Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಜಿಮ್ನಿ ಮತ್ತು ಮಾರುತಿ ಜಿಪ್ಸಿ ನಡುವಿನ ಪ್ರಮುಖ ವ್ಯತ್ಯಾಸಗಳು

published on ಜನವರಿ 30, 2023 11:30 am by ansh for ಮಾರುತಿ ಜಿಮ್ನಿ

ಸ್ಥಗಿತಗೊಳಿಸಿದ ಮಾರುತಿ ಜಿಪ್ಸಿಯ ಎದುರಿಗೆ ಜಿಮ್ನಿ ಹೇಗೆ ನಿಲ್ಲುತ್ತದೆ ಪರಿಶೀಲಿಸಿ

ಆಟೋ ಎಕ್ಸ್‌ಪೋ 2023ರಲ್ಲಿ ಭಾರತದಲ್ಲಿ ಮಾರುತಿ ನಾಲ್ಕನೇ ಪೀಳಿಗೆಯ ಜಿಮ್ನಿಯನ್ನು ಪ್ರಪ್ರಥಮ ಬಾರಿಗೆ ಪರಿಚಯಿಸಿತು ಮತ್ತು ದೇಶವು ಪರಿಗಣಿಸಲು ಹೊಸ ಆಫ್-ರೋಡರ್ ಅನ್ನು ನೀಡಿತು. ಈ ವಿಭಾಗದಲ್ಲಿ ಪ್ರಾಬಲ್ಯ ಹೊಂದಿರುವ, ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗುರ್ಖಾಗಳೊಂದಿಗೆ ಹೋಲಿಸಿದಾಗ, ತನ್ನ ಎರಡನೇ ಪೀಳಿಗೆಯ ಅವತಾರ, ಮಾರುತಿ ಜಿಪ್ಸಿಯೊಂದಿಗೂ ಹೋಲಿಸಬಹುದೆಂದು ನಾವು ಭಾವಿಸಿದ್ದೇವೆ. ತಿಳಿಯದವರಿಗಾಗಿ, ಜಿಪ್ಸಿಯು ಎರಡನೇ-ಜೆನ್ ಗ್ಲೋಬಲ್ ಜಿಮ್ನಿಯ ಮರುನಾಮಕರಣಗೊಂಡ ಉದ್ದದ ಆವೃತ್ತಿಯಾಗಿದೆ.

ಇದನ್ನು ನೋಡಿ: ಇಲ್ಲಿದೆ ಮಾರುತಿ ಜಿಮ್ನಿ ಬೇಸ್ –ಸ್ಪೆಕ್ ಆಟೋಮ್ಯಾಟಿಕ್ ವೇರಿಯೆಂಟ್

ಆಯಾಮಗಳೊಂದಿಗೆ ಪ್ರಾರಂಭವಾಗುವ ಎರಡು ಆಫ್-ರೋಡರ್‌ಗಳ ನಡುವಿನ ಐದು ಪ್ರಮುಖ ವ್ಯತ್ಯಾಸಗಳು ಇಲ್ಲಿವೆ:

ಆಯಾಮಗಳು

ಆಯಾಮಗಳು

ಮಾರುತಿ ಜಿಮ್ನಿ

ಮಾರುತಿ ಜಿಪ್ಸಿ

ವ್ಯತ್ಯಾಸ

ಉದ್ದ

3,985mm

4,010mm

25mm

ಅಗಲ

1,645mm

1,540mm

-105mm

ಎತ್ತರ

1,720mm

1,845mm/1,875mm

-155mm

ವ್ಹೀಲ್ ಬೇಸ್

2,590mm

2,375mm

215mm

ಜಿಮ್ನಿ ಫೈವ್-ಡೋರ್ SUV ಆಗಿದ್ದರೂ ಜಿಪ್ಸಿಗಿಂತ ತುಸು ಚಿಕ್ಕದು, ಆದರೆ ಉದ್ದದ ವ್ಹೀಲ್‌ಬೇಸ್ ಹೊಂದಿದೆ. ಜಿಪ್ಸಿಗಿಂತಲೂ ಜಿಮ್ನಿ 155 mm ನಷ್ಟು ಗಿಡ್ಡವಾಗಿದೆ ಆದರೆ ಒಳಗೆ ಹೆಚ್ಚು ಸ್ಥಳ ನೀಡಲು 105 mm ನಷ್ಟು ಅಗಲವಾಗಿದೆ.

ವಿನ್ಯಾಸ

ಈ ಹೊಸ ಜಿಮ್ನಿಯು ಜಿಪ್ಸಿ ಸೇರಿದಂತೆ ತನ್ನ ಹಿಂದಿನ ಪುನರಾವೃತ್ತಿಗಳ ಹುಮ್ಮಸ್ಸನ್ನು ಆಧುನಿಕ ಅವತಾರದಲ್ಲಿ ಸೆರೆಹಿಡಿಯುತ್ತದೆ. ಉದಾಹರಣೆಗೆ, ಜಿಮ್ನಿಯ ಗ್ರಿಲ್, ಜಿಪ್ಸಿ (ಎರಡನೇ-ಜೆನ್ ಜಿಮ್ನಿ) ಯ ಗ್ರಿಲ್‌ನಲ್ಲಿನ ವರ್ಟಿಕಲ್ ಸ್ಲಿಟ್‌ಗಳಿಂದ ಪ್ರೇರಿತವಾಗಿದೆ. ಅಲ್ಲದೇ ದುಂಡನೆಯ ಹೆಡ್‌ಲ್ಯಾಂಪ್‌ಗಳು ಪ್ರಾರಂಭದಲ್ಲೇ ಜಿಮ್ನಿಯ ಭಾಗವಾಗಿದ್ದು ಆದರೆ ಇದು ಹ್ಯಾಲೊಜೆನ್‌ನಿಂದ ಎಲ್ಇಡಿ ಪ್ರೊಜೆಕ್ಟರ್‌ಗಳಿಗೆ ಆಧುನೀಕರಣಗೊಂಡಿದೆ

ಪಾರ್ಶ್ವಗಳಲ್ಲಿ, ಬೋನೆಟ್ ಮೇಲೆ ಜಿಪ್ಸಿಯಲ್ಲಿ ಇದ್ದಂತಹ ಹಾರಿಝಾಂಟಲ್ ಸ್ಲಿಟ್‌ಗಳನ್ನು ನೀವು ಕಾಣಬಹುದು. ಆದರೆ ಪಾರ್ಶ್ವಗಳಲ್ಲಿನ ಅತಿ ದೊಡ್ಡ ವ್ಯತ್ಯಾಸವೆಂದರೆ, ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಚ್ಚುವರಿ ಜೊತೆಯ ಡೋರ್‌ಗಳನ್ನು ಹೊಂದಿರುವುದು. ರಿಯರ್ ಎಂಡ್‌ನಲ್ಲಿ, ಟೈಲ್ ಲ್ಯಾಂಪ್‌ಗಳನ್ನು ರಿಯರ್ ಬಂಪರ್‌ನಲ್ಲಿ ಇಡಲಾಗಿದ್ದು, ಮತ್ತೊಮ್ಮೆ ಇದು ಜಿಪ್ಸಿಯಿಂದ ಪ್ರೇರಿತವಾಗಿದೆ. ಇಲ್ಲಿನ ವ್ಯತ್ಯಾಸಗಳೆಂದರೆ, ಸ್ಪೇರ್‌ ವ್ಹೀಲ್‌ನ ಸ್ಥಾನ ಮತ್ತು ಎರಡು ಆಫ್-ರೋಡರ್‌ಗಳಲ್ಲಿನ ಎತ್ತರದ ವ್ಯತ್ಯಾಸ, ಇಲ್ಲಿ ಜಿಮ್ನಿಗಿಂತಲೂ ಜಿಪ್ಸಿ ಹೆಚ್ಚು ಎತ್ತರವಿದೆ.

ಎರಡರ ನಡುವಿನ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ, ಜಿಪ್ಸಿಯು ಸಾಫ್ಟ್ ಟಾಪ್‌ ಮತ್ತು ಹಾರ್ಡ್ ಟಾಪ್ ರೂಫ್‌ ಆಯ್ಕೆಗಳೊಂದಿಗೆ ಲಭ್ಯವಿತ್ತು, ಆದರೆ ಜಿಮ್ನಿ ಕೇವಲ ಮೆಟಲ್ ಹಾರ್ಡ್ ಟಾಪ್ ರೂಫ್ ಅನ್ನು ಹೊಂದಿದೆ.

ಪವರ್‌ಟ್ರೈನ್

ನಿರ್ದಿಷ್ಟತೆಗಳು

ಮಾರುತಿ ಜಿಮ್ನಿ

ಮಾರುತಿ ಜಿಪ್ಸಿ

ಎಂಜಿನ್

1.5-ಲೀಟರ್ ಪೆಟ್ರೋಲ್

1.3- ಲೀಟರ್ ಪೆಟ್ರೋಲ್

ಪವರ್

105PS

81PS

ಟಾರ್ಕ್

134.2Nm

103Nm

ಟ್ರಾನ್ಸ್‌ಮಿಷನ್

5-ಸ್ಪೀಡ್ MT/4- ಸ್ಪೀಡ್ AT

5- ಸ್ಪೀಡ್ MT

ಡ್ರೈವ್‌ಟ್ರೈನ್

ಫೋರ್-ವ್ಹೀಲ್-ಡ್ರೈವ್

ಫೋರ್-ವ್ಹೀಲ್-ಡ್ರೈವ್

ಕರ್ಬ್ ತೂಕ

1210ಕಿಲೋ ತನಕ

1020 ಕಿಲೋ ತನಕ

ಜಿಮ್ನಿಯು ಎಲ್ಲಾ ನಿರ್ದಿಷ್ಟತೆಗಳಲ್ಲಿ ಜಿಪ್ಸಿಗಿಂತಲೂ ತುಂಬಾ ಮುಂದುವರಿದಿದೆ. ಇದು ದೊಡ್ಡ ಔಟ್‌ಪುಟ್ ಸಂಖ್ಯೆಗಳನ್ನು ಹೊಂದಿದ ದೊಡ್ಡ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದೆ. ಜಿಮ್ನಿಯಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳ ಎರಡು ಆಯ್ಕೆಯೂ ಇದ್ದರೆ, ಜಿಪ್ಸಿಯು ಫೈವ್-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್‌ನೊಂದಿಗೆ ಮಾತ್ರ ಲಭ್ಯವಿತ್ತು. ಎರಡೂ ಆಫ್‌ರೋಡರ್‌ಗಳು ಕಡಿಮೆ ಅನುಪಾತದ ಗೇರ್‌ಬಾಕ್ಸ್‌ನೊಂದಿಗೆ ಒಂದು ಫೋರ್-ವ್ಹೀಲ್ ಡ್ರೈವ್‌ಟ್ರೈನ್ ಅನ್ನು ನೀಡುತ್ತವೆ.

ಪ್ರಾಥಮಿಕ ಫೀಚರ್‌ಗಳು

2018 ರಲ್ಲಿ ಸ್ಥಗಿತಗೊಳಿಸಲಾದ ಜಿಪ್ಸಿಗೆ ಹೋಲಿಸಿದರೆ, ಜಿಮ್ನಿಯ ಫೀಚರ್‌ಗಳು ಕಡಿಮೆ ಎಂಬುದರಲ್ಲಿ ಸಂದೇಹವಿಲ್ಲ. ಜಿಮ್ನಿಯಲ್ಲಿನ ಕೆಲವು ಫೀಚರ್‌ಗಳೆಂದರೆ ಒಂಭತ್ತು ಇಂಚಿನ ಟಚ್‌ಸ್ಕ್ರೀನ್ ಇಫೋಟೈನ್‌ಮೆಂಟ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ARKAMYS-ಟ್ಯೂನ್ಡ್ ಸೌಂಡ್ ಸಿಸ್ಟಮ್, ಇಲೆಕ್ಟ್ರಿಕಲಿ ಅಡ್ಜಸ್ಟಿಬಲ್ ಮತ್ತು ಫೋಲ್ಡೇಬಲ್ ORVMಗಳು, ಮತ್ತು ಕ್ರ್ಯೂಸ್ ಕಂಟ್ರೋಲ್. ಹಾಗೆಯೇ ಜಿಪ್ಸಿಯು ಒಂದು ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಫ್ಯಾಬ್ರಿಕ್ ಅಪ್‌ಹೋಲ್ಸ್‌ಟೆರಿ ಅಡ್ಜಸ್ಟಿಬಲ್ ಹೆಡ್ ರಿಸ್ಟ್ರೈಂಟ್‌ಗಳು ಮತ್ತು ಫೋಲ್ಡೇಬಲ್ ಫ್ರಂಟ್ ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ.

ರಿಯರ್ ಸೀಟ್‌ಗಳು ಮತ್ತು ಡೋರ್‌ಗಳು

ಎರಡೂ SUVಗಳು ಹಿಂದೆ ವಿಭಿನ್ನ ಲೇಔಟ್‌ಗಳ ಬೆಂಚ್ ಸೀಟ್‌ಗಳನ್ನು ಹೊಂದಿವೆ. ಜಿಮ್ನಿಯಲ್ಲಿ ಫಾರ್ವರ್ಡ್-ಫೇಸಿಂಗ್ ರಿಯರ್ ಬೆಂಚ್ ಇದ್ದು ಇಬ್ಬರು ಕುಳಿತುಕೊಳ್ಳಬಹುದಾಗಿದೆ. ಜಿಪ್ಸಿಯು ಎರಡು ಸೈಡ್-ಫೇಸಿಂಗ್ ರಿಯರ್ ಬೆಂಚ್ ಸೀಟ್‌ಗಳನ್ನು ಹೊಂದಿದ್ದು ಪ್ರತಿ ಸೀಟ್‌ನಲ್ಲಿ ಕನಿಷ್ಠ ಇಬ್ಬರು ಕುಳಿತುಕೊಳ್ಳಬಹುದು ಮತ್ತು ಇದು ಜಿಪ್ಸಿಯಲ್ಲಿ ಆರು ಜನರು ಸುಲಭವಾಗಿ ಕುಳಿತುಕೊಳ್ಳಬಹುದಾದ ಸಾಮರ್ಥ್ಯ ನೀಡುತ್ತದೆ.

ಜಿಪ್ಸಿಗೆ ಹೋಲಿಸಿದರೆ ಜಿಮ್ನಿಯ ರಿಯರ್ ಡೋರ್‌ಗಳು ಪ್ರಮುಖ ಪ್ರಯೋಜನ ನೀಡುತ್ತವೆ. ಈ ಡೋರ್‌ಗಳು ಪ್ರಯಾಣಿಕರಿಗೆ ರಿಯರ್ ಸೀಟ್‌ಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ.

ಸಂಬಂಧಿತ: ಒಂದು ವಾರದೊಳಗೆ ಮಾರುತಿ ಸ್ವೀಕರಿಸಿದೆ ಜಿಮ್ನಿಗೆ 5,000 ಕ್ಕೂ ಹೆಚ್ಚು ಬುಕಿಂಗ್‌ಗಳು

ಇವುಗಳು ಎರಡು ಮಾರುತಿ ಆಫ್-ರೋಡರ್‌ಗಳ ನಡುವಿನ ಪ್ರಮುಖ ವ್ಯತ್ಯಾಸಗಳಾಗಿವೆ. ಜಿಮ್ನಿಯ ಚೊಚ್ಚಲ ಪ್ರವೇಶದೊಂದಿಗೆ, ಈ ಕಾರುತಯಾರಕ ಕಂಪನಿಯು ಪ್ರಸ್ತುತ ಮಹೀಂದ್ರಾ ಆಫ್-ರೋಡರ್ ಪ್ರಾಬಲ್ಯ ಹೊಂದಿರುವ ಆಫ್-ರೋಡಿಂಗ್ ವಿಭಾಗಕ್ಕೆ ಮರುಪ್ರವೇಶಿಸಿದೆ. ಮಾರುತಿ ಶೀಘ್ರದಲ್ಲೇ ಜಿಮ್ನಿಯನ್ನು ರೂ 10 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ ಮತ್ತು ಇದು ಮಹೀಂದ್ರಾ ಥಾರ್‌ಗೆ ಪ್ರತಿಸ್ಪರ್ಧಿಯಾಗಲಿದೆ.

a
ಅವರಿಂದ ಪ್ರಕಟಿಸಲಾಗಿದೆ

ansh

  • 56 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಜಿಮ್ನಿ

G
ganeshram
Jan 26, 2023, 9:02:01 AM

The length is only 25 mm more for Gypsy. Jimny has a coil spring suspension on all ends as against leaf spring suspension of Gypsy.

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ