Login or Register ಅತ್ಯುತ್ತಮ CarDekho experience ಗೆ
Login

ಹೊಸ ವರ್ನಾದ ಅಧಿಕೃತ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ, ಬುಕಿಂಗ್‌ಗಳು ತೆರೆದಿವೆ

published on ಫೆಬ್ರವಾರಿ 14, 2023 05:18 pm by shreyash for ಹುಂಡೈ ವೆರ್ನಾ

ಹ್ಯುಂಡೈನ ಹೊಸ ಜನರೇಷನ್ ಕಾಂಪ್ಯಾಕ್ಟ್ ಸೆಡಾನ್ ಇನ್ನೂ ದೊಡ್ಡದಾಗಿದ್ದು, ಹೆಚ್ಚು ಶಕ್ತಿಶಾಲಿಯಾದ 1.5-ಲೀಟರ್ TGDi ಪೆಟ್ರೋಲ್ ಇಂಜಿನ್ ಅನ್ನು ನೀಡುತ್ತಿದೆ.

  • ಹೊಸ ಜನರೇಷನ್ ವರ್ನಾವನ್ನು ರೂ. 25,000 ಗಳ ಟೋಕನ್ ಮೊತ್ತಕ್ಕೆ ಕಾಯ್ದಿರಿಸಬಹುದು.

  • ಕಾರಿನ ಫ್ರಂಟ್ ಮತ್ತು ರಿಯರ್‌ನ ಹೊಸ ವಿನ್ಯಾಸವನ್ನು ಸಿಲೂಯೆಟ್‌ನೊಂದಿಗೆ ನವೀಕೃತಗೊಳಿಸಲಾಗಿದೆ.

  • ಹ್ಯುಂಡೈ ಸೆಡಾನ್‌ಗಾಗಿ 1.5-ಲೀಟರ್ TGDi ಪೆಟ್ರೋಲ್ ಇಂಜಿನ್ ಅನ್ನು ಖಚಿತಪಡಿಸಿದೆ.

  • ಈ ಸೆಡಾನ್ ಹೊಸ ಜನರೇಷನ್‌ ಅಲ್ಲಿ ಡಿಸೇಲ್ ಇಂಜಿನ್ ಅನ್ನು ಹೊಂದಿಲ್ಲ.

  • ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ: EX, S, SX ಮತ್ತು SX(O)

ಹ್ಯುಂಡೈ ರೂ. 25,000 ಟೋಕನ್ ಮೊತ್ತಕ್ಕೆ ಬುಕಿಂಗ್‌ಗಳನ್ನು ತೆರೆದಿರುವುದರಿಂದ ಈ ಹೊಸ ಜನರೇಷನ್ ವರ್ನಾ ಶೀಘ್ರದಲ್ಲಿಯೇ ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ. ಸೆಡಾನ್‌ನ ನವೀಕೃತ ಡಿಸೈನ್, ಫ್ರಂಟ್ ಮತ್ತು ರಿಯರ್ ಭಾಗವನ್ನು ಅದರ ಸಿಲೂಯೆಟ್‌ನ ಒಂದು ನೋಟವನ್ನು ಸಂಕ್ಷಿಪ್ತವಾಗಿ ಪ್ರದರ್ಶಿಸುವ ಮೊದಲ ಅಧಿಕೃತ ಟೀಸರ್ ಅನ್ನು ಈ ಕಾರು ತಯಾರಕರು ನಮಗೆ ನೀಡಿದ್ದಾರೆ.

ಹೊಸ ನೋಟ

ಟೀಸರ್‌ನಲ್ಲಿ ನಾವು ಕಂಡಂತೆ, ಕಾರಿನ ಸಿಲೂಯೆಟ್ ಎಲಾಂಟ್ರಾವನ್ನು ಹೋಲುವ ನ್ಯಾಚ್‌ಬ್ಯಾಕ್ ತರಹದ ರಿಯರ್ ಪ್ರೊಫೈಲ್ ಅನ್ನು ಹೊಂದಿದೆ. ಫ್ರಂಟ್ ಬೊನೆಟ್ ಲೈನ್‌ನ ಉದ್ದಕ್ಕೂ LED DRLಗಳ ಸಂಪರ್ಕವನ್ನು ಹೊಂದಿದ್ದು ಜಾಗತಿಕವಾಗಿ ಲಭ್ಯವಿರುವ ಸೊನಾಟಾದಿಂದ ಪ್ರೇರಿತವಾದ ಹೊಸ ಶೈಲಿಯ ಗ್ರಿಲ್ ಅನ್ನು ಪಡೆದಿದೆ. ಸೆಡಾನ್, ಹಿಂಭಾಗದಲ್ಲಿ ಸಂಪರ್ಕಿತ LED ಟೈಲ್‌ಲ್ಯಾಂಪ್‌ಗಳನ್ನು ಸಹ ಹೊಂದಿದ್ದು. ಅದು ವಕ್ರವಾದ ಲೈಟ್‌ನೊಂದಿಗೆ ಕೊನೆಗೊಳ್ಳುತ್ತದೆ.

ಈ ಟೀಸರ್ ಹೊಸ ವರ್ನಾದ ದೊಡ್ಡ ಡೈಮೆನ್ಷನ್ ಬಗ್ಗೆಯೂ ಸುಳಿವು ನೀಡುತ್ತದೆ. ಕಾರು ತಯಾರಕರು ಇದನ್ನು ಏಳು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಎಕ್ಸ್‌ಟಿರಿಯರ್ ಬಣ್ಣಗಳಲ್ಲಿ ನೀಡುತ್ತಿರುವುದು ಮಾತ್ರವಲ್ಲದೇ ಹೊಸದಾಗಿ ಮೂರು ಮೊನೊಟೋನ್ ಬಣ್ಣಗಳನ್ನು ಪರಿಚಯಿಸುತ್ತಿದ್ದಾರೆ: ಅಬೀಸ್ ಬ್ಲ್ಯಾಕ್, ಅಟ್ಲಾಸ್ ವೈಟ್ ಮತ್ತು ಟೆಲುರಿಯನ್ ಬ್ರೌನ್.

ಇದನ್ನೂ ಓದಿ: ಈ ಫೆಬ್ರುವರಿಯಲ್ಲಿ ಹ್ಯುಂಡೈ ಕಾರುಗಳ ಮೇಲೆ ರೂ.33,000 ಗಳವರೆಗಿನ ಪ್ರಯೋಜನಗಳನ್ನು ಪಡೆಯಿರಿ

ಹೆಚ್ಚಿನ ಫೀಚರ್‌ಗಳು

ಹ್ಯುಂಡೈ ಹೊಸ ವರ್ನಾದ ನವೀಕೃತ ಫೀಚರ್‌ಗಳ ಪಟ್ಟಿಯ ವಿವರಿಸಿಲ್ಲವಾದರೂ, ಈ ಹಿಂದೆ ಸೆಡಾನ್‌ನ ಟೆಸ್ಟ್ ಮ್ಯೂಲ್‌ನಲ್ಲಿ ಪರೀಕ್ಷಿಸಿದಂತೆಯೇ ಸಂಪರ್ಕಿತ ಡಿಸ್‌ಪ್ಲೇಯೊಂದಿಗೆ (ಇನ್‌ಫೊಟೈನ್‌ಮೆಂಟ್ ಮತ್ತು ಡಿಜಿಟಲ್ ಕ್ಲಸ್ಟರ್‌ಗಾಗಿ) ಬರುತ್ತಿದೆ. ಇದು ಡ್ಯುಯಲ್ ಝೋನ್ ಕ್ಲೈಮೆಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಮ್ ಅನ್ನು ಹೊಂದಿರಬಹುದು.

ಇದನ್ನೂ ಓದಿ: 2 ತಿಂಗಳೊಳಗೆ 650 ಯೂನಿಟ್‌ಗಿಂತಲೂ ಹೆಚ್ಚು ಬುಕಿಂಗ್ ಕಂಡ ಹ್ಯುಂಡೈ ಲಾನಿಕ್ 5 EV

ವರ್ಧಿತ ಸುರಕ್ಷತೆ

ಇದು ADAS ಟೆಕ್ ಅನ್ನು ಹೊಂದಿದ್ದು, ಪ್ರಾಯಶಃ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟಮ್ ಅನ್ನು ಒಳಗೊಂಡಿರುವ ದ್ವಿತೀಯ ಕಾಂಪ್ಯಾಕ್ಟ್ ಸೆಡಾನ್ ಎಂದು ಇದನ್ನು ಹೆಸರಿಸಬಹುದಾಗಿದೆ. ಹೊಸ ವರ್ನಾ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಮತ್ತು ನಾಲ್ಕು ಡಿಸ್ಕ್ ಬ್ರೇಕ್‌ಗಳನ್ನು ಪ್ರಮಾಣಿತವಾಗಿ ಹೊಂದಿರುವ ಸಾಧ್ಯತೆಯಿದೆ.

ನವೀಕೃತ ಪವರ್‌ಟ್ರೇನ್‌ಗಳು

ಹೊಸ ಎಮಿಷನ್ ಮಾನದಂಡಗಳು ಬರುತ್ತಿರುವುದರಿಂದ ವರ್ನಾದಲ್ಲಿ ಎಂಜಿನ್ ಆಯ್ಕೆಗಳು RDE ಗೆ ಅನುಗುಣವಾಗಿರುವುದು ಮಾತ್ರವಲ್ಲದೇ, E20 ಇಂಧನಕ್ಕೆ ಹೊಂದಿಕೊಳ್ಳುತ್ತವೆ. ಹೊಸ ವರ್ನಾ ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ: 1.5-ಲೀಟರ್ TGDi ಟರ್ಬೋ-ಪೆಟ್ರೋಲ್‌ಗೆ ಜೊತೆಯಾಗಿ ಸಿಕ್ಸ್-ಸ್ಪೀಡ್ MT ಅಥವಾ ಸೆವೆನ್-ಸ್ಪೀಡ್ DCT ಟ್ರಾನ್ಸ್‌ಮಿಷನ್, ಮತ್ತು 1.5-ಲೀಟರ್ MPi ಪೆಟ್ರೋಲ್ ಇಂಜಿನ್‌ಗೆ ಜೊತೆಯಾಗಿ ಸಿಕ್ಸ್-ಸ್ಪೀಡ್ MT ಮತ್ತು iVT ಟ್ರಾನ್ಸ್‌ಮಿಷನ್.

ಇದನ್ನೂ ಓದಿ: ಈಗ ಕಿಯಾ ಸೆಲ್ಟೋಸ್‌ ನಂತರ ಆರು ಏರ್ ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಹೊಂದಿರುವ ಎರಡನೇ ಕಾಂಪ್ಯಾಕ್ಟ್ ಹ್ಯುಂಡೈ ಕ್ರೆಟಾ

ಮೊದಲನೆಯದು ಹೊಸ ಇಂಜಿನ್ ಆಗಿದ್ದರೆ ಎರಡನೆಯದು ಪ್ರಸ್ತುತ ಔಟ್‌ಗೋಯಿಂಗ್ ಮಾಡೆಲ್‌ನಲ್ಲಿ 15PS ಮತ್ತು 144Nm ಅನ್ನು ಹೊರಹಾಕುತ್ತದೆ. 1.5-ಲೀಟರ್ TGDi ಪೆಟ್ರೋಲ್ ಯೂನಿಟ್‌ನ ಪವರ್ ಫಿಗರ್ ಇನ್ನೂ ಬಹಿರಂಗವಾಗಿಲ್ಲ. ಇದರ ಪ್ರಮುಖ ಪ್ರತಿಸ್ಪರ್ಧಿಗಳಂತೆಯೇ, ಇದು ಕೇವಲ ಪೆಟ್ರೋಲ್ ಮಾಡೆಲ್ ಆಗಿದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಈ ಫೋರ್ತ್-ಜನರೇಷನ್ ಹ್ಯುಂಡೈ ವರ್ನಾದ ಬೆಲೆಯನ್ನು ರೂ. 10 ಲಕ್ಷಗಳಿಂದ (ಎಕ್ಸ್-ಶೋರೂಮ್) ನಿಗದಿಪಡಿಸಬಹುದೆಂದು ನಿರೀಕ್ಷಿಸಲಾಗಿದ್ದು ಇದು ಹೋಂಡಾ ಸಿಟಿ, ಮಾರುತಿ ಸಿಯಾಝ್, ಫೋಕ್ಸ್‌ವ್ಯಾಗನ್ ವರ್ಚಸ್ ಮತ್ತು ಸ್ಕೋಡಾ ಸ್ಲೇವಿಯಾ ಗಳೊಂದಿಗೆ ತನ್ನ ಸ್ಪರ್ಧೆಯನ್ನು ಮುಂದುವರಿಸಿದೆ

s
ಅವರಿಂದ ಪ್ರಕಟಿಸಲಾಗಿದೆ

shreyash

  • 47 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ವೆರ್ನಾ

Read Full News

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
Rs.11.53 - 19.13 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ