Login or Register ಅತ್ಯುತ್ತಮ CarDekho experience ಗೆ
Login

Kia Carens X-Line ಆವೃತ್ತಿ ಬಿಡುಗಡೆ: ಬೆಲೆಗಳು 18.95 ಲಕ್ಷ ರೂ.ನಿಂದ ಪ್ರಾರಂಭ

ಕಿಯಾ ಕೆರೆನ್ಸ್ ಗಾಗಿ anonymous ಮೂಲಕ ಅಕ್ಟೋಬರ್ 03, 2023 04:24 pm ರಂದು ಪ್ರಕಟಿಸಲಾಗಿದೆ

ಕ್ಯಾರೆನ್ಸ್ ಈಗ ತನ್ನ X-ಲೈನ್ ಟ್ರಿಮ್‌ ನಲ್ಲಿ ಸೆಲ್ಟೋಸ್ ಮತ್ತು ಸೋನೆಟ್‌ ನಂತೆ ಮ್ಯಾಟ್ ಗ್ರೇ ಬಣ್ಣದ ಬಾಡಿ ಕಲರ್‌ನ ಆಯ್ಕೆಯನ್ನು ಪಡೆಯುತ್ತದೆ.

  • ಕಿಯಾ ಕ್ಯಾರೆನ್ಸ್ ಎಕ್ಸ್-ಲೈನ್ ಈಗ ಪೆಟ್ರೋಲ್ DCT ಮತ್ತು ಡೀಸೆಲ್ 6AT ನಲ್ಲಿ ಆರು ಆಸನಗಳ ವಿನ್ಯಾಸದೊಂದಿಗೆ ಲಭ್ಯವಿದೆ
  • ಮ್ಯಾಟ್ ಗ್ರ್ಯಾಫೈಟ್ ಬಾಡಿ ಕಲರ್‌ ಮತ್ತು ಎರಡು-ಟೋನ್ ಬ್ಲ್ಯಾಕ್‌ ಮತ್ತು ಸ್ಪ್ಲೆಂಡಿಡ್ ಸೇಜ್ ಗ್ರೀನ್ ಇಂಟೀರಿಯರ್‌ಗಳೊಂದಿಗೆ ಬರುತ್ತದೆ.
  • ಹಿಂಭಾಗದ ಎಡಭಾಗದಲ್ಲಿ ಪ್ರಯಾಣಿಸುವವರಿಗೆ ಹಿಂಬದಿ ಸೀಟ್ ಎಂಟರ್ಟೈನ್ಮೆಂಟ್ (RSE) ಸೌಕರ್ಯವನ್ನು ನೀಡಲಾಗುತ್ತದೆ ಮತ್ತು ಕ್ಯಾಬಿನ್‌ನ ಸುತ್ತಲೂ ಕಿತ್ತಳೆ ಬಣ್ಣದ ಹೊಲಿಗೆಯನ್ನು ಹೊಂದಿದೆ.
  • ಟಾಪ್-ಎಂಡ್‌ ಲಕ್ಸುರಿ ಪ್ಲಸ್ ವೆರಿಯೆಂಟ್‌ನ ಆಧರಿಸಿ, ಎಕ್ಸ್-ಲೈನ್ 55,000 ರೂ. ವರೆಗೆ ದುಬಾರಿಯಾಗಲಿದೆ.
  • ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ. ಕ್ಯಾರೆನ್ಸ್ ಎಕ್ಸ್-ಲೈನ್ ಅದೇ 1.5-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ಕಿಯಾ ಹೊಸ ವೆರಿಯೆಂಟ್‌ನ ಪ್ರಾರಂಭಿಸುವ ಮೂಲಕ ಕ್ಯಾರೆನ್ಸ್ ಲೈನ್-ಅಪ್ ಅನ್ನು ರಿಫ್ರೆಶ್ ಮಾಡಿದೆ. ಎಕ್ಸ್-ಲೈನ್ ಎಂದು ಹೆಸರಿಟ್ಟಿರುವ ಇದರಲ್ಲಿ, ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ ನೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ದೆಹಲಿಯಲ್ಲಿ ಇದರ ಎಕ್ಸ್‌ಶೋರೂಂ ಬೆಲೆಗಳನ್ನು ಕ್ರಮವಾಗಿ 18.95 ಲಕ್ಷ ರೂ. ಮತ್ತು 19.45 ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ.

ಟಾಪ್ ಎಂಡ್ ಲಕ್ಸುರಿ ಪ್ಲಸ್‌ನೊಂದಿಗೆ ಬೆಲೆ ಹೋಲಿಕೆ:

ವೇರಿಯಂಟ್

ಬೆಲೆ

ವ್ಯತ್ಯಾಸ

ಕಿಯಾ ಕ್ಯಾರೆನ್ಸ್ ಐಷಾರಾಮಿ ಪ್ಲಸ್ ಡಿಸಿಟಿ 6 ಸೀಟರ್‌

18.40 ಲಕ್ಷ ರೂ.

55,000 ರೂ.

ಕಿಯಾ ಕ್ಯಾರೆನ್ಸ್ ಎಕ್ಸ್-ಲೈನ್ ಡಿಸಿಟಿ (ಹೊಸ)

18.95 ಲಕ್ಷ ರೂ.

ಕಿಯಾ ಕ್ಯಾರೆನ್ಸ್ ಲಕ್ಸುರಿ ಪ್ಲಸ್ ಡೀಸೆಲ್ ಆಟೊಮ್ಯಾಟಿಕ್‌ 6 ಸೀಟರ್‌

18.95 ಲಕ್ಷ ರೂ.

50,000 ರೂ.

ಕಿಯಾ ಕ್ಯಾರೆನ್ಸ್ ಎಕ್ಸ್-ಲೈನ್ ಡೀಸೆಲ್ ಆಟೊಮ್ಯಾಟಿಕ್‌ (ಹೊಸ)

19.45 ಲಕ್ಷ ರೂ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂನ್ನು ಆಧಾರಿಸಿದೆ

ಕ್ಯಾರೆನ್ಸ್ ಎಕ್ಸ್-ಲೈನ್ ಟಾಪ್-ಎಂಡ್ ಲಕ್ಸುರಿ ಪ್ಲಸ್ ನ್ನು ಆಧರಿಸಿದೆ ಮತ್ತು ಹೊರಗೆ ಮತ್ತು ಒಳಭಾಗದಲ್ಲಿ ಅಪ್ಡೇಟ್ ಗಳ ಸರಮಾಲೆಯನ್ನು ಪಡೆಯುತ್ತದೆ. ಹೊರಭಾಗದಲ್ಲಿ, ಈ ಎಂಪಿವಿ ಮ್ಯಾಟ್ ಗ್ರ್ಯಾಫೈಟ್ ಬಾಡಿ ಕಲರ್, ರೇಡಿಯೇಟರ್ ಗ್ರಿಲ್ ನಲ್ಲಿ ಹೊಳೆಯುವ ಕಪ್ಪು ಫಿನಿಶ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಒಆರ್‌ವಿಎಂಗಳು, ಹಿಂಭಾಗದ ಸ್ಕೀಡ್ ಪ್ಲೇಟ್ ಮತ್ತು ಸೈಡ್ ಡೋರ್ ಗಾರ್ನಿಶ್‌ಗಳನ್ನು ಪಡೆಯುತ್ತದೆ. ಕಿಯಾ ಕ್ಯಾರೆನ್ಸ್ ಎಕ್ಸ್-ಲೈನ್‌ನಲ್ಲಿ ಸಿಲ್ವರ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ನೀಡುತ್ತಿದೆ.

ಇದನ್ನು ಸಹ ಓದಿ : ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಕಿಯಾ ಸೋನೆಟ್‌ ಫೇಸ್‌ ಲಿಫ್ಟ್‌ ಕಾರಿನ ಒಳಾಂಗಣ

ಒಳಭಾಗದಲ್ಲಿರುವ ಅಪ್‌ಡೇಟ್‌ಗಳಲ್ಲಿ ಡ್ಯುಯಲ್ ಟೋನ್ ಸ್ಪ್ಲೆಂಡಿಡ್ ಸೇಜ್ ಗ್ರೀನ್ ಮತ್ತು ಬ್ಲ್ಯಾಕ್ ಅಪ್‌ಹೋಲ್‌ಸ್ಟರಿ, ಹಿಂಬದಿ ಸೀಟ್ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ (ಎಡ ಹಿಂಭಾಗದ ಪ್ರಯಾಣಿಕರಿಗೆ), ಕಿತ್ತಳೆ ಕಾಂಟ್ರಾಸ್ಟ್ ಸ್ಟಿಚಿಂಗ್‌ನೊಂದಿಗೆ ಹಸಿರು ಸೀಟುಗಳು, ಕಿತ್ತಳೆ ಹೊಲಿಗೆಯೊಂದಿಗೆ ಕಪ್ಪು ಸ್ಟೀರಿಂಗ್ ವೀಲ್ ಕವರ್ ಮತ್ತು ಗೇರ್ ಲಿವರ್ ಸುತ್ತಲೂ ಕಿತ್ತಳೆ ಬಣ್ಣದ ಸ್ಟಿಚ್ಚಿಂಗ್‌ ಸೇರಿವೆ. ಇದರ ಮನರಂಜನಾ ಪ್ಯಾಕೇಜ್, ಫೋನ್ ಅಪ್ಲಿಕೇಶನ್ ಬಳಸಿ ನಿಯಂತ್ರಿಸಬಹುದಾದ ಸ್ಕ್ರೀನ್‌ನನ್ನು ಒಳಗೊಂಡಿರುತ್ತದೆ ಮತ್ತು ಸ್ಕ್ರೀನ್ ಮಿರರಿಂಗ್, ಪಾಡ್‌ಕಾಸ್ಟ್‌ಗಳು ಮತ್ತು ಇತರ ಮನರಂಜನಾ ಅಪ್ಲಿಕೇಶನ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ. X-ಲೈನ್ 6-ಸೀಟ್ ನ ರಚನೆಯಲ್ಲಿ ಬರುತ್ತದೆ.

ಇದರ ಪವರ್‌ಟ್ರೇನ್‌ಗಳನ್ನು ಗಮನಿಸುವಾಗ, ಕಿಯಾ ಕ್ಯಾರೆನ್ಸ್ ಎಕ್ಸ್-ಲೈನ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಉಳಿಸಿಕೊಂಡಿದೆ. ಇವುಗಳು ಕ್ರಮವಾಗಿ 160ಪಿಎಸ್‌ ಮತ್ತು 253 ಎನ್‌ಎಮ್‌ ಹಾಗು 116ಪಿಎಸ್‌ ಮತ್ತು 250ಎನ್‌ಎಮ್‌ ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಮೋಟಾರ್ ಅನ್ನು 7-ಸ್ಪೀಡ್ DCT ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಿದರೆ, ಡೀಸೆಲ್ ಎಂಜಿನ್‌ 6-ಸ್ಪೀಡ್ ಆಟೋಮ್ಯಾಟಿಕ್‌ ನೊಂದಿಗೆ ಬರುತ್ತದೆ.

ಕ್ಯಾರೆನ್ಸ್ ಮಾರುಕಟ್ಟೆಯಲ್ಲಿ ಮಾರುತಿ ಎರ್ಟಿಗಾ ಮತ್ತು ಮಾರುತಿ ಎಕ್ಸ್‌ಎಲ್‌6 ವಿರುದ್ಧ ಸ್ಪರ್ಧಿಸುತ್ತದೆ. ಇದು ಟೊಯೋಟಾ ಇನ್ನೋವಾ ಕ್ರಿಸ್ಟಾ ಮತ್ತು ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು.

ಹೆಚ್ಚು ಓದಿ: ಕಿಯಾ ಕ್ಯಾರೆನ್ಸ್ ಆಟೋಮ್ಯಾಟಿಕ್‌

Share via

Write your Comment on Kia ಕೆರೆನ್ಸ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಎಲೆಕ್ಟ್ರಿಕ್
Rs.26.90 - 29.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10.60 - 19.70 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ