ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಒಳಾಂಗಣ
ಕಿಯಾ ಸೊನೆಟ್ ಗಾಗಿ rohit ಮೂಲಕ ಸೆಪ್ಟೆಂಬರ್ 27, 2023 05:56 am ರಂದು ಪ್ರಕಟಿಸಲಾಗಿದೆ
- 45 Views
- ಕಾಮೆಂಟ್ ಅನ್ನು ಬರೆಯಿರಿ
ಸೋನೆಟ್ ಫೇಸ್ ಲಿಫ್ಟ್ ಕಾರು 2024ರ ಆರಂಭದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ
-
ಕಿಯಾ ಸಂಸ್ಥೆಯ ಸಬ್-4m SUV ಗೆ ಇದು ಮೊದಲ ಪ್ರಮುಖ ಮಾರ್ಪಾಡು ಎನಿಸಲಿದೆ.
-
ಹೊಸ ಸ್ಪೈ ವೀಡಿಯೋ ಪ್ರಕಾರ ಕಪ್ಪು ಮತ್ತು ಟ್ಯಾನ್ ಉಫೋಲ್ಸ್ಟರಿ ಮತ್ತು ಮರುಸಂಯೋಜಿಸಲಾದ ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್ ಅನ್ನು ಇದು ಹೊಂದಿರಲಿದೆ.
-
ಮರುವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ಅಲೋಯ್ ವೀಲ್ ಗಳು ಮತ್ತು ಸಂಪರ್ಕಿತ LED ಟೇಲ್ ಲೈಟುಗಳು ಇದರಲ್ಲಿ ಇರಲಿವೆ.
-
ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, 360 ಡಿಗ್ರಿ ಕ್ಯಾಮರಾ ಮತ್ತು ADAS ಇತ್ಯಾದಿ ವೈಶಿಷ್ಟ್ಯಗಳು ಇದರಲ್ಲಿವೆ.
-
ಟರ್ಬೋ ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಘಟಕ ಸೇರಿದಂತೆ ವಿವಿಧ ಪವರ್ ಟ್ರೇನ್ ಆಯ್ಕೆಗಳು ಲಭ್ಯ.
ಸಬ್-4m SUV ವಿಭಾಗದಲ್ಲಿ ಅತ್ಯಂತ ಸುಸಜ್ಜಿತ ಮಾದರಿ ಎಂದು ಗುರುತಿಸಲ್ಪಟ್ಟಿರುವ ಕಿಯಾ ಸೋನೆಟ್ ಕಾರು ಮುಂದಿನ ವರ್ಷದ ಆರಂಭದಲ್ಲಿ ಸಾಕಷ್ಟು ಹೊಸತನದೊಂದಿಗೆ ರಸ್ತೆಗೆ ಇಳಿಯಲಿದೆ. ಪರಿಷ್ಕರಣೆಗೆ ಒಳಪಟ್ಟಿರುವ ಈ SUV ಯು ಭಾರತದಲ್ಲಿ ಅನೇಕ ಬಾರಿ ಪರೀಕ್ಷೆಯ ವೇಳೆ ಕಾಣಿಸಿಕೊಂಡಿದ್ದು, ಇದರ ಹೊಸ ಒಳಾಂಗಣವು (ಮುಖ್ಯವಾಗಿ ಅತ್ಯಂತ ಸುಸಜ್ಜಿತ ಟೆಕ್ ಲೈನ್ ವೇರಿಯಂಟ್) ಇತ್ತೀಚಿನ ಸ್ಪೈ ವೀಡಿಯೋ ಕಣ್ಣಿಗೆ ಬಿದ್ದಿದೆ.
ಕಾಣಸಿಕ್ಕಿರುವ ಬದಲಾವಣೆಗಳು
ನೀವು ಮೊದಲಿಗೆ ಗಮನಿಸುವ ಬದಲಾವಣೆ ಎಂದರೆ ಇದರ ಒಟ್ಟಾರೆ ಡ್ಯಾಶ್ ಬೋರ್ಡ್. ಇದು ಈಗಿನ ಆವೃತ್ತಿಯಲ್ಲಿ ಇರುವ ಡ್ಯಾಶ್ ಬೋರ್ಡ್ ಅನ್ನೇ ಹೋಲುತ್ತದೆ. ಕಾಣಸಿಗುವ ಎರಡು ಪ್ರಮುಖ ಪರಿಷ್ಕರಣೆಗಳೆಂದರೆ ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು ನವೀನತೆಯಿಂದ ಕೂಡಿದ ಕಪ್ಪು ಮತ್ತು ಟ್ಯಾನ್ ಸೀಟ್ ಉಫೋಲ್ಸ್ಟರಿ.
2023ರ ಕಿಯಾ ಸೆಲ್ಟೊಸ್ ಕಾರಿನಿಂದ ಪ್ರೇರಿತಗೊಂಡ ಪರಿಷ್ಕೃತ LED ಹೆಡ್ ಲೈಟುಗಳು, ಮರುವಿನ್ಯಾಸಗೊಳಿಸಿದ ಗ್ರಿಲ್, ಹೊಸ ಅಲೋಯ್ ವೀಲ್ ವಿನ್ಯಾಸ್, ಸಂಪರ್ಕಿತ LED ಟೇಲ್ ಲೈಟುಗಳು ಇತ್ಯಾದಿ ಹೊರಾಂಗಣ ಬದಲಾವಣೆಗಳನ್ನು ವೀಡಿಯೋದಲ್ಲಿ ಗಮನಿಸಸಬಹುದು.
ಈ ಹಿಂದೆ ಕಾಣಿಸಿಕೊಂಡ ಪರೀಕ್ಷಾರ್ಥ ವಾಹನಗಳನ್ನು ಗಮನಿಸಿದಂತೆ, ಪರಿಷ್ಕೃತ ಸೋನೆಟ್ ನಲ್ಲಿ GT ಲೈನ್ ವೇರಿಯಂಟ್ ಬರಲಿದೆ. ಅಲ್ಲದೆ ಇದು ಕೆಂಪು ಬ್ರೇಕ್ ಕ್ಯಾಲಿಪರ್ ಗಳು ಮತ್ತು ಭಿನ್ನವಾಗಿ ವಿನ್ಯಾಸಗೊಳಿಸಲಾದ ಅಲೋಯ್ ವೀಲ್ ಗಳನ್ನು ಹೊಂದಿತ್ತು.
ಇದನ್ನು ಸಹ ನೋಡಿರಿ: 2023 ಕಿಯಾ ಸೆಲ್ಸೋಟ್ ಡೀಸೆಲ್ ಬೇಸ್ ವೇರಿಯಂಟ್ HTE 7 ಚಿತ್ರಗಳಲ್ಲಿ...
ನಿರೀಕ್ಷಿತ ವೈಶಿಷ್ಟ್ಯಗಳು
ಕಿಯಾ ಸೋನೆಟ್ ಫೇಸ್ ಲಿಫ್ಟ್ ಮಾದರಿಯು ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರಿಯರ್ ವೆಂಟ್ ಗಳ ಜೊತೆಗೆ ಅಟೋ ಎಸಿ, ವೆಂಟಿಲೇಟೆಡ್ ಮುಂದಿನ ಸೀಟುಗಳು, ಕ್ರೂಸ್ ಕಂಟ್ರೋಲ್, ಸಿಂಗಲ್ ಪೇನ್ ಸನ್ ರೂಫ್, ಮತ್ತು 10.25 ಇಂಚಿನ ಟಚ್ ಸ್ಕ್ರೀನ್ ಜೊತೆಗೆ ಇದು ರಸ್ತೆಗೆ ಇಳಿಯಲಿದೆ.
ಇದರ ಸುರಕ್ಷಾ ಸೌಲಭ್ಯವು 360 ಡಿಗ್ರಿ ಕ್ಯಾಮರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಗಳು (ಈ ಸ್ಪೈ ವೀಡಿಯೋದಲ್ಲಿ ಬಂಪರ್ ನಲ್ಲಿ ಕಂಡಂತೆ), ಮತ್ತು ಇತ್ತೀಚೆಗೆ ಹ್ಯುಂಡೈ ವೆನ್ಯು ಕಾರಿನಲ್ಲಿ ಪರಿಚಯಿಸಿದಂತೆ ಕೆಲವೊಂದು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS)ಗಳನ್ನು ಇದು ಹೊಂದಿದೆ.
ಯಾವುದೇ ಯಾಂತ್ರಿಕ ಪರಿಷ್ಕರಣೆ ಇಲ್ಲ
ಈ ಸಬ್-4m SUV ಯ ಪವರ್ ಟ್ರೇನ್ ಆಯ್ಕೆಯಲ್ಲಿ ಯಾವುದೇ ಹೊಸತನ ಕಾಣಸಿಗದು. ಸದ್ಯಕ್ಕೆ ಸೋನೆಟ್ ಕಾರು ಈ ಕೆಳಗಿನ ಎಂಜಿನ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ:
ವಿವರಗಳು |
1.2-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೊ ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83PS |
120PS |
116PS |
ಟಾರ್ಕ್ |
115Nm |
172Nm |
250Nm |
ಟ್ರಾನ್ಸ್ ಮಿಶನ್ |
5-ಸ್ಪೀಡ್ MT |
6-ಸ್ಪೀಡ್ iMT, 7-ಸ್ಪೀಡ್ DCT |
6-ಸ್ಪೀಡ್ iMT, 6-ಸ್ಪೀಡ್ AT |
ಚಾಲ್ತಿಯಲ್ಲಿರುವ ಮಾದರಿಯು ವಿವಿಧ ಡ್ರೈವ್ ಮೋಡ್ ಗಳೊಂದಿಗೆ ಬರುತ್ತದೆ: ಇಕೋ, ಸಿಟಿ ಮತ್ತು ಸ್ಪೋರ್ಟ್. ಅಲ್ಲದೆ, ಸೋನೆಟ್ ಮಾತ್ರವೇ iMT (ಕ್ಲಚ್ ಪೆಡಲ್ ಇಲ್ಲದೆ ಮ್ಯಾನುವಲ್) ಆಯ್ಕೆಯನ್ನು ಒದಗಿಸುವ ಏಕೈಕ ಮಾದರಿ ಎನಿಸಿದೆ.
ಇದನ್ನು ಸಹ ಓದಿರಿ: ADAS, 360-ಡಿಗ್ರಿ ಕ್ಯಾಮರಾ ಇತ್ಯಾದಿಗಳೊಂದಿಗೆ ಕಾಣಿಸಿಕೊಂಡ 2024 ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್
ಇದರ ಬೆಲೆ ಎಷ್ಟಿರಬಹುದು?
2024ರ ಕಿಯಾ ಸೋನೆಟ್ ಕಾರು ರೂ. 8 ಲಕ್ಷದಷ್ಟು (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿರಲಿದೆ. ಇದು ಹೊಸ ಟಾಟಾ ನೆಕ್ಸನ್, ಮಹೀಂದ್ರಾ XUV300, ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯು, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್ ಮಾತ್ರವಲ್ಲದೆ ಮಾರುತಿ ಫ್ರಾಂಕ್ಸ್ ಕ್ರಾಸ್ ಓವರ್ ಜೊತೆಗೂ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕಿಯಾ ಸೋನೆಟ್ ಅಟೋಮ್ಯಾಟಿಕ್
0 out of 0 found this helpful