• English
  • Login / Register

Toyota Innova Hycross ZX ಮತ್ತು ZX (O) ಹೈಬ್ರಿಡ್ ಬುಕಿಂಗ್‌ಗಳು ಮತ್ತೆ ಸ್ಥಗಿತ

published on ಮೇ 20, 2024 04:11 pm by shreyash for ಟೊಯೋಟಾ ಇನ್ನೋವಾ ಹೈಕ್ರಾಸ್

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಇನ್ನೋವಾ ಹೈಕ್ರಾಸ್‌ನ ಟಾಪ್-ಸ್ಪೆಕ್ ZX ಮತ್ತು ZX (ಒಪ್ಶನಲ್‌) ಹೈಬ್ರಿಡ್ ಆವೃತ್ತಿಗಳ ವೈಟಿಂಗ್‌ ಪಿರೇಡ್‌ ಒಂದು ವರ್ಷದವರೆಗೆ ವಿಸ್ತರಿಸುತ್ತದೆ

Toyota Innova Hycross

  • ಟೊಯೋಟಾ 2024ರ ಏಪ್ರಿಲ್‌ನಲ್ಲಿ ತನ್ನ ಇನ್ನೋವಾ ಹೈಕ್ರಾಸ್‌ನ ZX ಮತ್ತು ZX (ಒಪ್ಶನಲ್‌) ಹೈಬ್ರಿಡ್  ಆವೃತ್ತಿಗಳಿಗಾಗಿ ಆರ್ಡರ್ ತೆಗೆದುಕೊಳ್ಳುವುದನ್ನು ಪುನಃ ಪ್ರಾರಂಭಿಸಿತು. 
  • ಕೇವಲ ಒಂದು ತಿಂಗಳ ನಂತರ, ಹೈಬ್ರಿಡ್ ಆವೃತ್ತಿಗಳಲ್ಲಿನ ವೈಟಿಂಗ್‌ ಪಿರೇಡ್‌ 14 ತಿಂಗಳವರೆಗೆ ವಿಸ್ತರಿಸಿದೆ.
  • ಆದರೆ, VX ಮತ್ತು VX (O) ಹೈಬ್ರಿಡ್ ಆವೃತ್ತಿಗಳು ಮತ್ತು ಸಾಮಾನ್ಯ ಪೆಟ್ರೋಲ್  ಆವೃತ್ತಿಗಳನ್ನು ಇನ್ನೂ ಬುಕ್ ಮಾಡಬಹುದು.
  • ಹೈಕ್ರಾಸ್ 2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪೆಟ್ರೋಲ್-ಮಾತ್ರ  ಮತ್ತು ಹೈಬ್ರಿಡ್ ಆವೃತ್ತಿಗಳಲ್ಲಿ ಬಳಸುತ್ತದೆ, ಎರಡೂ ಆವೃತ್ತಿಗಳು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಬರಲಿದೆ.
  • ZX ಮತ್ತು ZX (O) ಬೆಲೆಗಳು 30.34 ಲಕ್ಷ ರೂ.ನಿಂದ 30.98 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ.
  • ಈ ಎಂಪಿವಿಯ ಇತರ ಆವೃತ್ತಿಗಳ ಬೆಲೆ 19.77 ಲಕ್ಷ ರೂ.ನಿಂದ 27.99 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ.

ದೀರ್ಘಾವಧಿಯ ವೈಟಿಂಗ್‌ ಪಿರೇಡ್‌ನ ಪ್ರತಿಕ್ರಿಯೆಯಾಗಿ, ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಟಾಪ್‌-ಸ್ಪೆಕ್ ಜೆಡ್‌ಎಕ್ಸ್‌ ಮತ್ತು ಜೆಡ್‌ಎಕ್ಸ್‌ (ಒಪ್ಶನಲ್‌) ಹೈಬ್ರಿಡ್ ಆವೃತ್ತಿಗಳ ಬುಕಿಂಗ್‌ಗಳನ್ನು ತಾತ್ಕಾಲಿಕವಾಗಿ ಮತ್ತೆ ನಿಲ್ಲಿಸಲಾಗಿದೆ. ಈ ಹೈಬ್ರಿಡ್ ಎಪ್‌ಪಿವಿಯ ಆವೃತ್ತಿಗಳಿಗಾಗಿ ವೈಟಿಂಗ್‌ ಪಿರೇಡ್‌ ಒಂದು ವರ್ಷಕ್ಕಿಂತ 14 ತಿಂಗಳುಗಳ ಸಮಯದವರೆಗೆ ವಿಸ್ತರಿಸುತ್ತದೆ. ಈ ಆವೃತ್ತಿಗಳ ವೈಟಿಂಗ್‌ ಪಿರೇಡ್‌ ಕಡಿಮೆಯಾದ ನಂತರ ಬುಕಿಂಗ್‌ಗಳನ್ನು ಪುನಃ ತೆರೆಯುವ ಸಾಧ್ಯತೆ ಇದೆ. ಹಾಎಯೇ, ಗ್ರಾಹಕರು ವಿಎಕ್ಸ್‌ ಮತ್ತು ವಿಎಕ್ಸ್‌ (ಒಪ್ಶನಲ್‌) ಹೈಬ್ರಿಡ್‌ಗಳನ್ನು ಒಳಗೊಂಡ ಈ ಎಮ್‌ಪಿವಿಯ ಇತರ ಆವೃತ್ತಿಗಳನ್ನು ಇನ್ನೂ ಬುಕ್ ಮಾಡಬಹುದು.

Toyota Innova Hycross

ಟೊಯೋಟಾ ಈ ಹಿಂದೆ 2023ರ ಏಪ್ರಿಲ್‌ನಲ್ಲಿ ಇನ್ನೋವಾ ಹೈಕ್ರಾಸ್ ಹೈಬ್ರಿಡ್‌ನ ಉನ್ನತ ಆವೃತ್ತಿಗಳಿಗಾಗಿ ಆರ್ಡರ್‌ಗಳನ್ನು ಸ್ಥಗಿತಗೊಳಿಸಿತ್ತು, ಮತ್ತು ಒಂದು ವರ್ಷದ ನಂತರ 2024ರ ಏಪ್ರಿಲ್‌ನಲ್ಲಿ ಪುನರಾರಂಭಿಸಲಾಯಿತು. ಈಗ, ಈ ಟಾಪ್-ಸ್ಪೆಕ್ ಹೈಬ್ರಿಡ್ ಆವೃತ್ತಿಗಳಿಗಾಗಿ ಬುಕಿಂಗ್ ಅನ್ನು ಮರುತೆರೆದ ಕೆಲವೇ ವಾರಗಳ ನಂತರ, ವೈಟಿಂಗ್‌ ಪಿರೇಡ್‌ ಅನ್ನು ಮತ್ತೆ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.

ಇದನ್ನು ಸಹ ಓದಿ: 2 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಬಾಕಿ ಉಳಿಸಿಕೊಂಡಿರುವ Mahindra, ಇದರಲ್ಲಿ 50,000 ಕ್ಕೂ ಹೆಚ್ಚು ಬುಕಿಂಗ್‌ಗಳು XUV 3XOದ್ದೇ ಆಗಿದೆ..!

ಟಾಪ್-ಸ್ಪೆಕ್ ಇನ್ನೋವಾ ಹೈಕ್ರಾಸ್ ನಲ್ಲಿರುವ ಆಫರ್‌ಗಳು

Toyota Innova Hycross Dashboard

ಇನ್ನೋವಾ ಹೈಕ್ರಾಸ್ ಹೈಬ್ರಿಡ್‌ನ ಟಾಪ್-ಸ್ಪೆಕ್ ಹೈಬ್ರಿಡ್ ಆವೃತ್ತಿಯು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ.

ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಲೇನ್-ಕೀಪ್ ಮತ್ತು ಡಿಪಾರ್ಚರ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ ಮತ್ತು ಆಟೋ-ಎಮರ್ಜೆನ್ಸಿ ಬ್ರೇಕಿಂಗ್‌ನೊಂದಿಗೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್ ಅನ್ನು ಒಳಗೊಂಡಿದೆ. 

ಇದನ್ನು ಸಹ ಓದಿ: ಆಸ್ಟ್ರೇಲಿಯಾದಲ್ಲಿ ಹೆರಿಟೇಜ್ ಆವೃತ್ತಿಯನ್ನು ಪಡೆಯುತ್ತಿರುವ ಭಾರತದ 5-door Maruti Jimny

ಪವರ್‌ಟ್ರೇನ್‌ನಲ್ಲಿರುವ ಆಯ್ಕೆಗಳು

ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಮತ್ತು ಪೆಟ್ರೋಲ್-ಮಾತ್ರ ಪವರ್‌ಟ್ರೇನ್‌ಗಳೊಂದಿಗೆ ಬರುತ್ತದೆ. ಅವರ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:

ಎಂಜಿನ್‌

2-ಲೀಟರ್ ಸ್ಟ್ರಾಂಗ್ ಹೈಬ್ರಿಡ್

2-ಲೀಟರ್ ಪೆಟ್ರೋಲ್

ಪವರ್‌

186 ಪಿಎಸ್

175 ಪಿಎಸ್

ಟಾರ್ಕ್‌

188 ಎನ್‌ಎಮ್‌ (ಎಂಜಿನ್) / 206 ಎನ್‌ಎಮ್‌ (ಮೋಟಾರ್)

209 ಎನ್ಎಂ

ಗೇರ್‌ಬಾಕ್ಸ್‌

ಇ-ಸಿವಿಟಿ

ಸಿವಿಟಿ

ಬೆಲೆಯ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

 ಟೊಯೋಟಾ ಇನ್ನೋವಾ ಹೈಕ್ರಾಸ್‌ನ ಟಾಪ್-ಸ್ಪೆಕ್ ಜೆಡ್‌ಎಕ್ಸ್‌ ಮತ್ತು ಜೆಡ್‌ಎಕ್ಸ್‌ (ಒಪ್ಶನಲ್‌) ಹೈಬ್ರಿಡ್ ಆವೃತ್ತಿಗಳ ಬೆಲೆಗಳು 30.34 ಲಕ್ಷ ರೂ.ನಿಂದ 30.98 ಲಕ್ಷ ರೂ.ವರೆಗೆ ಇರುತ್ತದೆ. ಪ್ರೀಮಿಯಂ ಎಮ್‌ಪಿವಿಯ ಇತರ ಆವೃತ್ತಿಗಳು 19.77 ಲಕ್ಷ ರೂ.ನಿಂದ 27.99 ಲಕ್ಷ ರೂ.ವರೆಗೆ ಬೆಲೆಯನ್ನು ಹೊಂದಿವೆ. ಇದು ತನ್ನ ಪ್ರತಿರೂಪ ಮಾರುತಿ ಇನ್ವಿಕ್ಟೊ (ಹೈಕ್ರಾಸ್ ಆಧಾರಿತ) ಮತ್ತು ಡೀಸೆಲ್-ಮಾತ್ರ ಟೊಯೊಟಾ ಇನ್ನೋವಾ ಕ್ರಿಸ್ಟಾದ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ, ಆದರೆ ಕಿಯಾ ಕ್ಯಾರೆನ್ಸ್‌ಗೆ ಪ್ರೀಮಿಯಂ ಪರ್ಯಾಯವಾಗಿದೆ.

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ

ಇನ್ನಷ್ಟು ಓದಿ: ಟೊಯೊಟಾ ಇನ್ನೋವಾ ಹೈಕ್ರಾಸ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟೊಯೋಟಾ ಇನೋವಾ Hycross

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience