Kia Carens Prestige Plus (O): 8 ಚಿತ್ರಗಳಲ್ಲಿ ಈ ಹೊಸ ಆವೃತ್ತಿಯ ಸಂಪೂರ್ಣ ಚಿತ್ರಣ

published on ಏಪ್ರಿಲ್ 10, 2024 09:57 pm by rohit for ಕಿಯಾ ಕೆರೆನ್ಸ್

  • 78 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸದಾಗಿ ಪರಿಚಯಿಸಲಾದ ಪ್ರೆಸ್ಟೀಜ್ ಪ್ಲಸ್ (ಒಪ್ಶನಲ್‌) ವೇರಿಯೆಂಟ್‌ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿದೆ, ಆದರೆ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಯನ್ನು ಮಾತ್ರ ಹೊಂದಿದೆ.

Kia Carens Prestige Plus (O)

The MY24 Kia Carens  ಅನ್ನು ಇತ್ತೀಚೆಗೆ ಭಾರತದಲ್ಲಿ ಕೆಲವು ಹೊಸ ಆವೃತ್ತಿಗಳು, ವೈಶಿಷ್ಟ್ಯಗಳು ಮತ್ತು ಬೆಲೆ ಪರಿಷ್ಕರಣೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು ಪ್ರೀಮಿಯಂ (ಒಪ್ಶನಲ್‌), ಪ್ರೆಸ್ಟೀಜ್ (ಒಪ್ಶನಲ್‌), ಮತ್ತು ಪ್ರೆಸ್ಟೀಜ್ ಪ್ಲಸ್ (ಒಪ್ಶನಲ್‌) ಎಂಬ ಬೇಸ್ ಮತ್ತು ಮಿಡ್-ಸ್ಪೆಕ್ ಟ್ರಿಮ್‌ಗಳಿಗಾಗಿ ಮೂರು ಹೊಸ (ಒಪ್ಶನಲ್‌) ವೇರಿಯೆಂಟ್‌ಗಳನ್ನು ಪರಿಚಯಿಸಿದೆ. ನೀವು ಕ್ಯಾರೆನ್ಸ್ ಎಮ್‌ಪಿವಿಯ ಹೊಸ ಪ್ರೆಸ್ಟೀಜ್ ಪ್ಲಸ್ (ಒಪ್ಶನಲ್‌) ಆವೃತ್ತಿಯನ್ನು ಖರೀದಿಸಲು ಬಯಸಿದರೆ, ಇದರಲ್ಲಿ ಹೊಸದೇನಿದೆ ಎಂಬುದನ್ನು ತಿಳಿಯಲು ಕೆಳಗೆ ನೀಡಿದ ಗ್ಯಾಲರಿಯಲ್ಲಿ ವಿವರಿಸಲಾಗಿದೆ. 

ಕ್ಯಾಬಿನ್‌

Kia Carens Prestige Plus (O) sunroof

ಹೊಸ ಪ್ರೆಸ್ಟೀಜ್ ಪ್ಲಸ್ (ಒಪ್ಶನಲ್‌) ಆವೃತ್ತಿಯ ದೊಡ್ಡ ಬದಲಾವಣೆಯೆಂದರೆ ಸನ್‌ರೂಫ್‌ ಸೌಕರ್ಯದ ಸೇರ್ಪಡೆಯಾಗಿದೆ, ಇದನ್ನು ಈಗ ಸ್ಥಗಿತಗೊಳಿಸಲಾದ ಲಕ್ಷುರಿ (ಒಪ್ಶನಲ್‌) ಆವೃತ್ತಿಯ ನಂತರದವುಗಳಲ್ಲಿ ನೀಡಲಾಗುತ್ತಿತ್ತು. ಇದು ಈ ಹೆಚ್ಚು ಬೇಡಿಕೆಯ ವೈಶಿಷ್ಟ್ಯವನ್ನು ಸುಮಾರು ಒಂದು ಲಕ್ಷದಷ್ಟು ಬೆಲೆ ಕಡಿತದೊಂದಿಗೆ ಕೈಗೆಟುಕುವಂತೆ ಮಾಡುತ್ತದೆ.

Kia Carens Prestige Plus (O) 180 W USB fast-charging port
Kia Carens Prestige Plus (O) LED cabin lamps

MY24 ಅಪ್‌ಡೇಟ್‌ನೊಂದಿಗೆ, ಕಿಯಾ USB ಪೋರ್ಟ್‌ನ ಚಾರ್ಜಿಂಗ್ ವೇಗವನ್ನು ಹಿಂದಿನ 120W ನಿಂದ ಈಗ 180 W ನ ಸಪೋರ್ಟ್‌ ಆಗುವಂತೆ ಹೆಚ್ಚಿಸಿದೆ. ಈ ಹೊಸ ಆವೃತ್ತಿಯು ಹಳೆಯ ಮೊಡೆಲ್‌ನಲ್ಲಿ ನೀಡಲಾದ ಹ್ಯಾಲೊಜೆನ್ ಯುನಿಟ್‌ಗಳನ್ನು ಬದಲಿಸುವ ಎಲ್ಇಡಿ ಕ್ಯಾಬಿನ್ ಲ್ಯಾಂಪ್‌ಗಳನ್ನು ಸಹ ಪಡೆಯುತ್ತದೆ.

Kia Carens Prestige Plus (O) 7-seater layout

ಹೆಚ್ಚಿನ ಇತರ ಅಂಶಗಳಲ್ಲಿ, ಪ್ರೆಸ್ಟೀಜ್ ಪ್ಲಸ್ (O) ಆವೃತ್ತಿಯು ಪ್ರೆಸ್ಟೀಜ್ ಪ್ಲಸ್ ಆವೃತ್ತಿಯಂತೆಯೇ ಇರುತ್ತದೆ. ಇದು ಕಪ್ಪು ಮತ್ತು ಬೀಜ್ ಕ್ಯಾಬಿನ್ ಥೀಮ್ ಅನ್ನು ಹೊಂದಿದೆ ಮತ್ತು ಇದು 7-ಆಸನಗಳ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ.

Kia Carens Prestige Plus (O) 8-inch touchscreen

ವೈಶಿಷ್ಟ್ಯಗಳ ವಿಷಯದಲ್ಲಿ, ಕ್ಯಾರೆನ್ಸ್ ಪ್ರೆಸ್ಟೀಜ್ ಪ್ಲಸ್ (O) ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 8-ಇಂಚಿನ ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್‌ನೊಂದಿಗೆ ಬರುತ್ತದೆ. ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), TPMS ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಮುಂಭಾಗ

Kia Carens Prestige Plus (O) front

ಪ್ರೆಸ್ಟೀಜ್ ಪ್ಲಸ್ (O) ಆವೃತ್ತಿಯ ಮುಂಭಾಗದ ಬಂಪರ್‌ನ ಗಮನಿಸುವಾಗ ರೆಗುಲರ್‌ ಪ್ರೆಸ್ಟೀಜ್ ಪ್ಲಸ್‌ನಂತೆಯೇ ಕಾಣುತ್ತದೆ, ಏಕೆಂದರೆ ಇದು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಅದೇ ಆಟೋ-ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ. ಕಿಯಾ ಗ್ರಿಲ್‌ನಲ್ಲಿ ಅದೇ ಕ್ರೋಮ್ ಗಾರ್ನಿಶ್‌ ಅನ್ನು ಮತ್ತು ಬಂಪರ್‌ನಲ್ಲಿರುವ ಏರ್ ಡ್ಯಾಮ್‌ಗೆ ಸಿಲ್ವರ್ ಫಿನಿಶ್ ಅನ್ನು ಸಹ ಒದಗಿಸಿದೆ.

ಸೈಡ್‌

Kia Carens Prestige Plus (O) side

ಬದಿಗಳಿಂದ ಕೂಡ, ಪ್ರೆಸ್ಟೀಜ್ ಪ್ಲಸ್ (O) ಆವೃತ್ತಿಯ ಸ್ಟ್ಯಾಂಡರ್ಡ್ ಪ್ರೆಸ್ಟೀಜ್ ಪ್ಲಸ್‌ನಂತೆಯೇ ಕಾಣುತ್ತದೆ, ಅದರಲ್ಲಿ ಇರುವ 16-ಇಂಚಿನ ಡ್ಯುಯಲ್-ಟೋನ್ ಆಲಾಯ್‌ ವೀಲ್‌ಗಳನ್ನೇ ಪಡೆಯುತ್ತದೆ. ಇದು ಒಆರ್‌ವಿಎಮ್‌-ಮೌಂಟೆಡ್ ಟರ್ನ್ ಇಂಡಿಕೇಟರ್‌ಗಳು, ಕ್ರೋಮ್ ವಿಂಡೋ ಬೆಲ್ಟ್‌ಲೈನ್ ಮತ್ತು ಬಾಡಿ ಕಲರ್‌ನ ಡೋರ್ ಹ್ಯಾಂಡಲ್‌ಗಳು ಮತ್ತು ORVM ಗಳನ್ನು ಸಹ ಹೊಂದಿದೆ. 

ಇದನ್ನೂ ಓದಿ: Skoda Sub-4m ಎಸ್‌ಯುವಿಯ ರಹಸ್ಯ ಟೆಸ್ಟಿಂಗ್, 2025ರ ಆರಂಭದಲ್ಲಿ ಬಿಡುಗಡೆ ಮಾಡಲು ನಿರ್ಧಾರ

ಹಿಂಭಾಗ

Kia Carens Prestige Plus (O) rear

ಹಿಂಭಾಗದಲ್ಲಿ, ಪ್ರೆಸ್ಟೀಜ್ ಪ್ಲಸ್ (O) ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳು, ಬಂಪರ್‌ನಲ್ಲಿ ಸಿಲ್ವರ್ ಫಿನಿಶ್ ಮತ್ತು ವಾಷರ್ ಮತ್ತು ಡಿಫಾಗರ್ ಹೊಂದಿರುವ ವೈಪರ್‌ನೊಂದಿಗೆ ಬರುತ್ತದೆ.

ಆಫರ್‌ನಲ್ಲಿರುವ ಪವರ್‌ಟ್ರೇನ್‌ಗಳು

ಕಿಯಾ ಕ್ಯಾರೆನ್ಸ್ ಪ್ರೆಸ್ಟೀಜ್ ಪ್ಲಸ್ (ಒಪ್ಶನಲ್‌) ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ:

ವಿವರಗಳು

1.5-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್‌

160 ಪಿಎಸ್

116 ಪಿಎಸ್

ಟಾರ್ಕ್

253 ಎನ್ಎಂ

250 ಎನ್ಎಂ

ಟ್ರಾನ್ಸ್‌ಮಿಷನ್‌

7-ಸ್ಪೀಡ್‌ ಡಿಸಿಟಿ

6-ಸ್ಪೀಡ್‌ ಆಟೋಮ್ಯಾಟಿಕ್‌

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

 ದೆಹಲಿಯಲ್ಲಿ ಕಿಯಾ ಕ್ಯಾರೆನ್ಸ್ ಪ್ರೆಸ್ಟೀಜ್ ಪ್ಲಸ್ (ಒಪ್ಶನಲ್‌) ಬೆಲೆಯು 16.12 ಲಕ್ಷ ರೂ.ನಿಂದ 16.57 ಲಕ್ಷ ರೂ. ವರೆಗೆ (ಎಕ್ಸ್ ಶೋರೂಂ) ಹೊಂದಿದೆ. 2024ರ ಕ್ಯಾರೆನ್ಸ್‌ ಎಮ್‌ಪಿವಿಗೆ ಮಾಡಲಾಗಿರುವ ಬದಲಾವಣೆಗಳ ಸಂಪೂರ್ಣ ಪಟ್ಟಿಯನ್ನು ನೀವು ಇಲ್ಲಿ ಓದಬಹುದು. ಕಿಯಾ ಎಮ್‌ಪಿವಿಯು ಮಾರುಕಟ್ಟೆಯಲ್ಲಿ ಮಾರುತಿ ಎರ್ಟಿಗಾ ಮತ್ತು ಮಾರುತಿ XL6 ಗೆ ಪ್ರೀಮಿಯಂ ಪರ್ಯಾಯವಾಗಿದೆ, ಆದರೆ ಟೊಯೋಟಾ ಇನ್ನೋವಾ ಕ್ರಿಸ್ಟಾ ಮತ್ತು ಟೊಯೋಟಾ ಇನ್ನೋವಾ ಹೈಕ್ರಾಸ್‌ಗಳಿಗೆ ಹೆಚ್ಚು ಕೈಗೆಟುಕುವ ಆಯ್ಕೆಯಾಗಿದೆ. 

ಇನ್ನಷ್ಟು ಓದಿ : ಕಿಯಾ ಕ್ಯಾರೆನ್ಸ್ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಕಿಯಾ ಕೆರೆನ್ಸ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience