Jeep Meridian ಫೇಸ್‌ಲಿಫ್ಟ್‌ನ ಸ್ಪೈ-ಫೋಟೊಗಳು ಲೀಕ್‌, ADAS ಇರುವುದು ದೃಢ

published on ಮೇ 21, 2024 01:02 pm by samarth for ಜೀಪ್ ಮೆರಿಡಿಯನ್

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಮುಂಭಾಗದ ಬಂಪರ್‌ನಲ್ಲಿ ರಾಡಾರ್ ಇರುವುದು ದೊಡ್ಡ ಕೊಡುಗೆಯಾಗಿದೆ, ಇದು ಸುಧಾರಿತ ಸುರಕ್ಷತಾ ತಂತ್ರಜ್ಞಾನದ ನಿಬಂಧನೆಯ ಬಗ್ಗೆ ಸುಳಿವು ನೀಡುತ್ತದೆ

Jeep Meridian Facelift Spied

ಜೀಪ್ ರಾಂಗ್ಲರ್ ಫೇಸ್‌ಲಿಫ್ಟ್ ನಂತರ, ಅಮೇರಿಕನ್ ಕಾರು ತಯಾರಕರು ಈಗ ಭಾರತದಲ್ಲಿ ಫೇಸ್‌ಲಿಫ್ಟೆಡ್ ಜೀಪ್ ಮೆರಿಡಿಯನ್ ಅನ್ನು ಪರಿಚಯಿಸುವತ್ತ ಗಮನಹರಿಸಿದ್ದಾರೆ. 2024 ಜೀಪ್ ಮೆರಿಡಿಯನ್‌ನ ಇತ್ತೀಚಿನ ಸ್ಪೈಶಾಟ್ ಹೊಸ ವಿವರಗಳನ್ನು ಬಹಿರಂಗಪಡಿಸುತ್ತದೆ, ಶೀಘ್ರದಲ್ಲೇ ಇದರ ಬಿಡುಗಡೆಯ ಸುಳಿವು ನೀಡುತ್ತದೆ. ಫೇಸ್‌ಲಿಫ್ಟೆಡ್ ಮೆರಿಡಿಯನ್‌ನಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನೋಡೋಣ.

ಹೊರಭಾಗ

Jeep Meridian Facelift Spied

ಹೊರಭಾಗಗಳಲ್ಲಿ, ನಾವು ಗ್ರಿಲ್‌ನಲ್ಲಿ ಪರಿಷ್ಕರಣೆಗಳನ್ನು ಮತ್ತು ಅದರ ಮೇಲೆ ಸ್ವಲ್ಪ ಸಿಲ್ವರ್‌ ಫಿನಿಶ್‌ನೊಂದಿಗೆ  ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಅನ್ನು ನಿರೀಕ್ಷಿಸಬಹುದು. ಬದಲಾವಣೆಗಳು ಸಂಯೋಜಿತ ಡಿಆರ್‌ಎಲ್‌ಗಳೊಂದಿಗೆ ಹೊಸ ಹೆಡ್‌ಲೈಟ್ ಸೆಟಪ್ ಅನ್ನು ಸಹ ಒಳಗೊಂಡಿರಬಹುದು. ಕವರ್‌ ಆಗಿದ್ದ ಪರೀಕ್ಷಾ ಆವೃತ್ತಿಯು ಮುಂಭಾಗದ ಬಂಪರ್‌ನಲ್ಲಿ ರಾಡಾರ್ ಅನ್ನು ಹೊಂದಿತ್ತು, ಇದರಿಂದಾಗಿ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒದಗಿಸುವ ಬಗ್ಗೆ ಸುಳಿವು ನೀಡಿದೆ. ಇದು ಹೊಸ ಅಲಾಯ್ ವೀಲ್ ವಿನ್ಯಾಸ, ಮರುವಿನ್ಯಾಸಗೊಳಿಸಲಾದ ಟೈಲ್ ಲೈಟ್ ಸೆಟಪ್ ಮತ್ತು ಬದಲಾವಣೆಗೆ ಒಳಪಟ್ಟ ಹಿಂಭಾಗದ ಬಂಪರ್ ಅನ್ನು ಸಹ ಪಡೆಯಬಹುದು.

ಇದನ್ನು ಸಹ ಓದಿ: 2024ರ Jeep Wrangler ಬಿಡುಗಡೆ, ಬೆಲೆಗಳು 67.65 ಲಕ್ಷ ರೂ.ನಿಂದ ಪ್ರಾರಂಭ

ಇಂಟೀರಿಯರ್‌

Jeep Meridian Facelift Interiors

ಮೆರಿಡಿಯನ್ ಎಸ್‌ಯುವಿಯ ಕ್ಯಾಬಿನ್‌ನಲ್ಲಿ ಹೊಸ ಸೀಟ್ ಅಪ್ಹೋಲ್ಸ್‌ಟೆರಿಯನ್ನು ಹೊರತುಪಡಿಸಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ. ಆದಾಗಿಯೂ, ಜೀಪ್ ಕಂಪಾಸ್‌ನ ನೈಟ್ ಈಗಲ್ ಎಡಿಷನ್‌ನಿಂದ ಪ್ರೇರಿತವಾದ ಕೆಲವು ಬೇಸಿಕ್‌ ಎಕ್ಸಸ್ಸರಿಗಳನ್ನು ಸೇರಿಸಬಹುದು, ಉದಾಹರಣೆಗೆ ಡ್ಯಾಶ್‌ಕ್ಯಾಮ್ ಯುನಿಟ್‌ ಮತ್ತು ಹಿಂಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಹಿಂಭಾಗದ ಕಿಟಕಿ ಬ್ಲೈಂಡ್‌ಗಳು. ಪ್ರಸ್ತುತ ಮೊಡೆಲ್‌ ಈಗಾಗಲೇ 10.2-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಕನೆಕ್ಟೆಡ್‌ ಕಾರ್ ತಂತ್ರಜ್ಞಾನ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು 9-ಸ್ಪೀಕರ್ ಆಲ್ಪೈನ್-ಟ್ಯೂನ್ಡ್ ಆಡಿಯೊ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿದೆ.

ಇದನ್ನು ಸಹ ಓದಿ: Toyota Innova Hycross ZX ಮತ್ತು ZX (O) ಹೈಬ್ರಿಡ್ ಬುಕಿಂಗ್‌ಗಳು ಮತ್ತೆ ಸ್ಥಗಿತ

ಪವರ್‌ಟ್ರೇನ್‌

ಜೀಪ್ ಮೆರಿಡಿಯನ್ ಫೇಸ್‌ಲಿಫ್ಟ್ ಯಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಪಡೆಯುವುದಿಲ್ಲ, 6-ಸ್ಪೀಡ್ ಮ್ಯಾನುವಲ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್‌ ಯುನಿಟ್‌ನೊಂದಿಗೆ ಜೋಡಿಸಲಾದ ಅದೇ 2-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗುವುದನ್ನು ಮುಂದುವರಿಸುತ್ತದೆ. ಈ ಎಂಜಿನ್ 170 ಪಿಎಸ್ ಮತ್ತು 350 ಎನ್ಎಂ ಉತ್ಪಾದಿಸುತ್ತದೆ. ಪ್ರಸ್ತುತ ಮೊಡೆಲ್‌ನಂತೆಯೇ, 4-ವೀಲ್ ಡ್ರೈವ್‌ಟ್ರೇನ್ (4WD) ಅನ್ನು ಟಾಪ್‌-ಎಂಡ್‌ ಆಟೋಮ್ಯಾಟಿಕ್‌ ಆವೃತ್ತಿಗಳಲ್ಲಿ ಮಾತ್ರ ಕಾಣಬಹುದು.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಜೀಪ್ ಮೆರಿಡಿಯನ್ ಫೇಸ್‌ಲಿಫ್ಟ್ ಪ್ರಸ್ತುತ ಮಾಡೆಲ್‌ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಬಹುದೆಂದು ನಿರೀಕ್ಷಿಸಲಾಗಿದೆ, ಇದರ ಬೆಲೆ  33.60 ಲಕ್ಷ ರೂ.ನಿಂದ 39.66 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ ದೆಹಲಿ) ಇದೆ. ಇದು Toyota Fortuner, MG Gloster ಮತ್ತು Skoda Kodiaq ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ.

ಚಿತ್ರದ ಮೂಲ

ಇನ್ನಷ್ಟು ಓದಿ: ಜೀಪ್ ಮೆರಿಡಿಯನ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಜೀಪ್ ಮೆರಿಡಿಯನ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience