕಿಡ್ ಪ್ಲೇಟ್‌ಗೆ ಸೀಮಿತವಾಗಿವೆ.

Hyundai Creta Electric Cabin

ಕ್ರೆಟಾ ಮತ್ತು ಕ್ರೆಟಾ ಎಲೆಕ್ಟ್ರಿಕ್ ಎರಡರ ಇಂಟೀರಿಯರ್‌ ವಿನ್ಯಾಸವು ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್‌ನೊಂದಿಗೆ ಒಂದೇ ಆಗಿರುತ್ತದೆ. ಆದರೆ, ಕ್ರೆಟಾ ಎಲೆಕ್ಟ್ರಿಕ್‌ನಲ್ಲಿರುವ ಸ್ಟೀರಿಂಗ್ ವೀಲ್ ಮೂರು-ಸ್ಪೋಕ್ ಸ್ಟೀರಿಂಗ್ ವೀಲ್ ಆಗಿದೆ.

ಹ್ಯುಂಡೈ ಕ್ರೆಟಾ ಮತ್ತು ಕ್ರೆಟಾ ಎಲೆಕ್ಟ್ರಿಕ್ ಫೀಚರ್‌ಗಳು ಮತ್ತು ಸುರಕ್ಷತೆ 

Hyundai Creta Electric Cabin

ಕ್ರೆಟಾ ಮತ್ತು ಕ್ರೆಟಾ ಎಲೆಕ್ಟ್ರಿಕ್ ಎರಡೂ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇ (ಡ್ರೈವರ್ ಮತ್ತು ಇನ್ಫೋಟೈನ್ಮೆಂಟ್), ಹಿಂಭಾಗದ ವೆಂಟ್‌ಗಳೊಂದಿಗೆ ಡ್ಯುಯಲ್-ಜೋನ್ ಆಟೋ ಎಸಿ ಮತ್ತು ವೆಂಟಿಲೇಟೆಡ್‌ ಮುಂಭಾಗದ ಸೀಟುಗಳಂತಹ ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳೊಂದಿಗೆ ತುಂಬಿವೆ. ಕ್ರೆಟಾ ಎಲೆಕ್ಟ್ರಿಕ್ ಸಹ-ಚಾಲಕ ಸೀಟಿಗೆ ಬಾಸ್‌ ಮೋಡ್‌ ಮತ್ತು ವಾಹನದಿಂದ ಲೋಡ್(V2L) ಫೀಚರ್‌ಅನ್ನು ಸಹ ಪಡೆಯುತ್ತದೆ.

ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಎರಡೂ ಎಸ್‌ಯುವಿಗಳು 6 ಏರ್‌ಬ್ಯಾಗ್‌ಗಳು (ಪ್ರಮಾಣಿತವಾಗಿ) ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನಂತಹ ಲೆವೆಲ್ 2 ADAS ನೊಂದಿಗೆ ಬರುತ್ತವೆ.

ಹ್ಯುಂಡೈ ಕ್ರೆಟಾ ಮತ್ತು ಕ್ರೆಟಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳು

ICE ಕ್ರೆಟಾ ಮೂರು ಎಂಜಿನ್‌ಗಳ ಆಯ್ಕೆಯನ್ನು ಪಡೆಯುತ್ತದೆ; ಅವುಗಳ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.5-ಲೀಟರ್ ಎನ್ಎ* ಪೆಟ್ರೋಲ್

1.5-ಲೀಟರ್ ಟರ್ಬೊ ಪೆಟ್ರೋಲ್l

1.5-ಲೀಟರ್ ಡೀಸೆಲ್

ಪವರ್‌

115 ಪಿಎಸ್‌

160 ಪಿಎಸ್‌

116 ಪಿಎಸ್‌

ಟಾರ್ಕ್‌

144 ಎನ್‌ಎಮ್‌

253 ಎನ್‌ಎಮ್‌

250 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್ MT**/ 6-ಸ್ಟೆಪ್‌ CVT^

7-ಸ್ಪೀಡ್ DCT^^

6-ಸ್ಪೀಡ್ MT/AT*^

ಇಂಧನ ಮೈಲೇಜ್‌ 

ಪ್ರತಿ ಲೀ.ಗೆ 17.4 ಕಿಮೀ (MT), ಪ್ರತಿ ಲೀ.ಗೆ 17.7 ಕಿಮೀ (CVT)

ಪ್ರತಿ ಲೀ.ಗೆ 18.4 ಕಿಮೀ

ಪ್ರತಿ ಲೀ.ಗೆ 21.8 ಕಿಮೀ (MT), ಪ್ರತಿ ಲೀ.ಗೆ 19.1 ಕಿಮೀ (AT)

*NA= ನ್ಯಾಚುರಲಿ ಆಸ್ಪಿರೇಟೆಡ್‌

**MT= ಮ್ಯಾನುವಲ್ ಟ್ರಾನ್ಸ್‌ಮಿಷನ್

^CVT= ಕಂಟಿನ್ಯೂವಸ್ಲಿ ವೇರಿಯೆಬಲ್‌ ಟ್ರಾನ್ಸ್‌ಮಿಷನ್

^^DCT= ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್

*^AT= ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ 

ಎಲೆಕ್ಟ್ರಿಕ್‌ ಆವೃತ್ತಿಯು ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ, ಅದರ ತಾಂತ್ರಿಕ ವಿಶೇಷಣಗಳು ಈ ಕೆಳಗಿನಂತಿವೆ:

ಬ್ಯಾಟರಿ

42 ಕಿ.ವ್ಯಾಟ್‌

51.4 ಕಿ.ವ್ಯಾಟ್‌

ಪವರ್‌

135 ಪಿಎಸ್‌

171 ಪಿಎಸ್‌

ಟಾರ್ಕ್‌

200 ಎನ್‌ಎಮ್‌

200 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

390 ಕಿ.ಮೀ.

473 ಕಿ.ಮೀ.

ಎರಡೂ ಬ್ಯಾಟರಿಗಳು ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ, ಇದರಿಂದಾಗಿ ಬ್ಯಾಟರಿಗಳು 58 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದಷ್ಟು ಚಾರ್ಜ್‌ ಆಗಲು ಅನುವು ಮಾಡಿಕೊಡುತ್ತದೆ..

 ಇದನ್ನೂ ಸಹ ಓದಿ: ಕಿಯಾ ಸಿರೋಸ್ Vs ಪ್ರಮುಖ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Hyundai Creta rear

ಹ್ಯುಂಡೈ ಕ್ರೆಟಾ ಬೆಲೆ 11.11 ಲಕ್ಷ ರೂ.ನಿಂದ 20.42 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ, ದೆಹಲಿ)ಇದ್ದು, ಕಿಯಾ ಸೆಲ್ಟೋಸ್, ಟೊಯೋಟಾ ಹೈರೈಡರ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಕಾರುಗಳಿಗೆ ಪೈಪೋಟಿ ನೀಡುತ್ತದೆ. 

ಹ್ಯುಂಡೈ ಕ್ರೆಟಾ ಎನ್‌-ಲೈನ್ ಬೆಲೆ 16.93 ಲಕ್ಷ ರೂ.ಗಳಿಂದ 20.56 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ, ದೆಹಲಿ) ಇದೆ.

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಬೆಲೆ 18 ಲಕ್ಷ ರೂ.ನಿಂದ 24.38 ಲಕ್ಷದವರೆಗೆ (ಪರಿಚಯಾತ್ಮಕ, ಎಕ್ಸ್-ಶೋರೂಂ, ದೆಹಲಿ) ಇದ್ದು, ಇದು ಎಮ್‌ಜಿ ಜೆಡ್‌ಎಸ್‌ ಇವಿ, ಟಾಟಾ ಕರ್ವ್ ಇವಿ ಮತ್ತು ಮಹೀಂದ್ರಾ ಬಿಇ 6 ಗೆ ಪರ್ಯಾಯವಾಗಿದೆ. 

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Hyundai ಕ್ರೆಟಾ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience